POLICE BHAVAN KALABURAGI

POLICE BHAVAN KALABURAGI

06 February 2014

Gulbarga District Reported Crimes

ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಜೈನೋದ್ದೀನ್ ತಂ, ಶಿರಾಜೋದ್ದೀನ್ ಶೇಖ್  ಸಾ||ಚಿಂಚೋಳಿ ಹಾ||||ಮೀಲತ್ ನಗರ ಗುಲಬರ್ಗಾ ದಿನಾಂಕ 04-01-2014 ರಂದು ಸಾಯಂಕಾಲ 4:00 ಗಂಟೆಗೆ ತನ್ನ  ಗೆಳೆಯನಾದ ಶೇಖ ಅಹ್ಮದ ತಂ, ಅಬ್ದುಲ್ ರಶೀದ ಶೇಖ್ ಇಬ್ಬರೂ ಕೂಡಿ ತಮ್ಮ ಗೆಳೆಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-32-ವಾಯ್-5451 ನೇದ್ದನ್ನು ತೆಗೆದುಕೊಂಡು ನಾಗೂರು ಗ್ರಾಮಕ್ಕೆ ಗೆಳೆಯನ ಹತ್ತಿರ ಮಾತನಾಡಲಿಕ್ಕೆಂದು ಹೋಗಿ ಅಲ್ಲಿ ಮಾತನಾಡಿಸಿ ಮರಳಿ ಸಾಯಂಕಾಲ 7:30 ಪಿ.ಎಮ್ ಕ್ಕೆ ಅದೇ ಮೋಟಾರ ಸೈಕಲ್ ಮೇಲೆ ಕುಳಿತು ಗುಲಬರ್ಗಾಕ್ಕೆ ಹೊರಟ್ಟಿದ್ದು ಶೇಖ್ ಅಹ್ಮದ ಇತನು ಸದರ ಮೋಟಾರ ಸೈಕಲ್ ಚಲಾಯಿಸುತ್ತಿದ್ದು ಮಹಾಗಾಂವ ಕ್ರಾಸ ಹತ್ತಿರದ ಚಿಂಚೋಳಿ ರೋಡಿನ ಮೇಲೆ ತೋಟದ ಹತ್ತಿರ 7:30 ಪಿ.ಎಮ್ ಕ್ಕೆ ಶೇಖ್ ಅಹ್ಮದ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ರೋಡಿನ ಎಡಗಡೆಯಿಂದ ಸಾಹುಕಾಶವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಟಂಟಂ ನಂ; ಕ.ಎ-32-ಬಿ-1207 ನೇದ್ದರ ಚಾಲಕನು ತನ್ನ ಟಂಟಂ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ತಮ್ಮ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ನನ್ನ ಬಲಗಾಲ ಮೊಳಕಾಲಿಗೆ ಬಾರಿರಕ್ತಗಾಯ ವಾಗಿದ್ದು ಶೇಖ ಅಹ್ಮದನಿಗೆ ಸಾಧಾಸ್ವರೂಪದ ಗಾಯಗಳಾಗಿ ರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.