ಅಕ್ರಮ ಗಾಂಜಾ ಮಾರಾಟ ಮತ್ತು ಆಕ್ರಮ ನಾಡ ಪಿಸ್ತೂಲ ಜಪ್ತಿ:-
ಅಫಜಲಪೂರ ಪೊಲೀಸ ಠಾಣೆ
ದಿನಾಂಕ 15-09-2020 ರಂದು 5:15 ಪಿ.ಎಮ್
ಕ್ಕೆ ನಾನು ಸಂತೋಷ ಎಲ್ ತಟ್ಟೆಪಳ್ಳಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ಸರ್ಕರಿ ತರ್ಫೇಯಿಂದ ದೂರು
ಸಲ್ಲಿಸುವುದೆನೆಂದರೆ,
ದಿನಾಂಕ 15-09-2020 ರಂದು ಮದ್ಯಾಹ್ನ 12:15 ಗಂಟೆಗೆ
ನಾನು ಠಾಣೆಯಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಬಡದಾಳ ಸೀಮಾಂತರದಲ್ಲಿ ಜಯಾನಂದ ತಂದೆ
ಶಿವನಿಂಗಪ್ಪ ನೀಲಂಗೆ ಸಾ||
ಬಡದಾಳ ಈತನು ತನ್ನ ಹೊಲದಲ್ಲಿ ಅನದಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆಸಿ, ಗಾಂಜಾ
ಮಾರಾಟ ಮಾಡುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ, ಮೇಲಾಧಿಕಾರಿಗಳಿಗೆ ಮಾಹಿತಿ
ಸಲ್ಲಿಸಿ ಪತ್ರಾಂಕಿತ (ಗೆಜಟೇಡ್) ಮಾನ್ಯ ಯಲ್ಲಪ್ಪ ಸುಬೇದಾರ ತಹಸಿಲ್ದಾರರು ಹಾಗೂ ತಾಲುಕಾ
ದಂಡಾಧಿಕಾರಿಗಳು ಅಫಜಲಪೂರ ರವರು ತಮ್ಮ ಕಾರ್ಯಾಲಯದ ಸರಕಾರಿ ಪಂಚ ಜನರಿಗೆ ಮತ್ತು ಮಾನ್ಯ ತಹಸಿಲ್ದಾರ
ಸಾಹೇಬರಿಗೆ ಹಾಗೂ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಸುರೇಶ ಹೆಚ್.ಸಿ-394, ಸಂತೋಷ
ಹೆಚ್.ಸಿ-439,
ಚಿದಾನಂದ ಹೆಚ್.ಸಿ-306, ಯಲಗೊಂಡ ಪಿಸಿ-743,
ಭಾಗಣ್ಣ ಪಿಸಿ-167 ಎಲ್ಲರೂ ಕೂಡಿ ನಮ್ಮ ಇಲಾಖಾ ಜೀಪ ನಂ ಕೆಎ-03 ಜಿ-1110 ನೇದ್ದರಲ್ಲಿ
ಮತ್ತು. ಮಾನ್ಯ ತಹಸಿಲ್ದಾರರು ಮತ್ತು ಸರಕಾರಿ ಪಂಚರು ಕೂಡಿ ಮಾನ್ಯ ತಹಸಿಲ್ದಾರ ಸಾಹೇಬರ ಇಲಾಖಾ
ಜೀಪಿನಲ್ಲಿ ಹೊರಟು ಬಡದಾಳ ದಿಂದ ಅರ್ಜುಣಗಿ ಗ್ರಾಮಕ್ಕೆ ಹೋಗುವ ರಸ್ತೆಗೆ ಸುಮಾರು 2 ಕಿ.ಮಿ ದೂರ
ಸಾಗಿ ವಾಹನಗಳನ್ನು ನಿಲ್ಲಿಸಿ, ರೋಡಿನ ಬದಿಯಲ್ಲಿ ನಿಂತಿದ್ದ ಪೊಲೀಸ್ ಬಾತ್ಮಿದಾರನು ಅಲ್ಲಿಂದ ಹೊಲದಲ್ಲಿ ನಡೆಸಿಕೊಂಡು
ಕರೆದುಕೊಂಡು ಹೋಗಿ ಸುಮಾರು ದೂರು ಹೋದ ನಂತರ ಬಾತ್ಮಿದಾರನು ಮುಂದೆ ದೂರದಲ್ಲಿ ಕಾಣುತ್ತಿರುವ
ಒಂದು ತೋಗರಿ ಹೊಲವನ್ನು ಮತ್ತು ಅದರಾಚೆ ಇರುವ ಕಬ್ಬಿನ ಹೊಲವನ್ನು ತೊರಿಸಿದ ಸದರಿ ಹೊಲದಲ್ಲಿ
ಹೊಗುತ್ತಿದ್ದಾಗ,
ಆ ಹೊಲದಿಂದ ಒಬ್ಬ ವ್ಯೆಕ್ತಿ ನಮ್ಮನ್ನು ನೋಡಿ ಓಡತೊಡಗಿದನು. ಆಗ ನಾವು ಸದರಿಯವನನ್ನು
ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಜಯಾನಂದ ತಂದೆ ಶಿವನಿಂಗಪ್ಪ ನೀಲಂಗೆ
ವಯ|| 35
ವರ್ಷ ಜಾ||
ಲಿಂಗಾಯತ ಉ||
ಒಕ್ಕಲುತನ ಸಾ||
ಬಡದಾಳ ತಾ||
ಅಫಜಲಪೂರ ಅಂತ ತಿಳಿಸಿದ್ದು, ಸದರಿಯವನಿಗೆ ಗಾಂಜಾ ಬೆಳೆದ ಬಗ್ಗೆ ಪುನ ಪುನ ವಿಚಾರಿಸಲು ಸದರಿಯವನು ತೋಗರಿ ಬೆಳೆಯಲ್ಲಿ
ಕರೆದುಕೊಂಡು ಹೋಗಿ,
ತೋಗರಿಯ ಸಾಲುಗಳ ಮದ್ಯದಲ್ಲಿ ಬೆಳೆದ ಗಾಂಜಾ ಗಿಡವನ್ನು ತೊರಿಸಿದನು. ವಿಚಾರಿಸಲು ಸದರಿ
ಗಾಂಜಾ ಗಿಡಗಳನ್ನು ಒಂದು ತಿಂಗಳ ಹಿಂದೆ ಬೀಜ ಹಾಕಿದ್ದು, ಇನ್ನು 4 ತಿಂಗಳು ಬಿಟ್ಟರೆ
ಪ್ರತಿ ಗಿಡದಿಂದ ಒಂದು ಕಿಲೋ ಗಾಂಜಾ ಸಿಗುತ್ತದೆ ಮತ್ತು ಸದರಿ ಹೊಲ ನನ್ನ ಹೆಸರಿನಲ್ಲಿದ್ದು ಇದರ
ಸರ್ವೇ ನಂಬರ 87/3 ಇರುತ್ತದೆ ಎಂದು ತಿಳಿಸಿದನು. ನಂತರ ಸದರಿಯವನಿಗೆ ಇನ್ನು ಎಲ್ಲಿ ಎಲ್ಲಿ
ಗಾಂಜಾ ಗಿಡಗಳನ್ನು ಬೆಳೆಸಿದ ಬಗ್ಗೆ ವಿಚಾರಿಸಲು, ಸದರಿಯವರು ಅಲ್ಲಿ ಪಕ್ಕದಲ್ಲಿರುವ
ಕಬ್ಬಿನ ಹೊಲವನ್ನು ತೋರಿಸಿ,
ಸದರಿ ಹೋಲ ನಮ್ಮ ಚಿಕ್ಕಪ್ಪನಾದ ಅಮೃತ ತಂದೆ ಶಿವಪ್ಪ ನೀಲಂಗೆ ಇವರ ಹೆಸರಿನಲ್ಲಿದ್ದು, ಸದರಿ
ಹೊಲವನ್ನು ನನ್ನ ಚಿಕ್ಕಪ್ಪನಿಗೆ ವರ್ಷಕ್ಕೆ 50,000/- ರೂ ಹಣ ಕೊಟ್ಟು ನಾನೆ ಬೆಳೆಯನ್ನು ತಗೆದುಕೊಳ್ಳುತ್ತಿರುತ್ತೇನೆ. ಸದರಿ ಹೊಲದಲ್ಲಿ
ಈಗ ಕಬ್ಬು ಇದ್ದು,
ಸದರಿ ಕಬ್ಬಿನ ಹೊಲದಲ್ಲಿಯೂ ಸಹ ಗಾಂಜಾ ಗಿಡಗಳನ್ನು ಬೆಳೆಸಿದ್ದೇನೆ. ಸದರಿ ಗಾಂಜಾ ಗಿಡಗಳು
ಹೂವು &
ಬೀಜಗಳಾದ ಮೇಲೆ ಗಾಂಜಾವನ್ನು ನನ್ನ ಸ್ವಂತ ಲಾಬಕ್ಕಾಗಿ ಮಾಹಾರಾಷ್ಟ್ರದ ಬೇರೆ ಬೇರೆ ಕಡೆಗೆ
ತಗೆದುಕೊಂಡು ಹೋಗಿ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ಆತನನ್ನು ವಶಕ್ಕೆ ಪಡೆದುಕೊಂಡು, ತೋಗರಿ
ಹೊಲದಲ್ಲಿ ಬೆಳೆದ ಸದರಿ ಗಾಂಜಾ ಗಿಡಗಳನ್ನು ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ
ಆರೋಪಿತನಿಂದ ಗಾಂಜಾ ಗಿಡಗಳನ್ನು ಕಾಂಡ ಸಮೇತ ಕಿತ್ತಿಸಲು ಒಟ್ಟು 41 ಗಾಂಜಾ ಗಿಡಗಳಿದ್ದು ನಂತರ
ಆರೋಪಿತನು ತನ್ನ ಚಿಕ್ಕಪ್ಪನ ಹೆಸರಿನಲ್ಲಿರುವ ತಾನು ಉಳುಮೆ ಮಾಡುವ ಕಬ್ಬಿನ ಹೊಲಕ್ಕೆ
ಕರೆದುಕೊಂಡು,
ಹೋಗಿ ಕಬ್ಬಿನ ಹೊಲದಲ್ಲಿ ಸ್ವಲ್ಪ ಸ್ವಲ್ಪ ದೂರದಲ್ಲಿ ಕಾಣದಂತೆ ಇರುವ ಗಾಂಜಾ ಗಿಡಗಳನ್ನು
ತೋರಿಸಿದ್ದು,
ಪತ್ರಾಂಕಿತ ಅಧಿಕಾರಿ ಮತ್ತು ಪಂಚರ ಸಮಕ್ಷಮ ಆರೋಫಿತನಿಂದ ಗಾಂಜಾ ಗಿಡಗಳನ್ನು ಕಿತ್ತಿಸಲು
ಒಟ್ಟು 22 ಗಾಂಜಾ ಗಿಡಗಳು ಇರುತ್ತವೆ. ಎರಡೆರಡು ಗಾಂಜಾ ಗಿಡಗಳ ಒಂದು ಕಟ್ಟನ್ನು ಮಾಡಿ, ಒಟ್ಟು
11 ಕಟ್ಟುಗಳಾಗಿದ್ದು,
ಹೀಗೆ ಒಟ್ಟು 63 ಗಾಂಜಾ ಗಿಡಗಳು ಇದ್ದು, ಸದರಿ ಗಾಂಜಾ ಗಿಡಗಳ ಒಟ್ಟು ತೂಕ 14.572 ಕೆಜಿ ತೂಕ ಇರುತ್ತವೆ. ಸದರಿಯವನ ಹೊಲದಲ್ಲಿನ
ಮೇಟಗಿಯನ್ನು ಮಾನ್ಯ ತಹಸಿಲ್ದಾರರ ಸಮ್ಮುಖದಲ್ಲಿ, ಸದರಿ ಪಂಚರ ಸಮಕ್ಷಮ ಚೆಕ್
ಮಾಡಲಾಗಿ,
ಸದರಿ ಮೆಟಗಿಯ ಮಾಡಿನಲ್ಲಿ ಒಂದು ನಾಡ ಪಿಸ್ತೂಲು ಮತ್ತು ಎರಡು ಜಿವಂತ ಗುಂಡುಗಳು ಸಿಕ್ಕವು, ಸದರಿ
ಜಯನಾಂದನಿಗೆ ಸದರಿ ನಾಡ ಪಿಸ್ತೂಲು ಮತ್ತು ಗುಂಡುಗಳ ಬಗ್ಗೆ ನಾನು ಮತ್ತು ತಹಸಿಲ್ದಾರರು
ವಿಚಾರಿಸಲು,
ಸದರಿ ಪಿಸ್ತೂಲು ನಾಡ ಪಿಸ್ತೂಲು ಇದ್ದು, ಸದರಿ ನಾಡ ಪಿಸ್ತೂಲಿಗೆ ಮತ್ತು ಗುಂಡುಗಳಿಗೆ ಯಾವುದೆ ಪರವಾನಿಗೆ ಇರುವುದಿಲ್ಲ, ಸದರಿ
ನಾಡ ಪಿಸ್ತೂಲನ್ನು ಮತ್ತು ಗುಂಡಗಳನ್ನು ಸುಮಾರು 6-7 ವರ್ಷಗಳ ಹಿಂದೆ ನಮ್ಮ ಸಂಭಂದಿಕನಾದ ರಾಜು
ಆನೂರ ಈತನಿಂದ ಖರಿದಿ ಮಾಡಿರುತ್ತೇನೆ. ನಾನು ಹೊಲದಲ್ಲಿ ಒಬ್ಬನೆ ಇರುತ್ತಿದ್ದರಿಂದ ನನ್ನ ಆತ್ಮ
ರಕ್ಷಣೆಗಾಗಿ ಈ ನಾಡ ಪಿಸ್ತೂಲನ್ನು 30,000/- ರೂ ಹಾಗೂ ಗುಂಡುಗಳಿಗೆ 1000/- ರೂ ಹಣ ಕೊಟ್ಟು ಖರಿದಿ ಮಾಡಿರುತ್ತೇನೆ. ನನಗೆ
ಮಾರಾಟ ಮಾಡಿದ ರಾಜು ಆನೂರ ಈತನು ಈಗಾಗಲೆ ಮೃತ ಪಟ್ಟಿರುತ್ತಾನೆ ಎಂದು ತಿಳಿಸಿದನು. ನಂತರ ನಾಡ
ಪಿಸ್ತೂಲನ್ನು ಮತ್ತು ಎರಡು ಜಿವಂತ ಗುಂಡುಗಳ್ನು ತಹಸಿಲ್ದಾರರು ಸಮ್ಮುಖದಲ್ಲಿ, ಸದರಿ ಸರ್ಕಾರಿ
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮುದ್ದೆ ಮಾಲು ಮತ್ತು ಆರೋಪಿತನನ್ನು ಹಾಜರು ಪಡಿಸಿ ಸದರಿ
ವ್ಯೆಕ್ತಿಯ ಮೇಲೆ ಕಾನೂನು ಕ್ರಮ ಜರೂಗಿಸಲು ಸರಕಾರಿ ತರ್ಪೇಯಾಗಿ ದೂರು ಸಲ್ಲಿಸಿದ್ದು ಸಾರಾಂಶದ
ಮೇಲಿಂದ ಅಫಜಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಕುರಿ (ಆಡು) ಗಳು
ಕಳ್ಳತನ :-
ಮಾಡಬೂಳ ಪೊಲೀಸ
ಠಾಣೆ
ದಿನಾಂಕ 15/09/2020 ರಂದು 12.30 ಪಿ.ಎಮಕ್ಕೆ ಫಿರ್ಯಾದಿ ಶ್ರೀ. ಶಮಶೊದ್ದಿನ ತಂದೆ ಅಬ್ದುಲಸಾಬ ಮುಲ್ಲಾಗೋಳ ಸಾಃ ಗುಂಡಗರ್ತಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 14/09/2020 ರಂದು ಮುಂಜಾನೆ ಎಂದಿನಂತೆ ನಾನು ಆಡುಗಳನ್ನು ಮೇಯಿಸಿಕೊಂಡು ಮನೆಗೆ ಸಾಯಂಕಾಲ ಮನೆಗೆ ಬಂದು, ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಗೆ ಹೊಂದಿಕೊಂಡಿರುವ ಕೊಣೆಯಲ್ಲಿ ಆಡುಗಳನ್ನು ಬಿಟ್ಟು, ಕೊಣೆಯ ಬಾಗಿಲಿಗೆ ಕೀಲಿ ಹಾಕಿಕೊಂಡು ಮನೆಯಲ್ಲಿ ಊಟ ಮಾಡಿ ಮಲಗಿಕೊಂಡಿದ್ದು, ಬೆಳಗಿನ ಜಾವ 3.00 ಗಂಟೆಯ ಸುಮಾರಿಗೆ ನನ್ನ ಹಿರಿಯ ಮಗನಾದ ಮಹಿಬೂಬ ಈತನು ಮೂತ್ರ ವಿಸರ್ಜನೆಗೆಂದು ಎದ್ದಾಗ, ಯಾರೋ ಆತನು ಮಲಗಿದ ಮನೆಯ ಬಾಗಿಲ ಕೊಂಡಿ ಹೊರಗಡೆಯಿಂದ ಹಾಕಿದ್ದರಿಂದ ಇನ್ನೊಂದು ಕೊಣೆಯಲ್ಲಿ ಮಲಗಿದ ನನ್ನ ಕಿರಿಯ ಮಗನಾದ ಖಾಸಿಮ್ ಈತನಿಗೆ ಪೋನ ಮಾಡಿ ಹೊರಗಡೆಯ ಬಾಗಿಲಕೊಂಡಿ ತೆಗೆಯಲು ಹೇಳಿದ್ದರಿಂದ ಆತನು ಬಾಗಿಲು ಕೊಂಡಿ ತೆಗೆದು ನನಗೆ ಎಬ್ಬಿಸಿದ್ದು, ನಂತರ ಸಂಶಯ ಬಂದು ನಾವು ಆಡುಗಳ ಕೊಣೆಯ ಕಡೆಗೆ ಹೊಗಿ ನೋಡಲಾಗಿ ಬಾಗಿಲಿಗೆ ಹಾಕಿದ ಬೀಗ ಇರಲಿಲ್ಲ. ನಂತರ ಒಳಗಡೆ ಹೊಗಿ ನೋಡಲಾಗಿ 20 ಆಡುಗಳು ಇರಲಿಲ್ಲ. ಕೇವಲ ಆಡುಗಳ ಮರಿಗಳು ಇದಿದ್ದವು. ದಿನಾಂಕ 14/09/2020 ರಂದು 8.00 ಪಿ.ಎಮ ದಿಂದ ದಿನಾಂಕ 15/09/2020 ರಂದು 3.00 ಎ.ಎಮದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಆಡುಗಳು ಇದ್ದ ಕೊಣೆಯ ಬಾಗಿಲಕೊಂಡಿ ಮುರಿದು, ಸಣ್ಣ ಮತ್ತು ದೊಡ್ಡ ಆಡುಗಳು ಸೇರಿ ಒಟ್ಟು 20 ಆಡುಗಳು ಅ.ಕಿಃ 1,00,000/-ರೂಪಾಯಿ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಾರಣ ಮಾನ್ಯರವರು ಕಳ್ಳತನವಾದ ನನ್ನ ಆಡುಗಳನ್ನು ಪತ್ತೆ ಮಾಡಿ, ಕಳ್ಳರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೆಕೆಂದು ವಗೈರೆಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮಾಡಬೂಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
No comments:
Post a Comment