POLICE BHAVAN KALABURAGI

POLICE BHAVAN KALABURAGI

07 July 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 07/07/2017 ರಂದು ಸಾಯಂಕಾಲ ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂಬಾಗದಲ್ಲಿರುವ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಾಬುರಾವ ತಂದೆ ಶಿವಪ್ಪ ಖೇಲ್ಡ, ಸಾ|| ನರೋಣಾ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್‌  ನಗದು ಹಣ 1050/- ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-07-2017 ರಂದು ಮಾಶಾಳ ಗ್ರಾಮದ ಸುದಾರಿತ ಬೀಟ್ ಸಿಬ್ಬಂದಿಯಾದ ನಮ್ಮ ಠಾಣೆಯ ಶರಣು ಪಿಸಿ-881 ರವರು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯೆಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ನನ್ನ ಬೀಟಿನ ಬಾತ್ಮಿದಾರರು ತಿಳಿಸಿರುತ್ತಾರೆ  ಅಂಥಾ ತಿಳಿಸಿದ ಮೇರೆಗೆ ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುರೇಶ ತಂದೆ ಶಿವಪುತ್ರ ರಾವೂರ ಸಾ|| ಅಫಜಲಪೂರ ಹಾ|| || ಮಾಶಾಳ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2110/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 07/07/2017 ರಂದು ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಂಗಾನಗರ ಕಬರಸ್ಥಾನದ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಬಡಾವಣೆಯ ಆರೋಗ್ಯ ಕೆಂದ್ರದ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಅಲ್ಲಿಂದ ನಡೆದುಕೊಂಡು ಹೋಗಿ ನೋಡಲು ಕಬರಸ್ಥಾನದ ಗೇಟ ಒಳಗಡೆ ಕಂಪೌಂಡ ಗೋಡೆಯ ಪಕ್ಕದಲ್ಲಿ 7-8 ಜನರು ದುಂಡಾಗಿ ಕುಳಿತು ಅಂದರ ಬಾಹರ ಜುಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು . 1) ರಾಜು ತಂದೆ ಮಲ್ಲಿಕಾರ್ಜುನ ಹರನಾಳ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ. 2) ಶರಣು ತಂದೆ ಸಿದ್ರಾಮ ಕೊತ್ತಲಿ ಸಾ: ಗಂಗಾ ನಗರ ಕಲಬುರಗಿ 3) ಸಿದ್ದಲಿಂಗ @ ಸಿದ್ದು ತಂದೆ ಲಕ್ಷಿಕಾಂತ ಸಾವಳಗಿ ಸಾ: ಹೊಡ್ಡಿನ ಮನಿ ಲೇಔಟ ಕಲಬುರಗಿ 4) ಸಂಜೀವಕುಮಾರ ತಂದೆ ನಾಗಣ್ಣಾ ಜಮಾದಾರ ಸಾ: ಚೌಡೇಶ್ವರಿ ಕಾಲೋನಿ ಕಲಬುರಗಿ 5) ಅನೀಲ ತಂದೆ ಗಣಪತಿ ಇಂಗಳಗಿ ಸಾ: ಗಂಗಾ ನಗರ ಕಲಬುರಗಿ 6) ಗೋಪಿ ತಂದೆ ಬಸವರಾಜ ಬೀದನೂರ ಸಾ: ಗಂಗಾ ನಗರ ಕಲಬುರಗಿ 7) ಶರಣು ತಂದೆ ಹಣಮಂತ ಪಾಟೀಲ ಸಾ:ಹೊಡ್ಡಿನ ಮನಿ ಲೇಔಟ ಕಲಬುರಗಿ 8) ಅಮೀತ ತಂದೆ ತುಕಾರಾಮ ಚವ್ಹಾಣ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  6650/- ರೂಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರವೀಣ ತಂದೆ ದತ್ತಾತ್ರೇಯ ಸೋನಾರ ಸಾ||ಬಸವೇಶ್ವರ ನಗರ ಕೆಇಬಿ ಹಿಂದುಗಡೆ ಅಫಜಲಪೂರ ರವರ ತಂದೆಯಾದ ದತ್ತಾತ್ರೇಯ ತಂದೆ ವಿಠ್ಠಲ ಸೋನಾರ ಇವರು ಅಕ್ಕಸಾಲಿಗ ಕೆಲಸ ಮಾಡಲು ನಮ್ಮ ಸ್ವಂತ ಗ್ರಾಮವಾದ ಅಫಜಲಪೂರ ತಾಲೂಕಿನ ಬಂದರವಾಡಕ್ಕೆ ದಿನಾಲು ನಮ್ಮ ಮೋಟಾರ ಸೈಕಲ್ ನಂ ಕೆಎ-32, ಯು-894 ನೇದ್ದರ ಮೇಲೆ ಹೋಗಿ ಕೆಲಸ ಮಾಡಿ ಮರಳಿ ಅಫಜಲಪೂರ ಕ್ಕೆ ಬರುತ್ತಾರೆ.  ಎಂದಿನಂತೆ ನಮ್ಮ ತಂದೆ ದಿನಾಂಕ 05/07/2017 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಮೇಲೆ ಬಂದರವಾಡ ಗ್ರಾಮಕ್ಕೆ ಹೋಗಿದ್ದು ಇರುತ್ತದೆ  ಅದೇ ದಿನ 2.45 ಪಿಎಮ್ ಸುಮಾರಿಗೆ ನಮ್ಮ ಸಂಬಂಧಿಕರಾದ ಮಲ್ಲಾಬಾದ ಗ್ರಾಮದ ಮಲ್ಲಿಕಾರ್ಜುನ ತಂದೆ ಮೌನಪ್ಪ ಸುತಾರ ಇವರು ನನ್ನ ಮೋಬೈಲ ನಂಬರಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಂದೆ ಮೋಟಾರ್ ಸೈಕಲ್ ಮೇಲೆ ಅಫಜಲಪೂರ ಕಡೆ ಬರುವಾಗ ಮಾತೋಳಿ ಮಲ್ಲಾಬಾದ ನಡುವೆ ಇರುವ ಬ್ರೀಡ್ಜ ದಾಟಿ ಅಫಜಲಪೂರ ಕಡೆ  ಹೋಗುತಿದ್ದಾಗ ಕೆಎಸ್ ಆರ್ ಟಿ ಬಸ ನಂ ಕೆಎ-28, ಎಫ್-2047 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ಓವರ್ ಟೇಕ್ ಮಾಡಿ ನಿಮ್ಮ ತಂದೆಯ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ನಿಮ್ಮ ತಂದೆಗೆ ಅಫಘಾತ ಪಡಿಸಿರುತ್ತಾನೆ ಅಂತ ತಿಳಿಸಿದ ಬಳಿಕ ನಾನು ಹಾಗು ನನ್ನ ಗೆಳೆಯನಾದ  ಅಂಬರೀಶ ಅಂಬೂರೆ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿದ್ದು ಬಲಗೈಗೆ ಭಾರಿ ತರಚಿದ ಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ಬಸ್ಸಿನಲಿದ್ದ ಪ್ರತ್ಯೇಕ್ಷದರ್ಶಿಗಳಾದ ಪ್ರಯಾಣಿಕರಿಗೆ ಹಾಗು ಮಲ್ಲಿಕಾರ್ಜುನ ಸುತಾರ ರವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಇರುತ್ತದೆ ಸದರಿ ಬಸ್ಸಿನ ಚಾಲಕನ ಹೆಸರು ಧೂಳಪ್ಪ ತಂದೆ ಮಲ್ಕಪ್ಪ ಬಂಕಲಗಾ ಅಂತ ಇರುತ್ತದೆ   ನಮ್ಮ ತಂದೆಯನ್ನು ನಾನು ನನ್ನ ಗೆಳೆಯ ಅಂಬರೀಶ ಹಾಗು ಮಲ್ಲಿಕಾರ್ಜುನ ಸುತಾರ ಮೂರು ಜನರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ ವಳಸಂಗಕರ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶರಣಬಸಪ್ಪ ತಂದೆ ಸದಾಶಿವ ಸುಗೂರ ಸಾ: ಕಮಲಾಪೂರ ರವರದು ಕಮಲಾಪೂರ ದಿಂದ ಕಲಬುರಗಿ ಕಡೆಗೆ ಹೋಗುವ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡು ನಮ್ಮ ಹೊಲ ಇದ್ದು ನಾನು ಪ್ರತಿ ದಿವಸ ಹೊಲಕ್ಕೆ ಹೋಗಿ ಬರಲು ತೊಂದರೆಯಾಗುತ್ತಿದ್ದರಿಂದ ನಮ್ಮ ಅಳಿಯನಾದ ನಾಗಶಟ್ಟಿ ತಂದೆ ಮಡಿವಾಳಪ್ಪ ಶಟಗಾರ ಸಾ: ಬೇಲೂರ ತಾ: ಬಸವಕಲ್ಯಾಣ ಇವರ ಹೊರೊ ಸ್ಪೇಂಡರ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ.ಈ ಹಿಂದೆ ದಿನಾಂಕ 10.06.2017 ರಂದು ಮಧ್ಯಾನ 1 ಗಂಟೆಯ ಸುಮಾರಿಗೆ ನಾನು ಸದರಿ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿದ್ದು ಮೋಟಾರ ಸೈಕಲನ್ನು ರಾಷ್ಟ್ರಿಯ ಹೆದ್ದಾರಿ ಮೇಲೆ ಬಿಟ್ಟು ನಾನು ಹೊಲದಲ್ಲಿ ಹೋಗಿ ಕೆಲಸ ಮಾಡಿಕೊಂಡಿದ್ದು ಸಾಯಂಕಾಲ 5 ಗಂಟೆಯ ಸುಮಾರಿಗೆ ಒಂದು ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರು ವ್ಯಕ್ತಿಗಳು ಬಂದು ರೋಡಿನ ಮೇಲೆ ಇದ್ದ ನನ್ನ ಮೋಟಾರ ಸೈಕಲ ಹತ್ತಿರ ಬಂದು ನನ್ನ ಮೋಟಾರ ಸೈಕಲನ್ನು ಪ್ರಾರಂಭ ಮಾಡುತ್ತಿದ್ದು ಆಗ ನಾನು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದರಿಂದ ದೂರ ದಿಂದಲೆ ಯಾರೊ ನೀವು ಅಂತ ಕೂಗಿ ಅವರು ನನ್ನ ಕಡೆಗೆ ನೋಡುತ್ತಾ ನನ್ನ ಮೋಟಾರ ಸೈಕಲನ್ನು ಚಾಲು ಮಾಡಿ ಮೋಟಾರ ಸೈಕಲ ಮೇಲೆ ಕುಳಿತು ಕಲಬುರಗಿ ಕಡೆಗೆ ಹೊಗುತ್ತಿದ್ದು ಗಾಬರಿಗೊಂಡು ನಾನು ಒಡುತ್ತಾ ರೋಡಿನ ಕಡೆಗೆ ಬಂದು ನಮ್ಮ ಅಣ್ಣನಾದ ಶಿವಶಂಕರ ಇವರ ಮೋಟಾರ ಸೈಕಲ ತೆಗೆದುಕೊಂಡು ಅವರ ಬೆನ್ನು ಹತ್ತಿ ಮಹಾಗಾವ ಕ್ರಾಸ ವರೆಗೆ ಹೋಗಿ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಲ್ಲಿಯರವರೆಗೆ ನಾನು ನಮ್ಮ ಅಣ್ಣ ನಮ್ಮ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ನನಗೆ ಪರಿಚಯದ ಯಾರಾದರು ತೆಗೆದುಕೊಂಡು ಹೋಗಿರಬಹುದು ಅಂತ ತಿಳಿದು ಕೆಲವು ದಿವಸ ಕಾದಿದ್ದು ನನ್ನ ಮೋಟಾರ ಸೈಕಲ ಯಾರು ತೆಗೆದುಕೊಂಡು ಹೋಗಿರುವದಿಲ್ಲ ಅಂತ ಗೊತ್ತಾಗಿದ್ದು ಇರುತ್ತದೆ. ಸದರಿ ನನ್ನ ಮೋಟಾರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: