POLICE BHAVAN KALABURAGI

POLICE BHAVAN KALABURAGI

13 February 2016

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀ ದಿಲ್ದಾರ ಬಡೆಖಾನ್ ತಂದೆ ಮೇಹಮುದ ಬಡೆಖಾನ್ ಸಾ: ಮನೆ ನಂ. 908 ರೌಫೀನ್ ಮಂಡಿ ಸದರ ಮೋಹಲ್ಲಾ ಕಲಬುರಗಿ ಬರೆದು ಕೊಡುವ ವಿನಂತಿ ಅರ್ಜಿ ಏನೆಂದರೆ ನನ್ನ ಮಗಳಾದ ಫರಾನಾ ಈವರಿಗೆ ಕಳೆದ 5 ವರ್ಷಗಳ ಹಿಂದೆ ಮಹಮ್ಮದ ಪಾರುಕ್ ನವಾಡೆ ತಂದೆ ಮಹಮ್ಮದ ಫಫಿ ನವಾಡೆ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಮಹಮ್ಮದ ಪಾರುಕ್ ನವಾಡೆ ಅಳಿಯನಾಗಬೇಕು, ಈತನೊಂದಿಗೆ ಕಳೆದ 2-3 ವರ್ಷಗಳಿಂದ ಖುರೇಷಿ ಜನರದ ನಜೀರ ಖುರೇಷಿ ಕಮ್ಮು, ಖಲೀಲ್ ಕಮ್ಮು ಖುರೇಷಿ, ಅದಿಲ್ ಕಮ್ಮು ಖುರೇಷಿ, ಯುಸೂಫ್ ಕಮ್ಮು ಖುರೇಷಿ, ಟಿಪ್ಪು ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರೊಂದಿಗೆ ನನ್ನ ಅಳಿಯನ ತಂದೆಯವರು ಮತ್ತು ಅಳಿಯ ನಮ್ಮ ಖುರೇಷಿ ಸಮಾಜದ ಅದ್ಯಕ್ಷ ಸ್ಥಾನ ಪಡೆದು ಸಮಾಜದಲ್ಲಿ ಅವರು ಮುಂದುವರೆಯುತ್ತಿರುದ್ದರಿಂದ ಅವರ ಎಳಿಗೆಯನ್ನು ಸಹಿಸದೇ ಈ ಮೇಲ್ಕಂಡ ಜನರು ನನ್ನ ಅಳಿಯ ಮತ್ತು ಅವರ ಕುಟುಂಬದವರ ಮೇಲೆ ಅನಾವಶ್ಯಕವಾಗಿ ದ್ವೇಶ ಭಾವನೆ ಕಟ್ಟಿಕೊಂಡು ಅವರಿಗೆ ಹೊಡೆಯುವುದು ಬಡೆಯುವುದು ಬೆದರಿಕೆ ಹಾಕುವುದು ಸುಮಾರು ತಿಂಗಳಿಂದ ದ್ವೇಶ ಸಾದಿಸುತ್ತಾ ಬಂದಿರುತ್ತಾರೆ. ಮತ್ತು ಈಗಾಗಲೇ ನನ್ನ ಅಳಿಯ ಮತ್ತು ಅವನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರಿಂದ ಕೇಸ ಕೊಟ್ಟಿದ್ದರಿಂದ ವೈಮಸ್ಸು ಬೇಳೆದಿದ್ದು  ದಿನಾಂಕ 12/02/2016 ರಂದು ಅಂದಾಜು 8-15 ಪಿ.ಎಂ.ಕ್ಕೆ ನಾನು ಮನೆಯಲ್ಲಿದ್ದಾಗ ನನ್ನ ಅಳಿಯನ ಗೆಳೆಯ ಮೋಬೈಲ್ ಮುಖಾಂತರ ಮಾಹಿತಿ ತಿಳಿಸಿದ್ದೇನೆಂದರೆ ನಿಮ್ಮ ಅಳಿಯ ಮಹಮ್ಮದ ಪಾರುಕ್ ಇತನಿಗೆ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಮತ್ತು ಇವರ ಸಂಗಡಿಗರು ಕೂಡಿಕೊಂಡು ನಿಮ್ಮ ಅಳಿಯನಿಗೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆಯುತ್ತಿದ್ದಾರೆ. ಅವನು ನಿತ್ರಾಣ ಸ್ಥೀತಿಯಲ್ಲಿ ರೋಡಿನ ಮೇಲೆ ಬಿದ್ದಿದ್ದಾನೆ ಎಂದು ತಿಳಿಸುತ್ತಲೇ ತಾನು ಗಾಬರಿಯಾಗಿ ಬಡಕಲ್ ಮೋಮಿನಪೂರ ಹತ್ತಿರ ಬಂದು ನೋಡಿದಾಗ ನನ್ನ ಅಳಿಯ ಮಹಮ್ಮದ ಪಾರುಕ್ ಇತನಿಗೆ ಹಳೆಯ ವೈಮಸ್ಸಿನಿಂದಲೇ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರು ಸೇರಿ ಮಾರಾಕಾಸ್ತ್ರದಿಂದ ತಲೆಯ ಮೇಲೆ, ಹೊಟ್ಟೆಯ ಮೇಲೆ, ಎದೆಯ ಮೇಲೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಶ್ರೀಶೈಲ ತಂದೆ ಶಿವಶರಣಪ್ಪ ಪಾಟೀಲ ಸಾ|| ಸಿದನೂರ ತಾ|| ಅಫಜಲಪೂರ ಹಾ|| || ಅಫಜಲಪೂರ ನಾನು ಮತ್ತು ನನ್ನ ಗೆಳೆಯ ಚಂದ್ರಕಾಂತ ತಂದೆ ಶಾಂತಯ್ಯ ಹಿರೆಮಠ ಇಬ್ಬರು ನಮ್ಮ ನಮ್ಮ ಸ್ವಂತ ಕೆಲಸದ ಪ್ರಯುಕ್ತ, ಚಂದ್ರಕಾಂತ ಹಿರೆಮಠ ಇವರ ಮೋಟರ ಸೈಕಲ ನಂಬರ ಕೆಎ-32 ಇಇ-0644 ನೇದ್ದರ ಮೇಲೆ ಅಫಜಲಪೂರ ತಾಲೂಕಿನ ನಂದರ್ಗಾ ಗ್ರಾಮಕ್ಕೆ ಹೋಗಿರುತ್ತೇವೆ. ನಂದರ್ಗಾ ಗ್ರಾಮದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಸದರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ಚಂದ್ರಕಾಂತ ಹಿರೆಮಠ ರವರು ನಡೆಸುತ್ತಿದ್ದರು ನಾನು ಅವರ ಹಿಂದೆ ಕುಳಿತಿದ್ದೇನು, ನಾವು ಅಂದಾಜು ಮದ್ಯಾಹ್ನ 3:30 ಗಂಟೆ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕರಜಗಿ ರೋಡಿಗೆ ಇರುವ ಅಳ್ಳಗಿ ಕ್ರಾಸ ಹತ್ತಿರ ಬರುತ್ತಿದ್ದಾಗ, ನಮ್ಮ ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಾವು ಬರುತ್ತಿದ್ದ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದನು, ಆಗ ನಾವು ಮೋಟರ ಸೈಕಲದೊಂದಿಗೆ ಕೇಳಗೆ ಬಿದ್ದೇವು, ಆಗ ನಾವು ನಮಗೆ ಡಿಕ್ಕಿಪಡಿಸಿದ ಮೋಟರ ಸೈಕಲ ನಂಬರ ನೋಡಿದ್ದು ಕೆಎ-32 ಇಡಿ-2365 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಮೋಟರ ಸೈಕಲ ಚಾಲಕ, ಮೋಟರ ಸೈಕಲ ತಗೆದುಕೊಂಡು ಅಲ್ಲಿಂದ ಹೊದನು, ಸದರಿ ಡಿಕ್ಕಿಯಿಂದ ನನ್ನ ಬಲಗಾಲು ಮೋಳಕಾಲಿನ ಕೇಳಗೆ ಎರಡು ಕಡೆ ಕಾಲು ಮುರಿದಿತ್ತು ಹಾಗೂ ಬಲಗಾಲು ಹೆಬ್ಬರಳಿಗೆ ತರಚಿದ ರಕ್ತಗಾಯ ಆಗಿತ್ತು, ಚಂದ್ರಕಾಂತ ಹಿರೆಮಠ ರವರಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ:08-02-2016 ರಂದು ಮದ್ಯಾಹ್ನ ಸೂಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂ-218 ಕಮಕಲಾಪೂರ ಹುಮನಾಬಾದ ರೋಡಿನ ಕುದರೆಮುಖ ಹೋಡ್ಡಿನ ತಿರುವಿನಲ್ಲಿ ಶ್ರೀ ಸಂಜು ತಂದೆ ಶಿವರಾಯ ಹುಲಿಮನಿ ಸಾ: ನವನಿಹಾಳ ತಾ:ಜಿ:ಕಲಬುರಗಿ ಇವರ ಬಾವನಾದ ಮಂಜುನಾಥ ಕಮಲಾಪೂರಕ್ಕೆ ದವಾಖಾನೆಗೆ ತೋರಿಸಿಕೊಂಡು ತನಗೆ ಪರಿಚಯದವನಾದ ಮಾದೇಶ ಈತನ ಹಿರೋಹೊಂಡಾ ಸ್ಪ್ಲೆಂಡರ ಪ್ಲಸ ಮೋಟರ ಸೈಕಲ ನಂ-ಕೆಎ-32 ಎಬಿ-1304 ನೇದ್ದರ ಮೇಲೆ ಕುಳಿತು ಕಿಣ್ಣಿಸಡಕ ಗ್ರಾಮಕ್ಕೆ ವಾಪಸ್ಸ ಹೋಗುವಾಗ ಮಾದೇಶನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಸ್ಕಿಡ್ಡ ಮಾಡಿ ಕೆಡವಿದ್ದರಿಂದ ತನ್ನ ಭಾವ ಮಂಜುನಾಥನಿಗೆ ಬಲ ರಟ್ಟೆಗೆ ಹಾಗೂ ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು. ಅಲ್ಲದೆ ಮಾದೇಶನಿಗೆ ಹೋಟ್ಟೆ ಮೇಲೆ ಚರ್ಮ ಸುಲಿದಂತಾಗಿ ಭಾರಿ ರಕ್ತ ಹಾಗೂ ಗುಪ್ತ ಗಾಯಗಳಾಗಿ ಕಲಬುರಗಿ ಸರಕಾರಿ ದವಾಖಾನೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಹಾದೇವ & ಮಾಹದೇಶ ಸಾ:ಬಾಪುನಗರ ಕಲಬುರಗಿ ಈತನು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ನೀಲಮ್ಮ ಗಂಡ ಮರೆಪ್ಪ ಕುರಿಮನಿ  ಸಾ||| ಘತ್ತರಗಾ ಇವರ ನನ್ನ ಗಂಡನು ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ ಸರ್ಕಲ ಹತ್ತಿರ ಪಾನಶಾಪ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರಗಳಂದು ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಜಾಸ್ತಿ ಬರುವುದರಿಂದ, ವ್ಯಾಪಾರ ಮಾಡುವ ಸಂಭಂದ ನನ್ನ ಗಂಡ ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರದ ಹಿಂದಿನ ದಿನಗಳ ರಾತ್ರಿ ವೇಳೆಯಲ್ಲಿ ಪಾನಶಾಪ ಹತ್ತಿರದ ಅಂಬೇಡ್ಕರ ಕಟ್ಟೇಯ ಮೇಲೆ ಮಲಗುತ್ತಿದ್ದರು, ಹಿಗಿದ್ದು ನಿನ್ನೆ ದಿನಾಂಕ 11-02-2016 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನನ್ನ ಗಂಡನಾದ ಮರೆಪ್ಪ ತಂದೆ ಗಡ್ಡೆಪ್ಪ ಕುರಿಮನಿ ಇವರು ಮನೆಯಲ್ಲಿ ಊಟ ಮಾಡಿ ನಾನು ಪಾನಶಾಪ್ ಹತ್ತಿರ ಅಂಭೇಡ್ಕರ ಕಟ್ಟೆಯ ಮೇಲೆ ಮಲಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾರೆ. ಮದ್ಯ ರಾತ್ರಿ ಅಂದಾಜು 02:30 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದಾಗ ನಮ್ಮ ಚಿಕ್ಕಪ್ಪನಾದ ಶಿವಕಾಂತ ತಂದೆ ಭೀಮಶಾ ಸಿಂಗೆ ಇವರು ನನಗೆ ಪೋನ ಮಾಡಿ ನಿನ್ನ ಗಂಡನ ಮೇಲೆ ಕಬ್ಬಿನ ಟ್ರೈಲಿ ಬಿದ್ದಿದೆ ಭಾ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಕ್ಕಳೊಂದಿಗೆ ಅಂಬೇಡ್ಕರ ಸರ್ಕಲ ಹತ್ತಿರ ಬಂದು ನೋಡಲಾಗಿ ನನ್ನ ಗಂಡ ಮಲಗಿದ್ದ ಅಂಬೇಡ್ಕರ ಕಟ್ಟೆಯ ಮೇಲೆ ಕಬ್ಬಿನ ಟ್ರೈಲಿ ಬಿದ್ದಿತ್ತು, ಆಗ ನನ್ನ ತಂದೆ ರಾವುತಪ್ಪ ಸಿಂಗೆ, ನನ್ನ ಗಂಡನ ಅಣ್ಣ ಭಾಗಪ್ಪ ಕುರಿಮನಿ, ನಮ್ಮ ಅಣ್ಣ ತಮ್ಮಕಿಯ ಲಕ್ಷ್ಮೀಕಾಂತ ಸಿಂಗೆ, ಹಾಗೂ ಪ್ರತ್ಯಕ್ಷ ದರ್ಶಿಗಳಾದ ಚಂದಪ್ಪ ಬಟ್ಟರಕಿ, ಸುಭಾಷ ಬಿಲ್ಲಾಡ ಇವರೆಲ್ಲರೂ ಕೂಡಿ ನನ್ನ ಗಂಡನ ಮೇಲೆ ಬಿದ್ದ ಕಬ್ಬುಗಳನ್ನು ತಗೆದು ನನ್ನ ಗಂಡನನ್ನು ಹೊರಗೆ ತಗೆದು ನನ್ನ ಗಂಡನನ್ನು ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದು, ನನ್ನ ಗಂಡನಿಗೆ ಎರಡು ಕಾಲುಗಳು ಮೋಳಕಾಲಿನಿಂದ ಕೆಳಗೆ ಮುರಿದು ಕಡೆಗಾಗಿದ್ದವು, ಹಾಗೂ ಹೊಟ್ಟೆಯ ಕೆಳಗೆ ಸೊಂಟದ ಮೇಲೆ ಬಾರಿ ಗುಪ್ತಗಾಯವಾಗಿ ಸೊಂಟದ ಮುರಿದಿತ್ತು, ನಂತರ ನನ್ನ ಗಂಡನ ಮೇಲೆ ಬಿದ್ದ ಟ್ಯಾಕ್ಟರ ನಂಬರ ನೋಡಲಾಗಿ, ಟ್ಯಾಕ್ಟರ ಇಂಜೆನ ನಂಬರ NNHY07739, ಮುಂದಿನ ಟ್ರೈಲಿ ನಂಬರ ಕೆಎ-28 ಟಿ-7353, ಪಲ್ಟಿಯಾದ ಹಿಂದಿನ ಟ್ರೈಲಿ ನಂಬರ ಕೆಎ-28 ಟಿ-7354 ಅಂತಾ ಅರ್ಜುನ ಮಹೆಂದ್ರಾ ಕಂಪನಿಯ ಕೆಂಪು ಬಣ್ಣದ ಟ್ಯಾಕ್ಟರ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.