POLICE BHAVAN KALABURAGI

POLICE BHAVAN KALABURAGI

27 August 2015

Kalaburagi District Reported Crimes.

ಗ್ರಾಮೀಣ  ಠಾಣೆ : ದಿನಾಂಕ: 27/08/2015 ರಂದು 11-00 ಎಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ಶರಣಪ್ಪ ಹಡಪದ ವಯ: 31 ವರ್ಷ ಜಾತಿ: ಹಡಪದ ಉ: ಕ್ಷೌರಿಕ ಕೆಲಸ ಸಾ: ಹಸರಗುಂಡಗಿ ತಾ: ಅಫಜಲಪೂರ ಹಾ:ವ: ಕಮಲನಗರ ಸುಲ್ತಾನಪೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅರ್ಜಿ ಏನೆಂದರೆ, ನಾನು ಈಗ್ಗೆ 15 ವರ್ಷಗಳಿಂದ ಕಮಲನಗರದಲ್ಲಿ ಹೆಂಡತಿ ಮಗನೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಈಗ್ಗೆ 6 ತಿಂಗಳಿಂದ ಕಮಲನಗರದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು  ದಿನಾಂಕ: 26/08/2015 ರಂದು ನಾನು ಎಂದಿನಂತೆ ಕೆಲಸ ಮುಗಿಸಿಕೊಂಡು ನಮ್ಮ ಅಣ್ಣನ ಮಗ ಅಂಬ್ರೇಶನೊಂದಿಗೆ ರಾತ್ರಿ 10-00 ಗಂಟೆಗೆ ಕಮಲನಗರದಲ್ಲಿರುವ ನಮ್ಮ ಮನೆಗೆ ಬಂದು ನನ್ನ ಹೆಂಡತಿಯೊಂದಿಗೆ ಊಟ ಮುಗಿಸಿಕೊಂಡು ನಾವೆಲ್ಲರೂ ನಮ್ಮ ಮನೆಯ ಎರಡೂ  ಬಾಗಿಲ ಕೀಲಿ ಹಾಕಿಕೊಂಡು ಮಾಳಿಗೆ ಮೇಲೆ ಹೋಗಿ ಮಲಗಿಕೊಂಡೆವು. ನಂತರ ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ಸುಮಾರಿಗೆ ಮಾಳಿಗೆ ಮೇಲಿಂದ ಎದ್ದು ನಾನು ನನ್ನ ಹೆಂಡತಿ ಕೆಳಗೆ ಬಂದು ಒಂದು ಕೋಣೆಯಲ್ಲಿ ಮಲಗಿಕೊಂಡೆವು. ನಂತರ ಎಂದಿನಂತೆ ಬೆಳಿಗ್ಗೆ 6-00 ಗಂಟೆ   ಸುಮಾರಿಗೆ ಎದ್ದು ಬಾಗಿಲು ತೆರೆಯಲು ಬಾಗಿಲು ತೆರೆಯಲಿಲ್ಲ. ಯಾರೋ ಹೊರಗಡೆಯಿಂದ ಬಾಗಿಲ ಕೊಂಡಿ ಹಾಕಿದ್ದು ನಾನು ಅಂಬ್ರೇಶನಿಗೆ ಫೋನ ಮಾಡಿ ಬಾಗಿಲು ತೆಗೆಯಲು ಹೇಳಿದಾಗ ಅಂಬ್ರೇಶನು ಮಾಳಿಗೆ ಮೇಲಿಂದ ಕೆಳಗೆ ಇಳಿದು ಬಂದು ನಾವಿದ್ದ ರೂಮನ ಬಾಗಿಲು ತೆರೆದನು. ನಾನು ಹೊರಗೆ ಬಂದು ನೋಡಲು  ನಮ್ಮ ಮನೆಯ ಇನ್ನೊಂದು  ಕೋಣೆಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಬಾಗಿಲು ಅರ್ಧ ತೆರೆದಿರುವುದನ್ನು ನೋಡಿ ನಾನು ನನ್ನ ಹೆಂಡತಿ ಮತ್ತು ಅಂಬ್ರೇಶ ಗಾಬರಿಯಿಂದ ಒಳಗೆ ಹೋಗಿ ನೋಡಲು ಅಲಮಾರಾದ ಬಾಗಿಲು ತೆರೆದಿದ್ದು ಅಲಮಾರಾದ ಒಳಗಡೆ ಲಾಕರ್ ಮುರಿದಿದ್ದು ಅಲಮಾರಾದಲ್ಲಿಟ್ಟ ಸಾಮಾನುಗಳೆಲ್ಲ ಹೊರಗಡೆ ಬಿದ್ದಿದ್ದು ಕಂಡು ನಾವು ಗಾಬರಿಯಿಂದ ಅಲಮಾರಾದಲ್ಲಿಟ್ಟಿದ್ದ ನಮ್ಮ ಮದುವೆ ಸಮಯದಲ್ಲಿ 2005ರಲ್ಲಿ ಖರೀದಿಸಿದ್ದ ಹಳೆಯ 1) 10 ಗ್ರಾಂ ಬಂಗಾರದ ಲಾಕೇಟ ಅ.ಕಿ= 10000/-ರೂ 2) 10 ಗ್ರಾಂ ಬಂಗಾರದ 2ತಾಳಿ ಮತ್ತು ಅಷ್ಟಪುಲಿ ಗುಂಡುಗಳು ಅ.ಕಿ= 10000/-ರೂ ಹಾಗೂ 3) 5 ಗ್ರಾಂ ಬಂಗಾರದ ಕಿವಿಯ ಜುಮಕಿ ಬೆಂಡೋಲೆ ಅ.ಕಿ= 4500/- ರೂ ಹೀಗೆ ಒಟ್ಟು 24500/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 27/08/2015 ರಂದು ರಾತ್ರಿ 1-00 ಎಎಮ್ ದಿಂದ ಬೆಳಿಗ್ಗೆ 6-00 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಬಾಗಿಲ ಕೊಂಡಿ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ನಮ್ಮ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸು ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಫಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಗೈರೆ ಅರ್ಜಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.
ಹೆಚ್ಚುವರಿ ಸಂಚಾರಿ ಠಾಣೆ: ದಿನಾಂಕ 27-08-2015 ರಂದು ಮದ್ಯಾಹ್ನ 12-00 ಗಂಟೆಗೆ ಗುರುರಾಜ ತಂದೆ ಶರಣಬಸಪ್ಪಾ ಬಿರಾದಾರ ಇತನು  ಮೋಟಾರ ಸೈಕಲ ನಂ ಕೆಎ32/ಇಬಿ-1761 ನೇದ್ದನ್ನು ಮುಕ್ತಾಂಬಿಕ ಕಾಲೇಜ ಕಡೆಯಿಂದ ಗೋವಾ ಹೋಟೆಲ ಕ್ರಾಸ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ ಲಾಲಗೇರಿ ಕ್ರಾಸ ಮತ್ತು ಗೋವಾ  ಹೋಟೆಲ ಕ್ರಾಸ  ಮುಖ್ಯ ರಸ್ತೆ ಮೇಲೆ ಬರುವ  ಅರಬ ಮಜೀದ್ ಸಮೀಪ್ ಬರುವ ಪ್ರತಿಭಾ  ಡಿಜಿಟಲ್ ಸ್ಟೂಡಿಯೋ ಎದುರು ರೋಡ ಮೇಲೆ ಒಮ್ಮೇಲೆ ಬ್ರೇಕ್ ಹಾಕಿ ಮೋಟಾರ ಸೈಕಲ ಸ್ಕೀಡ ಮಾಡಿ ತನ್ನಿಂದತಾನೆ ಬಿದ್ದು ತೆಲೆಗೆ ಭಾರಿ ಗುಪ್ತ ಪೆಟ್ಟು ಮತ್ತು ಮೈಯಲ್ಲ ಒಳಪೆಟ್ಟು ಹೊಂದಿ  108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಧಾರಿ ಮದ್ಯ ಮದ್ಯಹ್ನ 12-00 ಗಂಟೆಯಿಂದ 12-35 ಗಂಟೆಯ ಅವದಿಯ ಮದ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ  ಅಂತಾ ಪ್ರಕಾರ ಪ್ರಕರಣ ಧಾಖಲಾಗಿರುತ್ದೆ.

ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ 27.08.2015 ರಂದು 08:30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ 26.08.2015 ಸಾಯಂಕಾಲ 07:45 ಗಂಟೆಯ ಸುಮಾರಿಗೆ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ರಸ್ತೆಯ ಮೇಲೆ ಯಾವುದೋ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು 45 ರಿಂದ 50 ವಯಸ್ಸಿನ ಅಪರಿಚತ ಮಹಿಳೆಗೆ ಡಿಕ್ಕಿ ಪಡಿಸಿ ತನ್ನ ವಾಹನದೊಂದಿಗೆ ಓಡಿ ಹೋಗಿದ್ದು ಸದರಿ ಅಪಘಾತದಿಂದ ಅಪರಿಚಿತ ಮಹಿಳೆಯ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಸದರಿ ಅಪರಿಚಿತ ಮಹಿಳೆಯು ದಿನಾಂಕ 26.08.15 ರಂದು ರಾತ್ರಿ 09:20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕಾರಣ ಸದರಿ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಾಗಿರುತ್ದೆ. 

No comments: