ಕಮಲಾಪೂರ ಠಾಣೆ : ದಿನಾಂಕ
29-08-2015 ರಂದು
ಬೆಳಗ್ಗೆ 0745 ಗಂಟೆಗೆ
ಹುಮನಾಬಾದ ಸಂಚಾರಿ ಪೊಲೀಸ ಠಾಣೆಯಿಂದ ಆರ್.ಟಿ.ಐ ಎಮ್.ಎಲ್.ಸಿ ವಸೂಲಾದ ಪ್ರಯುಕ್ತ ಹುಮನಾಬಾದ ಸರ್ಕಾರಿ
ಆಸ್ಪತ್ರೆಗೆ ಭೇಟ್ಟಿಕೊಟ್ಟಾಗ ಶ್ರೀನಿವಾಸ ತಂದೆ
ಪ್ರಕಾಶ ದಾಡಗಿ ವಯ 32 ವರ್ಷ ಜಾ; ಮಾದಿಗಾ
ಉ; ಕೂಲಿಕೆಲಸ
ಸಾ; ಯರಭಾಗ
ತಾ; ಬಸವಕಲ್ಯಾಣ
ಜಿ; ಬೀದರ
ಇವರು ಹೇಳಿಕೆ ಬರೆಯಿಸಿದ ಹೇಳಿಕೆ ಸಾರಾಂಶವೆನೆಂದರೆ, ದಿನಾಂಕ
28-08-2015 ರಂದು
ಬೆಳಗ್ಗೆ 11-00 ಗಂಟೆ
ಸುಮಾರಿಗೆ ನನ್ನ ತಮ್ಮನಾದ ಪ್ರದೀಪ ತಂದೆ ಪ್ರಕಾಶ ದಾಡಗಿ ವಯ 26 ವರ್ಷ
ಈತನು ಮತ್ತು ಆತನ ಗೆಳೆಯನಾದ ಲೋಕೇಶ ತಂದೆ ರಾಜಪ್ಪ @ ರಾಜಕುಮಾರ
ವಯ 22 ವರ್ಷ
ಇಬ್ಬರು ಕೂಡಿಕೊಂಡು ಲೋಕೇಶನ ಹಿರೋ ಹೊಂಡಾ ಸ್ಪೇಂಡರ್ ಮೋಟಾರ ಸೈಕಲ್ ನಂ ಕೆಎ-56-ಇ-5743 ನೇದ್ದನು
ತೆಗೆದುಕೊಂಡು ಲೋಕೇಶನು ಮೋಟಾರ ಸೈಕಲ್ ನಡೆಸಿಕೊಂಡು ಕಲಬುರಗಿಯಲ್ಲಿರುವ ನಮ್ಮ ಸೋದರೆ
ಅತ್ತೆಯನ್ನು ಭೇಟ್ಟಿಯಾಗಿ ಬರಲು ಹೋಗಿ ರಾತ್ರಿ ಅಂದಾಜು 8 ಪಿ.ಎಮ್
ಕ್ಕೆ ವಾಪಾಸ ಯರಭಾಗಕ್ಕೆ ಬರುವಾಗ ಕಿಣ್ಣಿಸಡಕ್ ಗ್ರಾಮ ಇನ್ನು ಮುಂದೆ ಇದ್ದಾಗ ಜಿಲ್ಲಾ ಮುಬರಾಕ್
ಬೋರ್ಡ ಹತ್ತಿರ ಎದುರಗಡೆಯಿಂದ ಬಜಾಜ್ ಪಲ್ಸಾರ್ ಮೋಟಾರ ಸೈಕಲ್ ಕೆಎ-39-ಎಲ್-2511 ನೇದ್ದರ
ಚಾಲಕನಾದ ಸೂರ್ಯಕಾಂತ ತಂದೆ ರಾಮಣ್ಣ ಸಾ; ಜಹೀರಪೇಟ್
ಹುಮನಾಬಾದ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ನನ್ನ
ತಮ್ಮನು ಕುಳಿತು ಬರುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ನನ್ನ
ತಮ್ಮ ಪ್ರದೀಪನಿಗೆ ತೆಲೆಗೆ ಮತ್ತು ಇತರ ಕಡೆಗೆ ಭಾರಿಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದು , ಇನ್ನುಳಿದವರಿಗೆ
ಅಲ್ಲಲಿ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಮುಂದಿನ
ಕಾನೂನು ಕ್ರಮ ಜರುಗಿಸಿರಿ ಅಂತ ವಗೈರೆ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಇಂದೆ ಮುಂಜಾನೆ 0945 ಗಂಟೆಗೆ
ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ಸಾರಾಂಶದ ಪ್ರಕಾರ ಪ್ರಕರಣ ದಾಖಲಗಿರುತ್ತದೆ.
No comments:
Post a Comment