ಆಕಸ್ಮಿಕ ಸಾವು ಪ್ರಕರಣ :
ಜೇವರ್ಗಿ ಪೊಲೀಸ ಠಾಣೆ : ದಿನಾಂಕ
18.09.2015 ರಂದು ಶ್ರೀ ಬಾಬು ತಂದೆ ಗ್ವಾಲಪ್ಪ ಕೊಂಬಿನ್ ಸಾ:
ರೇವನೂರ ಠಾಣೆಗೆ ದಿ: 14-09-2015 ರಂದು ರಾತ್ರಿ 7-೦೦ ಗಂಟೆ ಸುಮಾರಿಗೆ ರೇವನೂರ
ಗ್ರಾಮದ ದಾವಲಮಲ್ಲಿಕ್ ದರ್ಗಾದ ಹತ್ತಿರ ಖುಲ್ಲಾ ಜಾಗೆಯಲ್ಲಿ ನನ್ನ ಮಗಳು ಭಾಗಮ್ಮ ಕೊಂಬಿನ್ ಇವಳಿಗೆ ಆಕಸ್ಮಿಕವಾಗಿ ಒಂದು ವಿಷ ಪೂರಿತ ಹಾವು ಕಚ್ಚಿದ್ದರಿಂದ
ಅವಳಿಗೆ ರೇವನೂರ ಗ್ರಾಮದಲ್ಲಿ ಗೌಂಟಿ ಔಷಧ ಹಾಕಿಸಿ ದಿನಾಂಕ 15-9-15 ರಂದು ಕಲಬುರಗಿ ಸರಕಾರಿ
ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ
17.09.2015 ರಂದು ರಾತ್ರಿ 09:00 ಗಂಟೆಗೆ ನನ್ನ ಮಗಳು ಭಾಗಮ್ಮ
ಮೃತಪಟ್ಟಿರುತ್ತಾಳೆ ಕಾರಣ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ : ದಿನಾಂಕ 18.09.2015 ರಂದು ಶ್ರೀ ಸಿದ್ರಾಮ ತಂದೆ ಅಜಮಾನ್ ಜೋಗೆರ್ ಸಾ:ಶಹಾಪುರ ಜಿ:ಯಾದಗೀರ
ಇವರು ಠಾಣೆಗೆ ಹಾಜರಾಗಿ ಇಂದು
ಸಾಯಂಕಲಾ 04.30 ಗಂಟೆ ಸುಮಾರಿಗೆ ನನ್ನ ತಂದೆ ಅಜಮಾನ್ ತಂದೆ ಸಿದ್ರಾಮ ಜೋಗೆರ್ ವ:55 ವರ್ಷ ಸಾ: ಇಂದಿರಾ ನಗರ ಶಹಾಪುರ ಇವರು
ಮುದಬಾಳ(ಕೆ) ಗ್ರಾಮದ ಸಿಮಾಂತರದ ತಿಪ್ಪಣ್ಣ ಮಾದರ್ ಇವರ ಹೊಲದ ಹತ್ತಿರದ ಕೆನಾಲ್ ನೀರಿನಲ್ಲಿ ಕೈಕಾಲು
ಮುಖ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆನಾಲ್ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ
ಕಾರಣ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ
ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ: ದಿನಾಂಕ: 19.09.2015 ರಂದು ಶ್ರೀ ಹಣಮಂತ ತಂದೆ ಸಂಗಪ್ಪ ತಳವಾರ ಸಾ: ಖಾಜಾ ಕಾಲೋನಿ
ಜೇವರಗಿ ರವರು ಠಾಣೆಗೆ ಹಾಜರಾಗಿ ತಾನು ಖಾಜಾ
ಕಾಲೋನಿಯ ಅಂಬಾಬಾಯಿ ಗುಡಿಯ ಹತ್ತಿರ ಪ್ರತಿಸ್ಟಾಪನೆ ಮಾಡಿದ ಗಣೇಶ ಉತ್ಸವದ ಕಾರ್ಯಕ್ರಮವನ್ನು ನೋಡಲು ಹೋಗಿ ನಾನು ನನ್ನ ಗೆಳೆಯರು
ಕೂಡಿಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಮೋಟಾರು ಸೈಕಲ್ ಮೇಲೆ ಅಲ್ಲಿಗೆ ಬಂದ 1) ) ಅಫ್ರೋಜ ತಂದೆ ಅಬ್ಬಾಸಲಿ ನಾಯಕಲ್, 2) ಕೋನಮೀರ ತಂದೆ ಬಷೀರ್
ಸಾಬ್ ಶೇಖ್, 3) ರುಕುಮ್ ಪಟೇಲ್ ಸಾ:
ಎಲ್ಲರು ಖಾಜಾ ಕಾಲೋನಿ ಜೇವರಗಿ ಇವರುಗಳು ತಮ್ಮ ಮೋಟಾರು ಸೈಕಲ್‌ಅನ್ನು
ಜೋರಾಗಿ ರೇಸ್ ಮಾಡುತ್ತ ಹಾರ್ನ ಹಾಕುತ್ತಿದ್ದಾಗ ನಾನು ಇಲ್ಲಿ ಗಣಪತಿ ಕಾರ್ಯಕ್ರಮ ಇರುತ್ತದೆ
ಆದ್ದರಿಂದ ಸಪ್ಪಳ ಮಾಡಬೇಡಿ ಅಂದಿದ್ದಕ್ಕೆ ಎಲ್ಲರೊ ಕೂಡಿಕೊಂಡು ಬಂದು ನನಗೆ ಮತ್ತು ನನ್ನ
ಗೆಳೆಯರಾದ ಶಂಕರಗೌಡ, ಸಾಯಬಣ್ಣ ಇವರಿಗೆ ಅವಾಚ್ಯವಾಗಿ ಬೈದು
ಕೈಯಿಂದ ಮತ್ತು ಇಟ್ಟಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಸದರಿ ಆರೋಪಿತರ
ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment