POLICE BHAVAN KALABURAGI

POLICE BHAVAN KALABURAGI

06 November 2012

GULBARGA DISTRICT REPORTED CRIMES


ಆತ್ಮಹತ್ಯೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಸುನೀತಾ ಗಂಡ ರಾಜು ರಾಠೋಡ ಸಾ||ಜಮಗಾ [ಆರ್] ತಾಂಡಾ ತಾ|| ಆಳಂದ ರವರು ನನ್ನ ಗಂಡ ದಿವಂಗತ ರಾಜು ಇವರು ಭೂಸನೂರ ಸಕ್ಕರೆ ಕಾರ್ಖಾನೆಯಲ್ಲಿ ಲೇಬರ ಮಕಾದಮ್ಮ ಆಗಿ ಕೆಲಸ ಮಾಡುತ್ತಿದ್ದರು ಹೋದ ವರ್ಷ 2011-12 ರಲ್ಲಿ ಅಂಬರಾಯ ಸುತ್ತಾರ ಸಾ||ಬಂದರವಾಡ ತಾ||ಅಫಜಲಪೂರ ರವರು ನನ್ನ ಗಂಡನಿಗೆ ರೂ 1,50,000 ರೂಪಾಯಿಗಳ ಲೇಬರ್ ಪೆಮೆಂಟ ಕೊಟ್ಟಿರುವದಿಲ್ಲಾ  ಹಣ ಕೇಳಲು ಹೋದರೆ ಹಣ ಕೊಡುವದಿಲ್ಲ. ಮತ್ತೆ ಹಣ ಕೇಳಲು ಬಂದರೆ ನಿನಗೆ ಹೊಡೆದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಅಂತಾ ನನ್ನ ಗಂಡ ನನಗೆ ಹೇಳಿದರು ಅದೇ ರೀತಿ ಶ್ರೀ ಬುಡ್ಡಗೌಡ ಸಾ|| ಸಂಗಾಪೂರ ತಾ|| ಅಫಜಲಪೂರ ಇವರು ನಮಗೆ ರೂ 2,00,000 ಲೇಬರ ಸಂಬಳ ಕೊಡುವರಿದ್ದು, ಅದೇ ರೀತಿ ಚಂದ್ರಕಾಂತ  ತಂದೆ ಶಂಕರ ಪವಾರ ಸಾ||ತೀರ್ಥರೋಡ ತಾಂಡಾ ತಾ||ಆಳಂದ ಇವರು ಸಹ ನಮ್ಮಿಂದ 1,60,000 ರೂಪಾಯಿಗಳು ತಗೆದುಕೊಂಡು ಲೇಬರ ಕಳುಹಿಸದೆ ನನಗೆ ಮೋಸಮಾಡಿರುತ್ತಾರೆ ಎಂದು ನನ್ನ ಗಂಡನು ನನಗೆ ಹೇಳುತ್ತಿದ್ದರು. ಈ ಮೇಲ್ಕಂಡ ಮೂವರ ಕಿರುಕುಳದಿಂದ  ನನ್ನ ಗಂಡ ದಿನಾಂಕ:05-11-2012 ರಂದು ರಾತ್ರಿ 8.30 ಕ್ಕೆ ನಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನಗೆ 4 ಜನ ಮಕ್ಕಳಿದ್ದು ನಾನು ಈ ಮಕ್ಕಳಿಗೆ ಹೇಗ ಸಾಕಬೇಕೆನ್ನುವದು ದೊಡ್ಡ ಸಮಸ್ಯೆಯಾಗಿದೆ. ತಾವು ಈ ಮೇಲ್ಕಂಡ 3 ಜನರಿಂದ ನಮಗೆ ಕೊಡಬೇಕಾದ ಹಣ ವಸೂಲಿ ಮಾಡಿ ನನ್ನ ಗಂಡನ ಸಾಲ ಮರುಪಾತಿ ಮಾಡಲು ನನಗೆ ಸಹಾಯ ಮಾಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:217/2012 ಕಲಂ, 306 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀಮತಿ ಮೀರಾ ಗಂಡ ಸುಭಾಷಶ್ಚಂದ್ರ ಅವರಾದಿ ಸಾ|| ಕಾಳೆ ಲೇಜೌಟ ಗುಲಬರ್ಗಾ  ರವರು   ನಾನು ದಿನಾಂಕ:06-11-2012 ರಂದು ಸಾಯಂಕಾಲ 8-30 ಗಂಟೆ ಸುಮಾರಿಗೆ ನನ್ನ ಮನೆಯ ಮುಂದೆ ಕುಳಿತಿರುವಾಗ ಹಿಂದಿನಿಂದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ನನ್ನ ಮೂಗು ಮತ್ತು ಬಾಯಿ ಒತ್ತಿ ಹಿಡಿದು ನನ್ನ ಕೊರಳ್ಳಲ್ಲಿದ್ದ 9 ಗ್ರಾಂ ಬಂಗಾರದ ಲಾಕೇಟ ಕಡೆದುಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:79/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀವಿಠಲ ತಂದೆ ಭೀಮಶ್ಯಾ ಹರಳಯ್ಯಾ ವಯ|| 28 ವರ್ಷ ಸಾ|| ವಿವೇಕಾನಂದ ಶಾಲೆಯ ಹತ್ತಿರ ಗಂಗಾ ನಗರ  ಗುಲಬರ್ಗಾ ರವರು ಸರಸ್ವತಿ ಗೋದಾಮದಲ್ಲಿ ಬರುವ ನೇಮ್ಮದಿ ಕೇಂದ್ರದ ಹತ್ತಿರ ನನ್ನ ಚಾಹಾ ಹೊಟೇಲ ಇದ್ದು ನನ್ನ ಹೊಟೇಲದಲ್ಲಿ ಗಾಜೀಪೂರ ಬಡಾವಣೆಯ ರಾಜು ನಾಟೀಕರ ಇವರು ಚಾಹಾ ಕುಡಿದು ಕುಳಿತುಕೊಂಡಿದ್ದು ಸದರಿಯವರಿಗೆ ನಾನು ಬೇರೆ ಗಿರಾಕಿ ಬರುತ್ತಿವೆ. ನೀನು ಎದ್ದು ಹೋಗು ಅಂತಾ ಹೇಳಿದಕ್ಕೆ ಸದರಿಯವನು ಹೊಟೇಲ ನಿಮ್ಮಪ್ಪನ ಜಾಗೆ ಇದೆಯೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೆ ಇರುವ ಸ್ಟೂಲ್ ತಗೆದುಕೊಂಡು ನನ್ನ ಹಣೆಯ ಎಡಗಣ್ಣಿನ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:113/2012 ಕಲಂ: 504,324 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಚಂದ್ರಕಾಂತ ತಂದೆ ಕಲ್ಯಾಣರಾವ ಬಿರಾದಾರ ಸಾ||ರಾಜೀವ ಗಾಂಧಿ ನಗರ ಪೀಲ್ಟ್‌‌ರ ಬೆಡ್‌‌ ಗುಲಬರ್ಗಾರವರು ನಮ್ಮ ತಂದೆಯವರಾದ ಶ್ರೀ ಕಲ್ಯಾಣರಾವ ತಂದೆ ಚಂದ್ರಾಶ್ಯಾ ಬಿರಾದಾರ ರವರು ದಿನಾಂಕ:05/11/2012 ರಂದು  ಸಂಗೋಳಗಿ ಗ್ರಾಮದಲ್ಲಿ ಸಂಬಂಧಿಕರ ಜವಳ ಕಾರ್ಯಕ್ರಮಕ್ಕೆ ಹೋಗಿ  ಮರಳಿ ಗುಲಬರ್ಗಾಕ್ಕೆ ಟಿವಿಎಸ್‌‌ ಮೋಪೈಡ ನಂಬರ  ಕೆಎ;32 ವ್ಹಿ;1447 ನೇದ್ದರ ಮೇಲೆ ಕೆರೆಬೋಸಗಾ ಕ್ರಾಸದಲ್ಲಿ ನಿಂತು ಮರಳಿ ನನ್ನ ಗಾಡಿಯ ಹತ್ತಿರ ಬರುವಾಗ ಮೋಟಾರ ಸೈಕಲ ನಂಬರ ಕೆಎ;32 /7415 ನೇದ್ದರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಲ್ಯಾಣರಾವ ಇವರಿಗೆ  ಡಿಕ್ಕಿ ಹೊಡೆದು ಅವರು ಬಿದ್ದು ಅವರಿಗೂ ಗಾಯಗಳು ಆಗಿರುತ್ತವೆ. ನಂತರ ಅವರು ಅಲ್ಲಿಂದ ತಮ್ಮಮೋಟಾರ ಸೈಕಲ್ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂಬರ 354/12 ಕಲಂ 279  338 ಐಪಿಸಿ ಸಂ/187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಹೊನ್ನಪ್ಪ ತಂದೆ ರುಕ್ಕಪ್ಪ ದಿವಂಟಗಿ ಸಾ: ಬೀಮ್ಮಳ್ಳಿ ತಾ|| ಜಿ|| ಗುಲಬರ್ಗಾ ರವರು ದಿನಾಂಕ:04/11/2012 ರಂದು 10-00  ಗಂಟೆಗೆ ಹೊಲಕ್ಕೆ ಹೋಗಿ ನೋಡಲಾಗಿ ಮ್ಮ ಹೊಲ ಸರ್ವೇ ನಂ:144 ನೇದ್ದರಲ್ಲಿ 32 ಎಕರೆ 1 ಗುಂಟೆ ಹೊಲದಲ್ಲಿ ಸರಕಾರದವರು 10 ಎಕರೆ 20 ಗುಂಟೆ ಜಮೀನು ಸ್ವಾಧೀನ ಮಾಡಿಕೊಂಡಿದ್ದು ಈ ಬಗ್ಗೆ ಕೋರ್ಟನಲ್ಲಿ ಕೇಸು ನಡೆದಿರುತ್ತದೆ. ಉಳಿದ 21 ಎಕರೆಯಲ್ಲಿ 3 ಜನ ಅಣ್ಣ ತಮ್ಮಂದಿರು ಪಾಲನ್ನು ಮಾಡಿ ಸಾಗುವಳಿ ಮಾಡುತ್ತಿದ್ದು . ನನ್ನ ಅಣ್ಣನ ಮಕ್ಕಳು ಹಾಗೂ ಅವನ ಪತ್ನಿ ಈಗ 3-4 ದಿವಸಗಳ ಹಿಂದೆ ಹೊಲದ ಬಾಂದರಿ ಕಲ್ಲು ಕಿತ್ತಿ ಹಾಕಿ ಹೊಲದಲ್ಲಿಯ ತೋಗರಿ ಬೆಳೆಯನ್ನು ಅಂದಾಜು 5000/- ರೂ.  ಹಾಳು ಮಾಡಿರುತ್ತಾರೆ. ನಮ್ಮ ಅಣ್ಣನ ಮಗ ಮಲ್ಲಪ್ಪ ಅವನ ಹೆಂಡತಿ  ಹಾಗೂ ಶಿವಶರಣಪ್ಪ ಜಮಾದಾರ ರೋಜಾ ಠಾಣೆ ಇವರ ಮಗ ಅನಿಲ ಬಂದು ಒಡೆದು ಹಾಕಿರುತ್ತಾರೆ. ನಾನು ಮನೆಗೆ ಬಂದು ಮಲ್ಲಪ್ಪ, ದಂಡಪ್ಪ, ರುಕ್ಕಪ್ಪ, ಮಹಾದೇವ ಇವರಿಗೆ ಕೇಳಿದಾಗ ನಾವೇ ಕಿತ್ತಿ ಹಾಕಿರುತ್ತೆವೆ ಅಂತಾ  ಅವ್ಯಾಚ್ಛವಾಗಿ ಬೈದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:355/2012 ಕಲಂ 143 147 447 427 504 506 109 ಸಂಗಡ 149  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.