POLICE BHAVAN KALABURAGI

POLICE BHAVAN KALABURAGI

25 July 2015

Kalaburagi District Reported Crimes

ವಿದ್ಯುತ ತಂತಿ ತಗಲು ಜಾನುವಾರು ಸಾವು :
ಚೌಕ ಠಾಣೆ : ಶ್ರೀ, ಸತೀಶ ತಂದೆ ನಿಂಗಣ್ಣ ರೇವೂರ ಸಾ; ಚನ್ನವೀರ ನಗರ ಕಲಬುರಗಿ ಇವರ ನಮ್ಮ ಮನೆಯಲ್ಲಿ 7 ಎಮ್ಮೆಗಳನ್ನು ಸಾಕಿದ್ದು, ಪ್ರತಿ ದಿನ ನಾವು ಹಾಲಿನ ವ್ಯಾಪಾರ ಮಾಡಿಕೊಂಡಿರುತ್ತೇವೆ.  ಇಂದು ದಿನಾಂಕ: 24/07/2015 ರಂದು ಬೆಳೆಗ್ಗೆ  11-00 ಗಂಟೆಗೆ ನಾನು ಚನ್ನವೀರ ನಗರದ ರಸ್ತೆಯ ಪಕ್ಕದ ರೇವೂ ನಾಯಕ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ನಮ್ಮ ಎಲ್ಲಾ 7 ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಅದರಲ್ಲಿ ಒಂದು ಎಮ್ಮೆಯು ರಸ್ತೆಯ ಪಕ್ಕದಲ್ಲಿರುವ ಲೈಟಿನ ಕಂಬದ ಹತ್ತಿರ ಮೇಯುತ್ತಿದ್ದಾಗ ಆಕಸ್ಮೀಕವಾಗಿ ಆ ಒಂದು ಎಮ್ಮೆಗೆ ವಿದ್ಯೂತ್ ತಂತಿ ತಗುಲಿ ಅದು ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ. ಸದರಿ ಎಮ್ಮೆಯು ಅಂದಾಜು 6 ವರ್ಷದ ಎಮ್ಮೆಯಾಗಿದ್ದು. ಅದರ ಅಂದಾಜು ಕಿಮ್ಮತ್ತು 60,000/- ರಿಂದ 70,000/- ರೂಪಾಯಿಗಳಾಗಬಹುದು.  ಕಾರಣ ನಾನು ಬಡವನಿದ್ದು, ನಮ್ಮ ಉಪಜೀವನಕ್ಕೆ ಆಧಾರವಾಗಿದ್ದ ನಮ್ಮ ಒಂದು ಎಮ್ಮೆಗೆ ಆಕಸ್ಮೀಕವಾಗಿ ವಿದ್ಯೂತ್ ತಂತಿ ತಗುಲಿ ವಿದ್ಯೂತ್ ಶಾಖದಿಂದ ಮೃತಪಟ್ಟಿದ್ದರಿಂದ ನಮಗೆ ನಷ್ಟವಾಗಿದ್ದು, ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ಶಿವಶಂಕರ ತಂದೆ ಕೆಂಚಪ್ಪ ಕೊಚನ ಸಾ: ನರೋಣಾ ಗ್ರಾಮ ತಾ:ಆಳಂದ ಜಿ: ಕಲಬುರಗಿ ರವರು  ದಿನಾಂಕ 23/07/2015 ರಂದು ನನಗೆ ಹಾಗೂ ನನ್ನ ಜೊತೆಯಲ್ಲಿ ಕಂಡೇಕ್ಟರ ಅಂತಾ ಶರೀ ಮಾಹಾಂತಯ್ಯಾ ಸ್ವಾಮಿ ಕಂಡೇಕ್ಟರ ನಂ. 477 ಇಬ್ಬರು ಕೂಡಿಕೊಂಡು ನಾವು ಕರ್ತವ್ಯ ಕುರಿತು ಡಿಪೋ ನಂ. 4 ಕ್ಕೆ ಬಂದು ನಮಗೆ ಎ.ಟಿ.ಎಸ್ ಸಾಹೇಬರಾದ ಶ್ರಿ ಅಶೋಕ ರಾಠೋಡ ಸಾಹೇಬರು ಸರಕಾರಿ ಬಸ್ ನಂ. ಕೆ.ಎ-32 ಎಫ್-1908 ನೇದ್ದರಲ್ಲಿ ರೂಟ ನಮ. 77 ರಲ್ಲಿ ಸದ್ಯ ಓಡಿಸಲು ಕರ್ತವ್ಯಕ್ಕೆ ನೇಮಿಸಿದ ಪ್ರಕಾರ ನಾನು ಹಾಗು ಕಂಡಕ್ಟರ ಮಾಹಾಂತಯ್ಯಾ ಸ್ವಾಮಿ ಇಬ್ಬರೂ ಕೂಡಿಕೊಂಡು ದಿನಾಂಕ 24/07/2015 ರಂದು ಬೆಳಿಗ್ಗೆ 5 ಎ.ಎಂ.ಕ್ಕೆ ಎದ್ದು ಬೆಳಿಗ್ಗೆ ರೂಟ ನಂ. 77 ನೇದ್ದರಲ್ಲಿ ನಮಗ ನೇಮಿಸಿದ ಕರ್ತವ್ಯದಂತೆ ಬೆಳಿಗ್ಗೆ 5-20 ಎ.ಎಂ.ಕ್ಕೆ ಬಸ್ಸ ನಂ. ಕೆ.ಎ-32 ಎಫ್-1908 ನೇದ್ದನ್ನು ಮೋದಲು ಟ್ರೀಪ್ ಸ್ಟೇಷನ ಬಜಾರದಿಂದ ಹುಮನಾಬಾದ ರೋಡಿಗೆ ಇದ್ದು ಆದಂತೆ ನಾವು ಬೆಳಿಗ್ಗೆ 5-20 ಎ.ಎಂ.ಕ್ಕೆ ಸ್ಟೇಷನ ಬಜಾರ ಬಸ್ ಸ್ಟ್ಯಾಂಡದಿಂದ ಹೊರಟು ತಿಮ್ಮಾಪೂರ ಚೌಕ, ಮಿನಿ ವಿಧಾನ ಸೌಧ, ಅನ್ನಪೂರ್ಣ ಕ್ರಾಸ, ಜಗತ್ತ ಮಾರ್ಕೇಟ, ಹುಮನಾಬಾದ ಬೇಸ್, ಮರಗಮ್ಮಾ ಟೆಂಪಲ್, ಮಿಜಗುರಿ ಕ್ರಾಸ ಮಾಡಿಕೊಂಡು ಅಂದಾಜು 5-45 ಎ.ಎಂ.ಕ್ಕೆ ನಗರೇಶ್ವರ ಶಾಲೆಯ ಹತ್ತಿರದ ರಸ್ತೆಗಳನ್ನು ಬಸ್ ನಂ. ಕೆ.ಎ-32 ಎಫ್-1908 ನೇದ್ದನ್ನು ನಿಧಾನವಾಗಿ ಜಾಗರೂಕತೆಯಿಂದ ಓಡಿಸಿಕೊಂಡು ಬರುತ್ತಿದ್ದಾಗ ಸಂಜು ನಗರ ಬಡಾವಣೆಗೆ ಹೋಗುವ ಕಟ್ಟ ರೋಡಿನಿಂದ ಬಂದು ಹೀರೋ ಹೊಂಡಾ ಶೈನ್ ವಾಹನ ಸಂಖ್ಯೆ ಕೆ.ಎ-32 ಇಬಿ-1777 ನೇದ್ದರ ಮೇಲೆ ಒಬ್ಬ ಮೋಟಾರು ಸೈಕಲ್ ಸವಾರ ತನ್ನ ವಾಹನದ ಮೇಲೆ ಇಬ್ಬರು ಹೆಣ್ಣು ಮಕ್ಕಳು ಕೂಡಿಸಿಕೊಂಡು  ಅತೀವೆಗದಿಂದ ನಿಸ್ಕಾಳಜೀತನದಿಂದ ನಡೆಯಿಸಿಕೊಂಡು ಬರುತ್ತಿದ್ದವನು, ತಾನು ಹೊಗಬೇಕಾದ ಯು ಟನ್ಸ ಕಡೆಗೆ ಸಾವಕಾಶವಾಗಿ ಹೋಗದೇ ನಮ್ಮ ಬಸ್ಸಿನ ಮುಂದೆ ಬರುವುದನ್ನು ನಾನು ದೂರದಿಂದಲೇ ಗಮನಿಸುತ್ತಾ ಓಮ್ಮೇಲೆ ನಾನು ನನ್ನ ಬಸ್ಸನ್ನು ಓಮ್ಮೆಲೆ ಬ್ರೇಕ್ ಹಾಕಲು ಬಸ್ಸು ನನ್ನ ಮುಂದುಗಡೆಯ ಎಡಭಾಗದಿಂದ ಬಲಭಾಗದ ಡಿವೇಡರವರೆಗೆ ಬಂದಿದ್ದು ಅಷ್ಠರಲ್ಲಿ ಸದರಿ ಸೈನ್ ಗಾಡಿ ನಂ. ಕೆ.ಎ-32 ಇಬಿ-1777  ನೇದ್ದವನ್ನು ನಮ್ಮ ಎದುರುಗಡೆ ಬಂದ ಎಡಭಾಗದ ಬಸ್ಸಿನ ಭಾಗಕ್ಕೆ ಡಿಕ್ಕಿ ಹೊಡೆದು 3 ಜನರೂ ಗಾಡಿಯ ಮೇಲಿಂದ ಕೆಳಗಡೆ ಬಿದ್ದಿದ್ದು ಇದನ್ನು ನೋಡಿ ಸದರಿ ನಮಗೆ ಡಿಕ್ಕಿ ಹೊಡೆದ ಮೋಟಾರ ಸೈಕಲ ಸವಾರನೂ ಎದ್ದವನೇ ನನಗೆ ಹಿಡಿದು ಗಾಡಿಯಲ್ಲಿ ಎರಿ ನನಗೆ ಅಡ್ಡಾ ತಿಡ್ಡಿಯಾಗಿ ಬೈಯುತ್ತಾ ಕೈಯಿಂದ ಮುಖದ ಮೇಲೆ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಕೈಮುಷ್ಠಿ ಮಾಡಿ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಲ್ಲದೆ ಸದರಿ ಅಪಘಾತವಾದ ಸ್ಥಳದಲ್ಲಿ ನೋಡಿದ ಕೆಲವು ಜನರೂ ವನ ಹಿಂದೆ ಇದ್ದವರು ಅಪರಿಚಿತ 2-3 ಜನರು ಸೇರಿ ಕೊಂಡು ನನಗೆ ಹೊಡೆಬಡೆ ಮಾಡಿರುತ್ತಾರೆ. ನನಗೆ ಹೊಡೆಯುತ್ತಿದ್ದ ಜನರು ಕಂಡೇಕ್ಟರ ಮಹಾಂತಯ್ಯಾ ಸ್ವಾಮಿ ಇವನಿಗೆ ಯಾರೂ ಅಪರಿಚಿತರು ಹೋಗವರು ಅವನಿಗೆ ಕೈಯಿಂದ ಹೊಡೆಯಲು ಅವನು ಸಹ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ವ್ಯಕ್ತಿಗಳು ನಮಗೆ ಹೊಡೆದು   ಅಪಘಾತ ಮಾಡಿದಿ ಅವನಿಗೆ ಉಪಚಾರ ಮಾಡಿಸುವವರೆಗೆ ನಿನಗೆ ಬಿಡುವುದಿಲ್ಲಾ ಅಂತಾ ಹೇಳಿ ಬಂದು ಆಪೀಸದಲ್ಲಿ ಕೂಡಿಸಿಕೊಂಡ ಐಟಿಐ ಕಾಲೇಜ ಹತ್ತಿರ ಆರ್.ಆರ್ ಶಹಾಪೂರಯವರೆ ಕರೆದುಕೊಂಡು ಹೋಗಿ ನನ್ನ ಬಸ್ಸಿಗೆ ಡಿಕ್ಕಿ ಹೊಡೆದ ಮೋಟಾರು ಸವಾರನಿಗೆ ಅಲ್ಲಿ ಉಪಚಾರಕ್ಕಾಗಿ ದಾಖಲಿಸಿದ ನಂತರ ಇನ್ನೂ ಹೆಚ್ಚಿಗೆ ಜನರು ದವಾಖಾನೆಗೆ ಬರುತ್ತಿದ್ದು ಅವರು ಇನ್ನೂ ನನಗೆ ಹೆಚ್ಚಿಗೆ ಹೊಡೆಯಬಹುದೆಂದು ಗಾಬರಿಯಾಗಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಸದರಿ ಘಟನೆಯ ಬಗ್ಗೆ ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ಅವರು ಉಪಚಾರಕ್ಕಾಗಿ ಹೋಗಲು ತಿಳಿಸಿದ ಮೇರೆಗೆ ನಾನು ಉಪಚಾರ ಕುರಿತು ಆಸ್ಪತ್ರೆಗೆ ದಾಖಲಾಗಿರುತ್ತನೆ ಸದರಿ ಘಟನೆ ಜರೂಗಲು ಕಾರಣವೆನೆಂದರೆ ನಾನು ನಗರೇಶ್ವರ ಸಾಲ್ ಹತ್ತಿರ ನನ್ನ ಬಸ್ಸು ಓಡಿಸಿಕೊಂಡು ಬರುತ್ತಿರುವಾಗ ಸಂಜ ನಗರ ಕ್ರಾಸದಿಂದ ನಮ್ಮ ಎದುರುಗಡೆ ಒಬ್ಬ ಮೋಟಾರು ಸಯಕಲ್ ಸವಾರ ನಂ. ಕೆ.ಎ-32 ಇಬಿ-1777 ನೇದ್ದವನು ಅತಿವೇಗದಿಂದ ಮತ್ತು ನಿಸ್ಕಾಳಜೀತನದಿಂದ ತನ್ನ ವಾಹನವನ್ನು ತಗೆದು ಕೊಂಡು ನನ್ನ ಬಸ್ಸಿ ನಂ. ಕೆ.ಎ-32 ಎಫ್-1908 ನೇದ್ದಕ್ಕೆ ತಾನೇ ಡಿಕ್ಕಿ ಹೊಡೆದು ಗಾಯಹೊಂದಿ ನಾನೇ ಅಪಘಾತ ಪಡಿಸಿರುತ್ತೇನೆ. ಅಂತಾ ನನ್ನ ಮೇಲೆ ತಪ್ಪು ಹೊರೆಯಿಸಿ ನನಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದು ಅಲ್ಲದೆ ನನ್ನ ಸಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದು ಸದರಿ ನನಗೆ ಹಲ್ಲೆ ಮಾಡಿದ ಮೋಟಾರ ಸೈಕಲ್ ಸವಾರರ ಮತ್ತು ಅವರ ಹಿಂದೆ ಇದ್ದ 2-3 ಜನರ ವಿರುದ್ದ ಕಾನೂನು ಕ್ರಮ ಜರೂಗಿಸಲು ವಿನಂತಿ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಪಾಂಡುರಂಗ ಹಾರಕೂಡ ಸಾ:ಸಂತ್ರಾಸವಾಡಿ ಕಲಬುರಗಿ ಹಾ:ವ:ಕನಕ ನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:23/07/2015 ರಂದು ರಾತ್ರಿ ನನ್ನ ಹೆಂಡತಿಯ ತಮ್ಮನಾದ ನಾಗೇಶ ಇತನ ಹೆಂಡತಿ ಭವಾನಿ ಇವಳು ನಮ್ಮ ಮನೆಯ ಬೇರೆ ಕೋಣೆಯಲ್ಲಿ ಮಲಗಿದ್ದು ಇವರು ಬಂದು ನಮಗೆ ಎಬ್ಬಿಸಿ ಹೇಳಿದ್ದೆನೆಂದರೆ, ವಿನೋದ ಇವನು ನಮ್ಮ ಮನೆಗೆ ಬಂದಿದ್ದು ಆಗ ನಾನು ಯಾರು ಯಾರು ಅಂತಾ ಕೂಗಿದಾಗ ಅವನು ಕಲ್ಲು ಹೊಡೆಯುತ್ತಾ ಓಡಿ ಹೋದನು. ಅಂತಾ ತಿಳಿಸಿದಾಗ ನಾನು ಮತ್ತು ನನ್ನ ಹೆಂಡತಿ ನಿರ್ಮಲಾ ಇಬ್ಬರೂ ಕೂಡಿ ವಿನೋದ ಇತನ ಮನೆಗೆ ಹೋಗಿ ಮನೆಯಲ್ಲಿ ಆತನ ತಂದೆ-ತಾಯಿಯವರಿಗೆ ಈ ವಿಷಯ ತಿಳಿಸಿ ವಿನೋದ ಎಲ್ಲಿದ್ದಾನೆ ಅವನು ನಮ್ಮ ಮನೆಗೆ ಬಂದು ಭವಾನಿ ಇವಳಿಗೆ ಅಂಜಿಸುತ್ತಾನೆ ಅಂತಾ ಹೇಳಿದಾಗ ವಿನೋಧ ಇವನು ಏಕೆ ನಮ್ಮ ಮನೆಗೆ ಬಂದಿದ್ದಿರಿ ಅಂತಾ ಹೇಳುತ್ತಿರುವಾಗ ನೀನು ಯಾಕೆ ರಾತ್ರಿ ವೇಳೆಯಲ್ಲಿ ನಮ್ಮ ಮನೆಗೆ ಬಂದು ಭವಾನಿ ಇವಳಿಗೆ ಅಂಜಿಸುತ್ತಿದ್ದಿ ಅಂತಾ ಕೇಳಿದಾಗ ಅವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಂಡಿ ಮಗನೆ ಭೋಸಡಿ ಮಗನೆ ಅಂತಾ ಕೈ ಮುಷ್ಠಿಮಾಡಿ ನನ್ನ ಎದೆಯ ಮೇಲೆ ಹೊಡೆದಿರುತ್ತಾನೆ. ಮತ್ತು ಅಲ್ಲೆ ಬಿದ್ದಿದ್ದ ಒಂದು ಫರ್ಶಿಕಲ್ಲು ತೆಗೆದುಕೊಂಡು ಅದರಿಂದ ನನ್ನ ಎಡಗಡೆ ತಲೆಯ ಮೇಲೆ, ಎಡಗಡೆ ಕಿವಿಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಶ್ರೀಮತಿ ನಿರ್ಮಲಾ ಮತ್ತು ನನ್ನ ಅಳಿಯ ನಾಗೇಶ ಮತ್ತು ನಾಗೇಶ ಇತನ ಹೆಂಡತಿ ಭವಾನಿ ಇವಳು ಬಿಡಿಸಲು ಬಂದಾಗ ವಿನೋದ ಇವನು ನನ್ನ ಹೆಂಡತಿಯ ಎಡಗೈ ಹಿಡಿದು ಕೈಯಿಂದ ಎಡಗಲ್ಲದ ಮೇಲೆ ಹೊಡೆದಿರುತ್ತಾನೆ. ಮತ್ತು ವಿನೋದ ತಾಯಿ ಮತ್ತು ಇನ್ನೊಬ್ಬ ಹುಡುಗ ಅವನ ಹೆಸರು ಗೊತ್ತಿಲ್ಲಾ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರೂ ಬಂದವರೆ ವಿನೋಧ ಇತನ ತಾಯಿ ಭವಾನಿ ಇವಳಿಗೆ ರಂಡಿ ಭೋಸಡಿ ಅಂತಾ ಬೈದು ಕೈಯಿಂದ ಹೊಟ್ಟೆಯ ಮೇಲೆ ಹೊಡೆದದು ಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 23-07-2015 ರಂದು ಉಡಚಾಣ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸಂಗಮೇಶ ಪಾಟೀಲ ಸಿ.ಪಿ.ಐ ಅಫಜಲಪೂರ ವೃತ್ತ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕ್ಕೆ ಉಡಚಾಣ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಹೋಗುತ್ತಿದ್ದಾಗ  ಎದುರುಗಡೆಯಿಂದ ಒಂದು ಟ್ರಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕ ನಮ್ಮ ಜೀಪ ನೋಡಿ ತನ್ನ  ಟ್ರಾಕ್ಟರನ್ನು ನಿಲ್ಲಿಸಿ  ಓಡಿ ಹೋಗಿದ್ದು. ನಂತರ  ಪಂಚರ ಸಮಕ್ಷಮ ಟ್ರಾಕ್ಟರ  ಚಕ್ಕ ಮಾಡಲು, 1) ಜಾನ ಡೀರ್ ಕಂಪನಿಯದ್ದು ಇದ್ದು ಅದರ ಇಂಜೆನ್ ನಂ PY3029H003210 ಅಂತ ಇದ್ದು, ಸದರಿ ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟ್ರಾಕ್ಟರನಲಿದ್ದ ಮರಳಿ ಅಂದಾಜು ಕಿಮ್ಮತ್ತು 3000/- ರೂ ಇರಬಹುದು ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.