ಅಪಘಾತ
ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಬಾಳಾಸಾಬ ತಂದೆ ಶಂಕರ ಗುಡಗುಡೆ ಸಾ|| ಹೊಸೂರ ಗ್ರಾಮ ಇವರು ದಿನಾಂಕ 24-11-2014 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಗಂಗಾಬಾಯಿ ಹಾಗೂ ನಮ್ಮ ಚಿಕ್ಕಪ್ಪ ಅಣ್ಣಾರಾಯ ಮೂರು ಜನರು ಸಂತೆ ಮಾಡಿಕೊಂಡು ಹೊಗಲು ಮಣೂರ ಗ್ರಾಮಕ್ಕೆ ಬಂದಿದ್ದು ನಾವು ಸಂತೆ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ನಮ್ಮೂರಿನ ಬಸವರಾಜ ತಂದೆ ಕಾಶಿನಾಥ ಇಂಗಳಗಿ ಎಂಬಾತನು ಟಂ ಟಂ ತಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ನಾವು ಬಸವರಾಜ ಹೇಳಿದ ಟಂ ಟಂ ನಂ ಕೆಎ-48 2404 ನೇದ್ದರಲ್ಲಿ ನಾವು ಮೂರು ಜನ ಹಾಗೂ ನಮ್ಮಂತೆ ಸಂತೆಗೆ ಬಂದ ಬೇರೆ ಬೇರೆ ಊರಿನ ಇನ್ನು 2-3 ಜನ ಎಲ್ಲರೂ ಟಂ ಟಂ ದಲ್ಲಿ ಕುಳಿತುಕೊಂಡೆವು. ಸದರಿ ಟಂ ಟಂ ಮಣುರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೊರಟಿರುತ್ತದೆ. ಬಸವರಾಜ ಇಂಗಳಗಿ ಈತನು ಟಂ ಟಂ ನಡೆಸುತ್ತಿದ್ದನು, ಮುಂದೆ ಸಾಯಂಕಾಲ ಟಂ ಟಂ ಮಣೂರ ಗ್ರಾಮದಿಂದ ಹೊಸೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಕೆರನಿಂಗಪ್ಪ ದೇವಸ್ಥಾನ ದಾಟಿ ಸ್ವಲ್ಪ ಮುಂದೆ ಹೊದಾಗ ಸದರಿ ಟಂ ಟಂ ಚಾಲಕ ಬಸವರಾಜನು ತಾನು ನಡೆಸುತ್ತಿದ್ದ ಟಂ ಟಂ ನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸುತ್ತಿದ್ದನು, ಆಗ ಟಂಟಂ ದಲ್ಲಿದ್ದ ನಾವು ಸದರಿಯವರಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೇಳದೆ ವೇಗವಾಗಿ ನಡೆಸಿದ್ದರಿಂದ ಟಂ ಟಂ ರೋಡಿನ ಬಲ ಭಾಗದ ತಗ್ಗಿನಲ್ಲಿ ಪಲ್ಟಿ ಆಯಿತು, ಆಗ ಬಲಭಾಗದಲ್ಲಿ ಕುಳಿತಿದ್ದ ನನ್ನ ಚಿಕ್ಕಪ್ಪ ಅಣ್ಣಾರಾಯ ಈತನು ಕೆಳಗೆ ಬಿದ್ದಿದ್ದು ಆತನ ಮೇಲೆ ಟಂ ಟಂ ಹಾಗೂ ಟಂ ಟಂ ದಲ್ಲಿ ನಾನು ಮತ್ತು ನನ್ನ ಹೆಂಡತಿ ಬಿದ್ದೆವು, ನಂತರ ನಾವು ಎದ್ದು ಟಂ ಟಂ ಎತ್ತಿ ನನ್ನ ಚಿಕ್ಕಪ್ಪನಿಗೆ ನೋಡಲು ಆತನ ಮುಖಕ್ಕೆ, ಹಾಗೂ ತಲೆಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರುತ್ತಿತ್ತು, ಮತ್ತು ಎದೆಗೆ ಭಾರಿ ಗುಪ್ತಗಾಯ ಆಗಿ ಪ್ರಜ್ಞಾ ಹೀನ ಸ್ಥೀತಿಯಲ್ಲಿ ಇದ್ದನು. ಘಟನೆ ನಂತರ ಟಂ ಟಂ ಚಾಲಕ ಬಸವರಾಜನು ಓಡಿ ಹೋಗಿರುತ್ತಾನೆ, ನಂತರ ನಾವು ನಮ್ಮೂರಿನಿಂದ ಬೇರೊಂದು ವಾಹನ ತರೆಸಿಕೊಂಡು ನನ್ನ ಚಿಕ್ಕಪ್ಪನಿಗೆ ಮಣೂರ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 24-11-2014 ರಂದು ಬೆಳಿಗ್ಗೆ ಶ್ರೀ ರವೀಂದ್ರನಾಥ ತಂದೆ ಮಲ್ಲಪ್ಪ ವಗ್ಗೆ ಸಾಃಖಾದ್ರಿಚೌಕ
ಸಂತೋಷ ಕಾಲೋನಿ ಕಲಬುರಗಿ ರವರು ತನ್ನ
ಮೋಟರ ಸೈಕಿಲ್ ನಂ ಕೆ.ಎ.32ಆರ್
4873 ರ ಮೇಲೆ ಕುಳಿತು ತನ್ನ ಮನೆಯಿಂದ ರೈಲು ನಿಲ್ದಾಣಕ್ಕೆ ಹೋಗುತ್ತಿರುವಾಗ
ಆರೋಪಿಯು ತನ್ನ ಮೋಟರ ಸೈಕಲ ನಂ ಕೆ.ಎ 32 ಈ ಜಿ 8913 ನೇದ್ದನ್ನು ಲಾಲಗೇರಿ
ಕ್ರಾಸ್ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ನಡೆಸಿಕೊಂಡು ಹೋಗುತ್ತಿರುವ ಮೋಟರ
ಸೈಕಿಲಕ್ಕೆ ಅಗ್ನಿಶ್ಯಾಮಕ ಠಾಣೆಯ
ಎದುರುಗಡೆ ರಸ್ತೆಯ ಮೇಲೆ ಡಿಕ್ಕಿಪಡೆಯಿಸಿದ್ದರಿಂದ ಫಿರ್ಯಾದಿ ಗಾಯಗೊಂಡಿದ್ದು ಹಾಗೂ ಆರೋಪಿಯೂ ಸಹ ತನ್ನ
ವಾಹನದ ಮೇಲಿಂದ ಬಿದ್ದು ಗಾಯಗೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಲಕ್ಷ್ಮೀ ಗಂಡ ಬಸವರಾಜ ಕೆಂಗೆರಿ ಸಾ|| ಹೋಸೂರ ಗ್ರಾಮ ಇವರು ದಿನಾಂಕ 23-11-2014 ರಂದು ತಮ್ಮ ಮನೆಯ ಮುಂದೆ ಇದ್ದಾಗ ನನ್ನ ಗಂಡ ಬಸವರಾಜ ಮತ್ತು ನಮ್ಮ ಬಾಜು ಮನೆಯ ಸುನಿತಾ ಇಬ್ಬರು ಮಾತಾಡುತ್ತಾ ನಮ್ಮ ಮನೆಯ ಪಕ್ಕದಲ್ಲಿ ನಿಂತುಕೊಂಡಿದ್ದರು, ಆಗ ನಾನು ಸದರಿಯವರ ಹತ್ತಿರ ಹೋಗಿ ಸುನಿತಾ ಇವಳಿಗೆ ಏ ನನ್ನ ಗಂಡನ ಜೋತೆ ಯಾಕ ಮಾತಾಡುತ್ತಿ ನಿನಗೆ ಮಾತಾಡಬೇಡ ಅಂತಾ ಹೇಳಿದರೆ ಗೊತ್ತಾಗುವುದಿಲ್ಲ ಅಂತಾ ಸುನಿತಾ ಇವಳಿಗೆ ಹೇಳುತ್ತಿದ್ದಾಗ, ನನ್ನ ಗಂಡ ನನಗೆ ಏನೆ ರಂಡಿ ಅವಳಿಗೆ ಏನು ಕೇಳುತ್ತಿ ಎಂದು ಕೈಯಿಂದ ನನ್ನ ಕಪಾಳ ಮೇಲೆ ಹೊಡೆದನು, ಆಗ ಸುನಿತಾ ಇವಳು ಈ ರಂಡಿಗೆ ಏಷ್ಟು ಹೇಳಿದರು ಕೇಳುವುದಿಲ್ಲ ಎಂದು ನನ್ನ ಮೈ ಕೈಗೆ ಹೊಡೆಯುತ್ತಿದ್ದಳು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ಮನೆಯಲ್ಲಿದ್ದ ಸುನೀತಾಳ ತಾಯಿ ಹೌಸಾಬಾಯಿ ಹಾಗೂ ಅವಳ ತಂಗಿ ಐಶ್ವರ್ಯ ಇವರು ಬಂದಿದ್ದು ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆದಿರುತ್ತಾರೆ, ಸುನಿತಾ ಇವಳು ನನಗೆ ಈ ರಂಡಿಯ ಸೊಕ್ಕು ಜಾಸ್ತಿ ಆಗಿದೆ ಅಂತಾ ಬೈಯುತ್ತಾ ಅಲ್ಲಿಯೆ ಬಿದ್ದಿದ್ದ ಒಂದು ಹರೀತವಾದ ಕಬ್ಬಿಣದ ಪಟ್ಟಿಯಿಂದ ನನ್ನ ಕೈಯ ಮೇಲೆ ಮುಖದ ಮೇಲೆ, ಸೊಂಟದ ಮೇಲೆ ಹೊಡೆದು ಗಾಯಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment