ಕಳವು ಪ್ರಕರಣ:
ಅಶೋಕ ನರ ಪೊಲೀಸ್ ಠಾಣೆ : ದಿನಾಂಕ 12/10/2015 ರಂದು ಶ್ರೀ.
ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಶ್ರೀಗಿರಿ ಸಾ: ಅರಳಗುಂಡಗಿ ರವರು ಠಾಣೆಗೆ ಹಾಜರಾಗಿ ತಾನು
ಮತ್ತು ತನ್ನ ಪತ್ನಿ ಕಲ್ಪನಾ ಅವರ ಜೊತೆ ಕಲಬುರಗಿ –ಬಿಜಾಪೂರ ಬಸ್ಸಿನಲ್ಲಿ
ತನ್ನ ಸ್ವಂತ ಊರಿಗೆ ಹೋಗುವ ಕುರಿತು ಕೇಂದ್ರ ಬಸ ನಿಲ್ದಾಣದಲ್ಲಿ ಬಸ್ ನಲ್ಲಿ ಕುಳಿತಿದ್ದಾಗ ನಾಲ್ಕು
ಜನ ಮಹಿಳೆಯರು ಬಸ ಹತ್ತಿ ತಮ್ಮ ಸೀಟಿನ ಪಕ್ಕದಲ್ಲಿ ಕುಳಿತು ನಂತರ ಸ್ವಲ್ಪ ಸಮಯದ ನಂತರ ಇಳಿದು
ಹೋಗಿದ್ದು. ನಂತರ ನಾವು ನೇದಲಗಿ ಗ್ರಾಮದಲ್ಲಿ ಇಳಿದು ನೊಡಿದಾಗ ನಮ್ಮ ಬ್ಯಾಗ ನೋಡಲಾಗಿ ಬ್ಯಾಗಿನ
ಚೈನ ತೆರೆದಿರುವುದು ಕಂಡು ಬಂದಾಗ ನೋಡಲಾಗಿ ಬ್ಯಾಗಿನಲ್ಲಿದ್ದ 10 ಗ್ರಾಮ ಲಾಕೇಟ, 40 ಗ್ರಾಮ ಪಾಟ್ಲಿ, 40
ಗ್ರಾಂ ತಾಳಿ ಚೈನ ಒಟ್ಟು ಮೌಲ್ಯ 1,80,000/- ರೂ ಇದ್ದ ಚಿನ್ನದ ಆಭರಣದ ಡಬ್ಬಿ
ಸಮೇತ ಕಳುವಾಗಿದ್ದು. ತಾವು ಕಳುವಾದ ತಮ್ಮ ಆಭರ ಪತ್ತೆ ಹಚ್ಚಿ ಕೊಡುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಎಮ್.ಬಿ.ನಗರ ಪೊಲೀಸ್
ಠಾಣೆ : ದಿನಾಂಕಃ 12/10/2015 ರಂದು ಶ್ರೀ ಎಚ್. ಸಾಯಿ
ಧರ್ಮೇಂದ್ರ ತಂದೆ ಎಚ್. ರವೀಂದ್ರ ಹಮೀಲಪೂರಕರ್ ಸಾಃ ಗುಬ್ಬಿ ಕಾಲೋನಿ ಸೇಡಂ ಇವರು ಠಾಣೆಗೆ ಹಾಜರಾಗಿ
ತಾವು ಆರ್.ಟಿ.ಓ ಆಫೀಸ್ ನಲ್ಲಿ ಪ್ರಥಮ ದರ್ಜೆ ಸಹಾಯಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ತಾನು ದಿನಾಂಕಃ
09/10/2015 ರಂದು 10:00 ಎ.ಎಂ. ಕ್ಕೆ ಎಂದಿನಂತೆ ಆರ್.ಟಿ.ಓ ಕಛೇರಿಯಲ್ಲಿ ತನ್ನ ಕರ್ತವ್ಯ
ಮಾಡುತ್ತಿರುವಾಗ ಅದೇ ಆರ್.ಟಿ.ಓ ಕಛೇರಿಯಲ್ಲಿ ಏಜೆಂಟ್ ಅಂತಾ ಕೆಲಸ ಮಾಡುತ್ತಿರುವ 1) ಶ್ರೀನಿವಾಸ
ಶೆಟಗಾರ 2) ಮಂಜುನಾಥ ಶೆಟಗಾರ ಹಾಗು 3) ಉಮೇಶ್ ಸಂಗೋಳ್ಗಿ ಈವರು ಬಂದು ತನಗೆ ಶ್ರೀನಿವಾಸ ಶೆಟಗಾರ
ಈತನು ಸ್ವಲ್ಪ ಜಲ್ದಿ ಫೈಲ್ ಪುಟಪ್ ಮಾಡುವ ಸಂಬಂಧ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಮಗನೆ ಮಾಡು
ಮಾಡಿಕೊಡು ಇಲ್ಲ ಅಂದರೆ ನೂಡು ಅಂತಾ ಅಂದವನೇ ಟೇಬಲ್ ಮೇಲಿದ್ದ ಫೈಲ್ ಬಂಡಲ್ಲ ಎತ್ತಿ ಬಿಸಾಡುತ್ತಾ
ನೀವು ದಲಿತರದು ಬಹಳ ಆಗ್ಯಾದ ನಿಮಗೆ ನೌಕರಿ ಕೊಟ್ಟಿದ್ದೇ ತಪ್ಪು ಎಂದು ಜಾತಿ ನಿಂದನೆ ಮಾಡಿ
ಅವಾಚ್ಯ ಶಬ್ದಗಳಿಂದ ಹಾಗು ಕೈಯಿಂದ ಕಪಾಳಕ್ಕೆ ಹಾಗು ಬೆನ್ನಿಗೆ ಹೊಡೆಯುತ್ತಿರುವಾಗ ಶ್ರೀ ನರಸಪ್ಪ
ಒಡಿಯಾಳ ಕಛೇರಿಯ ಅಧೀಕ್ಷಕರು ಮತ್ತು ಯಲ್ಲಪ್ಪ ಪಿವುನ್ ಇವರು ಬಿಡಿಸಿರುತ್ತಾರೆ. ನಂತರ
ಅಷ್ಟರಲ್ಲಿ ಸಿದ್ದು ಸಂಗೋಳ್ಗಿ ಈತನು ಆರ್.ಟಿ.ಓ ಆಫೀಸಿನ ಚೇಂಬರನಲ್ಲಿ ಬಂದು ಲೇ ಮಗನೆ ನಿನ್ನ
ಬಹಳ ಆಯಿತು. ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ
ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ನನಗೆ ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು
ಕ್ರಮ ಜರುಗಿಸಬೇಕು ಹಾಗು ಈ ಘಟನೆ ನಂತರ ಮಾನಸಿಕವಾಗಿ ನೊಂದಿದ್ದು ನನಗೆ ಗೆಳೆಯರು ಮತ್ತು ನನ್ನ
ಸಮಾಜದವರು ಬಂದು ಈ ಘಟನೆಯ ಬಗ್ಗೆ ವಿಚಾರಿಸಿ ಇಂದು ತಡಮಾಡಿ ದೂರು ಸಲ್ಲಿಸಿರುತ್ತೇನೆ ಅಂತಾ
ವಗೈರೆಯಾಗಿ ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ:12/10/2015
ರಂದು ಶ್ರೀಮತಿ.ವಿಜಯಲಕ್ಷ್ಮಿ ಗಂಡ ಅಶೋಕ ಕಾಳೆ ಸಾ: ಕಣಮಸ ಇವರು ಠಾಣೆಗೆ ಹಾಜರಾಗಿ ತಾನ ಕಣಮುಸ ಗ್ರಾಮದಲ್ಲಿ ತನ್ನ ಪತಿ
ಮತ್ತು 03 ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನೊಂದಿಗೆ ವಾಸವಿದ್ದು ತಡಕಲ ಗ್ರಾಮದ ಸೀಮಾಂತರದಲ್ಲಿ ನಮಗೆ
ಒಟ್ಟು 11 ಎಕರೆ ಜಮೀನು ಇದ್ದು ನನ್ನ ಹೆಸರಿನಲ್ಲಿ
03 ಎಕರೆ ನನ್ನ ಗಂಡನ ಹೆಸರಿನಲ್ಲಿ 03 ಎಕರೆ ಮತ್ತು ನಮ್ಮ
ಅತ್ತೆಯವರ ಹೆಸರಿನಲ್ಲಿ
05 ಎಕರೆ ಜಮೀನು ಇದ್ದು ಎಲ್ಲರೂ ಒಟ್ಟಿಗೆ ಇರುತ್ತೆವೆ.ಕೃಷಿ ಕೆಲಸಕ್ಕಾಗಿ ಪ್ರ.ಕೃ.ಗ್ರಾಮೀಣ ಬ್ಯಾಂಕ ತಡಕಲದಲ್ಲಿ 4,00,000/- ರೂ ಹಾಗೂ ಸ.ಕೃ.ಪ.ಬ್ಯಾಂಕ ತಡಕಲದಲ್ಲಿ 25,000/-
ಹೀಗೆ ಒಟ್ಟು ಬ್ಯಾಂಕಿನಿಂದ 4,25,000/-ರೂ ಹೊಲದ ಮೇಲೆ ಸಾಲ ಪಡೆದಿದ್ದು ಇರುತ್ತದೆ. ಅಲ್ಲದೆ ನನ್ನ ಮಗಳ ಮದುವೆ ಸಂಬಂಧ ಮತ್ತು ನನ್ನ ಮಗನ ವಿದ್ಯಾಭ್ಯಾಸದ ಸಲುವಾಗಿ ಹಾಗೂ ಹೊಲದಲ್ಲಿ ಬಾವಿ ತೊಡುವ ಸಲುವಾಗಿ ಗ್ರಾಮದಲ್ಲಿ ಕೈಗಡವಾಗಿ ನನ್ನ ಪತಿ
ಸಾಲವಾಗಿ ಹಣ ಪಡೆದಿದ್ದು ಪಡೆದ ಸಾಲವನ್ನು ಹೇಗೆ ತಿರಿಸಬೇಕೆಂದು ವಿಚಾರಿಸುತ್ತಾ ಮನೆಯಲ್ಲಿ ನನ್ನೊಂದಿಗೆ ದಿನಾಲು ವಿಚಾರಮಾಡುತ್ತಾ ಕುಳಿತುಕೊಳ್ಳುತ್ತಿದ್ದರು ನಾನು ಸುಮಾರು ಬಾರಿ
ಹೇಗಾದರೂ ಮಾಡಿ ತಿರಿಸೋಣ ಅಂತಾ ಸಮಜಾಯಿಸುತ್ತಾ ಬಂದಿರುತ್ತೆನೆ.
ಹೀಗಿದ್ದು ದಿನಾಂಕ:
11-10-2015 ರಂದು ರಾತ್ರಿ 10:00 ಗಂಟೆ ಸುಮಾರಿಗೆ
ಎಂದಿನಂತೆ ಎಲ್ಲರೂ ಊಟ ಮಾಡಿಕೊಂಡು ನಾನು ನನ್ನ ಮಕ್ಕಳೊಂದಿಗೆ ಪ್ಲಾಟಿನಲ್ಲಿರುವ ಒಂದು ಪತ್ರಾ ಸೆಡ್ಡಿನಲ್ಲಿ
ಮಲಗಿಕೊಳುವಾಗ ನನ್ನ ಗಂಡನು ನಾನು ಪಕ್ಕದ ದನ
ಕಟ್ಟುವ ಪತ್ರಾ ಸೆಡ್ಡಿನಲ್ಲಿ ಮಲಗುತ್ತೆನೆ ಅಂತಾ ಹೇಳಿ ಹೊದನು. ನಂತರ ನಾವು ಮಲಗಿಕೊಂಡು
ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಎದ್ದು ನನ್ನ ಗಂಡನಿಗೆ ಎಬ್ಬಿಸಲು
ಹೋದಾಗ ಆ ಪತ್ರ ಸೆಡ್ಡಿಗೆ ಒಳಗಡೆ ಕಬ್ಬಿಣದ ಪಟ್ಟಿಗೆ ಉರಲು ಹಾಕಿಕೊಂಡಿರುತ್ತಾರೆ.
ಕಾರಣ ನನ್ನ ಗಂಡನು ಗ್ರಾಮೀಣ ಬ್ಯಾಂಕಿನಿಂದ ಪಡೆದ ಸಾಲ ಹಾಗೂ ಕೈಗಡವಾಗಿ ತಗೆದುಕೊಂಡ ಹಣ
ತಿರಿಸಲಾಗದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಸಾಲ ಬಾಧೆ ತಾಳಲಾರದೆ ದಿ:11-10-2015
ರಂದು ರಾತ್ರಿ 11:00 ಗಂಟೆಯಿಂದ ದಿ:12-10-2015 ರಂದು ಬೆಳಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ದನ ಕಟ್ಟುವ ಪತ್ರ ಶೆಡ್ಡಿನ
ಕಬ್ಬಿಣದ ಪಟ್ಟಿಗೆ ಉರಲು ಹಾಕಿಕೊಂಡು ಮೃತ ಪಟ್ಟಿದ್ದು. ಸರಕಾರದಿಂದ ಪರಿಹಾರ ಧನ ಒದಗಿಸಿಕೊಡುವಂತೆ
ಮತ್ತು ಮುಂದಿನ ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆತ್ಮ ಹತ್ಯೆ ಪ್ರಕರಣ:
ಆಳಂದ ಪೊಲೀಸ್ ಠಾಣೆ: ದಿನಾಂಕ: 12/10/2015
ರಂದು ಜಗದೇವಿ ಗಂಡ ವಿಶ್ವನಾಥ ಸುತ್ತಾರ ಸಾ:ಸಾವಳೇಶ್ವರ ಇವರು ಹೇಳಿಕೆ ಫಿರ್ಯಾದಿ
ಸಲ್ಲಿಸಿದ್ದೇನೆಂದರೆ ನನಗೆ 3 ಜನ ಮಕ್ಕಳಿದ್ದು 1) ಸರಸ್ವತಿ 2) ಸಿದ್ದಾರಾಮ 3) ಶಿವಪುತ್ರ ಹೀಗೆ
03 ಜನ ಮಕ್ಕಳಿದ್ದು ಸರಸ್ವತಿ ಇವಳಿಗೆ ಮದುವೆ ಮಾಡಿ ಕೊಟ್ಟಿದ್ದು ಇಬ್ಬರು ಮಕ್ಕಳು ಗಂಡನೊಂದಿಗೆ
ಒಕ್ಕಲುತನ ಮಾಡಿಕೊಂಡು ಉಪಜೀವಿಸುತ್ತೆವೆ. ನನ್ನ ಗಂಡನ ಹೆಸರಿನಲ್ಲಿ ಸಾವಳೇಶ್ವರ ಸೀಮಾಂತರದಲ್ಲಿ
18 ಎಕರೆ ಹೊಲ ಇದ್ದು ಸದರಿ ಹೊಲದ ಮೇಲೆ ಕೃಷ್ಣಾ ಗ್ರಾಮೀಣ ಬ್ಯಾಂಕ ಸರಸಂಬಾದಲ್ಲಿ 01 ಲಕ್ಷ
ರೂಪಾಯಿ ಬ್ಯಾಂಕಿನಿಂದ ಸಾಲ ಪಡೆದಿದ್ದು ಮತ್ತು ಒಕ್ಕಲುತನಕ್ಕಾಗಿ ಹಾಗೂ ನನ್ನ ಹಿರಿಯ ಮಗಳ
ಮದುವೆಗೊಸ್ಕರ ಖಾಸಗಿಯಾಗಿ ಸಾಲ ಪಡೆದಿದ್ದು ಇರುತ್ತದೆ. ಇದರಿಂದ ನನ್ನ ಮಗ ಸಿದ್ದಾರಾಮನು
ಮನೆಯಲ್ಲಿ ಆಗ್ಗಾಗ ಈ ಬಾರಿ ಮಳೆ ಬರದಿದ್ದರಿಂದ ಹೊಲದಲ್ಲಿ ಯಾವುದೇ ಬೆಳೆ ಇಲ್ಲ ಯಾವ ರೀತಿಯಾಗಿ
ಸಾಲ ತೀರಿಸಬೇಕಂತ ಆಗಾಗ ಒಬ್ಬಂಟಿಗನಾಗಿ ಕುಳಿತು ವಿಚಾರಿಸುತ್ತಿದ್ದನು.
ಹೀಗಿದ್ದು ಇಂದು ದಿನಾಂಕ: 12/10/2015 ರಂದು 11:00 ಎ.ಎಂ.ಕ್ಕೆ ನಾವೆಲ್ಲರೂ ದಸರಾ
ಹಬ್ಬದ ಬಟ್ಟೆ ತೊಳೆಯಲು ಎಲ್ಲರೂ ಹೋದಾಗ ಮನೆಯಲ್ಲಿ ಸಿದ್ದಾರಾಮ ಒಬ್ಬನೆ ಇದ್ದನು. ನಂತರ 12:30
ಗಂಟೆ ಸುಮಾರಿಗೆ ನಾವು ಮನೆಗೆ ಬಂದು ನೋಡಲಾಗಿ ನನ್ನ ಮಗ ಸಿದ್ದಾರಾಮನು ಕಸವಿಸಿಯಿಂದ ಹೊರಳಾಡುತ್ತಿರುವುದನ್ನು
ಕಂಡು ಗಾಬರಿಗೊಂಡು ನೋಡಲಾಗಿ ಅವನು ನಾವು ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಮನೆಯಲ್ಲಿದ್ದ “ರೋಗರ” ಎಣ್ಣಿ (ವಿಷ) ಕುಡಿದು ಹೊದ್ದಾಡುತ್ತಿರುವುದನ್ನು ಕಂಡು
ಖಾಸಗಿ ವಾಹನದಲ್ಲಿ ಆಳಂದ ಸರ್ಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ಹೆಚ್ಚಿನ
ಉಪಚಾರಕ್ಕಾಗಿ ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಬಂದಾಗ ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆಯಲ್ಲಿ
ಮೃತಪಟ್ಟಿರುತ್ತಾನೆ.
ಕಾರಣ ನನ್ನ ಮಗ ಹೊಲದ ಮೇಲೆ ಪಡೆದ 01 ಲಕ್ಷ ರೂಪಾಯಿ ಹಾಗೂ ಖಾಸಗಿಯಾಗಿ ಪಡೆದ ಸಾಲ
ತೀರಿಸಲಾಗದೆ ಮನನೊಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ “ರೋಗರ” ಎಣ್ಣೆ ಕುಡಿದು ಮೃತಪಟ್ಟಿದ್ದು ನನ್ನ ಮಗನು ದಿನಾಂಕ:
12/10/2015 ರಂದು ಮದ್ಯಾಹ್ನ 12:00 ರಿಂದ
12:30 ರ ಮಧ್ಯದ ವಿಷ ಸೇವಿಸಿ 04:30 ಪಿ.ಎಂ. ಮೃತಪಟ್ಟಿರುತ್ತಾನೆ. ಸರಕಾರದಿಂದ ಪರಿಹಾರ ಧನ ಒದಗಿಸಿಕೊಡುವಂತೆ
ಮತ್ತು ಮುಂದಿನ ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಆಳಂದ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 12-10-2015 ರಂದು ಶ್ರೀ §¸ÀªÀgÁd vÀAzÉ dgÉÃ¥Àà ºÁ®UÉÃj ¤ªÀÈvÀÛ PÉ.J¸ï.Dgï.n.¹ £ËPÀgÀ ¸Á: QtÂÚ ¸ÀqÀPÀ ಇವರು ಠಾಣೆಗೆ ಹಾಜರಾಗಿ ಕಿಣ್ಣಿ ಸಡಕ ಗ್ರಾಮದ ಸಿಮಾಂತರದಲ್ಲಿ ನನ್ನ ಸ್ವಂತ ಹೊಲವಿದ್ದು ಎಂದಿನಂತೆ ಇಂದು ದಿನಾಂಕ 12.10.2015 ರಂದು ಮಧ್ಯಾನ ನಾನು ನಮ್ಮ ಹೊಲಕ್ಕೆ ಹೊಗಿದ್ದು ನಾನು ಹೊಲವನ್ನು ತಿರುಗಾಡಿ ನೋಡಿ ನಮ್ಮ ಹೊಲದ ಬಂದಾರಿಗೆ ಇರುವ ಹುಣುಸೆ ಮರದ ನೇರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಕುರಿತು ಹುಣಸೆ ಮರದ ಹತ್ತಿರ ಬಂದು ನೋಡಲು ಹುಣುಸೆ ಮರಕ್ಕೆ ಒಬ್ಬ ವ್ಯಕ್ತಿಯು ತನ್ನ ಅಂಗಿಯಿಂದ ಉರುಲು ಹಾಕಿ ಕೊಂಡು ಮೃತ ಪಟ್ಟಿದ್ದು ಸದರಿ ಮೃತನ ಮೈಮೇಲೆ ಅಂಗಯಾಗಲಿ ಬನಿಯನಾಗ ಇರುವದಿಲ್ಲ ಒಂದು ಕರಿ ಬಣ್ಣದ ಪ್ಯಾಂಟ ಇರುತ್ತದೆ. ಸದರಿ ಮೃತನ ಬಗ್ಗೆ ನಾನು ನಮ್ಮ ಗ್ರಾಮಕ್ಕೆ ಹೊಗಿ ಗ್ರಾಮಸ್ಥರಲ್ಲಿ ವಿಚಾರಿಸಿದ್ದು ಸದರಯವನ ಬಗ್ಗೆ ಯಾವುದೆ ಮಾಹಿತಿ ಲಭ್ಯವಾಗಿರುವದಲ್ಲಿ. ಸದರಿ ಮೃತನು ಅಂದಾಜ 32-38 ವರ್ಷ ವಯಸ್ಸಿನವನಾಗಿದ್ದು, ಮೃತನ ತಲೆಯ ಮೇಲೆ 2-3 ಇಂಚ್ ಕಪ್ಪು ಕುದಲು ಇದ್ದು, ಮುಖದ ಮೇಲೆ ಕಪ್ಪು, ಬಿಳಿ ಸಣ್ಣ ದಾಡಿ ಇದ್ದು, ಗೊಲು ಮುಖ ಹೊಂದಿದ್ದು, ಅಂದಾಜ 5 ಫೀಟ್ 6 ಇಂಚ್ ಎತ್ತರ ಹೊಂದಿದ್ದು ಸದೃಡ ಮೈಕಟ್ಟು ಉಳ್ಳವನಾಗಿದ್ದು ಮೃತನ ಬಲಗೈ ತೊಳಿನ ಪಕ್ಕ ಎದೆಯ ಮೇಲೆ ಹಳೆಯಗಾಯವಿದ್ದು ಸದರಿಯವನ ಹೆಸರು ವಿಳಾಸ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ಮಾಹಿತಿ ಲಬ್ಯವಾಗಿರುವದಿಲ್ಲ. ಕಾರಣ ಮಾನ್ಯರವರು ಸದರಿ ಮೃತನ ಬಗ್ಗೆ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಕಮಲಾಪೂಋ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೇ ಕೈಕೊಂಡಿದ್ದು. ªÉÄîÌAqÀ ಮೃತ ಅಪರಿಚಿತ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಪಿ.ಎಸ್.ಐ ಕಮಲಾಪೂರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಲ್ಲಿಸಲು ಕೋರಲಾಗಿದೆ , ದೂರವಾಣಿ ಸಂ: 08478-221306, 9480803558. ಪೊಲೀಸ್ ಕಂಟ್ರೋಲ್ ರೂಮ್ 08472-20100,
ಮೃತಪಟ್ಟ ಅಪರಿಚಿತ ವ್ಯಕ್ತಿಯ ಚಹರಾ ಪಟ್ಟಿಯ ವಿವರ:
ವಯಸ್ಸು: 32 ರಿಂದ 38 ವರ್ಷದ ಪುರುಷ, ಎತ್ತರ : 5 ಫೂಟ್ 6 ಇಂಚ್, ಚಹರೆ : ಗೊಲು ಮುಖ, ಹೊಂದಿದ್ದು ಸದೃಡ ಮೈಕಟ್ಟು ಉಳ್ಳವನಾಗಿದ್ದು ಮೃತನ ಬಲಗೈ ತೊಳಿನ ಪಕ್ಕ ಎದೆಯ ಮೇಲೆ ಹಳೆಯಗಾಯವಿರುತ್ತದೆ. ತಲೆಯ ಮೇಲೆ 2-3 ಇಂಚ್ ಕಪ್ಪು ಕೂದಲು ಇರುತ್ತದೆ, ಮುಖದ ಮೇಲೆ ಕಪ್ಪು, ಬಿಳಿ ಸಣ್ಣ ದಾಡಿ ಇದ್ದು,. , ಧರಿಸಿರುವ ಉಡುಪು: 1.ಕರಿ ಬಣ್ಣದ ಪ್ಯಾಂಟ ಧರಿಸಿತ್ತಾನೆ, ಮೃತ ದೇಹವು ಕಿಣ್ಣಿ ಸಡಕ ಗ್ರಾಮದ ಬಸವರಾಜ ತಂದೆ ಜರೆಪ್ಪ ಹಾಲಗೇರಿ ಇವರ ಹೊಲದಲ್ಲಿ ಹುಣಸಿ ಗಿಡಿಕ್ಕೆ ತನ್ನ ಅಂಗಿಯಿಂದ ನೇಣುಹಾಕಿಕೊಂಡಿದ್ದು ಇರುತ್ತದೆ.
ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ದಿನಾಂಕ 12-10-2015 ರಂದು ಮಾದಾಬಾಳ ತಾಂಡಾದ ಸೇವಾಲಾಲ ಮಹಾರಾಜ ಗುಡಿಯ ಮುಂದಿನ ಬಯಲು ಜಾಗದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸ್ಮನಿ ಇವರನ್ನು ಠಾಣೆಗೆ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ ಠಾಣೆಯ ಸಿಬ್ಬಂದಿ ಜನರಾದ 1) ಆನಂದ ಸಿಪಿಸಿ-1258 2) ಸುರೇಶ ಸಿಪಿಸಿ-801 3) ಚಿದಾನಂದ ಸಿಪಿಸಿ-1225 4) ನಿಂಗಣ್ಣ ಸಿಪಿಸಿ-894 ರವರೊಂದಿಗೆ ಪಿಎಸ್ ಐ ಅಫಜಲಪೂರ ಪೊಲೀಸ್ ಠಾಣೆ ರವರು ಮಾದಾಬಾಳ ತಾಂಡಾ ಶ್ರೀ ಸೇವಾಲಾಲ ಮಹಾರಾಜ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ದಾಳಿ ಮಾಡಿ ಜೂಜಾಡುತ್ತಿದ್ದ 8 ಜನರಲ್ಲಿ 3 ಜನರನ್ನು ದಸ್ತಗೀರ ಮಾಡಿ ಜೂಜಾಟದ ಪಣಕ್ಕೆ ಇಟ್ಟ ಹಣ ವಶಪಡಿಸಿಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಅರ್ಜುನ ತಂದೆ ರಾಮಜಿ ರಾಠೋಡ ಸಾ||ಮಾದಾಬಾಳ ತಾಂಡಾ 2) ಸುರೇಶ ತಂದೆ ಧಾನು ರಾಠೋಡ ಸಾ:ಮಾದಾಬಾಳ ತಾಂಡಾ, 3) ಸುರೇಶ ತಂದೆ ಬಾಛು ರಾಠೋಡ ಸಾ||ಮಾಬಾದಾಳ ತಾಂಡಾ ಎಂದು ತಿಳಿಸಿದ್ದು ಓಡಿ ಹೋದ 5 ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಸುಭಾಷ ತಂದೆ ಲಾಲು ರಾಠೋಡ 2) ಪ್ರಕಾಶ ತಂದೆ ಬಾಬು ರಾಠೋಡ 3) ಪ್ರವೀಣ ತಂದೆ ಲಕ್ಷ್ಮಣ ರಾಠೋಡ 4) ವಿಕ್ರಮ ತಂದೆ ಧನಸಿಂಗ್ ರಾಠೋಡ 5) ಯುವರಾಜ ತಂದೆ ವಿಠ್ಠಲ ರಾಠೋಡ ಸಾ||ಎಲ್ಲರು ಮಾದಾಬಾಳ ತಾಂಡಾ ಅಂತ ತಿಳಿಸಿರುತ್ತಾರೆ. 8 ಜನರ ಮದ್ಯ ಇಸ್ಪೇಟ ಜೂಜಾಟಕ್ಕೆ ಇಟ್ಟಿದ ಒಟ್ಟು 1120/- ರೂ ಮತ್ತು 52 ಇಸ್ಪೆಟ ಎಲೆಗಳು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment