POLICE BHAVAN KALABURAGI

POLICE BHAVAN KALABURAGI

05 January 2012

GULBARGA DIST REPORTED CRIME

ವಿದೇಶ ಪ್ರಯಾಣಕ್ಕೆ ಕಳುಹಿಸುತ್ತೆವೆ ಅಂತಾ ಮೋಸ ಮಾಡಿದ ಬಗ್ಗೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವರಾಜ ತಂದೆ ಭೀಮರಾಯ ಗುಂಡಲಗೇರಿ ಸಾ: ಗುಂಡಲಗೇರಿ ತಾ: ಸುರಪೂರ ಹಾವ ಪ್ಲಾಟ ನಂ 50 ಪಿ & ಟಿ ಕ್ವಾಟ್ರಸ್ ಹಿಂದುಗಡೆ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ರವರು ನಾನು ಅಶ್ವಿನಕುಮಾರ ಎಂಬುವವರ ಗೆಳೆಯನಾಗಿದ್ದು, ಅಶ್ವಿನಿಕುಮಾರ ಇವರು ವಿದೇಶ ಪ್ರವಾಸಕ್ಕಾಗಿ ಡ್ರಿಮ್ ವೇ ಹಾಲಿಡೇಜ್ ಪ್ರೈ ಲಿಮಿಟೆಡ (ಇಂಡಿಯಾ) ಕಂಪನಿ ಯುನಿಟ ನಂ 407. 3ನೇ ಹಂತ ಕರೀಮ್ ಟವರ ಕನ್ನಿಂಗ ಹ್ಯಾಂ ರೋಡ ಬೆಂಗಳೂರು–560052 ಕಂಪನಿಯವರು ವಿದೇಶ ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ಒಂದು ಚೈನ್ ಸಿಸ್ಟಮ್ ಮಾಡಿದ್ದು ನಾನು ಈ ಕಂಪನಿಯಲ್ಲಿ ಸದಸ್ಯನಾಗಿದ್ದು ನೀನು ಸದಸ್ಯನಾಗು ಅಂತ ನನಗೆ ಹೇಳಿದಕ್ಕೆ ನಾನು ಸದಸ್ಯನಾಗಿದ್ದೆನೆ, ನನ್ನಂತೆ ಇನ್ನೂ ಎರಡು ಜನರನ್ನು ನನ್ನ ಪರವಾಗಿ ಈ ಕಂಪನಿಗೆ ಸದಸ್ಯರನ್ನಾಗಿ ಮಾಡಿದಲ್ಲಿ ನನಗೆ ಈ ಕಂಪನಿಯವರು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಾರೆ ಆದ್ದರಿಂದ ನೀನು ನನ್ನ ಕೇಳಗೆ ಸದಸ್ಯನಾಗಬೇಕು ಮತ್ತು ಈ ಕಂಪನಿಯವರು ನವೆಂಬರ ತಿಂಗಳಲ್ಲಿ ಗುಲಬರ್ಗಾಕ್ಕೆ ಬರುತ್ತಾರೆ ಬೇಟಿ ಮಾಡಿಸುತ್ತೇನೆ ಅಂತಾ ಮನವರಿಕೆ ಮಾಡಿಕೊಟ್ಟಿದ್ದರಿಂದ ನಾನು ಈ ಕಂಪನಿಗೆ ಸದಸ್ಯನಾದೆನು. ಈ ಕಂಪನಿಯವರಾದ ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎಂಬವರು ನವೆಂಬರ 2010 ರಲ್ಲಿ ಗುಲಬರ್ಗಾಕ್ಕೆ ಬಂದ ವೇಳೆಯಲ್ಲಿ ಅಶ್ವಿನಕುಮಾರ ಇತನು ನನ್ನನ್ನು ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎಂಬವರನ್ನು ಪರಿಚಯ ಮಾಡಿಕೊಟ್ಟನು. ಆಗ ಶ್ರೀನಿವಾಸರೆಡ್ಡಿ ಮತ್ತು ಓಬಾರೆಡ್ಡಿ ಎನ್ನುವವರು 10,000=00 ರೂಪಾಯಿಗಳನ್ನು ಐ.ಸಿ.ಐ.ಸಿ.ಐ ಬ್ಯಾಂಕ ಅಕೌಂಟ ನಂ 020405003352 ನೇದ್ದರ ಅಕೌಂಟ ನಮ್ಮ ಕಂಪನಿಯದ್ದಾಗಿದ್ದು ಈ ಅಕೌಂಟಿಗೆ ಹಣ ಸಂದಾಯ ಮಾಡಬೇಕು ಅಂತಾ ಹೇಳಿ 3 ವರ್ಷಗಳ ಅವಧಿಯಲ್ಲಿ ಯಾವಾಗಾದರೂ ವಿದೇಶ ಪ್ರವಾಸಕ್ಕೆ ಹೋಗಬಹುದು ಅಂತಾ ನನಗೆ ಹೇಳಿದರು. ಅಲ್ಲದೆ ವಿದೇಶ ಪ್ರಯಾಣಕ್ಕೆ ಹೋಗುವ ಸಮಯದಲ್ಲಿ ಟ್ಯಾಕ್ಸ ಅಂತಾ 7500=00 ರೂಪಾಯಿಗಳನ್ನು ಸಂದಾಯ ಮಾಡಬೇಕು ಅಂತಾ ತಿಳಿಸಿದರು. ನಾನು ಅದರಂತೆ ಐ.ಸಿ.ಐ.ಸಿ.ಐ ಬ್ಯಾಂಕಿಗೆ ಹೋಗಿ ಡ್ರಿಮ್ ವೇ ಹಾಲಿಡೇಜ್ ಪ್ರೈ. ಲಿಮಿಟೆಡ (ಇಂಡಿಯಾ) ಕಂಪನಿಯ ಅಕೌಂಟ ನಂ 020405003352 ನೇದ್ದಕ್ಕೆ ನಗದು 10,000=00 ರೂಪಾಯಿಗಳನ್ನು ಜಮಾ ಮಾಡಿದೆನು. ನಂತರ ನಾನು ಕಂಪನಿಯವರಿಗೆ ಬೆಂಗಳೂರಿಗೆ ಹೋಗಿ ಕೇಳಲಾಗಿ ಮಂದಿನ ತಿಂಗಳು ಕಳಹಿಸುತ್ತೇವೆ ಅಂತಾ ವಿನಾಃಕಾರಣ 10 ತಿಂಗಳ ಕಾಲ ವ್ಯರ್ಥ ಮಾಡಿ ಮುಂದೂಡುತ್ತಾ ಬಂದಿರುತ್ತಾರೆ. ಅಲ್ಲದೆ ಇದೆ ಕಂಪನಿಯಲ್ಲಿ ಶಿವರಾಜ ತಂದೆ ಚನ್ನಬಸಯ್ಯ ಸ್ವಾಮಿ ಸಾ: ಬಾಲಾಜಿ ನಗರ ಗುಲಬರ್ಗಾ ಎಂಬವವರು ಸಹ ಸದಸ್ಯರಾಗಿದ್ದು ಇವರಿಗೂ ಸಹ ಇದೆ ತರಹ ಕಂಪನಿಯವರು ಸುಳ್ಳು ಹೇಳುತ್ತಾ ದಿನಗಳನ್ನು ಮಂದೂಡುತ್ತಾ ಬಂದಿರುತ್ತಾರೆ. ಅಲ್ಲದೆ ದಿನಾಂಕ 18/04/2011ರಂದು 10,000=00 ರೂ ದಿನಾಂಕ 29/01/2011 ರಂದು 10,000=00 ರೂಪಾಯಿಗಳನ್ನು ಕಂಪನಿಯ ಅಕೌಂಟ ನಂ 020405003352 ಹಾಗೂ ದಿನಾಂಕ 25/08/2011 ರಂದು ಒಟ್ಟು 1,40,000=00 ರೂಪಾಯಿ ಹೀಗೆ ಒಟ್ಟು 1,70,000=00 ರೂಪಾಯಿ ಕಂಪನಿಗೆ ಸಂದಾಯ ಮಾಡಿಸಿಕೊಂಡು ಕಂಪನಿಯವರು ನನಗೆ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 03/12 ಕಲಂ 420 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ :
ದಿನಾಂಕ 02-01-2012 ರಂದು ಸಾಯಂಕಾಲ ಶಿವಶಂಕರ ತಂದೆ ರುಕ್ಮಣ್ಣಾ ಹಾಗರಗಿ ಇವರು ತಮ್ಮ ಮೋಟಾರ ಸೈಕಲ ನಂ. ಕೆ.ಎ 32 ಕ್ಯೂ 2942 ನೇದ್ದರ ಮೇಲೆ ಗುಬ್ಬಿ ಕಾಲೂನಿ ಕಡೆಯಿಂದ ಜಿ.ಜಿ.ಎಚ್ ಕಡೆಗೆ ಬರುತ್ತಿದ್ದಾಗ ಆರ್.ಟಿ.ಓ ಆಫೀಸ ಹತ್ತಿರ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಶಿವಶಂಕರ ಇವರ ವಾಹನಕ್ಕೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಅಂಜನಾಬಾಯಿ ಗಂಡ ಶಿವಶಂಕರ ಹಾಗರಗಿ ಸಾಃ ಸುಂದರ ನಗರ ಗುಲಬರ್ಗಾರವರು ದೂರು ಸಲಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 03/2012 ಕಲಂ 279,338 ಐ.ಪಿ.ಸಿ. ಸಂಗಡ 187 ಐ.,ಎಂವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಕಲ್ಪನಾ ಗಂಡ ನಾರಾಯಣ ಜಾಧವ ಸಾ;ಭೀಮಳ್ಳಿ ಗ್ರಾಮ ತಾ;ಜಿ; ಗುಲಬರ್ಗಾರವರು ನಾನು ದಿನಾಂಕ.3-01-2012 ರಂದು ನನ್ನ ತೋಟದ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ರಾಣೋಜಿ ಮತ್ತು ಪ್ರಭು ಜಾಧವ ಬಂದು ನಿನ್ನ ಗಂಡ , ಮೈದುನ ಎಲ್ಲಿ ಈ ಜಮೀನು ನಮಗೆ ಸೇರಬೇಕು , ಜಮೀನು ಬಿಟ್ಟು ಹೋಗು ಅಂತಾ ಅವಾಚ್ಯ ಶಬ್ದಗಳಿಂದ ಬೈಯುವಾಗ ಬೈಯ ಬೇಡಾ ಅಂದುದಕ್ಕೆ ಅವಳನ್ನು ಕೈ ಒತ್ತಿ ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.