POLICE BHAVAN KALABURAGI

POLICE BHAVAN KALABURAGI

11 January 2016

KALABURAGI DISTRICT REPORTED CRIMES

ಕೊಲೆ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ : ದಿನಾಂಕ: 11/01/2016 ರಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಿತೀನ ತಂದೆ ನಾನಾಗೌಡ ರೆಡ್ಡಿ ಸಾ; ಶಾಂತಿ ನಗರ ಕಲಬುರಗಿ  ಇವರು ದಿನಾಂಕ.10-1-2016 ರಂದು ತಮ್ಮ ಗೆಳೆಯರಾದ  ರಾಜೇಂದ್ರ  ತಂದೆ ರವಿ ಕಾವಲೆ , ರಾಘು ಭಾರತಿ , ದಯಾನಂದ  ಹಾಗೂ ಗೋಪಾಲ ಜಾಪೂರಕರ ಎಲ್ಲರೂ ಕೂಡಿಕೊಂಡು ಸಾಯಂಕಾಲ ರಾಜೇಂದ್ರ ಕಾವಲೆ ಇವರ ಮನೆಯ ಛತ್ತಿನ ಮೇಲೆ ಮಾತನಾಡುತ್ತಾ ಕುಳಿತುಕೊಂಡು ರಾತ್ರಿ  9-00ಕ್ಕೆ ಗೆಳಗೆಯರಾದ ರಾಘು ಭಾರತಿ , ದಯಾನಂದ ಹಾಗೂ ಜಾಪೂರಕ ಇವರು ತಮ್ಮ ಮನೆಗೆ ಹೋದ  ನಂತರ ರಾತ್ರಿ 10-00 ಸುಮಾರಿಗೆ ರಾಜೇಂದ್ರ ಕಾವಲೆ ಇತನು ನನಗೆ ಮನೆಗೆ ಬಿಡಲು ತನ್ನ ಡಿಯೋ ಸ್ಕೂಟಿ ನಂ. ಕೆ.ಎ.32.ಇಬಿ.1880  ನೆದ್ದರ ಹೀರಾಪೂರ ಕ್ರಾಸ ಪೆಟ್ರೋಲ್ ಪಂಪಕಡೆಗೆ ಬರುತ್ತಿರುವಾಗ ಅಲ್ಲಿ ನಿಂತಿದ್ದ ಹೀರಾಪೂರಆನಂದ ರಾಂಪೂರೆ ಆನಂದ ರಾಂಪೂರೆ ಇತನನ್ನು ನೋಡಿ ನಮ್ಮ ಮೋಟಾರ ಸೈಕಲನ್ನು ನಿಲ್ಲಿಸಿದಾಗ ಆನಂದ ರಾಂಪೂರೆ ಮಜೀದ ಕಡೆಗೆ ಕೈ ಮಾಡಿದಾಗ ಮಲ್ಲುಗೌಡಾ , ಹೀರಾಪೂರ ಇರಫಾನ  ಇವರು ಬಂದು ನನ್ನೊಂದಿಗೆ ಇದ್ದ ರಾಜೇಂದ್ರನೊಂದಿಗೆ ಜಗಳ ತೆಗದು ಏನೋ ನೀನು ರಾಘು ಭಾರತಿಗೆ ಸಪೋರ್ಟ ಮಾಡಿ ನಮ್ಮ ವಿರುದ್ದ ಕೇಸು ಮಾಡಿಸುತಿಯಾ ಅಂತಾಬೈಯುತ್ತಾ ಟ್ರಾನ್ಸಫಾರಂ ಕಡೆಗೆ ಕರೆದುಕೊಂಡು ಹೋಗಿ ಹೋಡೆಯುತ್ತಿದ್ದು ನಾನು ಬಿಡಿಸಲು ಹೋದಾಗ ವಾಜೀದ ಪಟೇಲನು ಮತ್ತು ಸಂಗಡ ಇನ್ನು 3 ಜನರು ನನಗೆ ತಡೆದು ನನಗೆ ಹೊಡೆಯ ಹತ್ತಿದ್ದರು. ಆ ಕಡೆ ರಾಜೆಂದ್ರನಿಗೆ ಆನಂದ ರಾಂಪೂರೆ ತನು ಕಲ್ಲಿನಿಂದ ಮತ್ತು ಹರಿತವಾದ ಚಾಕುವಿನಿಂದ ರಾಜೆಂದ್ರನ ತಲೆಯ ಹಿಂದುಗಡೆ ಮತ್ತು , ತಲೆಯ ಮೇಲೆ ಹೊಡೆದಾಗ ಆತನು ಕೆಳಗೆ ಬಿದ್ದನು ಆಗ ನಾನು ರಾಜೆಂದ್ರನ ತಮ್ಮ ಜ್ವಾಲೆಂದರನಿಗೆ ಫೋನ ಮಾಡಿ ವಿಷಯ ತಿಳಿಸಿದಾಗ ಜ್ವಾಲೆಂದ್ರ , ರಾಘು ಹಾಗೂ ದಯಾನಂದ , ಅರುಣಕುಮಾರ ತಂದೆ ಅಂಬರಾಯ ಬಸವನಗರ,ಶಿವರಾಜ ತಂದೆ ರಾಜೆಂದ್ರ ಸೀನೂರ , ಮೊಹನ ತಂದೆ ದೇವಿಂದ್ರ ಸಿ.ಐ.ಬಿ.ಕಾಲೂನಿ ಇವರೆಲ್ಲರೂ ಬರುತ್ತಿರುವದನ್ನು ನೋಡಿ ಆನಂದ ರಾಂಪೂರೆ ,  ಇರಫಾನ, ಮಲ್ಲುಗೌಡ, ವಾಜೀದ ಪಟೇಲ್ ಮತ್ತು ಇನ್ನೂ 3 ಜನ ಓಡಿಹೋಗಿದ್ದು ಎಲ್ಲರೂ ಕೂಡಿಕೊಂಡು ರಾಜೇಂದ್ರನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಲು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ನಾನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ. ಹೊಸ ವರ್ಷದಿನದಂದು  ಆನಂದ ರಾಂಪೂರೆ ಮತ್ತು ರಾಘು ಭಾರತಿ ಇತನೊಂದಿಗೆ ಜಗಳ ಮಾಡಿ ಹೊಡೆಬಡಿ ಮಾಡಿದ್ದು , ಈ ವಿಷಯದಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದ್ದು ಇದಕ್ಕೆ  ರಾಜೇಂದ್ರ ಕಾವಲೆ ಇತನೆ ಕಾರಣ ಎಂದು ರಾಜೆಂದ್ರನ ಮೇಲೆ ಸೇಡು ತಿರಿಸಿಕೊಳ್ಳುವ ಕುರಿತು ಕೊಲೆ ಮಾಡುವ ಉದ್ದೇಶದ ದಿನಾಂಕ.10-1-2016 ರಂದು ಹೀರಾಪೂರ ಮಜೀದ ಹತ್ತಿರ 1) ಆನಂದ ರಾಂಪೂರೆ, 2) ಇರಫಾನ 3)  ಮಲ್ಲುಗೌಡ ಸಾಹುಕಾರ 4)ಜಾವೇದ ಮತ್ತು ಇನ್ನೂ 3 ಜನರು ಕಲ್ಲಿನಿಂದ, ಹರಿತವಾದ ಚಾಕುದಿಂದ ರಾಜೆಂದ್ರನ ತಲೆಗೆ ಹೊಡೆದು ಭಾರಿಗಾಯಗೊಳಿಸಿ ಕೊಲೆ ಮಾಡಿದ್ದು ಸದರಿ ಆಪಾದಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲಸಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ: ದಿನಾಂಕ 10-01-16 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಶ್ರೀ ಜಿತೇಂದ್ರ ತಂ. ಗಣೇಶ ಸಾ: ಬೆಲೂರ (ಜೆ) ಕ್ರಾಸ್ ಮತ್ತು ಆತನ ಗೆಳೆಯರಾದ ಅಶೋಕ, ರಂಜಿತ, ಮಹೇಶ ಎಲ್ಲರೂ ಸಫಾರಿ ದಾಬಾದ ಹತ್ತಿರ ಮಾತಾಡುತ್ತಿದ್ದಾಗ ಜಿತೇಂದ್ರನು ತನ್ನ ದಾಲಮಿಲ್ಲಕ್ಕೆ ಹೋಗುತ್ತೇನೆಂದು ಹೇಳಿ ಕಲಬುರಗಿ-ಹುಮನಾಬಾದ ಮುಖ್ಯ ರಸ್ತೆ ದಾಟಲು ರೋಡ ಬದಿಯಲ್ಲಿ ನಿಂತಾಗ ಆಗ ಹುಮನಾಬಾದ ಕಡೆಯಿಂದ ಬರುತ್ತಿದ್ದ ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 33 ಎಫ 210 ಚಾಲಕ ನಾಗನಾಥನು ಬಸ್ಸನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಬಂದವನೇ ರೋಡ ಬದಿಯಲ್ಲಿ ನಿಂತ ಮೃತ ಜಿತೇಂದ್ರನಿಗೆ ಅಪಘಾತಪಡಿಸಿದನು. ಜಿತೇಂದ್ರ ಇತನು ನೆಲಕ್ಕೆ ಬೀದ್ದಾಗ ಬಸ್ಸಿನ ಹಿಂದಿನ ಟಾಯರ ಮೃತ ಜಿತೇಂದ್ರನ ತಲೆಯ ಮೇಲಿಂದ ಹಾಯ್ದು ಹೋಗಿದ್ದರಿಂದ ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು. ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 33 ಎಫ 210 ಚಾಲಕ ನಾಗನಾಥನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ  ಕಲಬುರಗಿ: ದಿನಾಂಕ: 10/01/2016 ರಂದು ಶ್ರೀ ಯಶವಂತ ತಂದೆ ಗುರುಲಿಂಗಪ್ಪ ಹತಗುಂದ ಸಾ: ಆರ್.ಎಸ್. ಕಾಲೋನಿ ಕಲಬುರಗಿ ರವರು ಎಳ್ಳೆ ಅಮಾವಾಸ್ಯ ಹಬ್ಬದ ಸಲುವಾಗಿ  ತಮ್ಮ ಹೆಂಡತಿ ಸಂಗೀತಾ ಮಕ್ಕಳಾದ ಭಾಗ್ಯಶ್ರೀ, ಪ್ರಿಯಾಂಕ, ಸಿದ್ದು, ಪ್ರಸಾದ್, ಮತ್ತು ಅವರ ಮನೆಯಲ್ಲಿ ಭಾಡಿಗೆ ಇರು ಪ್ರಿಯಾಂಕಾ ತಡಕಲ್ ಲ್ಲರೂ ಕೂಡಿಕೊಂಡು ಊರಿಗೆ ಹೋಗುವ ಕುರಿತು ಮುಂಜಾನೆ 9-30 ಗಂಟೆ ಸುಮಾರಿಗೆ ನೆಹರೂ ಗಂಜ್ ಬಸ್‌ ಸ್ಟಾಂಡ್‌ ನಲ್ಲಿ ಕಲಬುರಗಿಯಿಂದ ಸ್ವಂತ ಕಡೆ ಹೋಗುವ ಮ್ಯಾಕ್ಷಿಕ್ಯಾಬ್‌ ಟೆಂಪೋ ನಂ ಕೆಎ 39 – 162 ರಲ್ಲಿ ಮಹಾಗಾಂವ ಕ್ರಾಸ್‌ ನ ವರೆಗೆ ಹೋಗುವ ಕುರಿತು ಟೆಂಪೋದಲ್ಲಿ ಹೋಗುತ್ತಿರುವಾಗ ಟೆಂಪೋದ ಚಾಲಕನು ನಿಧಾನವಾಗಿ ನಡೆಯಿಸಿಕೊಂಡು ಹೋಗುತ್ತಿರುವಾಗ ಅವರಾಧ ಧಾಟಿ ಹೊಡಲ್‌ ತೋಟದ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಒಂದು ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ನಮ್ಮ ಟೆಂಪೋಗೆ ಅಪಘಾತಪಡಿಸಿದ್ದರಿಂದ ಟೆಂಪೋ ಪಲ್ಟಿಯಾಗಿ ಬಿದ್ದಿದ್ದು ನಾವೆಲ್ಲಾ ಪ್ರಯಾಣಿಕರು ಒಳಗೆ ಬಿದ್ದು ಗಾಯಗಳಾಗಿದ್ದು ಟೆಂಪೋದಿಂದ ಹೊರ ಬಂದು ನೋಡಲಾಗಿ ನನಗೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ನನ್ನ ಹೆಂಡತಿ ಟೊಂಕಕ್ಕೆ, ಕಾಲಿಗೆ ರಕ್ತಗಾಯವಾಗಿದ್ದು ನನ್ನ ಮಕ್ಕಳಾದ ಭಾಗ್ಯಶ್ರೀ, ಪ್ರಿಯಾಂಕ, ಸಿದ್ದು, ಪ್ರಸಾದ್, ಹಾಗೂ ಬಾಡಿಗೆ ಇರುವ ಪ್ರಿಯಾಂಕಳಿಗೆ ಕೈಕಾಲುಗಳಿಗೆ ಮುಖಕ್ಕೆ ಅಲ್ಲಲ್ಲಿ ರಕ್ತಗಾಯಗಳೂ ಮತ್ತು ಗುಪ್ತ ಗಾಯಗಳಾಗಿದ್ದು ಳಿದ ಕೆಲ ಪ್ರಯಾಣಿಕರಿಗೆ ಕೂಡಾ ರಕ್ತಗಾಯ ಮತ್ತು ಭಾರಿ ಗಾಯಗಳಾಗಿದ್ದು, ಕಾರಿನಲ್ಲಿದ್ದವರಿಗೆ ನೋಡಲಾಗಿ ಅವರಲ್ಲಿ ಇಬ್ಬರು ಭಾರಿ ಗಾಯದಿಂದ ಸ್ಥಳದಲ್ಲಿ ಮೃತಪಟ್ಟಿದ್ದು, ಹಾಗೂ ಇನ್ನೋಬ್ಬನಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದು ಕಾರ್ ನಂ ಕೆಎ 53 ಝಡ್‌ 2132 ನೇದ್ದು ಇತ್ತು, ಪೂರ್ತಿಯಾಗಿ ಕಾರು ಜಖಂ ಗೊಂಡಿರುತ್ತದೆ. ವಿಚಾರಣೆಯಲ್ಲಿ ಕಾರಿನ ಚಾಲಕ, ರಮೇಶ ತಂದೆ ಶಾಂತಕುಮಾರ್ ತೊನಸಳ್ಳಿ / ಆಲಗೂಡ ಸಾ: ಅಷ್ಟಗಾ ಮತ್ತು ಶಿವಾನಂದ ತಂದೆ ಮಲ್ಲೇಶಪ್ಪ ಬೆನಕನಳ್ಳಿ ಸಾ: ಅಷ್ಟಗಾ (ಭಿ) ಇವರಿಬ್ಬರೂ ಸ್ಥಳದಲ್ಲೇ ಮೃತಪಟ್ಟವರಿದ್ದು , ಶರಣಬಸಪ್ಪ ತಂದೆ ಸಾಯಿಬಣ್ಣ ಯರಬಾಗ ಸಾ: ಅಷ್ಟಗಾ ಈತನು ಗಾಯಗೊಂಡಿದ್ದು ಮತ್ತು ಬಸವರಾಜ ತಂದೆ ಶಾಂತವೀರಪ್ಪ ಮಾಲಿಪಾಟೀಲ್ ಸಾ: ಸಾವಳಗಿ (ಬಿ) ಈತನು ಟೆಂಪೋದಲ್ಲಿದ್ದವನು ಭಾರಿ ಗಾಯಹೊಂದಿ ಮೃತಪಟ್ಟಿರುತ್ತಾನೆ. ಮತ್ತು ಟೆಂಪೋದಲ್ಲಿರುವ ಇತರರಿಗೆ ಭಾರಿ ಗಾಯ ಮತ್ತು ರಕ್ತಗಾಯ ಹೊಂದಿದ್ದು .ಕಾರಣ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತಕ್ಕೆ ಕಾರಣನಾದ ಕಾರ್ ನಂ ಕೆಎ 53 ಝಡ್‌ 2132 ನೇದ್ದರ ಚಾಲಕ ರಮೇಶ ತಂದೆ ಶಾಂತಕುಮಾರ್ ಸಾ: ಅಷ್ಟಗಾ  ಈತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ ಠಾಣೆ :  ದಿನಾಂಕ 09-01-2016 ರಂದು ಶ್ರೀಮತಿ ವೇದಾ ಗಂಡ ಸಂತೋಷ ಹೊಸಮನಿ ಸಾ: ನ್ಯೂ ಜಿ.ಡಿ.ಎ ಕಾಲೋನಿ ಘಾಟಗೇ ಲೇಔಟ ಕಲಬುರಗಿರವರು ಠಾಣೆಗೆ ಹಾಜರಾಗಿ  ದಿನಾಂಕ 14-02-13 ರಂದು ಕಲಬುರಗಿಯ ಸಂತೋಷ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ವರದಕ್ಷಿಣೆ ರೂಪದಲ್ಲಿ  1 ಲಕ್ಷ ರೂ. ಹಣ , 5 ತೊಲೆ ಬಂಗಾರ, ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು,. ನನ್ನ ಅತ್ತೆ ಜಗದೇವಿ ನನ್ನ ಗಂಡ ಸತ್ತಿದ್ದರಿಂದ ನಿನ್ನ ಗಂಡನಿಗೆ ನೌಕರಿ ಬಂದಿದೆ ಅಂತಾ ಯಾವಾಗಲೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದಳು. ನನ್ನ ಮೈದುನರಾದ ಸುನೀಲ ಮತ್ತು ಅಂಬರೀಷ ಇವರು ಕೂಡ ನಿನ್ನ ಗಂಡ ಸಾಲ ಮಾಡಿದ್ದಾನೆ ನಿಮ್ಮ ತವರು ಮನೆಯಿಂದ  2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಹಿಂಸಿಸುತ್ತಿದ್ದರು. ನನ್ನ ಗಂಡ ಸಂತೋಷನು ಕೂಡ ತನ್ನ ತಾಯಿ ಮತ್ತು ತಮ್ಮಂದಿರಂತೆಯೇ ನನಗೆ ಸಾಲವಾಗಿದೆ ನನಗೆ ಸಾಲಗಾರರು ಕೆಲಸ ಮಾಡಲು ಬಿಡುತ್ತಿಲ್ಲ ನಿನಗೆ ಗಂಡ ಬೇಕಾದರೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲವಾದರೇ ನನಗೆ ಡೈವೋರ್ಸ ಕೊಡು ಅಂತಾ ಹಿಂಸೆ ಕೊಡುತ್ತಿದ್ದರು. ಅವರು ಕೊಡುವ ಹಿಂಸೆಯನ್ನು ನಾನು ತಾಳಲಾರದೇ ದಿನಾಂಕ 29-12-2015 ರಂದು ಸಾಂತ್ವಾನಾ ಮಹಿಳಾ ಸಹಾಯ ವಾಣಿ ಕೇಂದ್ರದಲ್ಲಿ ನನ್ನ ಗಂಡ ,ಅತ್ತೆ, ಮೈದುನರಿಗೆ ಕರೆಯಿಸಿ ಬುದ್ದಿವಾದ ಹೇಳುವಂತೆ ಅರ್ಜಿ  ಸಲ್ಲಿಸಿದ್ದು, ಇರುತ್ತದೆ.  ಇಂದು ದಿನಾಂಕ 09-01-16 ರಂದು ಬೆಳಿಗ್ಗೆ ನಾನು ಸ್ನಾನ ಮಾಡಿಕೊಳ್ಳಲು ಬಾತರೂಮಿಗೆ ಹೋದಾಗ ನನ್ನ ಅತ್ತೆ ಜಗದೇವಿ, ಗಂಡ ಸಂತೋಷ, ಮೈದುನ ಅಂಬರೀಷ, ಸುನೀಲ ಇವರೆಲ್ಲರೂ ಕೂಡಿ ಮನೆಯ ಬಾಗಿಲು ಹಾಕಿಕೊಂಡು ಇವಳು ನಮ್ಮ ವಿರುದ್ದ ಪೊಲೀಸ ಠಾಣೆಗೆ ಹೋಗಿದ್ದಾಳೆ ನಾವು ಹೇಗಾದರೂ ಪೊಲೀಸ ಠಾಣೆಗೆ ಹೋಗಲೇ ಬೇಕು ಇವಳಿಗೆ ಖಲಾಸ ಮಾಡಿ ಜೈಲಿಗೆ ಹೋಗೋಣಾ ಅಂತಾ ಮಾತನ್ನಾಡಿದ್ದನ್ನು ನಾನು ಕೇಳಿಸಿಕೊಂಡಿದ್ದು, ನಾನು ಕೂಡಲೇ ನಮ್ಮ ತಂದೆ ತಾಯಿಗೆ ಫೋನ ಮಾಡಿ ಮನೆಯಲ್ಲಿ ನಡೆದಿರುವ ವಿಷಯ ತಿಳಿಸಿದೆನು. ಅಷ್ಟರಲ್ಲಿಯೇ ನನ್ನ ಗಂಡ ಅತ್ತೆ ಮೈದುನರು ನೀನು ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ಅರ್ಜಿ ಸಲ್ಲಿಸಿರುವಿ ನಮಗೆ ಪೊಲೀಸ ಠಾಣೆಗೆ ಕರೆಯಿಸಿಕೊಳ್ಳುತ್ತಿಯಾ ನಾವೇ ಇಂದು ನಿನಗೆ ಖಲಾಸ ಮಾಡಿ ಪೊಲೀಸರಿಗೆ ಶರಣಾಗುತ್ತೇವೆ ಎನ್ನುತ್ತಾ ನನ್ನ ಗಂಡ ನನಗೆ ಕೈಯಿಂದ ಹೊಡೆದಿದ್ದು, ನನ್ನ ಅತ್ತೆ ಚಪ್ಪಲಿಯಿಂದ ಹೊಡೆದು ಕೂದಲು ಹಿಡಿದು ಜಗ್ಗಾಡಿದ್ದು, ಮೈದುನನಾದ ಅಂಬರೀಷ ಮತ್ತು ಸುನೀಲ ಕೈಯಿಂದ ಹೊಡೆದರು. ಈ ನಾಲ್ಕು ಜನರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು  ಹೊಡೆ ಬಡೆ ಮಾಡಿ ನನ್ನ ದುಪ್ಪಟ್ಟಾದಿಂದ ನನ್ನ ಕುತ್ತಿಗೆಗೆ ಸುತ್ತಿ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಮ್ಮ ತಂದೆ ತಾಯಿ , ತಮ್ಮ ನಮ್ಮ ಮನೆಗೆ ಬಂದು ನನಗೆ ಅವರಿಂದ ಬಿಡಿಸಿಕೊಂಡರು..ಮದುವೆಯಾದಾಗಿನಿಂದ ನನ್ನ ಗಂಡ ಸಂತೋಷ, ಅತ್ತೆ ಜಗದೇವಿ, ಮೈದುನರಾದ ಅಂಬರೀಷ, ಸುನೀಲ ಇವರೆಲ್ಲರೂ ಕೂಡಿ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನನ್ನ ಓಡಣಿಯಿಂದ ಕುತ್ತಿಗೆಗೆ ಸುತ್ತಿ ಜಗ್ಗಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹುಡುಗ ಕಾಣೆ ಪ್ರಕರಣ:
ಅಶೋಕ ನಗರ ಠಾಣೆ: ದಿನಾಂಕ 09/01/2016 ರಂದು ಶ್ರೀ ದಯಾನಂದ ತಂದೆ ಶಾಮರಾವ ಭಾವಿಕಟ್ಟಿ  ಸಾ: ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನಮ್ಮ ಸ್ವಂತ ಊರು ಹುಮನಾಬಾದ ತಾಲೂಕಿನ ರಾಮಪೂರ ಗ್ರಾಮ ಇದ್ದು ನಾನು ಕಳೆದ 2 ವರ್ಷಗಳಿಂದ ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು. 14 ವರ್ಷದ ನಮ್ಮ ತಮ್ಮನಾದ ಗಜಾನಂದನಿಗೆ ನಾನು ವಿದ್ಯಾಬ್ಯಾಸದ ಸಲುವಾಗಿ ಕಲಬುರಗಿಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಅವನು ವಿದ್ಯಾ ನಗರ ಬಡಾವಣೆಯಲ್ಲಿರುವ ಪಂಚಶೀಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ದಿನಾಂಕ 24/12/2015 ರಂದು ನಾನು ಮತ್ತು ನನ್ನ ತಮ್ಮ ಇಬ್ಬರೂ ಕೂಡಿ ನಮ್ಮ ಸ್ವಂತಗ್ರಾಮ ರಾಮಪೂರಕ್ಕೆ ಹೋಗಿದ್ದು ಇರುತ್ತದೆ. ನಾನು ಎರಡು ದಿವಸ ಊರಿನಲ್ಲಿ ಉಳಿದು ನಾನೊಬ್ಬನೆ ಮರಳಿ ಕಲಬುರಗಿಗೆ ಬಂದಿದ್ದು.  ನಂತರ ದಿನಾಂಕ 05/01/2016 ರಂದು ತಮ್ಮನನ್ನು ಕಲಬುರಗಿಗೆ ಕರೆದುಕೊಂಡು ಬಂದಿದ್ದು. ಅಂದು ಮದ್ಯಾನ 12:00 ಗಂಟೆಯ ಸುಮಾರಿಗೆ ನಾನು ನಮ್ಮ ತಮ್ಮ ಗಜಾನಂದನಿಗೆ ಕರುಣೇಶ್ವರ ನಗರದಲ್ಲಿ ಇರುವ ಮನೆಯಲ್ಲಿ ಬಿಟ್ಟು ನಾನು ಕೆಲಸಕ್ಕೆ ಹೋಗಿಮರಳಿ ಸಾಯಂಕಾಲ 7:00 ಮನೆಗೆ ಬಂದು ನೋಡಲು ನಮ್ಮ ತಮ್ಮ ಗಜಾನಂದ ಈತನು ಮನೆಯಲ್ಲಿ ಇರದೇ ಕಾಣೆಯಾಗಿದ್ದು ಇರುತ್ತದೆ. ಎಲ್ಲಾ ಕಡೆ ಹುಡುಕಾಡಲಾಗು ಸಿಕ್ಕಿರುವುದಿಲ್ಲ. ನನ್ನ ತಮ್ಮನು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸಪ್ಯಾಂಟ , ಕೆಂಪುಬಣ್ಣದ ಲೈನಿಂಗ ಶರ್ಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ನನ್ನ ತಮ್ಮನು ಕಾಣೆಯಾದ ಬಗ್ಗೆ ನಾನು ನಮ್ಮ ಸಂಬಂದಿಕರಿಗೆ ಹಾಗೂ ಅವನ ಗೆಳೆಯರಿಗೆ ವಿಚಾರಿಸಲು ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಈ ಬಗ್ಗೆ ನಾನು ನಮ್ಮ ತಂದೆಯವರಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ನನ್ನ ತಮ್ಮ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದು. ಕಾಣೆಯಾದ ನನ್ನ ತಮ್ಮನನ್ನು ಹುಡುಕಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರನ ಬಂಧನ
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 09/01/2016 ರಂದು ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ದತ್ತಾತ್ರೇಯ ಸಿಪಿಸಿ 887, ಶ್ರೀ ಚಂದ್ರಶೇಖರ ಸಿಪಿಸಿ 670 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಧಂಗಾಪೂರ ಗ್ರಾಮದ ಶಿವಪುತ್ರಪ್ಪ ಯಳಸಂಗಿ ಇವರ ಹೊಟೇಲ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 01) ಶ್ರೀ ಬಸವರಾಜ ತಂದೆ ನಾಗಪ್ಪ ಕೋರೆ ಸಾ: ನಿಂಬರ್ಗಾ , 02) ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ಸಾ: ನಿಂಬರ್ಗಾ  ಇವರನ್ನು ಬರ ಮಾಡಿಕೊಂಡು ಸಿಬ್ಬಂಧಿ ಹಾಗೂ ಇಬ್ಬರು ಪಂಚರೊಂದಿಗೆ ಧಂಗಾಪೂರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ಆತನ ಹೆಸರು ಶರಣಯ್ಯ ತಂದೆ ಕಲ್ಲಯ್ಯ ಸಾಲಿಮಠ ಸಾ|| ಧಂಗಾಪೂರ ಅಂತ ತಿಳಿಸಿದ್ದು ಆತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 1110/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರನ ಬಂಧನ
ನಿಂಬರ್ಗಾ ಪೊಲೀಸ ಠಾಣೆ:  ದಿನಾಂಕ 09/01/2016 ರಂದು ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿಯವರಾದ ಶ್ರೀ ದತ್ತಾತ್ರೇಯ ಸಿಪಿಸಿ 887, ಶ್ರೀ ಶಿವಪುತ್ರ ಸಿಪಿಸಿ 1139 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ಅಲ್ಲಿಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ವಿಚಾರಿಸಲು ಆತನ ಹೆಸರು ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ ಸಾ|| ನಿಂಬರ್ಗಾ ಅಂತ ತಿಳಿಸಿದ್ದು ಚಕ್ ಮಾಡಲಾಗಿ ಆತನ ಹತ್ತಿರ ನಗದು ಹಣ 530/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಸು ಆತನ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.