POLICE BHAVAN KALABURAGI

POLICE BHAVAN KALABURAGI

28 January 2018

KALABURAGI DISTRICT REPORTED CRIMES

ಮಧ್ಯ ಪ್ರದೇಶದಿಂದ ನಾಡ ಪಿಸ್ತೂಲ್  ಮತ್ತು ಗುಂಡುಗಳು ಮಾರಾಟ ಮಾಡಲು ಬಂದ ಕುಖ್ಯಾತಿ ವ್ಯಕ್ತಿಯ ಬಂಧನ
ಗ್ರಾಮೀಣ ಠಾಣೆ : ದಿನಾಂಕ 27/01/18 ರಂದು ಬೆಳಗಿನ ಸಮಯದಲ್ಲಿ ಆಳಂದ ರೋಡಿಗೆ ಇರುವ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ಒಬ್ಬ ವ್ಯಕ್ತಿ ಅಕ್ರಮವಾಗಿ ಆಯುಧ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ ಎಂಬ ಖಚಿತ ಬಾತ್ಮಿ ಮೇರೆಗೆ ಮಾನ್ಯ ಶ್ರೀ ಎಸ್. ಶಶಿಕುಮಾರ ಐ.ಪಿ.ಎಸ್. ಪೊಲೀಸ ಅಧೀಕ್ಷಕರು ಕಲಬುರಗಿ,  ಮಾನ್ಯ ಶ್ರೀ ಜಯಪ್ರಕಾಶ ಕೆ.ಎಸ್.ಪಿ.ಎಸ್. ಅಪರ ಜಿಲ್ಲಾ  ಪೊಲೀಸ ಅಧೀಕ್ಷಕರು ಕಲಬುರಗಿ, ಮಾನ್ಯ ಶ್ರೀ ಎಸ್.ಎಸ್. ಹುಲ್ಲೂರು ಡಿ.ಎಸ್.ಪಿ.(ಗ್ರಾ) ಉಪವಿಭಾಗ ಕಲಬರುಗಿ, ಮಾನ್ಯ ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ವೃತ್ತ ಕಲಬುರಗಿ  ರವರ ಮಾರ್ಗದರ್ಶನದಲ್ಲಿ  ಶ್ರೀ ಚಂದ್ರಶೇಖರ ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ, ಮತ್ತು ಶ್ರೀ ಶ್ರೀಶೈಲ್ ಪ್ರೊ. ಪಿ.ಎಸ್.ಐ. ಹಾಗೂ  ಅವರ ಸಿಬ್ಬಂದಿಯವರಾದ ಹುಸೇನಬಾಷಾ, ರಾಜಕುಮಾರ, ಅಂಬಾಜಿ,  ಕುಶಣ್ಣಾ, ಶಾಂತಕುಮಾರ, ಶಿವಶರಣಪ್ಪ, ಶಿವಶರಣಪ್ಪ. ಈರಣ್ಣಾ, ಶರಣಗೌಡ,  ಶರಣು ಸಲಗರ, ಚನ್ನಬಸಯ್ಯ    ಇವರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ವಿಶ್ವರಾಧ್ಯ ಗುಡಿ ದಾಟಿ ರೇಲ್ವೆ ಬ್ರೀಡ್ಜ ಹತ್ತಿರ ತಿರುಗಾಡುತ್ತಿದ್ದ ಸಿಕಂದರ ತಂದೆ  ಗುಲಾಬಸಿಂಗ ಡಾವರ ವ:20 ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಇತನಿಗೆ ಹಿಡಿದು ಅವನಿಂದ ಮಾರಾಟ ಮಾಡಲು ತಂದಿದ್ದ ಎರಡು ನಾಡಪಿಸ್ತೂಲಗಳು ಮತ್ತು 15 ಜೀವಂತ ಗುಂಡುಗಳು ಜಪ್ತ ಪಡಿಸಿಕೊಂಡಿದ್ದು, ಅವುಗಳನ್ನು ಯಾತಕ್ಕಾಗಿ ತಂದಿರುವಿ ಅಂತಾ ವಿಚಾರಿಸಿದಾಗ ಅವನ ಗೆಳೆಯರಾದ 2) ಬಚನಸಿಂಗ ತಂದೆ ಭೀಮಸಿಂಗ  3) ಸರವಣಸಿಂಗ ತಂದೆ ಇಂದ್ರಸಿಂಗ 4) ಈಶ್ವರಸಿಂಗ ತಂದೆ ಪ್ರಧಾನಸಿಂಗ ಸಾ: ಎಲ್ಲರೂ ವರ್ಷ  ಸಾ: ಬಾರಿಯಾ ತಾ: ಮುನಾವರ  ಜಿಲ್ಲಾ ಧಾರ ಮಧ್ಯಪ್ರದೇಶ ರಾಜ್ಯ ಮತ್ತು ಇನ್ನೂ ಇತರರು ಸಮಾನ ಉದ್ದೇಶದಿಂದ  ಹಣ ಗಳಿಸುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಆಯುಧಗಳು ಮಾರಾಟ ಮಾಡಲು  ಕಳುಹಿಸಿಕೊಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ.  ಸದರಿಯವನಿಗೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡುತ್ತಿದ್ದು, ಇನ್ನುಳಿದ ಆರೋಪಿ ದಸ್ತಗಿರಿ ಕುರಿತು ತಂಡವನ್ನು ರಚನೆ ಮಾಡಿ ದಸ್ತಗಿರಿ ಕುರಿತು ಜಾಲವನ್ನು ಬೀಸಿದ್ದು ಇರುತ್ತದೆ. ಆಕ್ರಮ ಆಯುಧ ಮತ್ತು ಗುಂಡುಗಳು ಮಾರಾಟ ಮಾಡಲು ಬಂದವವನ್ನು ಪತ್ತೆ ಹಚ್ಚಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು  ನಮ್ಮ ಮೇಲಾಧಿಕಾರಿಯವರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ. 
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಬ್ರಹ್ಮಪೂರ ಠಾಣೆ : ಶ್ರೀ. ಕಪೀಲದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ ರವರು ದಿನಾಂಕ: 26/01/2018 ರಂದು ತಮ್ಮ ಸಿಬ್ಬಂದಿಯವರಾದ ಸೂರ್ಯಕಾಂತ ಎ.ಎಸ್.ಐ, ದೇವೆಂದ್ರ ಹೆಚಸಿ-186, ಅಶೋಕ ಪಿ.ಸಿ-1045, ಶಿವಪ್ರಕಾಶ ಪಿ.ಸಿ-615, ಸುರೇಶ ಪಿ.ಸಿ-455, ಮಲಕಪ್ಪ ಬಿ.ಎನ್. ಪಿ.ಸಿ 442 ಮತ್ತು ಶ್ರೀ. ಎಸ.ಎಮ್.ಯಾಳಗಿ ಪಿ.ಐ, ಶ್ರೀ. ಬಸಲಿಂಗಪ್ಪ ಪ್ರೋ. ಪಿ.ಎಸ.ಐ ರವರು ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗಾಜಿಪೂರ ಬಡಾವಣೆಯ ಸುಖ ಸಾಗರ ಲಾಡ್ಜ ಹತ್ತಿರ ಇರುವ ಗೌಡಪ್ಪಗೌಡ ಪಾಟೀಲ ಇವರ 2ನೇ ಮಹಡಿಯಲ್ಲಿರುವ ಮಹಾಲಕ್ಷ್ಮೀ ಫೈನಾನ್ಸದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ  ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ ಸಾಹೇಬರು ಕಲಬುರಗಿ, ಮಾನ್ಯ ಅಪರ್ ಎಸ.ಪಿ ಸಾಹೇಬರು ಕಲಬುರಗಿ ರವರ ಮಾರ್ಗದರ್ಶನದಲ್ಲಿ ಮಾನ್ಯ ಎ.ಎಸ.ಪಿ ಎ ಉಪವಿಭಾಗ ಕಲಬುರಗಿ ರವರಿಂದ ದಾಳಿ ಮಾಡಲು ಅನಮತಿ ಪಡೆದುಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್  ಪ್ರೋ. ಎ.ಎಸ್.ಪಿ ಇವರ ನೇತೃತ್ವದಲ್ಲಿ ಸೂಪರ ಮಾರ್ಕೆಟ ಟೀನಾ ಎಂಟರಪ್ರೈಜೇಸ್ ಅಂಗಡಿ ಎದುರುಗಡೆಯಿಂದ ಹೋಗಿ ಹಳೆ ಕೆ.ಎಸ್.ಆರ್.ಪಿ ಗ್ರೌಂಡ ಹತ್ತಿರ ಜೀಪಗಳನ್ನು ನಿಲ್ಲಿಸಿ ನಾವು ಜೀಪನಿಂದ ಇಳಿದು ನಡೆಯುತ್ತಾ ಸದರಿ ಸ್ಥಳಕ್ಕೆ ಫೈನಾನ್ಸ ಕಟ್ಟಡದ ಸಿಡಿಯ ಮರೆಯಲ್ಲಿ ನಿಂತು ನೋಡಲು ಮಹಾಲಕ್ಷ್ಮಿ ಪೈನಾನ್ಸ ಒಳಗಡೆ ಲೈಟಿನ ಬೆಳಕಿನಲ್ಲಿ 20 ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ 100 ರೂಪಾಯಿ ಬಾಹರ 100 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಮಾನ್ಯ ಮಿಥುನ್ ಕುಮಾರ ಜಿ.ಕೆ ಐ.ಪಿ.ಎಸ್ ಪ್ರೋ. ಎ.ಎಸ್.ಪಿ ರವರ ನೇತೃತ್ವದಲ್ಲಿ ನಾವು ದಾಳಿ ಮಾಡಿ 20 ಜನರನ್ನು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ತಮ್ಮ ಹೆಸರುಗಳು 1) ರೇವಣಸಿದ್ದಪ್ಪ ತಂದೆ ಸಂಗಣ್ಣಾ ಪಾಟೀಲ ಸಾಃ ಪಾಳಾ ತಾಃಜಿಃ ಕಲಬುರಗಿ 2) ಮಹ್ಮದ ರಫೀಕ ತಂದೆ ಅಹ್ಮದ ಷಾ ಸಾಃ ಪೇಠ ಶಿರೂರ ತಾಃ ಚಿತ್ತಾಪೂರ 3) ಸುಧೀರ ತಂದೆ ಶಿವಶರಣಪ್ಪ ಮರಾಠಾ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬರಗಿ 4) ಸಂತೋಷ ತಂದೆ ಹಣಮಂತರಾಯ ಬಿರಾದಾರ ಸಾಃ ತಾರಾಪೂರ ತಾಃಸಿಂದಗಿ ಜಿಃ ವಿಜಯಪೂರ 5) ಗೌಡಪ್ಪ ತಂದೆ ಯಶ್ವಂತರಾಯ ಮಾಲಿಪಾಟೀಲ ಸಾಃ ಪಾಳಾ ತಾಃ ಜಿಃ ಕಲಬುರಗಿ 6) ಶರಣಸಿಂಗ ತಂದೆ ಸುಭಾಶ್ಚಂದ್ರ ರಜಪೂತ ಸಾಃ ಖಾಜಾಕೋಟನೂರ ತಾಃಜಿಃ ಕಲಬುರಗಿ 7) ಮಳಿಸ್ವಾಮಿ ತಂದೆ ರೇವಣಸಿದ್ದಯ್ಯ ಹಿರೇಮಠ ಸಾಃ ಪಾಳಾ ತಾಃಜಿಃ ಕಲಬುರಗಿ 8) ಸಿದ್ದರಾಮ ತಂದೆ ಶಿವಶರಣಪ್ಪ ಗೂಡುರ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 9) ಶರಣಬಸಪ್ಪ ತಂದೆ ಅಪ್ಪಾರಾವ ಪೂಜಾರಿ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 10) ಯೂನೂಸ ತಂದೆ ನದಿಮಸಾಬ ಮುಲ್ಲಾ ನಾಯಕ ಸಾಃ ಪೇಠಶಿರೂರ ತಾಃ ಚಿತ್ತಾಪೂರ ಜಿಃ ಕಲಬುರಗಿ 11) ಕಿಶನ ತಂದೆ ಭೀಮಲಾ ರಾಠೋಡ ಸಾಃ ನಂದೂರ 12) ಸುನೀತ ತಂದೆ ಸಿದ್ದು ಪಾಟೀಲ ಸಾಃ ಜಯನಗರ  ಕಲಬುರಗಿ 13) ಪ್ರಭುಲಿಂಗ ತಂದೆ ಸಿದ್ದಣ್ಣಾ ನಿಂಗಶೆಟ್ಟಿ ಸಾಃ ನೌಬಾದ ಬೀದರ 14) ಗಣೇಶ ತಂದೆ ಪಾಂಡು ಪವ್ಹಾರ ಸಾಃ ತಿಲಕ ನಗರ ಕಲಬುರಗಿ 15) ಕಲ್ಯಾಣಸಿಂಗ ತಂದೆ ಲಕ್ಷ್ಮಣಸಿಂಗ ರಜಪೂತ ಸಾಃ ಪೇಠಶಿರೂರ ತಾಃ ಚಿತ್ತಾಪೂರ 16) ಬಸವರಾಜ ತಂದೆ ಶೀವರಾಜ ಪಾಳಾ ಸಾಃ ಪಾಳಾ ತಾಃಜಿಃ ಕಲಬುರಗಿ 17) ಕಾಶೀನಾಥ ತಂದೆ ಶಂಕ್ರೇಪ್ಪ ಗೌಡ ಮಾಲಿಪಾಟೀಲ ಸಾಃ ಬಸವೇಶ್ವರ ಕಾಲನಿ ಕಲಬುರಗಿ 18) ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಿಲಗುಂದಿ ಸಾಃ ಧರ್ಮಾಪೂರ ಕಲಬುರಗಿ 19) ಗುರುರಾಜ ತಂದೆ ಚನ್ನಣ್ಣಾ ರಾವೂರ ಸಾಃ ಜೇವರಗಿ ಜಿಃ ಕಲಬುರಗಿ 20) ಶರಣು ತಂದೆ ಶಿವಾನಂದ ಉಪ್ಪಿನ ಸಾಃ ಎನ್.ಆರ್ ಕಾಲನಿ ಕಲಬುರಗಿ ಹೀಗೆ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 91,770/- ರೂ ಹಾಗೂ 52 ಇಸ್ಪೆಟ್ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಹೋದವರ್ಷ ಮೊಹರಮ್ಮ ಹಬ್ಬದ ಮಜ್ಮಾ ಸಂದರ್ಭದಲ್ಲಿ ನಮ್ಮೂರಿನ ಮೊಹಾನಂದ ತಂದೆ ಹಣಮಂತ ನಡುಕರ ನಾಗರಾಜ ತಂದ ಹಣಮಂತ ಕಾಂಬಳೆ ಹಾಗೂ ಶ್ರೀಕಾಂತ ತಂದೆ ಬಸಣ್ಣ ಹೊಸಮನಿ ರವರುಗಳು ಕೂಡಿ ಮಜ್ಮಾದಲ್ಲಿ ಡ್ಯಾನ್ಸ ಮಾಡುವ ವಿಷಯವಾಗಿ ನನ್ನೊಂದಿಗೆ ತಕರಾರು ಮಾಡಿರುತ್ತಾರೆ. ಅವಾಗಿನಿಂದ ಸದರಿಯವರು ನನ್ನ ಮೇಲೆ ದ್ವೇಷ ಬೆಳೆಸಿಕೊಂಡು ನನ್ನನ್ನು ಗುರಾಯಿಸಿ  ನೋಡುವುದು ಮಾಡುತ್ತಿದ್ದರು. ಹೀಗಿದ್ದು ಮೊನ್ನೆ ದಿನಾಂಕ:25/01/2018 ರಂದು ಸಂಜೆ ನಾನು ವೈಯಕ್ತಿಕ ಕೆಲಸಕ್ಕಾಗಿ ನಮ್ಮೂರಿನಿಂದ ಶ್ರೀಚಂದ ಗ್ರಾಮಕ್ಕೆ ಹೋಗಿ ವಾಪಸ್ಸು ನಮ್ಮೂರಿಗೆ ನನ್ನ ಮೊಟಾರ್ ಸೈಕಲ್ ಸಂ ಕೆಎ25-ಎಸ್4981 ನೇದ್ದರ ಮೇಲೆ ಹೋಗುವಾಗ ಶ್ರೀಚಂದ ಹಳ್ಳದ ಹತ್ತಿರದಲ್ಲಿದ್ದಾಗ ನಮ್ಮೂರಿನ ಮೊಹಾನಂದ, ನಾಗರಾಜ ಮತ್ತು ಶ್ರೀಕಾಂತರವರುಗಳು ಕೂಡಿ ನನ್ನ ಮೊಟಾರ್ ಸೈಕಲಗೆ ಅಡ್ಡಗಟ್ಟಿ ನಿಲ್ಲಿಸಿ ನನ್ನನ್ನು ಮೊಟಾರ್ ಸೈಕಲ್ ಮೇಲಿಂದಾ ಕೆಳಗೆ ಇಳಿಸಿ ಭೊಸಡಿ ಮಗನೆ ಹೋದವರ್ಷ ಮೊರಂ ಹಬ್ಬದಲ್ಲಿ ಮಜ್ಮಾ ವೇಳೆಯಲ್ಲಿ ಕುಣಿಯುತ್ತಿರುವಾಗ ನಮ್ಮೊಂದಿಗೆ ಜಗಳ ಮಾಡಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮೊಹಾನಂದನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಬೆನ್ನ ಮೇಲೆ ಹೊಡೆದನು. ನಾಗರಾಜನು ಸಹ ಕಬ್ಬಿಣದ ರಾಡಿನಿಂದ ನನ್ನ ಎಡಗಾಲು ತೊಡೆಗೆ ಹೊಡೆದನು ಮತ್ತು ಶ್ರೀಕಾಂತನು ಬಡಿಗೆಯಿಂದ ನನ್ನ ಎಡಗಡೆ ಮಗ್ಗಲಿಗೆ ಹೊಡೆದನು. ಇದರಿಂದ ಕಂದು ಗಟ್ಟಿದ ಗಾಯಗಳು ಆಗಿರುತ್ತವೆ. ಅಲ್ಲದೇ 3ಜನ ಕೂಡಿ ನನಗೆ ಕೈಮುಷ್ಠಿಮಾಡಿ ಮುಖದ ಮೇಲೆ ಹಾಗೂ ಹೊಟ್ಟೆಗೆ ಗುದ್ದಿರುತ್ತಾರೆ. ನಾನು ಅವರಿಂದ ಬಿಡಿಸಿಕೊಂಡು ನನ್ನ ಮೊಟಾರ್ ಸೈಕಲ್ ತಗೆದುಕೊಂಡು ನಮ್ಮೂರಿಗೆ ಬಂದು ವಿಷಯವನ್ನು ನಮ್ಮ ತಂದೆಯಾದ ಮೊದೀನಸಾಬ ತಾಯಿಯಾದ ಖಾಜಾಬಿ ರವರುಗಳು ಸದರಿ ವಿಷಯ ತಿಳಿಸಿ ನನಗೆ ಆದ ಗಾಯಗಳನ್ನು ತೋರಿಸಿದ್ದು ನನ್ನ ತಂದೆಯವರು ಮತ್ತು ನಾನು ಕೂಡಿ ನನ್ನ ಮೊಟಾರ್ ಸೈಕಲ್ ಮೇಲೆ ಅದೇ ದಿವಸ ಮದ್ಯರಾತ್ರಿ ಜಿಲ್ಲಾ ರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿ ಉಪಚಾರ ಹೊಂದುತ್ತಿದ್ದೇನೆ. ಅಂತಾ ಶ್ರೀ ಇಸ್ಮಾಯಿಲ ತಂದೆ ಮೊದೀನಸಾಬ ಬೀದರ ಸಾ||ಅಪಚಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
ಗ್ರಾಮೀಣ ಠಾಣೆ : ದಿನಾಂಕ 25/01/2018 ರಂದು ಮೃತ ರಾಜಶೇಖರ ಚವ್ಹಾಣ ಇತನು ತನ್ನ ಎವೆಂಜರ 150 ಸಿಸಿ ಮೋಟಾರ ಸೈಕಲ KA 32 EL 3283 ಮೇಲೆ ಒಬ್ಬನೇ ಕುಳಿತುಕೊಂಡು ಕಲಬುರಗಿಯಿಂದ ಕೇರೂರ ಗ್ರಾಮಕ್ಕೆ ಎಡ ರೋಡ ಬದಿಯಿಂದ ಮೋಟಾರ ಸೈಕಲ ನಡೆಸುತ್ತಾ ಹೊರಟಾಗ ಅವನ ಹಿಂದಿನಿಂದ ಕಾರ ನಂ  KA 28 N   0863 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಮೃತನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಮೋಟಾರ ಸಮೇತ ರೋಡಿನ ಮೇಲೆ ಬಿದ್ದಾಗ ಅವನ ತಲೆಗೆ, ಬಲಗಣ್ನಿನ ಕೆಳೆಗೆ, ಎಡಗಣ್ಣಿಗೆ ಕೆಳೆಗೆ, ಬಲಗೈ ಮುಂಗೈಗೆ, ಬಲ ಅಂಗೈಗೆ, ಎಡಗೈ ತೋರು ಬೆರಳು  ಎಡಗಾಲು ಮೊಳಕಾಲಿಗೆ, ಪಾದದ ಹತ್ತಿರ, ಹಾಗೂ ಎದೆಯ ಮೇಲೆ,  ಬಲಗೈ ರಟ್ಟೆ ಹತ್ತಿರ, ರಕ್ತಗಾಯ ಮತ್ತು ತರಚಿದ ಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬಂದು ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದು, ಅದೇ ದಾರಿಯಿಂದ ಬರುತ್ತಿದ್ದ ಅದೇ ಗ್ರಾಮದ ಅನಿಲಕುಮಾರ ಇತನು ನೋಡಿ ಮೃತನ ತಂದೆಗೆ ಪೋನ ಮಾಡಿ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಮೃತನಿಗೆ ಯಾವುದೋ ಕ್ರೋಜರನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿಗೆ ತಂದಾಗ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದ್ದು ಇರುತ್ತದೆ. ಸದರ ಚಾಲಕನು ಅಪಘಾತಪಡಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು, ಕಾರ ಚಾಲಕನಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆಂದು ಅನಿಲಕುಮಾರನಿಂದ ಕೇಳಿ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಗೌಸಪಾಕ ತಂದೆ ದಾವಲಸಾಬ ಸಾ||ಚೌದ್ರಿ ಗಲ್ಲಿ ಅಫಜಲಪೂರ ರವರು ದಿನಾಂಕ 23/01/2018 ರಂದು ನಾನು ಪಾಲದಿಂದ ಮಾಡಿದ ಕರಜಗಿ ರೋಡಿಗೆ ಇರುವ ಹೊಲಕ್ಕೆ ಹೋಗಿದ್ದು ಮದ್ಯಾಹ್ಮ ಒಂದು ಗಂಟೆ ಸುಮಾರಿಗೆ ನಡೆದುಕೊಂಡು ಹೊಗುತಿದ್ದಾಗ ರೌಫ ಪಟೇಲ ಹೊಲದ ಸಮೀಪ ಹಿಂದುಗಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ಅತಿವೇಗ ಹಾಗು ಅಲಕ್ಷತನದಿಂದ ಓವರಟೇಕ ಮಾಡಲು ಹೋಗಿ ನನಗೆ ಹಿಂದಿನಿಂದ ಬಂದು ಡಿಕ್ಕಿ ಪಡಿಸಿದ್ದು ನಾನು ಕೆಳಗೆ ಬಿದ್ದೆನು ಎದ್ದು ನೋಡಲು ನನಗೆ ಬೆನ್ನಿಗೆ ಟೊಂಕಕ್ಕೆ ಭಾರಿ ಒಳಪೆಟ್ಟು ಗಾಯಗಳಾಗಿದ್ದು ಅಲ್ಲೆ ಇದ್ದ ಉಸ್ಮಾನಸಾಬ ತಂದೆ ದಸ್ತಗಿರಸಾಬ ಇವರು ಬಂದು ಟ್ರ್ಯಾಕ್ಟರ ನಂಬರ ನೋಡಲು ಕೆಎ-32 ಟಿಬಿ-2574 ನೇದ್ದು ಇದ್ದು ಚಾಲಕನ ಹೆಸರು ಸೊಂದುಸಾಬ ತಂದೆ ಅಲಿಸಾಬ ಜೋಗುರ ಸಾ||ಅಫಜಲಪೂರ ಇದ್ದು ಟ್ರ್ಯಾಕ್ಟರ ಚಾಲಕ ಹಾಗು ನನ್ನ ತಂದೆ ದಾವಲಸಾಬ ಇವರು ಖಾಸಗಿ ಜೀಪನಲ್ಲಿ  ಕಲಬುರಗಿಯ ಪಿಜಿ ಶಹಾ ದಾವಖಾನೆಗೆ ತಂದು ಸೇರಿಕೆ ಮಾಡಿದ್ದು ಉಪಚಾರ ಪಡೆಯುತಿದ್ದೆನೆ.ಸದರಿ ಟ್ರ್ಯಾಕ್ಟರ ನಂ ಕೆಎ-32 ಟಿಬಿ-2574 ನೇದ್ದರ ಚಾಲಕನು ನನಗೆ ಅಫಘಾತ ಪಡಿಸಿ ಟೊಂಕಕ್ಕೆ ಭಾರಿ ಗುಪ್ತ ಪೆಟ್ಟು ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ನಾಗೇಂದ್ರ ತಂದೆ ಗುರುಶಾಂತಪ್ಪ ವೀರಶೆಟ್ಟಿ ಸಾ: ಶರಣ ನಗರ ಶಹಾಬಾದ ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ ತನ್ನ ಹೆಂಡತಿಯಾದ ವಿಜಯಲಕ್ಷ್ಮಿ ಇವಳು ಅಂಗವಿಕಲಳಾಗಿದ್ದರಿಂದ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಕಲಬುರಗಿ ರವರು ಸರಕಾರದ ವತಿಯಿಂದ ಉಚಿತವಾಗಿ ಮೂರು ಚಕ್ರದ ಮೋಟಾರ ಸೈಕಲ ಕೊಡುತ್ತಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಕೂಡಿ ದಿನಾಂಕ: 15/12/2017 ರಂದು ಮುಂಜಾನೆ ಹೋಗಿ ಮೊಟಾರ ಸೈಕಲ ತೆಗೆದುಕೊಂಡು ಮರಳಿ ಶಹಾಬಾದಕ್ಕೆ ಬರುವಾಗ ನನ್ನಹೆಂಡತಿಯ ಮೊಟಾರ ಸೈಕಲ ಚಲಾಯಿಸುತ್ತಿದ್ದು ಅವಳು ದೇವನ ತೆಗನೂರ ಗ್ರಾಮ ದಾಟಿ ಬಸವಣ್ಣ ಗುಡಿ ದಾಟಿ ರೋಡಿನಲ್ಲಿ ನನ್ನ ಹೆಂಡತಿಯು ಮೋಟಾರ ಸೈಕಲ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಮೋಟಾರ ಸೈಕಲದೊಂದಿಗೆ ಕೆಳಗಿ ಬಿದ್ದರಿಂದ ನನಗೆ ಎರಡು ಕೈಗಳಿಗೆ ಮತ್ತು ಬಲ ಮುಂಡಿಗೆ ಒಳಪೆಟ್ಟಾಗಿ ಗಾಯಾಪೆಟ್ಟಾಗಿರುತ್ತದೆ. ಮತ್ತು ಪಿರ್ಯಾದಿ ಹೆಂಡತಿಗೆ ಅವಳ ಬಲ ಗಾಲಿಗೆ ಮತ್ತು ತಲೆಗೆ ಬಾಯಿ ಹತ್ತಿರ ಗಾಯಾ ಪೆಟ್ಟಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 24.01.2018 ರಂದು 12-30 ಎ.ಎಮ ಸುಮಾರಿಗೆ ಮೃತ ನಾಸೀರ ಇತನು ಮೋಟಾರ ಸೈಕಲ ನಂ ಕೆಎ-32-ಇಎ-8060 ನೇದ್ದನ್ನು ಚಲಾಯಿಸಿಕೊಂಡು ಕಣ್ಣಿ ಮಾಕರ್ೆಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡಬಲ ಕಟ್ ಹೊಡೆಯುತ್ತಾ ಹೋಗಿ ಹೀರಾಪೂರ ರಿಂಗ ರೋಡ ಹತ್ತೀರ ಬರುವ ಸಿದ್ದಾರ್ಥ ನಗರದ ಕನರ್ಾಟಕ ಹೈಸ್ಕೂಲ ಎದುರಿನ ರೋಡಿನ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸ್ಕಿಡ್ ಮಾಡಿ ಅಪಘಾತ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದು ಭಾರಿ ಗಾಯಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಾಸೀರ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 25.01.2018 ರಂದು ಬೆಳಿಗ್ಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ.  ಅಂಆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.