POLICE BHAVAN KALABURAGI

POLICE BHAVAN KALABURAGI

29 September 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ದೇವಕಿ ಗಂಡ ಶಿವರಾಯ ನಾಯಿಕೊಡಿ ಸಾ|| ಮಾರಡಗಿ (ಎಸ್.ಎ) ರವರ ಮಗ  ವಿಶ್ವರಾಧ್ಯ @ ಈಶಪ್ಪ ತಂದೆ ಶಿವರಾಯ ನಾಯಿಕೊಡಿ ರವರು  ತನ್ನ ಕೃಷಿ ಚಟುವಟಿಕೆಗಾಗಿ ಐ.ಸಿ.ಐ.ಸಿ ಬ್ಯಾಂಕ್ ಜೇವರಗಿ ಶಾಖೆ ಮತ್ತು ಊರಲ್ಲಿ ಅವರಿವರ ಹತ್ತಿರ ಒಟ್ಟು 6.71.000/- ರೂ ಸಾಲ ಮಾಡಿಕೊಂಡಿರುತ್ತಾನೆ. ಸಮಯಕ್ಕೆ ಸರಿಯಾಗೇ ಮಳೆ ಬಾರದ ಕಾರಣ ಬೇಳೆ ಬಾರದೆ ಮಾಡಿರುವ ಹೇಗೆ ತೀರಿಸಬೇಕೆಂದು ಚಿಂತೆ ಮಾಡಿ ಸಾಲದ ಬಾದೆಯಿಂದ ದಿನಾಂಕ 09.09.19 ರಂದು ಬೇಳಗ್ಗೆ 03:00 ಸುಮಾರಿಗೆ ತಾನು ಮನೆಯಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿ ಚಿಕಿತ್ಸೆ ಗುಣಮುಖವಾಗದೆ ನಿನ್ನೆ ದಿನಾಂಕ 26.09.2019 ರಂದು 23:40 ಕ್ಕೆ ಸರಕಾರಿ ಆಸ್ಪತ್ರ  ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆ ನಾಶ ಮಾಡಿ ಜೀವದ ಭಯ ಹಾಕಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಅಪ್ಪಣ್ಣಗೌಡ ತಂದೆ ಸಿದ್ದರಾಮಪ್ಪ ಇಟಗಿ ಸಾ; ಬಿರಾಳ (ಕೆ) ತಾ; ಜೇವರ್ಗಿ ಹಾ,ವ ಗಾಬರೆ ಲೇಔಟ್ ಸಿದ್ದೇಶ್ವರ ಕಲ್ಯಾಣ ಮಂಟಪ ಹತ್ತಿರ ಕಲಬುರಗಿ  ರವರದು; ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮ ಸೀಮಾಂತರದ ಜಮೀನು ಸರ್ವೇ ನಂ; 43/ಅ ವಿಸ್ತೀರ್ಣ 10 ಎಕರೆ 13 ಗುಂಟೆ ಹಾಗು 43/ಆ ವಿಸ್ತೀರ್ಣ 9 ಎಕರೆ 29 ಗುಂಟೆ ಜಮೀನು ಇದ್ದು ಸದರಿ ಜಮೀನು ನನ್ನ ಮಗ ಶರಣು ಈತನ ಹೆಸರಿನಲ್ಲಿ ಇರುತ್ತದೆ. ಈ ಜಮೀನು ನಾವು ಉಳುಮೆ ಮಾಡುತ್ತಾ ಬಂದು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ. 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಇವರು ಜಮೀನು ತಮಗೆ ಸೇರಿರುತ್ತದೆ ಎಂದು ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಈ ವಿಷಯದಲ್ಲಿ ಅವರು ನಮ್ಮೊಂದಿಗೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ; 20.09.2019 ಹಾಗು ದಿ; 21.09.2019 ರಂದು ಈ ಎರಡು ದಿನ ಈ ಮೇಲೆ ನಮೂದಿಸಿದ ಜಮೀನಿನಲ್ಲಿನ ತೊಗರೆ ಬೆಳೆಯನ್ನು ಹೊನ್ನಾಳ ಗ್ರಾಮದ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ 4) ಈಶ್ವರಪ್ಪ ತಂದೆ ಮರೆಪ್ಪ ಸೂಗೂರ ಸಾ; ಎಲ್ಲರೂ ಹೊನ್ನಾಳ ಗ್ರಾಮ ಕೂಡಿಕೊಂಡು ನಮಗೆ ಕೇಡು ಮಾಡುವ ಉದ್ದೇಶದಿಂದ ತಮ್ಮ ದನಕರುಗಳನ್ನು ನಮ್ಮ ಜಮೀನಿನಲ್ಲಿ ಬಿಟ್ಟು ಬೆಳೆಯನ್ನು ಹಾಳು ಮಾಡಿರುತ್ತಾರೆ. ದಿ; 21.09.2019 ರಂದು ಮದ್ಯಾಹ್ನ 2-00 ಘಂಟೆಯ ಸುಮಾರಿಗೆ ನಮ್ಮ ಆಳು ಮಗ ಮಹಾಂತೇಶ ತಂದೆ ಸೈಬಣ್ಣ ಈತನು ಹೊಲದಲ್ಲಿ ಹೋದಾಗ ಅವರು ಆ ಭೋಸಡಿ ಮಗ ನಿಮ್ಮ ಮಾಲಕನಿಗೆ ಹೇಳು ನಮ್ಮ ತಂಟೆಗೆ ಬಂದರೆ ಒಬ್ಬೊಬ್ಬರಿಗೆ ಜೀವಂತವಾಗಿ ಸುಟ್ಟು ಹಾಕುತ್ತೇವೆ ಎಂದು ಜೀವದ ಭೇದರಿಕೆ ಹಾಕಿರುತ್ತಾರೆ. ಎಂದು ನಮ್ಮ ಆಳು ಮಗ ನಮಗೆ ಪೋನ್ ಮಾಡಿ ತಿಳಿಸಿರುತ್ತಾನೆ. ನಂತರ ನಾನು ನಮ್ಮ ಗ್ರಾಮದ ವಜ್ರಪ್ಪ ತಂದೆ ಈರಪ್ಪ ತಳವಾರ, ಸಾಬಣ್ಣ ತಂದೆ ಈರಪ್ಪ ತಳವಾರ, ಮಲ್ಲಣ್ಣ ತಂದೆ ಬಸು ರೆಡ್ಡಿ ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರಿಂದ ಅವರು ನಮ್ಮ ಹೊಲಕ್ಕೆ ಹೋದಾಗ ತೊಗರೆ ಬೆಳೆ ಮೈಸುತ್ತಿರುವ ಈ ಮೇಲಿನವರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಮರು ದಿನ ದಿನಾಂಕ 22.09.2019 ರಂದು ಬೆಳಿಗ್ಗೆ 6-30 ಘಂಟೆಯ ವೇಳೆಗೆ ನಮ್ಮ ಆಳು ಮಗ ಮಹಾಂತೇಶ ದೊರೆ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಇಂದು ಬೆಳಿಗ್ಗೆ 6-00 ಘಂಟೆಯ ವೇಳೆಗೆ ನಾನು ಹೊನ್ನಾಳ ಸೀಮಾತರದಲ್ಲಿ ಇರುವ ಮೇಲೆ ನಮೂದಿಸಿದ ಹೊಲಕ್ಕೆ ಹೋದಾಗ ಹೊಲದಲ್ಲಿ 1) ಸಂಗಣ್ಣಗೌಡ ತಂದೆ ಲಿಂಗನಗೌಡ 2) ಭೀಮರಾಯಗೌಡ ತಂದೆ ಲಿಂಗನಗೌಡ 3) ಶರಣಗೌಡ ತಂದೆ ಲಿಂಗನಗೌಡ ಸಾ; ಎಲ್ಲರು ಹೊನ್ನಾಳ ಗ್ರಾಮ ಇವರು ಕೂಡಿಕೊಂಡು ಟ್ರಾಕ್ಟರ ನಂ; ಕೆ.ಎ-32-ಟಿ-9444 ಮೂಲಕ ಹೊಲದಲ್ಲಿನ ತೊಗರೆ ಬೆಳೆ ಹರಗುತ್ತಿದ್ದರು. ಆಗ ನಾನು ಹೊಲದಲ್ಲಿ ಬರುವದನ್ನು ನೋಡಿ ಅವರು ಟ್ರಾಕ್ಟರ ಸಮೇತ ಅಲ್ಲಿಂದ ಓಡಿ ಹೋದರು. ಎಂದು ನಮ್ಮ ಆಳು ಮಗ ನನಗೆ ಪೋನ್ ಮಾಡಿ ತಿಳಿಸಿದನು. ನಂತರ ಅದೇ ದಿವಸ ನಾನು ಹೊಲಕ್ಕೆ ಹೋಗಿ ನೋಡಲಾಗಿ ಹೊಲದಲ್ಲಿ ಬೆಳೆ ಸಂಪೂರ್ಣ ಟ್ರಾಕ್ಟರದಿಂದ ಹರಗಿ ಹಾಳು ಮಾಡಿದ್ದು ನಿಜವಿರುತ್ತದೆ. ಇದರಿಂದ ಹೊಲದಲ್ಲಿ ಇದ್ದ ಸುಮಾರು 7,00,000/ ರೂ ಮೌಲ್ಯದ ಬೆಳೆಯನ್ನು ಹಾನಿ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ದಿನಾಂಕ 26/09/2019 ರಂದು ಶ್ರೀ ಸೂರ್ಯಕಾಂತ ತಂದೆ ಬಸವಣಪ್ಪಾ ಕಲಶಟ್ಟಿ ಸಾ ಬೆಳಮಗಿ ರವರು ಮತ್ತು  ಹೆಂಡತಿಯಾದ ಜಗದೇವಿ ಮಕ್ಕಳಾದ ಅಂಬೀಕಾ ಮತ್ತು ಶಂಭುಲಿಂಗ ಎಲ್ಲರೂ ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಅಡುಗೆ ಕೋಣೆ ಮತ್ತು ದೆವರ ಕೋಣೆಗಳಿಗೆ ಬಾಗಿಲು ಕೊಂಡಿ ಹಾಕಿ ಹಾಗು ನಮ್ಮ ಮನೆಯ ಅಡುಗೆ ಕೋಣೆಯ ಹೊರಭಾಗದ ಬಾಗಿಲಿಗೆ ಹಾಗು ನಮ್ಮ ಮನೆಯ ಪಡಸಾಲಿಗೆ ಹೊಂದಿಕೊಂಡು ಕೂಡಿಸಿದ ಶೆಟರ ಚೈನಿಗೆ ಚಾವಿ ಹಾಕಿಕೊಂಡು ನಾವೆಲ್ಲರೂ ಮನೆಯ ಪಡಸಾಲೆಯಲ್ಲಿ ರಾತ್ರಿ ಮನೆಯಲ್ಲಿನ ಲೈಟ ಆರಿಸಿಕೊಂಡು ಮಲಗಿಕೊಂಡಿರುತ್ತೆವೆ. ದಿನಾಂಕ 27/09/2019 ರಂದು ಬೆಳಿಗ್ಗೆ ನಾನು ಪ್ರತಿ ದಿನದಂತೆ ನನ್ನ ಹೊಟಲ ಕೆಲಸಕ್ಕೆ ಹೋಗಲು ಎದ್ದು ನನ್ನ ಹೆಂಡತಿಯಾದ ಜಗದೇವಿ ಇವಳಿಗೂ ಎಬ್ಬಿಸಿದೆನು. ಲೈಟ ಹಾಕಿ ನೋಡಿದಾಗ ನಮ್ಮ ಮನೆಯ ದೆವರು ಕೋಣೆಗೆ ಹಾಕಿದ ಬಾಗಿಲು ತೆರೆದ ಸ್ಥಿತಿಯಲ್ಲಿದ್ದುದ್ದರಿಂದ ನಾನು ನನ್ನ ಹೆಂಡತಿ ಇಬ್ಬರು ಗಾಬರಿಯಾಗಿ ದೆವರು ಕೋಣೆಯಲ್ಲಿ ನೋಡಲಾಗಿ ನಮ್ಮ ಬಟ್ಟೆ ಬರೆ ಬಂಗಾರದ ಒಡವೆಯ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ತೆರೆದ ಸ್ಥಿತಿಯಲ್ಲಿ ಬಿದ್ದಿದ್ದು ನಾನು ನನ್ನ ಹೆಂಡತಿ ಇಬ್ಬರು ಒಳಗೆ ಹೋಗಿ ನೋಡಲಾಗಿ ತಿಜೂರಿ ತೆರೆದಿದ್ದು ಪರಿಶೀಲಿಸಲಾಗಿ ತಿಜೂರಿಯಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳನ್ನು  ಎರಡು ಪ್ಲಾಸ್ಟಿಕ ಕ್ಯಾರಿಬ್ಯಾಗಗಳಲ್ಲಿ ನಾನು ಮುಂಬರುವ ದಿಪಾವಳಿ ಹಬ್ಬದ ಸುಮಾರಿಗೆ ನನ್ನ ಮಗಳಾದ ಅಂಬೀಕಾ ಇವಳ ಮದುವೆಗಾಗಿ ನಾನು ಜಮಾ ಮಾಡಿಟ್ಟ ಹಾಗು ಬಿ,ಸಿ ಎತ್ತಿ ಹಾಗು ಕೈಗಡ ಪಡೆದುಕೊಂಡು ಸಂಗ್ರಹಿಸಿ ಇಟ್ಟ ಒಟ್ಟು  4,50,000/- ರೂ ಹಾಗು ಮನೆಯಲ್ಲಿ ಫ್ರಿಜ್ ಮೆಲೆ ಇಟ್ಟಿದ್ದ  ಒಂದು ಚಾರ್ಜರ ಬ್ಯಾಟ್ರಿ ಅ: ಕಿ: 1500/- ರೂ  ಒಂದು ಸಾದಾ ಮೊಬೈಲ್ ಸೆಟ ಅ: ಕಿ: 1000/- ರೂ  ಒಂದು ಪವರ ಬ್ಯಾಂಕ ಅ:ಕಿ: 500/- ರೂ ಹೀಗೆ ಎಲ್ಲವುಗಳು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 September 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಶಿವದರ್ಶನ ಕತ್ನಳ್ಳಿ ಸಾ: ಅಫಜಲಪೂರ ರವರ ಗಂಡನಾದ ಶಿವದರ್ಶನ ರವರು ಒಕ್ಕಲುತನ ಕೆಲಸ ಮಾಡಿಕೊಂಡು ಇದ್ದರು ನನ್ನ ಗಂಡನು ನಮ್ಮ ಸಂಬಂಧಿಕರಾದ ಹಣಮಂತ ಅಳ್ಳಗಿ ಮತ್ತು ಶಾಂತಮಲ್ಲ ಉಡಚಾಣ ಇವರ ಒಟ್ಟು 14 ಎಕರೆ ಹೊಲವನ್ನು ಪಾಲಿನಂತೆ ಮಾಡಿರುತ್ತಾರೆ ನನ್ನ ಗಂಡನ ಹೊಲದ ಸಾಗುವಳಿಗಾಗಿ ಮತ್ತು ಮನೆಯ ಖರ್ಚಿಗಾಗಿ ಊರ ಮನೆಯವರ ಹತ್ತಿರ ಸುಮಾರು 7 ರಿಂದ 8 ಲಕ್ಷ ರೂಪಾಯಿ ಸಾಲಮಾಡಿಕೊಂಡಿದ್ದರು.  ದಿನಾಂಕ 15-09-2019 ರಂದು 8:00 ಪಿ.ಎಮ್ ಕ್ಕೆ ನಾನು ನನ್ನ ಎರಡು ಗಂಡು ಮಕ್ಕಳನ್ನು ಕರೆದುಕೊಂಡು ಅಂಗಡಿಗೆ ಹೋಗಿರುತ್ತೇನೆ ಮರಳಿ 8:30 ಪಿ.ಎಮ್ ಕ್ಕೆ ಮರಳಿ ಮನೆಗೆ ಬಂದು ನೋಡಲಾಗಿ ನನ್ನ ಗಂಡನು ಮನೆಯಲ್ಲಿ ಬಿದ್ದು ಒದ್ದಾಡುತ್ತಿದ್ದನು ಆಗ ನನ್ನ ಗಂಡನಿಗೆ ವಿಚಾರಿಸಿದಾಗ ನನ್ನ ಗಂಡನು ನಾನು ಸಾಲಕ್ಕೆ ಹೆದರಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷದಿ ಕುಡಿದಿರುತ್ತೇನೆ ಎಂದು ತಿಳಿದಿದ ಮೇರೆಗೆ ನನ್ನ ಗಂಡನನ್ನು ನಾನು ನನ್ನ ಗಂಡನ ಅಣ್ಣನಾದ ಶಿವಶಿದ್ದ ಪ್ರಸಾದ ಇಬ್ಬರು ಕೂಡಿ ಖಾಸಗಿ ವಾಹನದಲ್ಲಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಲ್ಲಿಂದ ದಿನಾಂಕ 22-09-2019 ರಂದು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ.    ನನ್ನ ಗಂಡನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನಿನ್ನೆ ದಿನಾಂಕ 25-09-2019 ರಂದು ರಾತ್ರಿ 10:30 ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ನನ್ನ ಗಂಡನು ತಾನು ಮಾಡಿದ ಸಾಲಕ್ಕೆ ಹೆದರಿ ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀಮತಿ ಅಂಬಿಕಾ ಗಂಡ ಆನಂದ ಸುಂಬಡ ಸಾ||ಹಂಗರಗಾ (ಬಿ) ಗ್ರಾಮ ರವರ ಗಂಡ ಆನಂದ ಇವರ ಹೆಸರಿನಲ್ಲಿ ಹೊಲದ ಸರ್ವೆ ನಂ 68/1 ನೇದ್ದರಲ್ಲಿ  3 ಎಕರೆ ಜಮೀನು ಇರುತ್ತದೆ, ನನ್ನ ಗಂಡ ಹೊಲದ ಸಲುವಾಗಿ ಬಿಳವಾರ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 70 ಸಾವಿರ ಸಾಲ ಮತ್ತು ಯಡ್ರಾಮಿ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ 70 ಸಾವಿರ ಸಾಲ ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 14500 ರೂ ಸಾಲ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನನ್ನ ಗಂಡ ಆನಂದ ಇವರು ಕಳೆದ ಬೇಸಿಗೆಯಲ್ಲಿ ಹೊಲದಲ್ಲಿ ಕಲ್ಲಂಗಡಿ ಬೆಳೆ ಹಾಕಿದ್ದು ಅದರಿಂದ ನನಗೆ ಬಹಳ ಸಾಲವಾಗಿದೇ ಮಳೆಯು ಸಹ ಸರಿಯಾಗಿ ಬಾರದೆ  ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 25-09-2019 ರಂದು ರಾತ್ರಿ ನನ್ನ ಗಂಡ ತಂಬಿಗೆ ತಗೆದುಕೊಂಡು  ಬೈಹಿರದೇಸೆಗೆ ಹೋದರು ನಂತರ  ಸ್ವಲ್ಪ ಹೊತ್ತಾದ ನಂತರ ನನ್ನ ಗಂಡ ಮನೆಗೆ ಬಂದು ನಾನು ಸಾಲದ ಸಲುವಾಗಿ ವಿಷ ಕುಡಿದಿರುತ್ತೆನೆ ಅಂತಾ ಹೇಳಿ ಒಮ್ಮೇಲೆ ಒದ್ದಾಡಿ ವಾಂತಿ ಮಾಡಿಕೊಂಡರು ಆಗ ನಾನು ಗಾಬರಿಗೊಂಡು ನಾನು ನಮ್ಮ ಮೈದುನಾ ಭೀಮರಾಯ ನಮ್ಮೂರ ಮಲ್ಲಿನಾಥ ತಂದೆ ಬಾಬುರಾಯಗೌಡ ಬಿರಾದಾರ, ಸಿದ್ದುಗೌಡ ತಂದೆ ಗುರಣ್ಣಗೌಡ ಮಾಲಿ ಪಾಟೀಲ ರವರು ಕೂಡಿಕೊಂಡು ನನ್ನ ಗಂಡನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಕಲಬುರಗಿಗೆ  ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಹಸನಾಪುರ ಕ್ರಾಸ ಹತ್ತಿ ನಿನ್ನೆ ದಿನಾಂಕ: 25-09-2019 ರಂದು ರಾತ್ರಿ ನನ್ನ ಗಂಡ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 September 2019

KALABURAGI DISTRICT REPORTED CRIMES


ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮುತ್ತಪ್ಪ ತಂದೆ ನಿಂಗಪ್ಪ ದಿಡ್ಡಿಮನಿ ಸಾ|| ಯಡ್ರಾಮಿ ತಾ|| ಯಡ್ರಾಮಿ ರವರದು ಎರಡು ಮನೆಗಳಿರುತ್ತವೆ ಅವು ಅಕ್ಕ ಪಕ್ಕ ಇದ್ದು ಹಳೆ ನಮ್ಮ ಮನೆಯ ಟ್ರಂಕಿನಲ್ಲಿ ನಾವು 1] 10 ಗ್ರಾಮಿನ ಒಂದು ಬಂಗಾರದ ಬೋರಮಾಳ 2] 5 ಗ್ರಾಮಿನ 3 ಬಂಗಾರದ ಬೋರಮಾಳ 3]  5 ಗ್ರಾಮಿನ ಒಂದು ಬಂಗಾರದ ಜೀರಾಮನಿ 4] 5 ಗ್ರಾಮಿನ ಒಂದು ಜೊತೆ ಬಂಗಾರದ ಜುಮಕಿ & ಬೆಂಡೋಲಿ 5] 5 ಗ್ರಾಮಿನ 3 ಸಣ್ಣು ಮಕ್ಕಳ ಬಂಗಾರದ ಉಂಗುರ ಹಾಗೂ 6] ನಗದು ಹಣ 40,000/- ರೂ ಬಂಗಾರ ಸಾಮಾನುಗಳನ್ನು ಹಳೆಯ ಮನೆಯ ಒಳಗಿನ ಕೋಣೆಯಲ್ಲಿಟ್ಟು ಟ್ರಂಕಿಗೆ ಕೀಲಿ ಹಾಕಿ ಹೊರಗಿನ ಕೋಣೆಯಲ್ಲಿ ನಿನ್ನೆ ದಿನಾಂಕ: 24-09-2019 ರಂದು ರಾತ್ರಿ 10-00 ಗಂಟೆಯ ನಮ್ಮ ತಾಯಿ ಶಾಂತಬಾಯಿ ಮತ್ತು ನಮ್ಮ ಅಕ್ಕ ಇವರು ಮನೆಗೆ ಕೀಲಿ ಹಾಕದೇ ಮಲಗಿಕೊಂಡಿದರು, ಹೊಸ ಮನೆಯಲ್ಲಿ ನಾನು ನಮ್ಮ ತಮ್ಮಂದಿರರಾದ ಬಸವರಾಜ ಮತ್ತು ಮಡಿವಾಳಪ್ಪ ರವರು ಕೂಡಿಕೊಂಡು ಮಲಗಿದೇವು, ದಿನಾಂಕ: 25-09-2019 ರಂದು 5-00 ಗಂಟೆಯ ಸುಮಾರಿಗೆ ನಮ್ಮ ತಾಯಿ ಶಾಂತಬಾಯಿ ಇವರು ಒಮ್ಮೇಲೆ ಚಿರಾಡುತ್ತಾ ಅಳುತ್ತಿದ್ದರು ನಾವು ಗಾಬರಿಗೊಂಡು ಹಳೆಯ ಮನೆಯ ಒಳಗಿನ ಕೋಣೆಗೆ ನಾನು ತಮ್ಮಂದಿರರಾದ ಬಸವರಾಜ ಮತ್ತು ಮಡಿವಾಳಪ್ಪ ನಮ್ಮ ಅಕ್ಕ ಲಕ್ಕಮ್ಮ ಎಲ್ಲರೂ ಕೂಡಿ ಒಳಗಡೆ ಹೋಗಿ ನೋಡಲಾಗಿ ಟ್ರಂಕಿನಲ್ಲಿದ ಒಟ್ಟು 1,68,000/- ರೂ ಮೌಲ್ಯ ಬಂಗಾರ ಸಾಮಾನುಗಳು ಮತ್ತು ನಗದು ಹಣ ನಿನ್ನೆ ದಿನಾಂಕ 24-09-2019 ರಂದು 10-00 ಗಂಟೆಯಿಂದ ದಿನಾಂಕ: 25-09-2019 ರಂದು ಬೆಳಗೆ 5-00 .ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಹೋಗಿ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 23/09/2019  ರಂದು  ಬೆಳಿಗ್ಗೆ ನನ್ನ  ತಂದೆಯು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ  ಕೆ ಎ - 32 ಎಸ್- 9203 ನೇದ್ದರ ಮೇಲೆ ಕಿರಾಣಿ ಸಾಮಾನು ತರುತ್ತೇನೆ ಅಂತಾ ಹೇಳಿ  ಶಹಾಬಾದಕ್ಕೆ ಹೋಗಿದ್ದರು.  12-30 ಪಿ ಎಮ್ ಕ್ಕೆ ನನಗೆ ಮಾಲಗತ್ತಿ ಹತ್ತಿರದ ಪಾನ್ ಡಬ್ಬಿಯ ಆನಂದ ಕೊಳ್ಳಿ ಇತನು ಫೋನ್ ಮಾಡಿ  ತಮ್ಮ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಮೋ ಸೈ  ಟಿ ವಿ ಎಸ್ ಎಕ್ಸ್ ಎಲ್ ಕ್ಕೆ ಮಾಲಗತ್ತಿ ಕ್ರಾಸ್ ಹತ್ತಿರ ರಸ್ತೆ ಅಪಘಾವಾಗಿದೆ ಅಂತಾ ತಿಳಿಸಿರುತ್ತಾರೆ. ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ  ಕುಟುಂಬದವರಾದ ತಾಯಿ ಗುಂಡಮ್ಮ, ತಮ್ಮ ರಾಜಕುಮಾರ ಮತ್ತು ಸುರೇಶ ಮಿರಾಜ್ ಕರ್  ಶಹಾಬಾದ ಹಾಗೂ  ಆನಂದಕೊಳ್ಳಿ ಮಲ್ಲಿಕಾರ್ಜುನ ಇಡಗಿ ಇದ್ದರು.  ರಸ್ತೆಯ ಎಡಬದಿಗೆ ಬಿದ್ದ ನಮ್ಮ ತಂದೆಯನ್ನು ನೋಡಲಾಗಿ ಅವರ ಎಡಕಾಲಿಗೆ ಭಾರಿ ಗುಪ್ತ ಪೆಟ್ಟಾಗಿದ್ದು ಮತ್ತು ತಲೆಗೆ ಮುಖಕ್ಕೆ ಪೆಟ್ಟಾಗಿ ಬಾಯಿ, ಕಿವಿ, ಮತ್ತು  ಮೂಗಿನಿಂದ ರಕ್ತ ಬಂದು ಮೃತಪಟ್ಟಿದ್ದರು ಅಲ್ಲೆ ಇದ್ದ  ಆನಂದ ಮಿರಾಜ್ ಕರ್  ಮತ್ತು ಮಲ್ಲಿಕಾರ್ಜುನ ಇಟಗಿ ಇವರಿಗೆ ವಿಚಾರಿಸಲು ಗೊತ್ತಾಗಿದ್ದೇನೆಂದರೆ 12-30 ಪಿ ಎಮ್ ಸುಮಾರಿಗೆ ನಿಮ್ಮ ತಂದೆಯವರು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ ಕೆ ಎ - 32 ಎಸ್ – 9203 ನೇದ್ದರ ಮೇಲೆ ಕಿರಾಣಿ ಸಾಮಾನು ತೆಗೆದುಕೊಂಡು ಬರುವಾಗ ಕ್ರಾಸ್ ಹತ್ತಿರ ಟರ್ನ್ ಮಾಡಿಕೊಂಡು ನಡೆದಾಗ ರಾವೂರು ರಸ್ತೆ ಕಡೆಯಿಂದ ಒಬ್ಬ ಮೊ ಸೈ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಮ್ಮ  ತಂದೆಯವರ ಮೊ ಸೈ ಕ್ಕೆ ಡಿಕ್ಕಿಪಡಿಸಿದ್ದರಿಂದ  ನಿಮ್ಮ ತಂದೆಯವರ ಎಡಗಾಲಿಗೆ ಭಾರಿ ಗುಪ್ತಪೆಟ್ಟಾಗಿದ್ದು ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಮತ್ತು ಡಿಕ್ಕಿಪಡಿಸಿದವನ  ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲಾ ಡಿಕ್ಕಿಪಡಿಸಿದವನ  Super Splendar   ಮೊ ಸೈ  ನಂ ಕೆ ಎ 32 ಇ ಸಿ 1372 ಇರುತ್ತದೆ ಅಂತಾ ಮಾಹಿತಿ ನೀಡಿದ್ದುರುತ್ತಾರೆ ಅಂತಾ ಶ್ರೀ ನಾಗೇಂದ್ರ ತಂದೆ ಬಸಣ್ಣ ಸಾ: ಮಾಲಗತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಹಾಂತೇಶ ತಂದೆ ಬಂಡೇಪ್ಪ ಬಿರಾದಾರ ಸಾ|| ಯಡ್ರಾಮಿ ತಾ|| ಯಡ್ರಾಮಿ ರವರ  ಮನೆಯ ಪಕ್ಕದಲ್ಲಿ ನಮ್ಮ ತಮ್ಮಂದಿರರಾದ ಬಸವರಾಜ ಬಿರಾದಾರ, ಈರಣ್ಣ ಬಿರಾದಾರ ಇವರ ಮನೆಗಳು ಇರುತ್ತವೆ, ನಮ್ಮ ಮನೆಯ ಅಲ್ಮಾರಿಯಲ್ಲಿ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಯಷ್ಟನ್ನು ಅಲ್ಮಾರಿಯಲ್ಲಿ ಇಟ್ಟಿದ್ದು ಇರುತ್ತದೆ, ನಿನ್ನೆ ದಿನಾಂಕ 23-09-2019 ರಂದು ನನ್ನ ಮಗಳು ಸವಿತಾ ಇವಳ ಡಿಲೆವರಿ (ಹೆರಿಗೆ) ಸಲುವಾಗಿ ನಮ್ಮ ಮನೆಯ ಬಾಗಿಲಗೆ ಕೀಲಿ ಹಾಕಿಕೊಂಡು ನಾನು ನನ್ನ ಹೆಂಡತಿ ಇಬ್ಬರು ಕೂಡಿ ಕಲಬುರಗಿಗೆ ದವಾಖಾನೆಗೆ ಹೋಗಿದ್ದೇವು, ಇಂದು ದಿನಾಂಕ 25-09-2019 ರಂದು ಬೆಳಿಗ್ಗೆ 03;30 ಗಂಟೆ ಸುಮಾರಿಗೆ ನಮ್ಮ ತಮ್ಮ ಈರಣ್ಣ ಇವರು ನನಗೆ ಫೋನ ಮಾಡಿ ನಾನು ಇಂದು ರಾತ್ರಿ ವೇಳೆಯಲ್ಲಿ 01;00 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ನಿಮ್ಮ ಮನೆಯ ಬಾಗಿಲ ಕೀಲಿ ಹಾಕಿದ್ದಿತ್ತು, ನಂತರ ಇದೀಗ ಪುನಹ  ಮತ್ತೆ ಮೂತ್ರ ವಿಸರ್ಜನೆ ಮಾಡಲು ಎದ್ದು ನೋಡಿದಾಗ ನಿಮ್ಮ ಮತ್ತು ಬಸವರಾಜ ಬಿರಾದಾರ ರವರ ಮನೆಯ ಬಾಗಿಲ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಬಾಗಿಲ ತೆರೆದಿರುತ್ತಾರೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ನನ್ನ ಹೆಂಡತಿ ಇಬ್ಬರು ಕೂಡಿ ಮನೆಗೆ ಬಂದು ನಂತರ ನಮ್ಮ ತಮ್ಮಂದಿರಾದ ಈರಪ್ಪ, ಬಸವರಾಜ, ನಾಗಣ್ಣ ಬಿರಾದಾರ, ರವರು ಕೂಡಿ ನಮ್ಮ ಮನೆಯೊಳಗೆ ಹೋಗಿ ನೋಡಿದಾಗ ನಮ್ಮ ಅಲ್ಮಾರಿಯ ಬಾಗಿಲ ತೆರೆದಿತ್ತು, ಅದರಲ್ಲಿದ್ದ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಮಾರಿಯಲ್ಲಿ ನಾವು ಇಟ್ಟಿದ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಬೆಳ್ಳಿ ಅ;ಕಿ; 30,000/- ರೂ ರಷ್ಟು ಇರಲಿಲ್ಲಾ,  ನಂತರ ನಮ್ಮ ತಮ್ಮ ಬಸವರಾಜ ರವರಿಗೆ ವಿಚಾರಿಸಲಾಗಿ ಅವರ ಮನೆಯ ಅಲ್ಮಾರಿಯಲ್ಲಿದ್ದ 05 ಗ್ರಾಂ ಬಂಗಾರದ ಸಣ್ಣು ಮಕ್ಕಳ ಚೈನ ಅ;ಕಿ; 15,000/- ರೂ,  ತಲಾ 02 ಗ್ರಾಮಿನ 2 ಉಂಗುರು ಅ;ಕಿ; 10,000/- ರೂ, ನಗದು ಹಣ 30,000/- ರೂ, ನಮ್ಮ ಮತ್ತು ನಮ್ಮ ತಮ್ಮನ ಬಂಗಾರದ ಸಾಮಾನುಗಳು ಹಾಗು ಬೆಳ್ಳಿಯ ಸಾಮಾನುಗಳು ಮತ್ತು ನಗದ ಹಣ ಹೀಗೆ ಒಟ್ಟು 2,20,000/- ರೂ ಕಿಮ್ಮತ್ತನಿವುಗಳನ್ನು ಯಾರೋ ಕಳ್ಳರು ಇಂದು ದಿನಾಂಕ 25-09-2019 ರಂದು 01;00 .ಎಂ ದಿಂದ 03;30 .ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮತ್ತು ನಮ್ಮ ತಮ್ಮನ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಅಲ್ಮಾರಿಯಲ್ಲಿದ್ದ ನಗದು ಹಣ ಮತ್ತು ಬಂಗಾರ, ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ದಾನಯ್ಯ ತಂದೆ ಈರಯ್ಯ ಹಿರೇಮಠ ಸಾ||ಕುಮ್ಮನ ಶಿರಸಗಿ ತಾ||ಜೇವರ್ಗಿ. ರವರ ಹೆಸರಿನಲ್ಲಿ ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು ಅದರ ನಂ KA32-EP-5513 ಅದರ ಚಸ್ಸಿ ನಂ MBLHA10CGGHL43724 ಇಂಜನ್ ನಂ HA10ERGHL44793 ಅಂತಾ ಇರುತ್ತದೆ. ರೇವೂರ (ಬಿ) ಗ್ರಾಮದ ನನಗೆ ಪರಿಚಯಸ್ಥರಾದ ಬಂಡೇಪ್ಪಾ ತಂದೆ ಬಸ್ಸಣ್ಣ ಮಾಳಗೆ ರವರ ಹತ್ತಿರ ನನಗೆ ಕೆಲಸವಿದ್ದ ನಿಮೀತ್ಯ ನಾನು ದಿ:19/08/2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನನ್ನ ಮೋಟರ ಸೈಕಲ ಮೇಲೆ ರೇವೂರ (ಬಿ) ಗ್ರಾಮಕ್ಕೆ ಬಂದು ಬಂಡೇಪ್ಪಾ ಅವರಿಗೆ ಭೇಟಿಯಾಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗಬೇಕೆಂದಾಗ ರಾತ್ರಿಯಾಗಿದ್ದರಿಂದ ನಾನು ಬಂಡೇಪ್ಪಾರವರ ಮೆನೆಯಲ್ಲಿ ಬಂಡೇಪ್ಪಾರವರೊಂದಿಗೆ ಉಟ ಮಾಡಿ 10:30 ಗಂಟೆ ಸುಮಾರಿಗೆ ಮಲಗಿಕೊಂಡಿರುತ್ತವೆ. ನನ್ನ ಮೋಟರ ಸೈಕಲ ಬಂಡೇಪ್ಪಾ ರವರ ಮನೆಯ ಮುಂದೆ ನಿಲ್ಲಿಸಿದ್ದು  ದಿನಾಂಕ:20/08/2019 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ಎದ್ದು ನನ್ನ ಮೋಟರ ಸೈಕಲ ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ. ನಾನು ಬಂಡೇಪ್ಪಾ ಹಾಗೂ ಅವರ ತಮ್ಮನಾದ ಕಲ್ಯಾಣಿ ರವರಿಗೆ ಎಬ್ಬಿಸಿ ವಿಚಾರಿಸಲಾಗಿ ತಮಗೆ ಗೋತ್ತಿರುವುದಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಬಂಡೇಪ್ಪಾ, ಕಲ್ಯಾಣಿ ಹಾಗೂ ರೇವೂರ (ಬಿ) ಗ್ರಾಮದ ಬಸವರಾಜ ಬಶೆಟ್ಟಿ ಎಲ್ಲರು ಕೂಡಿ ರೇವೂರ ಗ್ರಾಮದಲ್ಲಿ ವಿಚಾರಿಸಿ ನಂತರ ಅತನೂರ, ಮಲ್ಲಾಬಾದ, ಮಹಾರಾಷ್ಟ್ರದ ದುಧನಿ ಪಟ್ಟಣಕ್ಕೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ ಸೈಕಲ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರವುದಲ್ಲಾ. ನಾನು ನಮ್ಮ ಗ್ರಾಮಕ್ಕೆ ಹೋಗಿ ನನ್ನ ಮನೆಯವರಿಗೆ ಹಾಗು ನಮ್ಮ ಸಂಭಂದಿಕರಿಗೆ ನನ್ನ ಮೋಟರ ಸೈಕಲ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 September 2019

KALABURAGI DISTRICT REPORTED CRIMES

ಮದುವೆ ಮಾಡಿಕೊಳ್ಳುತ್ತೆನೆಂದು ನಂಬಿಸಿ ಅತ್ಯಾಚಾರ  ಮಾಡಿದ ಪ್ರಕರಣ :
ವಾಡಿ ಠಾಣೆ : ಕುಮಾರಿ ರವರು ವಿದ್ಯಾಬ್ಯಾಸ ಮಾಡುವ ಕಾಲಕ್ಕೆ ನಮ್ಮ ಮನೆಯ ಪಕ್ಕದಲ್ಲಿರುವ ರಾಮು ಚವ್ಹಾಣ ಎನ್ನುವರ ಮಗ ವಿಶಾಲ ಇತನು ಸೆಂಟ್ ಅಂಬ್ರೋಸ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಇಬ್ಬರ ಮನೆ ಅಕ್ಕ ಪಕ್ಕದಲ್ಲಿ ಇರುವದರಿಂದ ಒಬ್ಬರಿಗೊಬ್ಬರು ಮಾತನಾಡುವದು ಮಾಡುತ್ತಿದ್ದೆವು. ನಂತರ ಶಹಾಬಾದದಲ್ಲಿ ಪಿ.ಯು.ಸಿ ಕಾಮರ್ಸ ಓದುತ್ತಿದ್ದೆ ವಿಶಾಲ ಇತನು ಗುಲಬರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಆಗಲು ಸಹ ಇಬ್ಬರೂ ರೇಲ್ವೇದಲ್ಲಿ ಹೋಗಿ ಬರುವಾಗ ಮಾತನಾಡುವದು ಅಲ್ಲದೇ ಇಬ್ಬರಿಗೆ ಸ್ನೇಹ ಬೆಳೆದು ಸಲಿಗೆಯಿಂದ ಮಾತನಾಡುತ್ತಿದ್ದೆವು. ನಂತರ ನಾನು ಗುಲಬರ್ಗಾದ ಗೋದುತಾಯಿ ಕಾಲೇಜದಲ್ಲಿ ಬಿ.ಕಾಮ್ ಓದುತ್ತಿದ್ದು ವಿಶಾಲ ಇತನು ಎಸ್.ಬಿ.ಅರ ಕಾಲೇಜದಲ್ಲಿ ಬಿಬಿಎಮ್ ಓದುತ್ತಿದ್ದನು. ಅಲ್ಲಿಂದ ನಾನು ಬೆಂಗಳೂರಿನ ಬಿಎಮಎಸಐಟಿ ಕಾಲೇಜದಲ್ಲಿ ಎಮ್.ಬಿ. ಪದವಿ ಯನ್ನು 2013 ನೇ ಸಾಲಿನಲ್ಲಿ ಓದುತ್ತಿದ್ದೆನು. ಆಗ 2012 ನೇ ಸಾಲಿನಿಂದ 2014 ನೇ ಸಾಲಿನ ವರೆಗೆ ವಿಶಾಲ ತಂದೆ ರಾಮು ಚವ್ಹಾಣ ಇತನು ಬೆಂಗಳೂರಿನ ಆರ್.ವಿ ಕಾಲೇಜದಲ್ಲಿ ಎಮ್.ಬಿ. ಪದವಿ ಓದುತ್ತಿದ್ದನು. ನಾವಿಬ್ಬರೂ ಬೆಂಗಳೂರದಲ್ಲಿ ರಜೆ ಇದ್ದಾಗ ಆಗಾಗ ಒಬ್ಬರಿಗೊಬ್ಬರು ಬೇಟಿ ಆಗುತ್ತಿದ್ದೆವು. ಆಗ ವಿಶಾಲ ಇತನು ನಿನಗೆ ಪ್ರೀತಿ ಮಾಡುತ್ತೆನೆ ಅಲ್ಲದೇ ಮದುವೆ ಸಹ ಮಾಡಿಕೊಳ್ಳುತ್ತೆನೆ ಅಂತಾ ಅನ್ನುತ್ತಿದ್ದನು. ನಂತರ 2018 ನೇ ವರ್ಷದಲ್ಲಿ ದಸರಾ ಹಬ್ಬಕ್ಕೆ ನಾನು ನಮ್ಮೂರಿಗೆ ಬಂದ್ದಿದ್ದೆ ವಿಶಾಲ ಇತನು ಸಹ ಊರಿಗೆ ಬಂದಿದ್ದನು. ದಿನಾಂಕ 08/10/2018 ರಂದು ವಿಶಾಲ ಇತನು ದಸರಾ ಹಬ್ಬದ ದಿವಸ ನನಗೆ ನಮ್ಮ ಮನೆಗೆ ಬಾ ಅಂತಾ ಹೇಳಿದಾಗ ನಾನು ಅವರ ಮನೆಗೆ ಹೋದೆನು. ಆಗ ಅವರ ಮನೆಯವರು ದೇವಿಯ ಮೆರವಣಿಗೆಯನ್ನು ನೋಡಲು ಹೋಗಿದ್ದರು. ಆಗ ವಿಶಾಲ ಇತನು ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡು ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳಿ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿ ವಿಷಯ ಯಾರಿಗೆ ಹೇಳಬೇಡಾ ಅಂತಾ ನನಗೆ ಬೆದರಿಕೆ ಹಾಕಿದನು. ನಂತರ ನಾನು ವಿಷಯ ನಮ್ಮ ಮನೆಯವರಿಗೆ ಹೇಳಲಿಲ್ಲ. ನಂತರ ನಾನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ದಿನಾಂಕ 05/01/2019 ರಂದು ವಿಶಾಲ ಇತನು ಕಲಬುರಗಿದಿಂದ ಬೆಂಗಳೂರಿಗೆ ಬಂದು ನನಗೆ ಬೇಟಿಯಾಗಿ ಬೆಂಗಳೂರ ಸುತ್ತಾಡಿಕೊಂಡು ಬರೋಣ ಅಂತಾ ಹೇಳಿ ಕೊರಮಂಗಲ ಏರಿಯಾದಲ್ಲಿ ಕರೆದುಕೊಂಡು ಹೋಗಿ ಸಾಯಂಕಾಲ ಕೊರಮಂಗಲದಲ್ಲಿರುವ ಎಂಪೈರ್ ಎಂಬ ಹೊಟೇಲಗೆ ಕರೆದುಕೊಂಡು ಹೋಗಿ ಆತನು ತನ್ನ ಹೆಸರಿನಲ್ಲಿ ಮುಂಚೆನೆ ರೂಮ್ ಬುಕ್ ಮಾಡಿದ್ದನು. ರಾತ್ರಿಯಾಗಿದ್ದರಿಂದ ನಾವು ಅಲ್ಲೇ ಉಳಿದುಕೊಂಡಿದ್ದು ಮತ್ತೆ ವಿಶಾಲ ಇತನು ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ನಂಬಿಸಿ ಮೋಸ ಮಾಡಿ ಅಲ್ಲಿಯು ಸಹ ನನ್ನ ಇಷ್ಟಕ್ಕೆ ವಿರುದ್ದವಾಗಿ ಜಬರಿ ಸಂಭೋಗ ಮಾಡಿರುತ್ತಾನೆ. ನಂತರ ದಿನಾಂಕ 06/01/2019 ರಂದು ಹೊಟೇಲದಿಂದ ಹೊರಟು ಬಂದಿರುತ್ತೆವೆ. ಹೀಗೆ ಆತನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನನಗೆ ಮನೆಗೆ ಕರೆಸಿ ಅನೇಕ ಸಲ ನಾನು ಬೇಡ ಅಂದರು ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಿರುತ್ತಾನೆ.  ನಂತರ ನಾನು ಪುನಾಕ್ಕೆ ಹೋಗಿ ನೌಕರಿ ಮಾಡಿಕೊಂಡಿದ್ದು ವಿಶಾಲ ಇತನು ಗುಲಬರ್ಗಾದಲ್ಲಿ ನೌಕರಿ ಮಾಡುತ್ತಿದ್ದು ಆಗಾಗ ನನ್ನೊಂದಿಗೆ ಪೋನದಲ್ಲಿ ಮಾತನಾಡುತ್ತಿದ್ದನು. ನಾನು ಮದುವೆ ಮಾಡಿಕೊಳ್ಳುವ ವಿಷಯ ಕೇಳಿದಾಗ ಸ್ವಲ್ಪ ದಿನ ಹೋಗಲಿ ನಮ್ಮ ತಂದೆ ತಾಯಿಗೆ ತಿಳಿಸಿ ಮದುವೆ ಮಾಡಿಕೊಳ್ಳುತ್ತೆನೆ ಹೇಳುತ್ತ ಬಂದಿದ್ದು ಅಲ್ಲದೇ ಕಳೆದ ಜುಲೈ ತಿಂಗಳ 19 ನೇ ತಾರಿಖದಂದು ನಾನು ನಮ್ಮೂರಿಗೆ ಬಂದು ವಿಶಾಲ ಇತನಿಗೆ ಫೋನ ಮಾಡಿ ನಮ್ಮ ಮದುವೆಯ ವಿಷಯದ ಬಗ್ಗೆ ಕೇಳಿದಾಗ ಆತನು ನಾನು ನಿನಗೆ ಮದುವೆ ಮಾಡಿಕೊಳ್ಳುವದಿಲ್ಲ , ಕೇವಲ ನಿನ್ನೊಂದಿಗೆ ಎಂಜೋಯ್ ಮಾಡಿರುತ್ತೆನೆ ಮುಂದೆ ನನಗೆ ಫೋನ ಮಾಡಬೇಡಾ ಅಂತಾ ಪೋನ ಕಟ್ ಮಾಡಿದನು. ನಂತರ ನನ್ನ ಮನಸ್ಸಿಗೆ ನೋವಾಗಿ ನಾನು ನಮ್ಮ ತಮ್ಮನೊಂದಿಗೆ ದಿನಾಂಕ 28/08/2018 ರಂದು 12-30 ಪಿ.ಎಮ್ ಸುಮಾರಿಗೆ ಬಲರಾಮಚೌಕದಲ್ಲಿರುವ ವಿಶಾಲ ಇತನ ಮನೆಗೆ ಹೋದಾಗ ವಿಶಾಲ ಮತ್ತು ಆತನ ತಂದೆ ರಾಮು ಮತ್ತು ತಾಯಿ ಸುನೀತಾ ಮನೆಯಲ್ಲಿದ್ದರು. ವಿಶಾಲ ಇತನಿಗೆ ನನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತ ಬಂದಿದ್ದು ಈಗ ಏಕೆ ನಿರಾಕರಿಸುತ್ತಿದ್ದಿ ಅಂತಾ ಕೇಳಿದಾಗ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿರುವದಿಲ್ಲ ಅಂತಾ ಅಂದನು ಹಾಗೂ ಅವರ ತಂದೆ ತಾಯಿ ನೀನು ಯಾರು ನನಗೆ ಗೊತ್ತಿಲ್ಲ ವಿನಾಕಾರಣ ನನ್ನ ಮಗನಿಗೆ ತ್ರಾಸ ಕೊಡುತ್ತಿ ರಂಡಿ ನನ್ನ ಮಗನು ಗಂಡಸು ಇದ್ದಾನೆ ನಿನ್ನ ಜೊತೆ ಮಲಗಿದ್ದಾನೆ ಅದಕ್ಕೆ ನಾವೆನು ಮಡಬೇಕು ನೀನು ಏನು ಮಾಡಕೋತಿ ಮಾಡಕೋ ನಾವು ಮದುವೆ ಮಾಡಿಕೊಳ್ಳಲು ಬಿಡುವದಿಲ್ಲ ಅಂತಾ ಹೆದರಿಸಿ ಇನ್ನೊಮ್ಮೆ ನನ್ನ ಮಗನ ತಂಟೆಗೆ ಬಂದರೆ ಅಥವಾ ನಮ್ಮ ಮನೆಗೆ ಬಂದರೆ ನಿನಗೆ ಖಲಾಸ  ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ವಿಶಾಲ ಇತನಿಗೆ ಇವಳ ತಂಟೆಗೆ ಹೋಗಬೇಡಾ ಮತ್ತು ಅವಳನ್ನು ಮದುವೆ ಮಾಡಿಕೊಳ್ಳುವದು ಬೇಡ ಅಂತಾ ಪ್ರಚೋದನೆ ನೀಡಿದ್ದು ಇರುತ್ತದೆ. ನಂತರ ನಾನು ನಮ್ಮ ಮನೆಗೆ ಬಂದೆನು. ವಿಶಾಲ ಇತನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತಿದ್ದ ಬಗ್ಗೆ ನನಗೆ ಗೊತ್ತಾಗಿರುತ್ತದೆ. ಕಾರಣ ವಿಶಾಲ ಇತನು ನನಗೆ ನಂಬಿಸಿ ಮೋಸ ಮಾಡಿ ನನ್ನ ಇಷ್ಟಕ್ಕೆ ವಿರುದ್ದವಾಗಿ ದೈಹಿಕ ಸಂಬಂಧ ಬೆಳೆಸಿದ್ದು ಅಲ್ಲದೇ ಆತನ ಮನೆಗೆ ಹೋಗಿ ವಿಚಾರಿಸಿದ್ದಕ್ಕೆ ಅವರ ತಂದೆ ತಾಯಿ ನನಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 06-02-19 ರಂದು ಶ್ರೀ ಯಲ್ಲಪ್ಪ ತಂದೆ ಸಾತಪ್ಪ ಸಿಂಘೆ ಸಾ||ಉಡಚಾಣ ಮತ್ತು ನಮ್ಮ ಗ್ರಾಮದ ಯೋಗಿರಾಜ ತಂದೆ ಸಿದ್ದಪ್ಪ ಗಿರಣಿ ರವರು ಕೂಡಿಕೊಂಡು ಯೋಗಿರಾಜ ರವರ ಮೋಟಾರ ಸೈಕಲ ನಂ ಎಮೆ.ಹೆಚ್.14-ಎವೈ-9747 ನೇದ್ದರ ಮೇಲೆ ಅಫಜಲಪೂರ ದಿಂದ ಉಡಚಾಣಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶೀರವಾಳ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಶೋಕ ಲೈಲಾಂಡ ಕಂಪನಿಯ ವಾಹನ ಚಾಲಕ ಕೆ.-28-ಸಿ-3033 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡೆಸಿದ್ದು ಇದರಿಂದ ಯೋಗಿರಾಜ ಗೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈ ಮುರಿದಂತತಾಗಿದೆ ಮತ್ತು ಬಲಗಾಲ ಮತ್ತು ಎಡಗಾಲು ಮುರಿದ್ದು ಇರುತ್ತದೆ. ನನಗೆ ಎಡಗಾಲಿಗೆ ಪೆಟ್ಟು ಮತ್ತು ಬಲಗೈ ಮುರಿದಿರುತ್ತದೆ. ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಯೋಗಿರಾಜ ತಂದೆ ಸಿದ್ದಪ್ಪ ಗಿರನಿ ಸಾ||ಉಡಚಾಣ ಈತನು ಅಪಘಾತದಲ್ಲಿ ಆದ ಗಾಯದಿಂದ ಸೆಪ್ಟಿಕ್ ಆಗಿ ಉಪಚಾರ ಕುರಿತು pios ಆಸ್ಪತ್ರೇ ಜಯಸಿಂಗಪೂರದಲ್ಲಿ ದಿನಾಂಕ:16/07/19 ರಂದು ದಾಕಲಾಗಿ ಪಚಾರ ಪಡೆಯುತ್ತಾ ಉಪಚಾರ ಫಲಿಸದೆ ದಿನಾಂಕ:19/07/19 ರಂದು ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.