ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶ್ರೀನಾಥ ತಂದೆ ರೇವಯ್ಯ ಬೇಲೂರ ಸಾ; ಹೊಳಕುಂದಾ ಗ್ರಾಮ
ತಾ:ಜಿ: ಕಲಬುರಗಿ ರವರು ದಿನಾಂಕ: 31/07/2015 ರಂದು ಸಾಯಂಕಾಲ ಬೆಳಗಾಮನಿಂದ ಲೋಡ ಖಾಲಿ
ಮಾಡಿಕೊಂಡು ಬಂದು ಬಿರಾದರ ಪೆಟ್ರೋಲ ಬಂಕ ಎದರುಗಡೆ ನಿಲ್ಲಿಸಿ ರಾತ್ರಿ 9-00 ಪಿಎಮ್ ಕ್ಕೆ ನನ್ನ
ಲಾರಿಯನ್ನು ಲಾಕ ಮಾಡಿಕೊಂಡು ಹೋಳಕುಂದಾ ಗ್ರಾಮಕ್ಕೆ ಊರಿಗೆ ಹೋಗಿರುತ್ತೇನೆ. ನಂತರ ದಿನಾಂಕ:
01/08/2015 ರಂದು ಬೆಳಿಗ್ಗೆ 7-30 ಎಎಮ್ ಕ್ಕೆ ಬಿರಾದರ ಪೆಟ್ರೋಲ ಬಂಕ ಹತ್ತಿರ ಬಂದು ನೋಡಲು
ರಾತ್ರಿ ನಿಲ್ಲಿಸಿದ್ದ ನನ್ನ ಕೆಎ-32 ಬಿ-1699 ನಂಬರಿನ ಲಾರಿ ಕಾಣಿಸಲಿಲ್ಲ. ಆಗ ನಾನು
ಗಾಬರಿಯಿಂದ ಪೆಟ್ರೋಲ ಬಂಕನಲ್ಲಿ ನಿಂತ ಚಾಲಕರನ್ನು ವಿಚಾರಿಸಿ ತಕ್ಷಣ ನನ್ನ ಸ್ನೇಹಿತ
ಶ್ರೀಕಾಂತನಿಗೆ ಪೋನ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಪೆಟ್ರೋಲಬಂಕನಲ್ಲಿದ್ದವರನ್ನು ವಿಚಾರಿಸಿ
ಹುಮನಾಬಾದ, ಬಸವಕಲ್ಯಾಣ ಜಹೀರಾಬಾದ, ಹೈದ್ರಾಬಾದ
ಸೇಡಂ ಜೇವರ್ಗಿ ಮುಂತಾದ ಕಡೆ ಹೋಗಿ ಹುಡುಕಾಡಿದರೂ ಸಿಗಲಿಲ್ಲ. ನನ್ನ ಕೆಎ-32 ಬಿ-1699 ನಂಬರಿನ
ನ್ಯಾಶನಲ್ ಕಲರ 10 ಟಯರನ ಚೆಸ್ಸಿ ನಂ- MB1CMDWC2AHVA9413 ಇಂಜಿನ ನಂ- VAH618141 ಮತ್ತು 2010ರ ಮಾಡೆಲ್ ನ ಅ.ಕಿ= 9,50000/-ರೂ ಕಿಮ್ಮತ್ತಿನ
ಲಾರಿಯನ್ನು ಯಾರೋ ಕಳ್ಳರು ದಿನಾಂಕ: 31/07/2015 ರಂದು ರಾತ್ರಿ 9-00 ಪಿಎಮ್ ದಿಂದ ದಿನಾಂಕ:
01/08/2015 ರಂದು ಬೆಳಿಗ್ಗೆ 7-30 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಅಬ್ದುಲ್ ಹಮೀದ್ ತಂದೆ ಮೈನೊದ್ದಿನ್ ಶೇಖ, ಸಾ:ಓಲ್ಡ್ ಸಿನಿಮಾ ರೋಡ್, ಸೇಡಂ.ಇವರು ತಮ್ಮ ಬ್ಲಾಕ್ ಕಲರ್ ಬಜಾಜ್ ಪಲ್ಸರ್-150 ಮೋಟಾರು ಸೈಕಲ್ ನಂ-KA32 EG-6326 ನೇದ್ದನ್ನು ದಿನಾಂಕ:12-09-2015 ರಂದು ರಾತ್ರಿ 08-00 ಗಂಟೆಯ
ಸುಮಾರಿಗೆ ನಾನು ಮತ್ತು ಸೈಯದ್ ಮಜ್ಹರ್ ಹಸನ್
ಇವರೊಂದಿಗೆ ಕೆಲಸದ ನಿಮಿತ್ಯ ಸೇಡಂ ಬಸ್ ನಿಲ್ದಾಣಕ್ಕೆ ಹೋಗಿ, ಬಸ್ ನಿಲ್ದಾಣದ
ಮುಂದುಗಡೆ ನನ್ನ ಮೊಟಾರು ಸೈಕಲ್ ನಿಲ್ಲಿಸಿ, ಬಸ್ ನಿಲ್ದಾಣದ ಹಿಂದೆ
ಇದ್ದ ನನ್ನ ಸಂಭಂದಿಕರ ಮನೆಗೆ ಹೋಗಿ ಮರಳಿ ಬಂದು ನೋಡಲಾಗಿ ನಾನು ಬಸ್ ನಿಲ್ದಾಣದ ಎದುರುಗಡೆ
ನಿಲ್ಲಸಿದ ನನ್ನ ಮೋಟಾರು ಸೈಕಲ್ ಇರಲಿಲ್ಲ. ನಾನು ಮತ್ತು ಮಜ್ಹರ್ ಇಬ್ಬರೂ ಕೂಡಿ ಎಲ್ಲಾ ಕಡೆ ಹುಡುಕಾಡಿದೇವು. ನನ್ನ
ಮೋಟಾರು ಸೈಕಲ್ ಸಿಗಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ನನ್ನ ಮೋಟಾರು ಸೈಕಲ್ ಹುಡುಕಾಡಲಾಗಿ
ಸಿಕ್ಕಿರುವದಿಲ್ಲ ಅದರ ಅಂದಾಜು ಕಿಮ್ಮತ್ತು 40,000/- ರೂಪಾಯಿಗಳು
ಆಗುತ್ತದೆ. ನನ್ನ ಮೋಟಾರು ಸೈಕಲ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಅನೀತಾ ಗಂಡ ಭೀಮರಾವ ಧಡಕೆ ಸಾ:ಕೊಡಲ ಹಂಗರಗಾ ಇವರ ಗಂಡನಿಗೆ ಸುಮಾರು
ವರ್ಷಗಳಿಂದ ತಲೆ ಸರಿ ಇರದಿದ್ದರಿಂದ ತನ್ನ ತಾನಾಗಿಯೇ ಮಾತಾಡುವದು, ನಗುವದು
ಮಾಡುತ್ತಿದ್ದರಿಂದ ಅವರಿಗೆ ಗುಲಬರ್ಗಾ ಸರಕಾರಿ ದವಾಖಾನೆಯಲ್ಲಿ, ಮುಂಬೈಗೆ ಒಯ್ದು
ತೋರಿಸಿಕೊಂಡು ಬಂದಿದರು ಗುಣಮುಖವಾಗಿರುವುದಿಲ್ಲಾ.
ದಿನಾಂಕ:15/09/2015 ರಂದು ಬೆಳಗ್ಗೆ 10:00 ಗಂಟೆಗೆ ನಾನು ನಮ್ಮ ಮಾವ ಫೀರಾಜಿ ಅತ್ತೆ
ಲಿಂಬಾಬಾಯಿ ಕೂಡಿ ಹೊಲಕ್ಕೆ ಹೋಗುವಾಗ ನನ್ನ ಗಂಡನ ತಲೆ ಸರಿ ಇರದಿದ್ದರಿಂದ ಮನೆಯಲ್ಲಿ ಬಿಟ್ಟು
ಹೋಗಿದ್ದು ಸಾಯಂಕಾಲ 06:00 ಗಂಟೆಗೆ ನಾವೆಲ್ಲರೂ ಹೊಲದಿಂದ ಮನೆಗೆ ಬಂದಾಗ ನನ್ನ ಗಂಡನು ಮನೆಯಲ್ಲಿ
ವಾಂತಿ ಮಾಡುತ್ತಿದ್ದಾಗ ಏನಾಗಿದೆ ಎಂದು ಕೇಳಿದರೆ ಹೇಳಿರುವುದಿಲ್ಲ ಅವನ ಬಾಯಿಯಿಂದ ಕ್ರಿಮಿನಾಶಕ
ಔಷಧ ಕುಡಿದ ವಾಸನೆ ಬರುತ್ತಿದ್ದರಿಂದ ನಮ್ಮ ಮಾಂವ ಹಾಗೂ ನಮ್ಮ ಮೌಸಿ ಭಾಗವ್ವ ಕೂಡಿ ಯಾವುದೋ ಒಂದು
ಜೀಪಿನಲ್ಲಿ ಹಾಕಿಕೊಂಡು ಡಾ/ಪಿ.ಎನ್.ಶಹಾ ಆಸ್ಪತ್ರೆ ಆಳಂದಕ್ಕೆ ಒಯ್ದಗ ವೈದ್ಯರು ನೋಡಿ
ಕ್ರಿಮಿನಾಶಕ ಔಷಧ ಕುಡಿದಿದ್ದಾನೆ ಗುಲಬರ್ಗಾಕ್ಕೆ ತಗೆದುಕೊಂಡು ಹೋಗಲು ತಿಳಿಸಿದಾಗ ಒಂದು ಖಾಸಗಿ ಅಬುಲೆನ್ಸ್ ದಲ್ಲಿ ನಾನು ನಮ್ಮ ಮಾವ &
ಮೌಸಿ
ಭಾಗವ್ವ ಕೂಡಿ ರಾತ್ರಿ 12:00 ಗಂಟೆಗೆ ಸರ್ಕಾರಿ ದವಾಖಾನೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದಾಗ
ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:16/09/2015 ರಂದು ಬೆಳಗ್ಗೆ 08:00
ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
No comments:
Post a Comment