POLICE BHAVAN KALABURAGI

POLICE BHAVAN KALABURAGI

29 March 2016

Kalaburagi District Press Note

ಪತ್ರಿಕಾ ಪ್ರಕಟಣೆ

 ಇಂದು ದಿನಾಂಕ 29-03-2016 ರಂದು ಪೊಲೀಸ ಭವನ ಕಲಬುರಗಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿಯಲ್ಲಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ಧೇಶನಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ನ್ಯಾಯ ಮೂರ್ತಿ  ಶ್ರೀ ಬಿ.ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರು ಭಾಗವಹಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲಾ ಪೊಲೀಸ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಪೊಲೀಸ ಠಾಣೆಗಳಲ್ಲಿ ಯಾವ ರೀತಿ ಸಂಗ್ರಹಿಸಬೇಕು ಮತ್ತು ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವಿಧಿ ವಿಧಾನದ ಬಗ್ಗೆ ಹಾಗೂ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಜಿಲ್ಲಾ ಸಂಗ್ರಾಹಾರಕ್ಕೆ ಜಮಾ ಮಾಡಿ, ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಸೂಕ್ತ ಕಣ್ಗಾವಲಿನಲ್ಲಿ ವಿಲೇವಾರಿ ಮಾಡುವ ವಿಧಾನಗಳನ್ನು ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತಿಳಿಸಿ ಹೇಳಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ   ಶ್ರೀ ಅಮಿತ ಸಿಂಗ ಐ.ಪಿ.ಎಸ್.  ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ರವರು ಮಾದಕ ವಸ್ತುಗಳ ಅಧಿನಿಯಮದಡಿ ಜಪ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಯಾವ ಪ್ರಮಾಣದಲ್ಲಿ, ಯಾವ ರೀತಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು, ಹಾಗೂ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಕಮೀಟಿಯ ಕಾರ್ಯ ವಿಧಾನಗಳ ಬಗ್ಗೆ ವಿಸ್ತ್ರುತವಾಗಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಸಭೆಯಲ್ಲಿ ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಲಬುರಗಿ ರವರು ಹಾಜರಿದ್ದರು..
     ಕಾರ್ಯಾಗಾರ ಸಮಾಪ್ತಗೊಂಡ ನಂತರ ಕಲಬುರಗಿ ಜಿಲ್ಲೆಯ ಎಲ್ಲ ಪೊಲೀಸ ಠಾಣೆಗಳಲ್ಲಿ ಮಾದಕ ವಸ್ತುಗಳ ಅಧಿನಿಯಮದಡಿ ಜಫ್ತಿ ಮಾಡಿಕೊಂಡ ಮಾದಕ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಡಿ.ಎ.ಆರ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಾದಕ ವಸ್ತುಗಳ ಸಂಗ್ರಹಾಗಾರವನ್ನು ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ವಿ. ಪಾಟೀಲ ಪ್ರಧಾನ ನ್ಯಾಯಾಧೀಶರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ ರವರ ಅಮೃತ ಹಸ್ತದಿಂದ  ಉದ್ಘಾಟಿಸಿದರು.                                                                                                                   
                                                                    ಸಹಿ/-
                                                             ಪೊಲೀಸ್ ಅಧೀಕ್ಷಕರು

                                                                 ಕಲಬುರಗಿ

No comments: