POLICE BHAVAN KALABURAGI

POLICE BHAVAN KALABURAGI

26 May 2011

GULBARGA DISTRICT REPORTED CRIMES

ಅಪಘಾತ ಪ್ರಕರಣ ;

ಗ್ರಾಮೀಣ ಠಾಣೆ ;ದಿನಾಂಕ 25-05-2011 ರಂದು ಶ್ರೀಮತಿ ಜಯಶ್ರೀ ಗಂಡ ಅಮೃತ ಪೊಲೀಸ ಪಾಟೀಲ ಸಾ: ನಿಪ್ಪಣಿ ತಾ: ಚಿತ್ತಾಪೂರ ಹಾ:ವ: ಎಸ್‌ಬಿ ಪಾಟೀಲ ಕಂಪನಿ ಕಪನೂರ ಗುಲಬರ್ಗಾ ಇವರು ತಮ್ಮ ಮಗಳಾದ ರೇಷ್ಮ ಇವಳ ಮದುವೆ ಪ್ರಯುಕ್ತ ಪಿರ್ಯಾದಿದಾರಳು ಹಾಗೂ ಅಮೃತ ಇಬ್ಬರು ಮಾಸಾಪ್ತಿ ದರ್ಗಾಕ್ಕೆ ದೀನ ನಮಸ್ಕಾರದ ಹರಕೆಯನ್ನು ಹೊತ್ತಿದ್ದು. ಅದರಂತೆ ಸಂಬಂದಿಕರೊಂದಿಗೆ ಮದ್ಯಾಹ್ನ 12:30 ಗಂಟೆಯ ಸುಮಾರಿಗೆ ದೀನ ನಮಸ್ಕಾರ ಹಾಕುತ್ತಾ ಮುಖ್ಯ ರಸ್ತೆಯ ಏರಲೈನ್ಸ್‌ ಧಾಬಾದ ಮುಂದಿನ ರಸ್ತೆಯ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಒಂದು ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್‌ 4689 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಎಲ್ಲರಿಗೆ ಡಿಕ್ಕಿ ಹೊಡೆದುಕೊಂಡು ಸೈಡಿಗೆ ನಿಲ್ಲಿಸಿರುವದರಿಂದ ಪಿರ್ಯಾದಿಯ ಗಂಡ ಹಾಗೂ ಸಂಬಂದಿಕರಾದ ಶಿವಕಾಂತಮ್ಮ ತೆಲಂಗಾಣ ಹಾಗೂ ಇತರರೆಲ್ಲರಿಗೂ ಸಾದಾ & ಬಾರಿಗಾಯವಾಗಿದ್ದು ಅಮೃತ ಇತನು ಬೇಹುಷ ಆಗಿದ್ದು ಅವನನ್ನು 108 ಅಂಬುಲೈನ್ಸ್‌ದಲ್ಲಿ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ್ಣು ಮಗಳು ಕಾಣೆಯಾದ ಪ್ರಕರಣ ;
ಎಮ್ ಬಿ ನಗರ ಠಾಣೆ ;ಶ್ರೀ ವಾಯ.ಎಂ.ಜಯರಾಜ ಪ್ರೋಫೆಸರ ಮೈಕ್ರೋಬಯಾಲಜಿ ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಸಾ; " ವಿನಾಯಕ "ಪ್ಲಾಟ ನಂ.20 ನಿಯರ ಹನುಮಾನ ಟೆಂಪಲ್ ಜಯನಗರ ಕಾಲೂನಿ ಸೇಡಂ ರೋಡ ಗುಲಬರ್ಗಾರವರ ಮಗನಾದ ಸಂತೋಷಕುಮಾರ ಇವನ ಹೆಂಡತಿ ಶ್ರೀಮತಿ ಶಿಲ್ಪಾ ಇವಳು ದಿನಾಂಕ ದಿನಾಂಕ.23-5-2011 ರಂದು 12-00 ಗಂಟೆಯಿಂದ 1-45 ಪಿ.ಎಂ.ದ ಮದ್ಯದ ಅವಧಿಯಲ್ಲಿ ಮನೆಯಿಂದ ಯಾರಿಗೂ ಏನು ಹೇಳದೆ ಕೇಳದೆ ಲಗೇಜ ತೆಗೆದುಕೊಂಡು ಹೋಗಿದ್ದು ದಿನಾಂಕ. 23-5-2011 ರಿಂದ ಇವತ್ತಿನವರೆಗೆ ಅಂದರೆ 25-5-2011 ವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಹಿಳೆಯ ಚಹರೆ ಪಟ್ಟಿ;- ಎತ್ತರ 4'8" ಗುಂಡನೆಯ ಮುಖ ,ಸದೃಡ ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ , ಕಣ್ಣುಗಳ ಕೆಳ ರೆಪ್ಪೆ ಕಪ್ಪಾಗಿರುತ್ತವೆ , ಸ್ಪೀಡಾಗಿ ಮಾತನಾಡುತ್ತಾಳೆ, ಕನ್ನಡ , ಹಿಂದಿ , ಇಂಗ್ಲೀಷ ಬರೆಯಲು , ಮಾತನಾಡಲು , ಓದಲು ಬರುತ್ತದೆ. ಡಾರ್ಕ ಕಲರನ ಚುಡಿದಾರ , ಕುರತ ಸೆಲವಾರ ಬಟ್ಟೆಗಳು ಧರಿಸಿರಬಹುದು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್ ಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.