POLICE BHAVAN KALABURAGI

POLICE BHAVAN KALABURAGI

03 August 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ. ಶಿವಕುಮಾರ ತಂದೆ ಗುರಪ್ಪಾ ಲಸ್ಕರ ಸಾ: ಮನೆ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ  ರವರು ನ್ನ ಹೆಂಡತಿಯಾದ ಅನಿತಾ ಇವಳು ರಾಖಿ ಹುಣ್ಣಿಗೆ ಸಲುವಾಗಿ ತವರು ಮನೆ ಅಫಜಲಪೂರಕ್ಕೆ ಹೋಗಿದ್ದು, ನಾನು ಗೌಂಡಿ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಮನೆಗೆ ಬಂದು ಬಿಗ ಹಾಕಿಕೊಂಡು  ಅಣ್ಣತಮ್ಮಕಿಯ ಮನೆ ಶಾಂತಿಗೆ ಹೋಗಿರುತ್ತೆನೆ. ದಿನಾಂಕ;02-03/08/2012 ರಂದು ರಾತ್ರಿ ನಾವು ಮನೆಯಲ್ಲಿ ಇಲ್ಲದ  ವೇಳೆಯಲ್ಲಿ ಯಾರೋ ಕಳ್ಳರು  ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಮತ್ತು ನಗದು ಹಣ 2000/- ರೂಪಾಯಿಗಳು ಹೀಗೆ  ಒಟ್ಟು  ಅಂದಾಜು ಕಿಮ್ಮತ್ತು 60,000/- ರೂಪಾಯಿ ಬೆಲೆ ಬಾಳುವ  ಬಂಗಾರದ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.64/2012 ಕಲಂ. 457, 380  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME

ಜಾತಿ ನಿಂದನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ಶ್ರೀ ಅಶೋಕ ತಂದೆ ಶಿವರಾಯ ಸಿಂಗ್ಗೆ ಸಾ|| ಮೊಘಾ (ಬಿ) ತಾ||ಆಳಂದ ರವರು ನಾನು ದಿನಾಂಕ:02/08/2012 ರಂದು ಮುಜಾಂನೆ 8:30 ಕ್ಕೆ ನಮ್ಮ  ಗ್ರಾಮದಲ್ಲಿರುವ ಸ್ಮಶಾನದಲ್ಲಿ ನನ್ನ ಮುತ್ತಜ್ಜನವರ ಸಮಾಧಿಗೆ ಹುಣ್ಣಿಮೆ ದಿನ ಇರುವದರಿಂದ ಪೂಜಾ ಸಲ್ಲಿಸಲು ಹೋಗಿದ್ದಾಗ, ಆ ಸಮಯದಲ್ಲಿ ನಮ್ಮ ಗ್ರಾಮದ ಚಾಂದಸಾಬ ತಂದೆ ಮೈಹಿಬೂಬಸಾಬ ಮುಜಾವರ, ಅಜಮುದ್ದಿನ್ ತಂದೆ ಮೈಹಿಬೂಬಸಾಬ ಮುಜಾವರ,ಗಪುರಸಾಬ ತಂದೆ ಮೈಹಿಬೂಬಸಾಬ ಮುಜಾವರ,ಮಕಬುಲಸಾಬ ತಂದೆ ಮೈಹಿಬೂಬಸಾಬ ಮುಜಾವರ, ಮನಸೂರ ತಂದೆ ಅಜಮುದ್ದಿನ್ ಮುಜಾವರ, ಶೌಕತಲಿ ತಂದೆ ಅಜಮುದ್ದಿನ್ ಮುಜಾವರ ಹಾಗೂ ಇತರರು ಕೊಡಿಕೊಂಡು ಜಾತಿ ನಿಂದನೆ ಮಾಡಿ ಚಾಂದಸಾಬ ಮುಜಾವರ ಇತನು ನನ್ನ ಕಪಾಳಕ್ಕೆ ಹೊಡೆದನ್ನು ಅಜಮುದ್ದಿನ ಮತ್ತು ಇತರರು ಕೂಡಿಕೊಂಡು ನನ್ನ ಕೈಯಲ್ಲಿದ ಪೂಜಾ ಸಾಮಾನುಗಳನ್ನು ಚೆಲ್ಲಾಪೀಲಿಯಾಗಿ ಹಾರು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ:41/2012ಕಲಂ 143,147,323,504,506 ಸಂಗಡ 149 ಐ.ಪಿ.ಸಿ ಮತ್ತು 3(1) (10) ಎಸ್.ಸಿ ಮತ್ತು ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.