ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಅಂಬ್ರೀಶ್ ತಂದೆ ವಿಠಲ ಮಾಹಾಗಾಂವಕರ್ ಸಾ: ರಾಜೇಶ್ವರ ಹಾವ: ಚಿಂಚೋಳಿ ಕ್ರಾಸ್ ಸೇಡಂ ಇವರು ದಿನಾಂಕ 13-09-2014 ರಂದು ಮದ್ಯಾನದಂದು ನಾನು
ಮತ್ತು ನನ್ನ ಗೆಳೆಯನಾದ ನಾಗರಾಜ ತಂದೆ ಭೀಮರಾಯ ಯಕಮೈ ಸಾ: ತೆಲ್ಕೂರ ಗ್ರಾಮ, ಇಬ್ಬರು ಕೂಡಿ
ಗುಲ್ಬರ್ಗಾ ಕ್ಕೆ ಹೋಗಿ ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ವಾಪಸು ಸೇಡಂ ಕಡೆಗೆ ಬರುವ ಸಲುವಾಗಿ
ಗುಲ್ಬರ್ಗಾದ ಖರ್ಗೆ ಪಂಪ ಹತ್ತಿರ ನಿಂತಾಗ ನಮಗೆ ಪರಿಚಯ ಇರುವ ಶಿವುಪುತ್ರಪ್ಪ ದೊರೆ ಸಾ: ಕುಪನೂರ
ತಾ: ಚಿಂಚೋಳಿ ಇತನು ತನ್ನ ಅಪೆ ಮಿನಿ ಗೂಡ್ಸ ಗಾಡಿ ಸೇಡಂಕ್ಕೆ ಹೋಗುತ್ತದೆ ಬರ್ರಿ ಅಂತಾ ತನ್ನ
ಅಪೆ ಮಿನಿ ಗೂಡ್ಸ ಗಾಡಿ ನಂ-ಕೆಎ-32,ಬಿ-7498 ನೇದ್ದರಲ್ಲಿ ಕೂಡಿಸಿಕೊಂಡು ಸೇಡಂ ಕಡೆಗೆ ಬರುತ್ತಿದ್ದನು ಸದರಿ ಚಾಲಕ
ತನ್ನ ಗಾಡಿಯನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು
ಹೋಗಿ,ವಾಘ್ದರಿ-ರಿಬ್ಬನಪಲ್ಲಿ ಮುಖ್ಯರಸ್ತೆಯ
ಹೊಸಳ್ಳಿ ಕ್ರಾಸ ದಾಟಿದ ತಕ್ಷಣ ಮುಂದೆ ಹೋಗುತ್ತಿದ್ದ ಯಾವುದೋ ಒಂದು ಟ್ಯಾಂಕರ ಲಾರಿಗೆ
ಓವರಟೇಕ್ ಮಾಡಲು ಹೋಗಿ ಒಮ್ಮೆಲೆ ಬಲಗಡೆ ಕಟ್ ಹೊಡೆದಾಗ ಅಪೆ ಮಿನಿ ಗೂಡ್ಸ ವಾಹನ ಮುಖ್ಯರಸ್ತೆಯ ಬಲ
ಬದಿಗೆ ಪಲ್ಟಿ ಮಾಡಿ ಅಫಗಾತ ಪಡಿಸಿದನು ಆಗ. ನಾವೆಲ್ಲರೂ ಕೆಳಗೆ ಬಿದ್ದಾಗ ನನ್ನ ಬಲಮೊಳಕಾಲಿಗೆ
ರಕ್ತಗಾಯ ಮತ್ತು ತರಚಿದ ಗಾಯ ಆಗಿರುತ್ತದೆ, ಮತ್ತು ನನ್ನ ಗೆಳೆಯನಾದ ನಾಗರಾಜ ಯಕಮೈ ಇವರಿಗೆ
ಎಡತಲೆಗೆ ರಕ್ತಗಾಯ, ಹೆಡಕಿಗೆ ಭಾರಿ ಗುಪ್ತಗಾಯ ಆಗಿರುತ್ತದೆ, ಶಿವುಪುತ್ರಪ್ಪ ಯಕಮೈ ಇವನಿಗೆ
ಯಾವುದೇ ಗಾಯ ಆಗಿರುವುದಿಲ್ಲ, ಆಗ ಅಲ್ಲಿಯೇ ರಸ್ತೆಯಿಂದ ಹೋಗುತ್ತಿದ್ದ ಶಶಿಕುಮಾರ ತಂದೆ ವೈಜನಾಥ
ಕೋರೆ ಹಾಗು ರವಿಚಂದ್ರ ತಂದೆ ಹುಸೇನಪ್ಪ ಗಂಪಾಲ
ಇವರು ಅಫಘಾತವನ್ನು ನೋಡಿ ನಮಗೆ ಎಬ್ಬಿಸಿರುತ್ತಾರೆ, ನಂತರ ನಾವು ನಾಗರಾಜ ಯಕಮೈ ಇವರಿಗೆ
ಗುಲ್ಬರ್ಗಾದ ಸತ್ಯಾ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಅಲ್ಲಿಯ ವೈದ್ಯಾಧಿಕಾರಿಗಳು
ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ದವಾಖಾನೆಗೆ ಕಳಿಸಿರುತ್ತಾರೆ, ನಾಗರಾಜ ತಂದೆ ಭೀಮರಾಯ ಯಕಮೈ
ಸಾ: ತೆಲ್ಕೂರ ಇತನು ಉಪಚಾರ ಹೊಂದುವಾಗ ಜಿಲ್ಲಾ
ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 11-10-2014 ರಂದು
ಬೆಳಿಗ್ಗೆ 11-30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮತಿ
ತಾರಾಬಾಯಿ ಗಂಡ ಕರಬಸಪ್ಪ ಸಾ: ಪ್ಲಾಟ ನಂ:381
ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರ ಗಂಡನಾದ ಶ್ರೀ ಕರಬಸಪ್ಪ ರವರು ದಿನಾಂಕ; 11/10/2014 ರಂದು ಮಧ್ಯಾಹ್ನ 12=30 ಗಂಟೆ ಸುಮಾರಿಗೆ ನನ್ನ ಗಂಡನಾದ ಕರಬಸಪ್ಪ
ಇವರು ಮೋ/ಸೈಕಲ್ ನಂ; ಕೆಎ 32 ಅರ್. 4373 ನೆದ್ದನ್ನು ಮನೆಯಿಂದ ಶಾಲೆಗೆ ಹೋಗುವ
ಕುರಿತು ಗೋದುತಾಯಿ ನಗರ ಕಮಾನ ಒಳಗಡೆಯಿಂದ ರಾಮ ಮಂದಿರ ರೋಡ ಕಡೆಗೆ ಹೋಗುವಾಗ ಇಂಡಿಕೇಟರ ಹಾಕಿ
ಸನ್ನೆ ಮಾಡಿ ಹೋಗುವಾಗ ಮೋ/ಸೈಕಲ್ ನಂ: ಕೆಎ 32 ಕೆ 6258 ರ ಸವಾರನು ರಾಮ
ಮಂದಿರ ರೋಡ ಕಡೆಯಿಂಧ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ
ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಬಲ ಹುಬ್ಬಿಗೆ ಭಾರಿ ಪೆಟ್ಟು ,ಬಲ ಕಣ್ಣಿಗೆ ಗುಪ್ತ ಪೆಟ್ಟು ಹಾಗು ಎಡ
ಹಿಮ್ಮಡಿಗೆ ರಕ್ತಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment