POLICE BHAVAN KALABURAGI

POLICE BHAVAN KALABURAGI

05 December 2014

Kalaburagi District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸಕಲಾದ ತಂದೆ ಗೋಪಾಲರಾವ ಕಾಂಬಳೆ ಸಾ: ಮನೆ ನಂ.2-792 ಬಾಪೂ ನಗರ ಗುಲಬರ್ಗಾ ಇವರು ಮಗ ಗಂಗಾಧರ ಕಾಂಬಳೆ ವಯ: 27 ವರ್ಷ ಈತನು ಮಹಾಗಾಂವ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಅಂತಾ ಕೆಲಸ ಮಾಡುತ್ತಿದ್ದು. ಪ್ರತಿ ದಿವಸದಂತೆ ನಿನ್ನೆ ದಿನಾಂಕ: 03/12/2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ, ಮಹಾಗಾಂವಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ತನ್ನ ಹಿರೋ ಹೊಂಡಾ ಮೋ.ಸೈಕಲ ನಂ. ಕೆಎ:32, ಡಬ್ಲೂ2068 ನೇದ್ದನ್ನು ತೆಗೆದುಕೊಂಡು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ತನ್ನ ಸೊಸೆ ಶ್ರೀಮತಿ ಅಂಜನಾಕ್ಷಿ ಇವರು ರಾತ್ರಿ 1-00 ಗಂಟೆಗೆ ತಿಳಿಸಿದ ಮೇರೆಗೆ ಗಾಬರಿಯಾಗಿ ಸಂಬಂಧಿಕರಲ್ಲಿ ಮತ್ತು ಗೆಳೆಯ ರಲ್ಲಿ ವಿಚಾರಿಸಿದ್ದು. ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವುದಿಲ್ಲಾ. ಅತನನ್ನು ಹುಡುಕಾಡುತ್ತಿರುವಾಗ ತನ್ನ ಹಿರಿಯ ಮಗ ಅನೀಲಕುಮಾರ ಇವರಿಂದ ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಗೊತ್ತಾಗಿದ್ದೇನೆಂದರೆ, ಗುಲಬರ್ಗಾ ಹುಮನಾಬಾದ ರೋಡಿನ ಕುರಿಕೋಟಾ ಸೇತುವೆ ಮೇಲೆ ಗಂಗಾಧರನ ಮೋ.ಸೈಕಲ ನಿಂತಿರುತ್ತದೆ. ಎನ್ನುವ ಸುದ್ದಿ ಕೇಳಿ ಕೂಡಲೇ ಸ್ಥಳಕ್ಕೆಬಂದು ವಿಚಾರಿಸಿದ್ದು. ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಲಕ್ಷ್ಮಣ ಭೀಮಳ್ಳಿ ಸಾಃ ಓಂ ನಗರ ಕಲಬುರಗಿ ಇವರ ಮಗನಾದ ಸುರೇಶ ತಂದೆ ಯೋಗಪ್ಪಾ ವಯಃ 14 ವರ್ಷ ಈತನು ದಿನಾಂಕ: 13/10/2014 ರಂದು ಬೆಳಗ್ಗೆ 04:00 ಎ.ಎಂ. ದಿಂದ 05:00 ಎ.ಎಂ. ಅವಧಿಯಲ್ಲಿ ನನ್ನ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.