POLICE BHAVAN KALABURAGI

POLICE BHAVAN KALABURAGI

21 July 2012

GULBARGA DIST REPORTED CRIMES


ಅಟೋ ಕಳ್ಳತನ :
ಸುಲೇಪೇಟ ಪೊಲೀಸ ಠಾಣೆ: ಶ್ರೀ ಕಾಳೇಶ್ವರ ತಂಧೆ ಶಿವಶಂಕರಯ್ಯಾ ಮಠಪತಿ ಸಾ|| ಕೆರೋಳ್ಳಿ ರವರು ನನ್ನ ಆಟೋ ರಿಕ್ಷಾ ನಂ. ಕೆಎ 32, ಬಿ-0507 ನೇದ್ದನ್ನು  ದಿನಾಂಕ 17/07/2012 ರಂದು ರಾತ್ರಿ 9.00 ಗಂಟೆಗೆ ಸುಮಾರಿಗೆ ಕೆರೋಳ್ಳಿ ಗ್ರಾಮದ  ನನ್ನ ಮನೆಯ ಮುಂದಿನ ರಸ್ತೆಯ ಮೇಲೆ ನಿಲ್ಲಿಸಿ ಮಲಗಿ ಕೊಂಡಿದ್ದು. ದಿನಾಂಕ 18/07/2012 ರಂದು ಬೆಳಿಗ್ಗೆ  6.00 ಗಂಟಗೆ ಎದ್ದು ನೋಡಲು ನನ್ನ ಆಟೋ ರಿಕ್ಷಾ ಇರಲಿಲ್ಲಾ, ಯಾರೂ ಕಳ್ಳರು ನನ್ನ ಅಟೋ ರಿಕ್ಷಾ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ: 68/2012 ಕಲಂ, 379 ಐಪಿಸಿ ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ::
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಮಾದಾರ ಸಾ|| ದೇವಲ ಗಾಣಗಾಪೂರ ರವರು ನನ್ನ ಮೋಟಾರ ಸೈಕಲ ನಂ: ಕೆಎ 32 ಇಬಿ-4440 ನೇದ್ದನ್ನು ದಿನಾಂಕ 16-06-2012 ರಂದು ರಾತ್ರಿ 10:00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು, ದಿನಾಂಕ 17-07-2012 ರಂದು ಮುಂಜಾನೆ 6:00 ಗಂಟೆಗೆ ಎದ್ದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲ. ನಾವು ಎಲ್ಲಾ ಕಡೆ ಇಲ್ಲಿಯವರೆಗೆ ಹುಡಕಾಡಿದರು ಮೋಟಾರ ಸೈಕಲ ಸಿಕ್ಕಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:89/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ.ಖಾಸೀಮ ಶಹಾ ತಂದೆ ಅಹಮದ ಶಹಾ ಸಾ||ಕಮಲಾಪೂರ ವರು ನಾನು ನನ್ನ ಹೆಂಡತಿ ದಿನಾಂಕ: 19/07/2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಮಲಗಿಕೊಂಡಾಗ ಮಧ್ಯರಾತ್ರಿ 2-00 ಗಂಟೆ ಸುಮಾರಿಗೆ ನನಗೆ ನಿದ್ದೆಯಿಂದ ಎಚ್ಚರ ಆಯಿತು. ಮೂತ್ರ ವಿಸರ್ಜನೆ ಕುರಿತು ಬಾಗಿಲು ತೆರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಆಗ ನಾನು ಹಿಂಬಾಗಿಲು ತೆರೆದು ಹೊರಗೆ ಬಂದು ಮುಂಬಾಗಿಲ ಹತ್ತಿರ ಬಂದಾಗ ನಾನಿದ್ದ ಬಾಗಿಲಿಗೆ ಕೊಂಡಿ ಹಾಕಲಾಗಿತ್ತು. ಅಲ್ಮಾರಿ ಇದ್ದ ರೂಮಿನ ಬಾಗಿಲು ನೋಡಿದಾಗ ಅದರ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಕೊಂಡಿ ಮಣಿಸಿ ಒಳಗೆ ಹೋಗಿ ಅಲ್ಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಮತ್ತು ಬೆಳ್ಳಿನ ಸಾಮನುಗಳು ನಗದು ಹಣ 1300=00 ರೂಪಾಯಿ ಹೀಗೆ ಒಟ್ಟು 24,600=00 ರೂಪಾಯಿಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 86/2012 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.