ಸೇಡಂ ಠಾಣೆ : ದಿನಾಂಕ:28-08-2015 ರಂದು 1700 ಗಂಟೆಗೆ, ತೆಲ್ಕೂರ ಗ್ರಾಮ ಪಂಚಾಯತ ಪಿ.ಡಿ.ಓ ರವರಾದ ಶ್ರೀ.
ಸುಮಿತ್ರಪ್ಪ ತಂದೆ ಬಸವರಾಜ ಲಿಂಗೇರಿ ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ
ಅರ್ಜಿ ತಂದು ಹಾಜರುಪಡಿಸಿದ್ದು ಸಾರಂಶವೇನೆಂದರೆ, ಇಂದು
ದಿ:28-08-2015 ರಂದು ಬೆಳಗ್ಗೆ ನನಗೆ ಮಾನ್ಯ ತಹಸಿಲ್ದಾರ ಸಾಹೇಬರು ಸೇಡಂ ರವರು ಫೋನ ಮೂಲಕ
ಮಾಹಿತಿ ತಿಳಿಸಿದ್ದೇನೆಂದರೆ,
ನಾನು ತೆಲ್ಕೂರ
ಗ್ರಾಮದ ಸೀಮಾಂತರದಲ್ಲಿ ಮತ್ತು ಹಾಬಾಳ (ಟಿ) ಏರಿಯಾದಲ್ಲಿ ಬರುವ ಕಲ್ಲು ಖಣಿಯಲ್ಲಿ ದುರ್ನಾತ
ಎದ್ದಿದ್ದು ಯಾರೋ ಯಾವುದೊ ಒಂದು ರಸಾಯನ ವಸ್ತು ಚೆಲ್ಲಿ ಹೋಗಿದ್ದು ಹಾಗೂ ರೋಡಿನ ಮೇಲೆ ಸಹಾ
ಬಿದ್ದಿದ್ದರಿಂದ ಏರಿಯಾದಲ್ಲಿ ದುರ್ನಾತ ಎದ್ದಿದ್ದು, ಯಾರೋ
ಉದ್ದೇಶ ಪೂರ್ವಕವಾಗಿ ಈ ರೀತಿ ರಸಾಯನ ವಸ್ತುವನ್ನು ಚೆಲ್ಲಿಹೋಗಿರುತ್ತಾರೆ ಅಂತ ಸಾರ್ವಜನಿಕರು
ತಿಳಿಸಿರುತ್ತಾರೆ ಅಂತ ತಿಳಿಸಿ ನನಗೆ ಸ್ಥಳಕ್ಕೆ ಬರಲು ಸೂಚಿಸಿದ್ದರ ಮೇರೆಗೆ ನಾನು ಸಹಾ ಹಾಬಾಳ
(ಟಿ) ಏರಿಯಾದಲ್ಲಿದ್ದ ಕಲ್ಲು ಖಣಿಗಳ ಸ್ಥಳಕ್ಕೆ ಬಂದಾಗ ಮಾನ್ಯ ತಹಸಿಲ್ದಾರ ಸಾಹೇಬರು ಸಹಾ ಹಾಜರಿದ್ದು
ನಾವೆಲ್ಲರೂ ಅಲ್ಲಿ ಹೋಗಿ ನೋಡಲಾಗಿ ಅದು ಹಾಬಾಳ (ಟಿ) ಗ್ರಾಮದ, ಶ್ರೀ. ನಾಗೇಂದ್ರಪ್ಪ ಪೂಜಾರಿ ಇವರಿಗೆ ಸಂಭಂದಿಸಿದ
ಕಲ್ಲು ಖಣಿಯಾಗಿದ್ದು ಅಲ್ಲಿ ಪೂರ್ತಿ ದುರ್ನಾತ ಎದ್ದಿದ್ದು ಕೆಲವು ಚೀಲಗಳಲ್ಲಿ ಕಪ್ಪುಬಣ್ಣದ
ಹಾಗೂ ಬಿಳಿ ಪೌಡರನಂತಿದ್ದ ರಾಸಾಯನಿಕ ವಸ್ತು ಬಿದ್ದಿದ್ದು ಮತ್ತು ಇನ್ನುಳಿದ ರಾಸಾಯನಿಕ ವಸ್ತುಗಳನ್ನು
ಕಲ್ಲು ಖಣಿಗಳಲ್ಲಿ ಹಾಕಿ ಮುಚ್ಚಿರುತ್ತಾರೆ. ಏರಿಯಾ ತುಂಬಾ ದುರ್ನಾತ ಎದ್ದು ಜನರು ಹಾಗೂ ಪ್ರಾಣಿ
ಪಕ್ಷಿಗಳು ಅನಾರೋಗ್ಯವಾಗುವಂತಹ ವಾತಾವರಣ ನಿರ್ಮಾಣವಾಗಿದ್ದು ಮತ್ತು ಸದರಿ ದುರ್ನಾತದಿಂದ ಜನರು
ಮತ್ತು ಪ್ರಾಣಿ ಪಕ್ಷಿಗಳಿಗೆ ಪ್ರಾಣ ಹಾನಿ ಆಗುವ ಸಂಭವ ಇರುತ್ತದೆ. ಸದರಿ ಕಲ್ಲು ಖಣಿಯಲ್ಲಿ ಒಂದು
ಜೀಪ ನಂ-KA28M1773 ನೇದ್ದು ಸಹಾ ಬಿಟ್ಟು ಹೋಗಿರುತ್ತಾರೆ. ಈ
ಘಟನೆಯನ್ನು ಯಾರೊ ದುರುದ್ದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಚೆಲ್ಲಿ ಖಣಿಯಲ್ಲಿ
ಮುಚ್ಚಿ ಹೋಗಿರುತ್ತಾರೆ. ಸದರಿ ಘಟನೆಯು ದಿನಾಂಕ:26-08-2015 ರಿಂದ 27-08-2015 ರ ರಾತ್ರಿ
ವೇಳೆಯಲ್ಲಿ ಜರುಗಿದ್ದು ಇರುತ್ತದೆ. ಕಾರಣ ಈ ಘಟನೆಗೆ ಕಾರಣೀಕರ್ತರಾದವರ ವಿರುದ್ಧ ಕಾನೂನು
ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment