ಮನುಷ್ಯ ಕಾಣೆಯಾದ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ; ಶ್ರೀ ನಾಗೇಂದ್ರ
ತಂದೆ ಯಂಕಪ್ಪ ರಾಸೂರ ಸಾ|| ಮ.ನಂ.204 ಗೋದುತಾಯಿ ನಗರ
ಗುಲಬರ್ಗಾ ರವರು ನನ್ನ ಅಣ್ಣನಾದ ದೇವೆಂದ್ರಪ್ಪಾ
ತಂದೆ ಯಂಕಪ್ಪಾ ರಾಸೂರ ಇತನು ನಮ್ಮ ಜೊತೆಯಲ್ಲಿ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. ದಿನಾಂಕ :17/07/2012 ರಂದು ಸಾಯಂಕಾಲ 6-00 ಗಂಟೆಗೆ ಮನೆಯಿಂದ
ಹೋರಗೆ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಲಾಗಿ
ಸಿಕ್ಕಿರುವದಿಲ್ಲ.ಕಾಣೆಯಾದ ನನ್ನ ಅಣ್ಣನ ಚಹರೆ ಪಟ್ಟಿ ಎತ್ತರ 5” 2’
,ವಯಸ್ಸು-65, ತೆಳ್ಳನೆಯ ಮೈಕಟ್ಟು, ಸಾದಕಪ್ಪು, ಎಡಕಿವಿಯ ಕೆಳಗಡೆ ಕಪ್ಪು ಗುಳ್ಳಿ, ಬಿಳಿ
ಕೂದಲು, ಬಿಳಿ ಬಣ್ಣದ ಶರ್ಟ, ಬಿಳಿ ಬಣ್ಣದ ದೋತಿ ಧರಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ.76/2012 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.ಸದರಿ
ಠಾಣಾಧಿಕಾರಿಗಳು ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂ: 08472-263617, ಮೊಬಾಯಿಲ್ ಸಂ:
9480803545, ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment