POLICE BHAVAN KALABURAGI

POLICE BHAVAN KALABURAGI

09 July 2014

Gulbarga District Reported Crimes

ಜಾತಿ ನಿಂದನೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ ಪುತಳಾಬಾಯಿ ಗಂಡ ಅರ್ಜುನ ಅಕ್ಕಲಕೋಟ ಸಾ: ನಂದೂರ(ಕೆ) ತಾ:ಜಿ: ಗುಲಬರ್ಗಾ ರವರಿಗೆ ದಿನಾಂಕ: 08.07.2014 ರಂದು ಮದ್ಯಾಹ್ನ 3 ಗಂಟೆಗೆ ಬಸಪ್ಪ ತಂದೆ ಶಂಕರೆಪ್ಪ ಮಮ್ಮಾಣಿ ಸಾ : ನಂದೂರ (ಕೆ) ಇವನು ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೇದು ಜಾತಿ ನಿಂದನೆ ಮಾಡಿ  ನೀನು ರಸ್ತೆಯಲ್ಲಿ ಕಲ್ಲು ಹಾಕುತ್ತಿ ಎಂದು ಬೈಯುತ್ತಾ ಮನೆಯೊಳಗೆ ನುಗ್ಗಿ ದಂಗಾ ಮಸ್ತಿ ಮಾಡಿ ಸೀರೆ ಹಿಡಿದು ಎಳೆದು ಕೂದಲು ಹಿಡಿದು ಜಗ್ಗಾಡಿ ಕಾಲುಗಳನ್ನು ತುಳಿದು ಕೈಯಿಂದ ಹೊಡೆಬಡಿ ಮಾಡಿದ್ದಾನೆ. ನಾನು ನೀನಗೆ ಬಿಡುವದಿಲ್ಲ ಖಲಾಸ ಮಾಡುತ್ತೇನೆ ಅಂತಾ ಅಂದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-09/07/2014 ರಂದು ಬೆಳಗಿನ ಜಾವ 02:45 ಗಂಟೆ ಸುಮಾರಿಗೆ ಮೃತ ಮನೀಶ ಮತ್ತು ಮನೋಹರ, ದಿಲೀಪ, ಅಜಯ, ಅನೀಲ್ ಬಿಸನ್ ಇವರೊಂದಿಗೆ ಭೋರವೆಲ್ ಲಾರಿ ನಂ ಎಪಿ-29 ಬಿಕೆ-3191 ನೇದ್ದರಲ್ಲಿ ಕುಳಿತುಕೊಂಡು ಭೋರ ಹೊಡೆಯುವ ಸಂಬಂದ ರಾಜಾಪುರಕ್ಕೆ ಹೋಗುವ ಕುರಿತು ಹುಮನಾಬಾದ ರಿಂಗ ರೋಡ ಮುಖಾಂತರ ಸೇಡಂ ರಿಂಗ ರೋಡ ಕಡೆಗೆ ಹೋಗುವ ಕೆ.ಸಿ.ಟಿ ಕಾಲೇಜ ಎದುರಗಡೆ ರೋಡಿನ ಮೇಲೆ ಹೋಗುವಾಗ ಸದರ ಭೋರವೆಲ್ಲ ಲಾರಿ ನಂ ಎಪಿ-29 ಬಿಕೆ-3191 ನೇದ್ದರ ಚಾಲಕ ಸುರೇಶ ಇತನು ಅತೀವೇಗ ಮತ್ತು ನಿಸ್ಕಾಜಿತನದಿಂದ  ಚಲಾಯಿಸಿ ರೋಡ ಡಿವೈರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಸದರ ಭೋರವೆಲ್ಲ ಲಾರಿ ಪಲ್ಟಿ ಆಗಿ ಬಿದ್ದು ಮನೀಶ ಇತನಿಗೆ ತಲೆಯ ಹಿಂಬಾಗಕ್ಕೆ ಹಾಗು ಇತರೇ ಕಡೆ ಭಾರಿ ರಕ್ತಗಾಯವಾಗಿ  ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅದರಂತೆ ಭೋರವೆಲ್ಲ ಲಾರಿಯಲ್ಲಿದ್ದ ಮನೋಹರ, ದಿಲೀಪ, ಅಜಯ, ಅನೀಲ್ ಬಿಸನ್ ಇವರಿಗೂ ಸಹಾ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಹಾಗು ಅಪಘಾತ ಪಡಿಸಿದ ನಂತರ ಬೋರವೆಲ್ಲ ಲಾರಿ ಚಾಲಕ ಸುರೇಶ ಇತನು ವಾಹವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.