ಮುಂಜಾಗ್ರತೆ
ಕ್ರಮ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ: 29/8/2012 ರಂದು ಸಾಯಂಕಾಲ
5:45 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡದಲ್ಲಿ ನಮ್ಮನ್ನು ಸಮವಸ್ತ್ರದಲ್ಲಿ ನೋಡಿ ಮುಖ
ಮರೆಮಾಚಿಕೊಂಡು ಬೇಕರಿ ಪಕ್ಕದಲ್ಲಿ ಓಡಿ ಹೋಗುತ್ತಿರುವಾಗ
ಅವನ ಮೇಲೆ ಸಂಶಯ ಬಂದು ಬೆನ್ನಟ್ಟಿ ಹಿಡಿದು
ವಿಚಾರಿಸಿದಾಗ ಸರಿಯಾದ ಉತ್ತರ ನೀಡಿರುವದಿಲ್ಲ. ಇವನನ್ನು
ಹೀಗೆ ಬಿಟ್ಟಲ್ಲಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸ್ವತ್ತಿನ ಗುನ್ನೆ ಮಾಡುವ ಸಾದ್ಯತೆ ಇರುವದರಿಂದ ಠಾಣೆ ಗುನ್ನೆ ನಂ: 276/2012 ಕಲಂ 109 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್.
ಪ್ರಕರಣ:
ರಾಘವೇಂದ್ರ ನಗರ
ಪೊಲೀಸ್ ಠಾಣೆ: ಶ್ರೀ ಅಬ್ದುಲ ಮಾಹಿಸ ತಂದೆ ಅಬ್ದುಲ ಲದೀಫ ಬೆಲೀಫ
ರವರು ನಾನು ಮತ್ತು ಮೃತ ಅಬ್ದುಲ ರಹಿಸ್ ಇಬ್ಬರು ಅಣ್ಣ ತಮ್ಮಿಂದಿರು ಇದ್ದು, ಇಬ್ಬರು
ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದು, ದಿನಾಂಕ 28-08-2012 ಮಧ್ಯಾಹ್ನ 3.45 ಗಂಟೆ ಸುಮಾರಿಗೆ ನನ್ನ
ಮೃತ ಅಣ್ಣ ಅಬ್ದುಲ ರಹಿಸ ಈತನ ಹೆಂಡತಿ ಆದ ಆರಿಫಾ ಇವಳು ನನ್ನ ಮೊಬಾಯಿಲ್ ಗೆ ಫೋನ್
ತಿಳಿಸಿದ್ದೇನೆಂದರೆ, ನನ್ನ ಗಂಡ ಅಬ್ದುಲ ರಹಿಸ ಈತನು ನಾವು ಇದ್ದ ಬಾಡಿಗೆ ಮನೆಯಲ್ಲಿ ಖಬ್ಬಿಣದ
ಪೈಪಿಗೆ ಬಾಗಿಲು ಪರದಾದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿದ್ದರಿಂದ ನಾನು ಹೋಗಿ ನೋಡಲಾಗಿ ನನ್ನ ಅಣ್ಣನು ಮೃತಪಟ್ಟಿದ್ದು, ಅತ್ತಿಗೆ ಹಾಗೂ ಸದರಿ
ಓಣಿಯ ಮೀರ ಅಲಿ ತಂದೆ ಸೈಯದ್ ಹುಸೇನ್ ಮತ್ತು ಮಮತಾಜ ಬೇಗಂ ಗಂಡ ಅಬ್ದುಲ ಹನೀಫ ಇವರೆಲ್ಲರೂ
ಸೇರಿ ಕೆಳಗೆ ಇಳಿಸಿ ಅಂಗಾತಾಗಿ ಹಾಕಿರುತ್ತಾರೆ. ನನ್ನ ಮೃತ ಅಣ್ಣ ಅಬ್ದುಲ ರಹಿಸ್ ಆತನ ಬಲಕುತ್ತಿಗೆಯ
ಮೇಲೆ ಸ್ವಲ್ಪ ಗಾಯ ಕಂಡು ಬಂದಿರುತ್ತದೆ. ಕಾರಣ ತನ್ನ ಅಣ್ಣನ ಸಾವಿನಲ್ಲಿ ಸಂಶಯ ಇದ್ದು ಮುಂದಿನ
ಕ್ರಮ ಜರುಗಿಸಿರಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 12/12 ಕಲಂ
174 (ಸಿ) ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
No comments:
Post a Comment