POLICE BHAVAN KALABURAGI

POLICE BHAVAN KALABURAGI

25 October 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ಚೌಕ ಠಾಣೆ : ಶ್ರೀ ಬಸವರಾಜ ತಂದೆ ವಿಠ್ಠಲರಾವ ಪಾಟೀಲ ಸಾಃ ಸನ್ ರೈಸ್ ಶಾಲೆಯ ಹತ್ತಿರ ವಿಜಯನಗರ ಕಾಲೋನಿ ಆಳಂದ ರೋಡ ಕಲಬುರಗಿ ರವರು ದಿನಾಂಕ 21-10-2017 ರಂದು ಖೂಬಾ ಪ್ಲಾಟ ದಿಂದ ಮನೆಯ ಕಡೆಗೆ ಹೋಗುವಾಗ ಆಳಂದ ರೋಡಿನಲ್ಲಿ ನನ್ನ ಸೈಕಲ ಮೋಟರದಲ್ಲಿಯ ಪೆಟ್ರೋಲ ಆಗಿದ್ದಕ್ಕೆ ನಾನು ಆಳಂದ ರೋಡಿಗೆ ಇರುವ ಆಶಿರ್ವಾದ ಕಲ್ಯಾಣ ಮಂಟಪದ ಹತ್ತಿರ ಇರುವ ಗಜರಾಜ ಪೆಟ್ರೋಲ ಬಂಕಿಗೆ ಹೋದಾಗ ಪೆಟ್ರೋಲ ಬಂಕ ಬಂದ ಆಗಿದ್ದರ ಮೂಲಕ ಅಲ್ಲಿಯೇ 10-15 ನಿಮಿಷ ನಿಂತಿದ್ದು ಬಂಕಿನವರು ಯಾರೂ ಕಾಣದಿದ್ದಕ್ಕೆ ಮನೆಯ ಕಡೆಗೆ ಹೋಗುವಾಗ ಮನೆಯ ಹತ್ತಿರ ಬಂದಾಗ ಹಿಂದಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟರ ಸೈಕಿಲ ಮೇಲೆ ಬಂದು ನನಗೆ ತಡೆದರು ಆಗ ನಾನು ಯಾಕೆ ಅಂತಾ ಕೇಳಲು ಮೋಟರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಒಬ್ಬನು ಬಂದು ಪಂಚದಿಂದ ಮುಖದ ಮೇಲೆ ನನಗೆ ಹೊಡೆದನು ಆಗ ನಾನು ಗಾಡಿಯ ಮೇಲಿನಿಂದ ಕೆಳಗೆ ಬಿದ್ದೇನು ನಾನು ಏಳುವಾಗ ಅವನೇ ನನಗೆ ಮತ್ತೊಂದು ಏಟು ಹೊಡೆಯಲು ಬಂದಾಗ ನಾನು ಬಲಗೈ ಯಿಂದ ತಡೆದು ಅವನಿಗೆ ಎರಡು ಏಟು ಹೊಡೆದೆನು ಆಗ ಇನ್ನೊಬ್ಬನು ನನಗೆ ತಲೆಯ ಹಿಂದೆ ಹೊಡೆಯುವಾಗ ನಾನು ಕೆಳಗೆ ಬಿದ್ದೆನು ಆಗ ನಾನು ಬೇಹೋಷ ಸ್ಥಿತಿಯಲ್ಲಿದ್ದಾಗ ನನ್ನ ಬಲಗೈಯಲ್ಲಿದ್ದ 15 ಗ್ರಾಂ ಬಂಗಾರದ ಎರಡು(02) ಉಂಗುರ ಹಾಗೂ 17 ಗ್ರಾಂ ಬಂಗಾರದ ಮಹಾರಾಜಾ ಉಂಗುರ ಅಲ್ಲದೆ ಹತ್ತು ಗ್ರಾಮ ಬೆಳ್ಳಿಯ ಉಂಗುರ ಮತ್ತು ನನ್ನ ಪ್ಯಾಂಟಿನ ಚೋರ ಪಾಕೀಟದಲ್ಲಿ ಇದ್ದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ (1,20,000=00) ದೋಚಿಕೊಂಡು ಹೋದ ಬಗ್ಗೆ ನಂತರ ನನಗೆ ಗೊತ್ತಾಗಿದೆ ನಾನು ಬಿದ್ದಾಗ ಪಟ್ಟಣ ಗ್ರಾಮದ ಲಕ್ಷ್ಮಿಕಾಂತ ಎಂಬುವವರು ನನಗೆ ಎಬ್ಬಿಸಿದ್ದು ನಾನು ಮನೆಗೆ ಹೋದೆನು ನನ್ನ ಮೂಗಿನ ಮೇಲೆ ಎಡಗಣ್ಣಿನ ಮೇಲೆ ಹಾಗೂ ಕೆಳಗಡೆಯ ಭಾಗಕ್ಕೆ ಬಲ ಕಪಾಳಕ್ಕೆ ರಕ್ತಗಾಯ ಹಾಗೂ ಕಂದು ಗಟ್ಟಿದ ಗಾಯವಾಗಿದ್ದು ಇರುತ್ತದೆ. ಮುಂದೆ ನನಗೆ ನಮ್ಮ ಅಣ್ಣನಾದ ಸಂತೋಷ ಪಾಟೀಲ ತಮ್ಮನಾದ ಚನ್ನವೀರ ಇಬ್ಬರು ಕೂಡಿ ಆಳಂದ ರೋಡಿಗೆ ಇರುವ ಡೆಕ್ಕನ ಆಸ್ಪತ್ರೆಗೆ ಒಯ್ದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿ ವ್ಯಕ್ತಿಗಳನ್ನು ಮತ್ತು ಅವರು ಉಪಯೋಗಿಸಿದ ಸೈಕಲ ಮೋಟರನ್ನು ಹಾಗೂ ನನ್ನಿಂದ ದೋಚಿದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಹಾಗೂ 47 ಗ್ರಾಂ ಬಂಗಾರದ ಮೂರು ಉಂಗುರ ಅದಾಜು ಕಿಮ್ಮತ್ತು 140000=00 ಹಾಗೂ 10 ಗ್ರಾಂ ಬೆಳ್ಳಿಯ ಉಂಗುರ ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರದ ಹಣ ದುರುಪಯೋಗಪಡಿಸಿಕೊಂಡು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಿಯಾಜ ತಂದೆ ಮಹ್ಮದ ನವಾಜ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಪ್ರಭಾರಿ ಪೌರಾಯುಕ್ತರು ನಗರ ಸಭೆ ಶಹಾಬಾದ ಇವರು ಶ್ರೀ ಶರಣು ಪೂಜಾರ ಪ್ರಭಾರ  ಪೌರಾಯುಕ್ತರಾಗಿ ದಿನಾಂಕ: 28/03/2017 ರಿಂದ 16/08/2017 ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ಮತ್ತು ಶ್ರೀ ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತಾರೆ . ಇವರು ಸ್ವಚ್ಚ ಭಾರತ ಮಿಷನ ಖಾತೆಯನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ   ಶಹಾಬಾದ ನಗರ ಸಭೆ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಮಂಜೂರಾದ ಹಣ ಎಸ್.ಬಿ ಐ ಬ್ಯಾಂಕ ಶಹಾಬಾದ ಖಾತೆ ನಂಬರ 62228547261 ನೇದ್ದಕ್ಕೆ ಜಮಾವಾಗುತ್ತಿದ್ದು  ಸದರಿ ಖಾತೆಯ ಬಗ್ಗೆ ದಿನಾಂಕ: 22/09/2017 ರಂದು  ನಾನು ಎಸ್.ಬಿ ಐ ಬ್ಯಾಂಕ ಶಹಾಬಾದರಲ್ಲಿ ಹೋಗಿ ಪರಿಶೀಲಿಸಿದಾಗ  34 ಲಕ್ಷ್ ರೂ ಸ್ವಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಾಗಾರಿಗಳನ್ನು ಅನುಷ್ಟಾನಗೊಳಿಸದೆ ನೇರವಾಗಿ ಹಣ ಖಾತೆಯಿಂದ 04 ಜನರಿಗೆ ಚಕ್ಕ ಮುಖಾಂತರ ನೀಡಿರುತ್ತಾರೆ   ನಾನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಕಲಬುರಗಿರವರಿಗೆ ಇದರ ಬಗ್ಗೆ ವರದಿ  ಸಲ್ಲಿಸಿರುತ್ತಾನೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಇದರ ಬಗ್ಗೆ ಲೆಕ್ಕಾ ತನಿಖಾ  ತಂಡ ರಚಿಸಿದ್ದು ತನಿಖೆ ಕೈಗೊಂಡು ಈ ತನಿಖಾ ತಂಡವು ದಿನಾಂಕ: 03/10/2017 ರಂದು ತನಿಖೆಯನ್ನು ನಿರ್ವಹಿಸಿ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿರವರಿಗೆ ನೀಡಿದ್ದು ಅವರ ವರದಿಯ ಆಧಾರ ಮೇರೆಗೆ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ಇವರುಗಳು ಶಹಾಬಾದ ನಗರ ಸಭೆಯಲ್ಲಿ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಗಾರಿಗಳನ್ನು ಅನುಷ್ಟಾನಗೊಳಿಸದೆ ಹಾಗೂ ನಿಯಮ ಬಾಹಿರವಾಗಿ  ನೇರವಾಗಿ ಹಣ ಬ್ಯಾಂಕ ಖಾತೆ ನಂಬರ 62228547261 ರಲ್ಲಿ ಲಭ್ಯವಿರು ಹಣವನ್ನು 1)  ಚಕ್ಕ ನಂಬರ 982084  Date 17/07/2017 800000-00 ರೂ 2) 942085 Date 25/07/2017 1000000-00 ರೂ 3)      0003060 Date 16/08/2017 800000-00 ರೂ 4 ) 0003061 Date 16/08/2017 800000-00 ರೂ 5) 942058 Date 12/06/2017 112000-00 ರೂ  6) 942072 Date 17/07/2017 30000-00 ರೂ 7) 942073 Date 19/07/2017 10000-00  ರೂ  8) 942074 Date 19/07/2017 10000-00 ರೂ 9) 942075 Date 19/07/2017 10000-00 ರೂ  10) 942076 Date 29/07/2017 197685-00  ರೂ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ನಗರ ಸಭೆ ಶಹಾಬಾದ ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ನಗರ ಸಭೆ ಶಹಾಬಾದ  ಮತ್ತು 1) ಮಾನಸಿಂಗ ತಂದೆ ಶಂಕರಸಿಂಗ 2) ಅಶೋಕ ತಂದೆ ಮುನಿಯಾ ಚವ್ಹಾಣ  3) ಹಣಮಂತ ತಂದೆ ಸಿದ್ದಪ್ಪ  4) ಬಸೀರ ತಂದೆ ಗುಲಾಮ ರಸೂಲ  ಇವರು ಎಲ್ಲಾರೂ  ಸೇರಿ ಖೋಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಕಡತ ನಿರ್ವಹಿಸಿದೆ ಚೆಕ್ಕ ರೀಜಿಸ್ಟರನಲ್ಲಿ FBAS ಅನ್ಲೈನಲ್ಲಿ ನೊಂದಾಯಿಸಿದೆ ನೇರವಾಗಿ ಚಕ್ಕ ನೀಡಿ  ಹಣವನ್ನು ದುರುಪಯೋಗ ಪಡಿಸಿರುತ್ತಾರೆ . ಸರಕಾರದ ಸ್ಚಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ  ಹಣವನ್ನು ಮೇಲ್ಕಂಡ ತನಿಖಾ ತಂಡದ ವರದಿಯ ಪ್ರಕಾರ ದಿನಾಂಕ: 12/06/2017   ರಿಂದ ದಿನಾಂಕ: 16/08/2017  ರವರಿಗೆ  ಒಟ್ಟು ಹಣ 37 69 000-00  ರೂಪಾಯಿಗಳು ನಿಯಮ ಬಾಹಿರವಾಗಿ ಖರ್ಚು ಮಾಡಿ  ದುರೊಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮಕೂಟ ಕಟ್ಟಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ. ಕಲ್ಲಯ್ಯ ಎ.ಎಸ್.ಐ ಜೇವರಗಿ ಠಾಣೆ ರವರು ಆಂದೊಲಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸ್ಥಳದಲ್ಲಿದ್ದ  ಹೊಟೇಲಗಳು  ಅಂಗಡಿಗಳು ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಆಂದೊಲಾ ಗ್ರಾಮದಲ್ಲಿ ಖಾದರಸಾಬ ಯಲಗಾರ ಮತ್ತು ಶಿವಪ್ಪ ಲಕ್ಕಾಣಿ ಇವರ ಮದ್ಯದಲ್ಲಿ ಜಗಳಾಗಿದ್ದು .ಸದರಿ ಜಗಳಕ್ಕೆ ಮೂಲ ಕಾರಣ ಆಂದೊಲ ಗ್ರಾಮದ ಸಿದ್ದಲಿಂಗಯ್ಯ ಕೆ. ಸ್ವಾಮಿ ಇವರು ಇರುತ್ತಾರೆ. ಅಲ್ಲದೆ ಜೆವರಗಿ ಪಟ್ಟಣದಲ್ಲಿ ಶ್ರೀರಾಮ ಸೇನಾ ಸಂಘಟನೆಯ ವತಿಯಿಂದ ಪ್ರತಿಷ್ಟಾಪನೆ ಮಾಡಿದ ಗಣೇಶ ವಿಗ್ರಹ ವಿಸರ್ಜನೆ ಮೇರವಣಿಗೆ ಕಾಲಕ್ಕೆ ಸಿದ್ದಲಿಂಗಯ್ಯ ಸ್ವಾಮಿ ಇವರು ಮುಸ್ಲಿಂರ ವಿರುದ್ದವಾಗಿ ಮಾತನಾಡಿ ಪ್ರಚೊದನಕಾರಿ ಬಾಷಣ ಮಾಡಿದ ವಿಷಯದಲ್ಲಿ ಮತ್ತು ಸದರಿ ಸಿದ್ದಲಿಂಗಯ್ಯ ಸ್ವಾಮಿಯವರು ಯಾವಾಗಲೂ ಸಾರ್ವಜನಿಕ ಸಮಾರಂಭಗಳಲ್ಲಿ ಮಾತು ತೆಗದರೆ ಮುಸ್ಲಿಂರ ವಿರುದ್ದ ಮಾತನಾಡುತ್ತಾ ಬಂದಿರುತ್ತಾನೆ. ಅಂತಾ ಮುಸ್ಲಿಂರು ಸದರಿ ಸಿದ್ದಲಿಂಗಯ್ಯ ಸ್ವಾಮಿ ಆಂದೊಲಾ ರವರ ವಿರುದ್ದ ಜೇವರಗಿ ಪಟ್ಟಣದ ನೂರಾರು ಮುಸ್ಲಿಂರು ಆಕ್ರಮ ಕೂಟ ಕಟ್ಟಿಕೊಂಡು, ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡಲು ಜೇವರಗಿ ಪಟ್ಟಣದಲ್ಲಿ ಇಂದು ದಿ 23.10.2017 ರಂದು ಸಿದ್ದಲಿಂಗಯ್ಯ ಸ್ವಾಮಿ ರವರ ವಿರುದ್ದ ಪ್ರತಿಭಟನೆ ಮಾಡುತ್ತಿರುವ ವಿಷಯ ಗೋತ್ತಾಗಿ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ  ಕೂಡಿಕೊಂಡು  ಮತ್ತು ನಮ್ಮ  ಇಲಾಖೆಯ ಮೇಲಾಧಿಕಾರಿಗಳು ಕೂಡಿಕೊಂಡು  ಜೇವರಗಿ ಪಟ್ಟಣದ ರೀಲಾಯನ್ಸ್ ಪೆಟ್ರೊಲ್ ಪಂಪ ಹತ್ತಿರ ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಹೋದಾಗ ಅಲ್ಲಿ ಬಾಬು .ಬಿ. ಪಾಟೀಲ ಮುತ್ತಕೊಡ ಇವರ ನೇತೃತ್ವದಲ್ಲಿ ಜೇವರಗಿ-ಶಹಾಪೂರ ರೋಡಿನಲ್ಲಿ ಪ್ರತಿಭಟನೆ ಮಾಡುತ್ತಾ ಮೇರವಣಿಗೆ ಮುಖಾಂತರವಾಗಿ ಜೇವರಗಿ ತಸೀಲ್ದಾರ  ಕಚೇರಿ  ಕಡೆಗೆ ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಅದಿಕಾರಿ & ಸಿಬ್ಬಂದಿಯವರು  ಕೂಡಿಕೊಂಡು ಈ ಪ್ರತಿಭಟನೆಗೆ ಮತ್ತು ಮೇರವಣಿಗೆ ಮಾಡಲು ನೀವು ಸರಕಾರದಿಂದ ಪರವಾನಿಗೆ ತೆಗೆದುಕೊಂಡಿರುವುದಿಲ್ಲಾ  ನೀವು ಕಾನೂನು ಬಾಹಿರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಪ್ರತಿಭಟನೆ ಮೇರವಣಿಗೆ ಮಾಡುತ್ತಿದ್ದಿರಿ ಈ ಮೊದಲೇ ಆಂದೊಲಾ ಗ್ರಾಮದಲ್ಲಿ  ಸರಕಾರಿ ಜಾಗೆಯಲ್ಲಿ ಹೊಟೆಲ ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಹಿಂದು ಮತ್ತು ಮುಸ್ಲಿಂರ ಮದ್ಯ ಜಗಳವಾಗಿರುತ್ತದೆ  ಅದರಿಂದ ಪ್ರತಿಭಟನೆಗೆ ಪರವಾನಿಗೆ ಕೊಟ್ಟಿರುವುದಿಲ್ಲಾ. ಆದ್ದರಿಂದ ತಾವು ಇಲ್ಲಿಂದ ಹೋಗಿರಿ, ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲಾ ಎಂದು ನಾನು ಮತ್ತು ನಮ್ಮ ಮೇಲಾಧಿಕಾರಿಗಳು  ಅವರಿಗೆ ಹೇಳಿದಾಗ  ಬಾಬು ಪಾಟೀಲ ಮುತ್ತಕೊಡ  ಹಾಗೂ ಇತರೆ ಮುಸ್ಲಿಂರು ನಾವು ನಿಮ್ಮ ಮಾತು ಕೇಳುವುದಿಲ್ಲಾ ನಾವು ಯಾವುದೆ ಸರಕಾರದಿಂದ ಪರವಾನಿಗೆ ಪಡೆದುಕೊಳ್ಳುವದಿಲ್ಲಾ ಮತ್ತು ನಾವು ಪ್ರತಿಭಟನೆ  ಮಾಡುತ್ತೆವೆ ಎಂದು ಸರಕಾರ ಆಧೇಶ ಉಲ್ಲಂಘನೆ ಮಾಡಿರುತ್ತಾರೆ. ಅಲ್ಲದೆ ಅವರು ನಮಗೆ ತಳ್ಳಾಟ ಮಾಡಿಕೊಂಡು ಪ್ರತಿಭಟನೆಯನ್ನು ಜೇವರಗಿ ಪಟ್ಟಣ ರಿಲಾಯನ್ಸ್ ಪೆಟ್ರೊಲ್ ಪಂಪದಿಂದ ಮಿನಿ ವಿದಾನಸಭೆವರೆಗೆ ಮಾಡುತ್ತಾ ಹೋಗಿದ್ದು, ತಡೆಯಲು ಹೊದಾಗ 1) ಬಾಬು ಬಿ ಪಾಟೀಲ ಸಾಃ ಮುತ್ತಕೊಡ 2) ಸೈಯ್ಯದ ಗೌಸ ಮೈನ್ನೊದ್ದೀನ ಖಾದ್ರಿ, ಸಾಃ ಗಂವ್ಹಾರ, 3) ಇಜಾಜ್ ನಮೋಜಿ, ಸಾಃ ಜೇವರಗಿ  4) ಎಮ್.ಡಿ. ಗೌಸ್, ಸಾಃ ಜೇವರಗಿ  5) ನಬೀ ಪಟೇಲ ಪೊಲೀಸ್ ಪಾಟೀಲ ಸಾಃ ಕಾಸರಬೋಸಗಾ  6) ಶಬ್ಬೀರ ಇನಾಮ್ದಾರ, ಸಾಃ ಜೇವರಗಿ  ಇವರು ಮುಂದೆ ಬಂದು ನಮಗೆ ತಳ್ಳಾಟ ಮಾಡಿರುತ್ತಾರೆ, ಅಲ್ಲದೆ 7) ಮೈಹಿಬೂಬ ಮನೀಯಾರ ಸಾಃ ಮಳ್ಳಿ, 8) ಹಬ್ಬೀಬ ಜಮಾದಾರ ಸಾಃ ಜೈನಾಪೂರ, 9) ಎಮ್.ಡಿ. ಜಮೀರ್ ತಂದೆ ಮೊಹ್ಮದ್ ಸಾಬ ಸಾಃ ಜೇವರಗಿ 10) ಅಪ್ರೋಜ ವೇಲಕಮ್ಮ ಹೊಟೇಲ ಸಾಃ ಜೇವರಗಿ, 11) ಆಮ್ಲಾ ಎಲ್ಕ್ರೇಷನ್ ಸಾಃ ಜೇವರಗಿ  12) ಮೈಹಿಬೂಬ ಇನಮ್ದಾರ, ಸಾಃ ಜೇವರಗಿ  13) ಶೋಬಾ ಬಾಣಿ, 14) ಆಸ್ಲಾಮ್ ಮೊಬೈಲ ಅಂಗಡಿ, ಸಾಃ ಜೇವರಗಿ  15) ದಾವೂದ್ ಜೊಪಡಪಟ್ಟಿ ಜೇವರಗಿ 16) ಶಾರೂಖ ತಂದೆ ಅಬ್ದುಲ್ ಕರೀಮ್ ಸಾಃ ಜೇವರಗಿ  17) ಬಾಬಾ ಕಬ್ಬಿಣ ಅಂಗಡಿ ಸಾಃ ಜೇವರಗಿ 18) ಶಾರೂಖ ಗಿರಣಿ, ಸಾಃ ಜೇವರಗಿ  19) ಮೈಹಿಬೂಬ ಪಟೇಲ ಕೊಬಾಳ, ಸಾಃ ಖಾಜಾಕಾಲೊನಿ ಜೇವರಗಿ  20) ಪಾರೂಖ್ ಪಟೇಲ  ತಂದೆ ಕಾಸೀಮ್ ಪಟೇಲ ಸಾಃ ಮೂದಬಾಳ 21) ಮಕ್ಬೂಲ ಪಟೇಲ ಗುತ್ತೆದಾರ ಮಲ್ಲಾಬಾದ 22) ಶೇರು ಚಿಕ್ಕಜೇವರಗಿ 23) ಅಬ್ದುಲ್ ಸತ್ತಾರ ಥಾರಿ ಸಾಃ ಜೇವರಗಿ  24) ಅಲ್ಲಾಪಟೇಲ ಸಾಃ ಶಿವಪೂರ, 25) ಜಾಫರ್ ಯಾಳವಾರ, 26) ಮುನೀರ್ ಪಾಸಾ ಕಳ್ಳಿ ಸಾಃ ಲಕ್ಕಪ್ಪಲೇಔಟ  ಜೇವರಗಿ  27) ನೀಸಾರ  ಇನಾಮ್ದಾರ, ಸಾಃ ಜೇವರಗಿ  28) ಖುದ್ದುಸ್ ಜೊಪಡ ಪಟ್ಟಿ ಜೇವರಗಿ 29) ಜಾಪರ್ ತರಕಾರಿ ಅಂಗಡಿ, ಸಾಃ ಜೇವರಗಿ  30) ತೈಯಬ್ ಲೊಹಾರ, ಸಾಃ ಜೇವರಗಿ  31) ಹಣಮಂತರಾಯ ಹೂಗಾರ ಸಾಃ ಹರವಾಳ,  32) ಸಂತೊಷ ಬಿಜಾಪೂರ ಸಾಃ ಸಿಂದಗಿ 33) ಅಮೀರ ಜಮಾದಾರ, ಸಾಃ ಜೇವರಗಿ  34) ಮೈಹಿಬೂಬ ಹನೀಫ್ ಸಿಂದಗಿ ಎ.ಎಮ್.ಐ.ಎಮ್ 35) ಬಾಬಾ ದರ್ಪಣ 36) ಮಹ್ಮದ್ ಪಟೇಲ   ಸಾಃ ಜೇವರಗಿ ಎ.ಎಮ್.ಐ.ಎಮ್ 37) ಅನ್ವರ್ ನಮೋಜಿ 38) ಖಾಜಾ ತತ್ತಿ ಅಂಗಡಿ ಜೇವರಗಿ 39) ಎಮ್.ಡಿ. ರವೂಫ್ ಹವಾಲ್ದಾರ, ಸಾಃ ಜೇವರಗಿ  40) ಅಮೀನಸಾಬ ತಂದೆ ನೂರಅಹೇಮದ್ ಸಾಬ ಸಾಃ ಜೇವರಗಿ 41) ರುಕ್ಮು ತೊಲಾ ಮೀಡಚಿ ಸಾಃ ಜೇವರಗಿ 42) ಮೈಹಿಬೂಬ ಸಾಃ ಗಂವ್ಹಾರ, 43) ರಫೀಕ್  ಸಾಃ ಗಂವ್ಹಾರ, 44) ಬಸೀರ ರಂಜಣಗಿ, 45) ಇಬ್ರಾನ್ ಹಾಲಿನ ಅಂಗಡಿ 46) ಸಲೀಮ್ ತಂದೆ ಮೈಹಿಬೂ ಪಟೇಲ ಸಾಃ ಕಾಸರ ಬೊಸಗಾ, 47) ರಾಜಾಪಟೇಲ ತಂದೆ ದಸ್ತಗಿರ ಪಟೇಲ ಸಾಃ ಕಾಸರ ಬೊಸಗಾ 48) ಹುಸೇನ ಪಟೇಲ ತಂದೆ ಖಾಜಾ ಪಟೇಲ ಸಾಃ ಕಸರ ಬೊಸಗಾ   ಇವರೆಲ್ಲರೂ ಹಾಗೂ ಇತರೆ ನೂರಾರು ಜನ ಮುಸ್ಲಿಂ ಜೇವರಗಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿರುತ್ತಾರೆ. ನಾನು ಮತ್ತು ನಮ್ಮ ಇಲಾಖೆಯ ಅಧಿಕಾರಿಗಳು ಮೇಲೆ ನಮೂದಿಸಿದವರಿಗೆ ಸರಕಾರ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾಗ ಮೇಲೆ ನಮೂದಿಸಿದವರು ಅಕ್ರಮ ಕೂಟ ಕಟ್ಟಿಕೊಂಡು ನಮಗೆ ಕೈಯಿಂದ ತಳ್ಳಾಟ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ ಸರಕಾರದ ಅಧೇಶ ಉಲ್ಲಂಘನೆ ಮಾಡಿರುತ್ತಾರೆ ಕಾರಣ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಜುರಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.