POLICE BHAVAN KALABURAGI

POLICE BHAVAN KALABURAGI

20 December 2011

GULBARGA DIST PRESS NOTE

ಜಿಲ್ಲಾ ಪೊಲೀಸ್‌ ಕಛೇರಿ ಗುಲಬರ್ಗಾ

ಆರು ಅರೆಸೇನಾ ಪಡೆಗಳಿಗೆ (ಬಿಎಸ್‌ಎಫ್‌) ಮತ್ತು (ಸಿಐಎಸ್‌ಎಫ್‌) ಹಾಗೂ (ಸಿಆರ್‌ಪಿಎಫ್‌) ಗಳಲ್ಲಿನ 90,000 ಸಾವಿರ ಕಾನ್ಸಟೇಬಲ್‌ ಹುದ್ದೆಗಳಿಗೆ ನೇಮಕಾತಿ ಸಂಬಂಧವಾಗಿ ಅರ್ಜಿ ನಮೂನೆಗಳನ್ನು ಜಿಲ್ಲಾ ಪೊಲೀಸ್‌ ಕಛೇರಿ ಗುಲಬರ್ಗಾದಲ್ಲಿ ಉಚಿತವಾಗಿ ದಿನಾಂಕ:20-12-2011 ರಿಂದ ಪೊಲೀಸ್‌ ಕಂಟ್ರೋಲ್‌ ರೂಮ್‌ದಲ್ಲಿ ಅರ್ಜಿಗಳ ವಿತರಣೆ ಪ್ರಾರಂಭಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯವರೆಗೆ ಅರ್ಜಿಗಳನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಅರ್ಜಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠರ (ಎಸ್‌ಪಿ) ಕಛೇರಿಗಳಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು.ನೇಮಕಾತಿ ಆಯೋಗದ ವೆಬ್‌ಸೈಟ್‌ನಿಂದಲೂ (http://ssc.nic.in ಅಥವಾ http://ssckr.kar.nic.in) ಅರ್ಜಿ ನಮೂನೆಗಳನ್ನು ಡೌನಲೋಡ ಮಾಡಿಕೊಳ್ಳಬಹುದು. ಜೊತೆಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಆರು ಪಡೆಗಳಿಗೂ ಒಂದೇ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿಯೇ ನೇಮಕವಾಗಲು ಇಚ್ಚಿಸುವ ಪಡೆಯನ್ನು ಸೂಚಿಸಬೇಕು.ನೇಮಕಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಲಸದ ದಿನಗಳಂದು ಬೆಳಿಗ್ಗೆ 10-00 ರಿಂದ ಸಂಜೆ 5-00 ರ ವರೆಗೆ ಸಹಾಯವಾಣಿ ನಂ.9483862010 ಮತ್ತು 9483862020 ಅನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ವಿಭಾಗೀಯ ನಿರ್ದೇಶಕರು,ಸಿಬ್ಬಂದಿ ನೇಮಕಾತಿ ಆಯೋಗ, ಮೊದಲನೇ ಮಹಡಿ, ಇ ವಿಂಗ್‌, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು – 560034 ಈ ವಿಳಾಸಕ್ಕೆ ಸಲ್ಲಿಸಬೇಕು.ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲುhttp://ssconline.nic.inಅಥವಾ http://www.sscregistration. sifyitest.com ವೆಬ್‌ ತಾಣಗಳಿಗೆ ಭೇಟಿ ನೀಡಬಹುದು.
ಮುಖ್ಯಾಂಶಗಳು
1. ಕನಿಷ್ಠ ವಿದ್ಯಾರ್ಹತೆ : ಎಎಸ್‌ಎಲ್‌ಸಿ ಯಲ್ಲಿ ತೇರ್ಗಡೆ.
2. ಅರ್ಜಿ ಸಲ್ಲಿಕೆಗೆ ಜನೇವರಿ 4 ಕಡೇ ದಿನ
3. ಫೆಬ್ರುವರಿ/ಮಾರ್ಚನಲ್ಲಿ ದೈಹಿಕ ಅರ್ಹತಾ ಪರೀಕ್ಷೆ
4. ಏಪ್ರೀಲ್‌ 22 ರಂದು ಲಿಖಿತ ಪರೀಕ್ಷೆ

5. ಜೂನ್‌/ಜುಲೈನಲ್ಲಿ ವೈದ್ಯಕೀಯ ಪರೀಕ್ಷೆ

GULBARGA DIST REPORTED CRIME

ಯು.ಡಿ.ಅರ್. ಪ್ರಕರಣ:
ಸುಲೇಪೇಟ ಠಾಣೆ:
ಶ್ರೀ ರಾಮಶೇಟ್ಟಿ ತಂಧೆ ಹಣಮಂತ ಚೀಲಾ ಸಾ ಕೊಡಂಬಲ್ ಜಿಲ್ಲಾ ಬಿದರ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ ಒಂದುವರೆ 1 1\2 ವರ್ಷದ ಹಿಂದೆ ಗರಗಪಳ್ಳಿ ಗ್ರಾಮದ ಸಂತೋಷ ತಂದೆ ಅನಂತಪ್ಪಾ ನಾಟಿಕರ ಇತನಿಗೆ ಜೋತೆ ಮದುವೆ ಮಾಡಿದ್ದು ಶ್ರೀದೇವಿಗೆ ಪ್ರತಿ ತಿಂಗಳ ಮುಟ್ಟು ಅಗುವ ಕಾಲಕ್ಕೆ ಹೊಟ್ಟೆನೊವು ಆಗುತ್ತಿದ್ದು ಡಾಕ್ಟರ ರವರ ಕಡೆ ತೋರಿಸಿದ್ದರು ಕಡಿಮೆ ಆಗಿರಲಿಲ್ಲ ಇಂದು ಬೆಳ್ಳಗ್ಗೆ 4.00 ಗಂಟೆಯ ಸುಮಾರಿಗೆ ಗರಗಪಳ್ಳಿ ಇಂದ ಮೋಬೈಲ್ ಫೋನ ಮುಖಾಂತರ ಶ್ರೀದೇವಿಯು ನಿನ್ನೆ ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತಾ ಹೇಳಿದ್ದರಿಂದ ನಾನು ನನ್ನ ಹೆಂಡತಿ ಮಗ ಸೇರಿಕೊಂಡು ಬಂದು ನೋಡಲು ಶ್ರೀದೇವಿಗೆ ಮನೆಯಲ್ಲಿ ಅಂಗಾತವಾಗಿ ಮಲಗಿಸಿದ್ದು ಕುತ್ತಿಗೆಯ ಬಲಭಾಗದಲ್ಲಿ ಕಂದು ಗಟ್ಟಿದ ಗಾಯವಿದ್ದು ಸಂತೋಷನಿಗೆ ವಿಚಾರಿಸಿದಾಗ ಶ್ರೀದೇವಿಯು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಬಾಗಿಲು ಒಳ್ಳಕೊಂಡಿ ಹಾಕಿಕೊಂಡಿದ್ದು ಕೂಗಿದರು ಬಾಗಿಲು ತೆರೆಯದೆ ಇದ್ದಾಗ ನಾನು ಕಬ್ಬಿಣ ರಾಡು ಹಾಕಿ ಓಳ್ಳಕೊಂಡಿ ತೆರೆದು ಓಳಗೆ ಹೋಗಿ ನೋಡಿದ್ದಾಗ ಅವಳು ಮನೆಯ ತೋಲೆಗೆ ಒಡನಿ ಬಟ್ಟೆಯಿಂದ ಕುತ್ತಿಗೆಗೆ ಊರುಲು ಹಾಕಿಕೊಂಡು ನೇತಾಡುತ್ತಿದ್ದಾಗ ಓಡನಿ ಕತ್ತರಿಸಿ ಕೆಳಗೆ ಇಳಿಸಿರುತ್ತೆ. ಅಂತಾ ಹೇಳಿದ್ದರಿಂದ ಶ್ರೀದೇವಿ ಸಾವಿನಲ್ಲಿ ಸಂಶಯವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯುಡಿಅರ್ ನಂ: 13/2011 ಕಲಂ 174 (ಸಿ) ಸಿಅರ್ಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :
ಶ್ರೀಮತಿ ಗೌರಮ್ಮ ಗಂಡ ಶರಣು ಸಗರ ಸಾ:ಶರಣಸಿರಸಗಿ ರವರು ನಾನು ಮತ್ತು ಸಂಬಂದಿಕರಾದ ಶರಣು ಇಬ್ಬರೂ ಕೂಡಿ ಮನೆಯ ಮುಂದೆ ಕುಳಿತು ಕೊಂಡಾಗ ಮಗಳು ಅಂಬಿಕಾ ಇವಳು ಅಂಗನವಾಡಿ ಶಾಲೆಗೆ ಹೋಗಿ ವಾಪ್ಪಸ್ಸ ಮನೆಗೆ ಬರುವ ಕಾಲಕ್ಕೆ ನಮ್ಮೂರಿನ ಬೀಮಾ ಇವರ ಕಟಿಂಗ ಅಂಗಡಿ ಹತ್ತಿರ ರೋಡಿನ ಮೇಲೆ ಅಫಜಲಪೂರ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ನಂ ಕೆ.ಎ 53 ಎಚ್-4748 ನೇದ್ದರ ಚಾಲಕ ಉದಯಕುಮಾರ ತಂದೆ ಮಲ್ಲಿಕಾರ್ಜುನ ಸಾಗರ ಸಾ:ಚೌಡಾಪುರ ಇತನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಯಾವುದೇ ಹಾರ್ನ ವಗೈರೆ ಹಾಕದೆ ಹಿಂದಿನಿಂದ ನಡೆಸುತ್ತಾ ಒಮ್ಮಲೆ ತಂದವನೆ ನನ್ನ ಮಗಳು ಅಂಬಿಕಾ ಇವಳಿಗೆ ಹಾಯಿಸಿದನು ಅವಳಿಗೆ ಬಲಗಾಲಿನ ಕಂಪಗಂಡಿಗೆ ಬಾರಿ ರಕ್ತಗಾಯ ಮತ್ತು ಎಡಗಾಲಿನ ಮೊಳಕಾಲು ಹತ್ತಿರ ರಕ್ತಗಾಯ ಮತ್ತು ಬಲಕಪಾಳಕ್ಕೆ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 374/2011 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ದರೋಡೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಪ್ರಶಾಂತ ತಂದೆ ಖಂಡಪ್ಪಾ ಬಂಡಿಗೇರ ವ;22 ವರ್ಷ ಉ: ವ್ಯಾಪಾರ ಜಾ: ಮರಾಠಾ ಸಾ: ಮಾಹಾಂತೇಶ್ವರ ಕಾಲೂನಿ ಅಫಜಲಪೂರರವರು ನಾನು ಮತ್ತು ನನ್ನ ಗೇಳೆಯನಾದ ಮಳೆಂದ್ರೆ ಬಿರಾದಾರ ಇಬ್ಬರು ಕೂಡಿಕೊಂಡು ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32 ಆರ್-4560 ನೇದ್ದರ ಮೇಲೆ ಗುಲಬರ್ಗಾದಿಂದ ಅಫಜಲಪೂರಕ್ಕೆ ಹೊರಟಿದ್ದು ದಾರಿ ಮಧ್ಯದಲ್ಲಿ ನಾಗದೇವತೆ ಯಲ್ಲಮ್ಮ ದೇವಸ್ಥಾನ ಗೂಡಿ ದಾಟಿ ಕೊಳಿ ಫಾರಂ ಹತ್ತಿರ ಬರುತ್ತಿದ್ದಾಗ ಎದುರಗಡೆಯಿಂದ ಇಂಡಿಕಾ ಮಾರುತಿ ಕಾರ ನಂ ಕೆಎ-25 ಎಮ್.ಬಿ-117 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ನಮ್ಮ ಮೇಲೆ ಬರುತ್ತಿದ್ದಾಗ ನಾನು ಅವನಿಗೆ ಎ ಡ್ರೈವರ ನೋಡಿ ನಡೆಸು ಅಂತಾ ಅಂದಾಗ ಕಾರ ಚಾಲಕನು ತನ್ನ ಕಾರನ್ನು ತಿರುಗಿಸಿ ನಮ್ಮ ಮೊಟಾರ ಸೈಕಲಕ್ಕೆ ಬೇನ್ನು ಹತ್ತಿ ನಮ್ಮ ಮೋಟಾರ ಸೈಕಲವನ್ನು ಕೊಳಿ ಫಾರಂ ಹತ್ತಿರ ನಿಲ್ಲಿಸಿ ಕಾರಿನಿಂದ 4 ಜನರು ಇಳಿದು ನನಗೆ ತೆಕ್ಕೆಯಲ್ಲಿ ಹಿಡಿದು ಅವರಲ್ಲಿ ಒಬ್ಬನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ ಮೇಲೆ ಹೊಡೆದಿರುತ್ತಾನೆ. ಮತ್ತು ನನ್ನ ಜೇಬಿನಲ್ಲಿದ 100=00 ರೂಪಾಯಿಯ 10.000=00 ಸಾವಿರ ಬಂಡಲ ಮತ್ತು 500=00 ನೂರು ರೂಪಾಯಿಯ 10.000=00 ಸಾವೀರ ಬಂಡಲ ಹೀಗೆ ಒಟ್ಟು 20.000=00 ಸಾವಿರ ರೂಪಾಯಿ ನಗದು ಹಣ ಮತ್ತು 2 ತೋಲಿ ಬಂಗಾರದ ಲಾಕೇಟ ಅ.ಕಿ.50.000=00 ಸಾವಿರ ರೊಪಾಯಿ ಹಿಗೆ ಒಟ್ಟು 70.000=00 ಸಾವಿರ ರೂಪಾಯಿಯನ್ನು ಜಬರ ದಸ್ತಿಯಿಂದ ಕಸಿದುಕೊಂಡಿರುತ್ತಾರೆ. ಮಳೆಂದ್ರ ಬಿರಾದಾರ ಇತನು ಜಗಳ ಬಿಡಿಸಲು ಬಂದಾಗ ಅವನಿಗು ಸಹಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ. ಹಣ ಕಸಿದುಕೊಂಡ ಅಪರಿಚಿತರ ವ್ಯಕ್ತಿಗಳ ಅಂದಾಜು ವ:25 ರಿಂದ 30 ವರ್ಷ ವಯಸ್ಸಿನವರು ಇರುತ್ತಾರೆ. ಅವರಲ್ಲಿ ಒಬ್ಬನು ಟಿ ಶರ್ಟ. ಜಿನ್ಸ ಪ್ಯಾಂಟ ಧರಿಸಿರುತ್ತಾನೆ ಮತ್ತು ಉಳಿದ 3 ಜನರು ಸಾದಾ ಪ್ಯಾಂಟ ಶರ್ಟ ಧರಿಸಿರುತ್ತಾರೆ. ಮತ್ತು ಅವರ ಹೆಸರು ವಿಳಾಗ ನನಗೆ ಗೊತ್ತಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 220/2011 ಕಲಂ 394 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ :
ಶ್ರೀ ವಿಜಯಕುಮಾರ ತಂದೆ ಮಾರುತಿ ಯಲಾಲಕರ್ ಸಾ: ಪಟಪಳ್ಳಿ ರವರು ನಾನು ಮತ್ತು ನನ್ನ ತಾಯಿಯಾದ ಚಂದ್ರಮ್ಮಾ , ಅಕ್ಕನ ಮಗಳಾದ ಮಮೀತಾ, ಹಾಗು ಕಾಕನ ಮಗಳಾದ ರುಕ್ಕಮಿಣಿ 4 ಜನರು ಕೂಡಿಕೊಂಡು ತೋಟ್ಟಿಲು ಕಾರ್ಯಕ್ರಮದ ಸಲುವಾಗಿ ದಿನಾಂಕ: 19-12-2011 ರಂದು ಮಧ್ಯಾಹ್ನ 1430 ಗಂಟೆಯ ಸುಮಾರಿಗೆ ಹಸರಗುಂಡಗಿ ಗ್ರಾಮಕ್ಕೆ ನಮ್ಮೂರಿಂದ ಹೊರಟಿದ್ದೇವು ನಮ್ಮೂರ ಕ್ರಾಸ ಹತ್ತಿರ ನಿಂತಾಗ ಚಿಂಚೋಳಿ ಕಡೆಯಿಂದ ಸರಕಾರಿ ಬಸ್ಸ ನಂಬರ ಕೆಎ/38-ಎಫ.-367 ನೇದ್ದು ಬಂದಾಗ ನಾವು ತುಮಕುಂಟಾ ಗ್ರಾಮದವರೆಗೆ ಹೊಗಬೇಕೆಂದು ಆ ಬಸ್ಸಿನಲ್ಲಿ ಹತ್ತಿದೇವು ಪ್ರಯಾಣಿಕರು ಬಹಳಷ್ಟು ಜನರು ಇರುವದರಿಂದ ನಾವುಗಳೂ ಬಾಗಿಲಿನಲ್ಲಿಯೇ ನಿಂತಿದ್ದೇವು ಬಸ್ಸ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಕಟ್ಟ ಮಾಡಿದ್ದರಿಂದ (ತಿರುಗಿಸಿದ್ದರಿಂದ) ಬಾಗಿಲಿನಲ್ಲಿ ನಿಂತಿದ್ದ ನನ್ನ ತಾಯಿ ಚಂದ್ರಮ್ಮಾ ಹಾಗು ಅಕ್ಕನ ಮಗಳಾದ ಮಮಿತಾ ಮತ್ತು ಕಾಕನ ಮಗಳಾದ ರುಕ್ಕಮಣಿ 3 ಜನರು ಕೆಳಗಡೆ ಬಿದ್ದರು ನನ್ನ ತಾಯಿ ಚಂದ್ರಮ್ಮಾ ಇವರಿಗೆ ತಲೆಗೆ ಹಾಗು ಮೇಲಕಿಗೆ ಭಾರಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಉಳಿದ ಮಮೀತಾ ಹಾಗು ರುಕ್ಕಮಿಣಿ ಇವರಿಗೆ ಸಾದಾ ಹಾಗು ಭಾರಿ ಗಾಯಾಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 151/2011 ಕಲಂ 279, 337, 338 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಶಹಾಬೋದ್ದಿನ ತಂ/ ಮಹಿಬೂಬಸಾಬ ಯಲಗಾರ ಸಾ: ಸೋನಿಯಾ ಗಾಂಧಿ ಆಶ್ರಯ ಕಾಲನಿ ಗುಲಬರ್ಗಾರವರು ನಾನು ದಿನಾಂಕ 19/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ 32 ಡಬ್ಲು-7874 ನೇದ್ದರ ಮೇಲೆ ನನ್ನ ಸ್ನೇಹಿತನಾದ ಮಹ್ಮದ ನಹೀಮ ಇತನಿಗೆ ಬೇಟಿ ಯಾಗುವ ಕುರಿತು ಹೋಗುವ ಕಾಲಕ್ಕೆ ಕೆಸಿಟಿ ಕಾಲೇಜ ಎದುರಿಗಡೆ ಹೋಗುತ್ತಿರುವಾಗ ಬಂದೂಕ ವಾಲಾ ಕಾಟದ ಕಡೆಯಿಂದ ರಸ್ತೆ ಕ್ರಾಸ ಮಾಡಿಕೊಂಡು ಅತೀವೇಗದಿಂದ ಮೋಟಾರ ಸೈಕಲ್ ನಂ ಕೆಎ 32 ಎಕ್ಸ್‌ 692 ನೇದ್ದನ್ನು ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಸಮೇತ ಓಡಿ ಹಫಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 373/11 ಕಲಂ 279 337 ಐಪಿಸಿ ಸಂ/ 187 ಐಎಂವಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.