ಆಕಸ್ಮಿಕ ಬೆಂಕಿ ತಗುಲಿ ಗೃಹಣಿ ಸಾವು :
ವಿಶ್ವವಿದ್ಯಾಲಯ ಠಾಣೆ : ಶಾಣುಬಾಯಿ ಗಂಡ ಹೀರಾಲಾಲ ಚವ್ಹಾಣ, ಸಾ|| ಕೂಡ್ಲಿ ಸೀರಿ ತಾಂಡಾ ತಾ|| ಚಿಂಚೋಳಿ ಇವರ ಮಗಳಾದ ಗಂಗಾಬಯಿ ಇವಳೀಗೆ 9 ವರ್ಷಗಳ ಹಿಂದೆ ಬಾಳು ರಾಠೋಡ, ಸಾ|| ಬಾಪು ನಾಯಕ ತಾಂಡಾ ನಂದೂರ (ಬಿ) ಗೆ ಕೊಟ್ಟು ಮದುವೆ ಮಾಡಿದ್ದು ದಿನಾಂಕ: 09/10/2014 ರಂದು 1130 ಪಿ.ಎಮ್ ಕ್ಕೆ ನಮ್ಮ ಅಳಿಯ ಬಾಳು
ಈತನು ಫೋನ್ ಮಾಡಿ ತಿಳಿಸಿದ್ದೆನೆಂದರೆ ಮನೆಯಲ್ಲಿ ಕರೆಂಟ ಇಲ್ಲದ ಕಾರಣ ಚಿಮಣೀಯನ್ನುಯ
ಹಚ್ಚಿಕೊಂಡು ಮಲಗಿದ್ದಾಗ ರಾತ್ರಿ ಅಂದಾಜು 11:00 ಪಿ.ಎಮ ಸುಮಾರಿಗೆ ನಿದ್ರಾವಸ್ಥೆಯಲ್ಲಿ ನಮ್ಮ
ಕೈ ದೀಪದ ಚಿಮಣಿ ಉರುಳಿ ಚಿಮಣಿಯಲ್ಲಿರುವ ಎಣ್ಣೆ ಹಾಸಿಗೆ ಮತ್ತು ನಾವು ಉಟ್ಟ ಬಟ್ಟೆಗೆ ಹತ್ತಿರ
ಒಮ್ಮಿಂದೊಮ್ಮಲೆ ಬೆಂಕಿ ಹತ್ತಿಕೊಂಡಿದ್ದು, ಆಗ ನನ್ನ ಹೆಂಡತಿಗೆ ಎದೆಗೆ ಹೊಟ್ಟೆಗೆ, ಮತ್ತು ಇತರೆ ಭಾಗಕ್ಕೆ ಹತ್ತಿಕೊಂಡಿದ್ದು, ಆಗ ನಾನು ಆರಿಸಲೂ ಹೋದರೆ ನನಗೂ ಕೂಡ ಎಡಗೈ, ಎರಡು ಕಾಳುಗಳಿಗೆ ಬೆಂಕಿ ತಗಲಿರುತ್ತದೆ. ಆಗ ನನ್ನ ಮಕ್ಕಳಿಗೂ ಕೂಡ
ಸ್ವಲ್ಪ ಹತ್ತಿರುತ್ತದೆ ನಾವು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ
ಸೇರಿಕೆಯಾಗಿರುತ್ತೇವೆ ಕೂಡಲೆ ಬಾ ಅಂತಾ ತಿಳಿಸಿದ್ದರಿಂದ ನಾನು ನನ್ನ ಗಂಡ ಹಾಗೂ ಮಗ ರಾಜು ಮೂರು
ಜನರು ಬಂದು ನೋಡಲು ಮೇಲಿಂದ ಬೆಂಕಿ ತಗಲಿದ್ದು, ನಿಜವಿರುತ್ತದೆ. ದಿನಾಂಕ: 11/10/2014 ರಂದು ರಾತ್ರಿ 7:00 ಪಿ.ಎಮ್
ಕ್ಕೆ ಉಪಚಾರ ಫಲಕಾರಿಯಾಗದೆ ನನ್ನ ಮಗಳು ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಸಿದ್ದಪ್ಪ ತಂದೆ ಹಣಮಂತ ಪಿಡಗಡೆನವರ ಸಾ: ಹಿರೇ ವಡಗೇರಾ
ತಾ:ಶಹಾಪೂರ ಜಿ: ಯಾದಗೀರ ರವರಿಗೆ ರ ಮಗ ಕಂಬಯ್ಯ ಇವನು
ಈಗ ಸುಮಾರು 11 ವರ್ಷಗಳಿಂದ ನನ್ನ ಮಗ ಕಂಬಯ್ಯ ಗುಲಬರ್ಗಾದ ಪಿಟಿಸಿಯಲ್ಲಿ ಕೆಲಸ ಮಾಡಿಕೊಂಡು
ಅಲ್ಲಿಯೇ ಇದ್ದನು. ಈಗ ನನ್ನ ಮಗನಿಗೆ 3 ತಿಂಗಳಿಂದ ವಡಗೇರಾ ಗ್ರಾಮದಲ್ಲಿ ಕನ್ಯೆ ತೆಗೆದು ಮದುವೆ
ಮಾಡಿರುತ್ತೇವೆ. ನನ್ನ ಸೊಸೆ ತನ್ನ ತವರು ಮನೆಯಲ್ಲಿಯೇ ವಾಸವಾಗಿರುತ್ತಾಳೆ. ಆಗಾಗ ಹೋಗಿ
ಬುರುವುದು ಮಾಡುತ್ತಿದ್ದನು. ಸದರಿ ನನ್ನ ಮಗನು ತುಂಬಾ ದಿನದಿಂದ ಮಾನಸಿಕವಾಗಿ ಏನೂ ವಿಚಾರ
ಮಾಡುತ್ತಾ ತನ್ನಷ್ಟಕ್ಕೆ ತಾನೇ ವಿಚಾರ ಮಾಡಿ ಯಾರ ಮುಂದೆ ಯಾವುದೇ ವಿಚಾರ ಬಹಿರಂಗ ಪಡಿಸುತ್ತಿರಲಿಲ್ಲ.
ದಿನಾಂಕ 11-10-2014 ರಂದು 08-30 ಪಿಎಮ್ ಸುಮಾರಿಗೆ ನಾಗನಹಳ್ಳಿ ಪಿಟಿಸಿಯಿಂದ ಅಧಿಕಾರಿಯವರು
ನನ್ನ ಮೊಬೈಲಗೆ ಫೋನ್ ಮಾಡಿ ವಿಷಯ ಹೇಳಿದ್ದೇನೆಂದರೆ, ನಿಮ್ಮ ಮಗ ಕಂಬಯ್ಯ
ಇತನು ತಾನು ವಾಸಿಸುವ ಸಿ ಬ್ಲಾಕ್ ರೂಮ್ ನಂ- 36 ರಲ್ಲಿ ಹಾಲಿನಲ್ಲಿ ಅಳವಡಿಸಿದ ಫ್ಯಾನಗೆ
ಇಸ್ರ್ತೀ ವೈರನ ಸಹಾಯದಿಂದ ನೇಣು ಹಾಕಿಕೊಂಡು, ನೇಣು ಹಾಕಿಕೊಂಡ
ಇಸ್ರ್ತಿ ವೈರ ಕಡಿದು ಕೆಳಗೆ ಬಿದ್ದು, ತಲೆಯ ಹಿಂಬಾಗದಲ್ಲಿ ರಕ್ತಸ್ರಾವ ಆಗಿ ಮೃತಪಟ್ಟಿರುತ್ತಾನೆ ನೀವು ಈ
ಕೂಡಲೇ ಬರಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ಬಂದು ನನ್ನ
ಮಗನ ಶವ ನೋಡಲಾಗಿ ಈ ಮೇಲಿನಂತೆ ಕುತ್ತಿಗೆಗೆ ನೇಣು ಹಾಕಿಕೊಂಡು ತಲೆಯ ಹಿಂಭಾಗದಲ್ಲಿ
ರಕ್ತಗಾಯವಾಗಿ ರಕ್ತ ಬಂದು ಮೃತಪಟ್ಟಿರುತ್ತಾನೆ ನನ್ನ ಮಗ ಆಗಾಗ ಒಂದು ತರಹ ಹುಚ್ಚುಚ್ಚಾಗಿ
ವರ್ತಿಸುವುದು ಮಾಢುತ್ತಿದ್ದು, ನನ್ನ ಮಗನು ಯಾವುದೋ ವಿಷಯ ಯಾರ ಮುಂದೆ ಹೇಳದೇ ತನ್ನ ತಾನೇ ತನ್ನ
ಮನಸ್ಸಿನ ಮೇಲೆ ಏನೋ ಪರಿಣಾಮ ಮಾಡಿಕೊಂಡು ಈ ರೀತಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ : ಶ್ರೀ ಶರಣಪ್ಪ ತಂದೆ ಕಳಕಪ್ಪ ಗುರಿಕಾರ ಸಾ: ಓಂ ರೆಸಿಡೆನ್ಸಿ ಆನಂದ ಆಸ್ಪತ್ರೆಯ ಹತ್ತಿರ ಹಳೆ
ಜೇವರ್ಗಿ ರೋಡ ಗುಲಬರ್ಗಾ ರವರು ದಿನಾಂಕ: 12/10/2014 ರಂದು 7=30 ಪಿ.ಎಮ್.ಕ್ಕೆ ನಾನು ಮಕ್ಕಳಾದ ಕಳಕಪ್ಪ ವಯಾ:14 ವರ್ಷ ಮತ್ತು ಆದರ್ಶ ವಯಾ:12 ವರ್ಷ
ಮೂರು ಜನರು ಮೈಲಾಪೂರ ಮಲ್ಲಯ್ಯಾನ ದೇವಸ್ಥಾನಕ್ಕೆ ಹೋಗಿ ರೈಲು ಮುಖಾಂತರ ಗುಲಬರ್ಗಾ ಸ್ಟೇಶನಕ್ಕೆ
ಬಂದು ರೈಲ್ವೆ ಸ್ಟೇಶನ ದಿಂದ ಮೂರು ಜನರು ನಡೆದುಕೊಂಡು ಹಳೆ ಜೇವರ್ಗಿ ರೋಡ ಮೇಲೆ ರೋಡ ಎಡಗಡೆಯಿಂದ
ಹೋಗುವಾಗ ಗಣೇಶ ನರ್ಸಿಂಗ ಹೋಮ ಎದುರು ರೋಡ ಮೇಲೆ
ಮೋಟಾರ ಸೈಕಲ್ ನಂ:ಕೆಎ 34 ಇಎ 3836 ರ ಸವಾರನು ರೈಲ್ವೆ ಅಂಡರ ಬ್ರಿಜ್ ಕಡೆಯಿಂದ ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ಬಂದು ಫಿರ್ಯಾದಿಯ
ಮಗನಾದ ಆದರ್ಶ ಇತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದನು. ಆದರ್ಶ ಇತನು ಪುಟಿದು
ಮುಂದಕ್ಕೆ ಹೋಗಿ ಬಿದ್ದನು. ಸದರಿಯವನಿಗೆ ಬಲ ಹಣೆಯ ಮೇಲೆ ಭಾರಿ ಪೆಟ್ಟು ,ಬಲ
ಹುಬ್ಬಿಗೆ ರಕ್ತಗಾಯ, ಬಲ ಮುಂಗೈಗೆ ತರಚೀದಗಾಯ ಹಾಗು ಎಡ ಮುಂಗೈಗೆ ಗುಪ್ತ ಪೆಟ್ಟು ಮಾಡಿ
ಮೋ/ಸೈಕಲ್ ಸಮೇತ ಸವಾರನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment