POLICE BHAVAN KALABURAGI

POLICE BHAVAN KALABURAGI

28 November 2011

GULBARGA DIST REPORTED CRIMES

ಜೂಜಾಟ ಪ್ರಕರಣ:

ಶಹಾಬಾದ ನಗರ ಠಾಣೆ : ಶಹಾಬಾದ ನಗರದ ಅಪ್ಪರ ಮಡ್ಡಿ ರೇಲ್ವೆ ಗೇಟ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಫೀಟ ಜೂಜಾಟ ಆಡುತ್ತಿದ್ಧಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇನ್ಸಪೇಕ್ಟರ ಶಹಬಾದ ನಗರ ಠಾಣೆರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಲಕ್ಷ್ಮಣ ಎ.ಎಸ.ಐ , ಗುಂಡಪ್ಪಾ ಸಿಪಿಸಿ, ಯೆಜಿಕಲ್ ಸಿಪಿಸಿ, ಅಮೀರಅಲಿ ಸಿಪಿಸಿ, ಶಿವರಾಜ ಸಿಪಿಸಿ, ನಾಗೇಂದ್ರಪ್ಪಾ ಸಿಪಿಸಿ ರವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಂದರ ಬಾಹರ ಜೂಜಾಟದಲ್ಲಿ ನಿರತರಾದ ರಮೇಶ ತಂದೆ ಬಸವರಾಜ ಹೂಗಾರ ಹಾಗೂ ಇನ್ನೂ ಮೂರು ಜನರು ಸಾ:ಎಲ್ಲರೂ ಶಹಾಬಾದ ಅವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಒಟ್ಟು 610/-ರೂ ಮತ್ತು 52 ಇಸ್ಟೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ವಾಡಿ ಪೊಲೀಸ ಠಾಣೆ: ದಿನಾಂಕ 27-11-2011 ರಂದು 3 ಗಂಟೆಯ ಸುಮಾರು ಸಿಂಡಿಕೆಟ ಏರಿಯಾದ ನಾರಿಮನ ಶೇಠ ಇವರ ಸಂಬಂಧಪಟ್ಟ ಹಳೆಯ ಕಟ್ಟಡದ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಬಂದ ಖಚಿತ ಬಾತ್ಮಿ ಮೇರೆಗೆ ಸಿಪಿಐ ಚಿತ್ತಾಪೂರ ವೃತ್ತ ರವರ ನೆತೃತ್ವದಲ್ಲಿ ಪಿಎಸ್ಐ (ಕಾಸು) ರವರು ಸಿಬ್ಬಂದಿಯೊಂದಿಗೆ ಜೂಜಾಟದಲ್ಲಿ ನಿರತರಾದ ಸಂತೋಷ ತಂದೆ ಧರೆಪ್ಪಾ ಬಿರಾದಾರ ಸಾ|| ಗುಲಬರ್ಗಾ ಹಾಗು ಶಿವಲಿಂಗಪ್ಪಾ, ರಾಜು, ಶಿವಶರಣಪ್ಪಾ, ರಮೇಶ, ನಾಗರಾಜ, ಸುನೀಲ, ಶಾನವಾಜ, ಸಿದ್ದಪ್ಪಾ, ಸಲೀಂ ,ಆಫ್ರೊಜ, ಮೋತಿರಾಮ, ರಾಜು, ಖಾಸಿಂ, ಮೆಹಬೂಬ, ಸಿದ್ದರಾಮ, ಅಕ್ತರಪಾಶಾ, ಮಹಮದ ಶರಿಫ ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ ಒಟ್ಟು 105023 ರೂ ಮತ್ತು 52 ಇಸ್ಪಿಟ ಎಲೆ 2 ಚಾಪೆಗಳು ಮತ್ತು 12 ಮೊಟರ ಸೈಕಲಗಳು ಅ||ಕಿ|| ಒಟ್ಟು 225000 ಬೆಲೆಬಾಳುವ ಮೋಟರ ಸೈಕಲ ಜಪ್ತ ಪಡಿಸಿಕೊಂಡಿರುತ್ತಾರೆ. ಮತ್ತು ಜೂಜಾಟದ ನಡೆಸುತ್ತಿದ್ದ ಮಾಲಿಕ ಖಧಿರ ತಂದೆ ಮಹಮ್ಮದ ಹುಸೇನ ಓಡಿ ಹೊಗಿರುತ್ತಾನೆ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಂಡಿದ್ದರಿಂದ ಠಾಣೆ ಗುನ್ನೆ ನಂ 223/2011 ಕಲಂ 87 ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: