POLICE BHAVAN KALABURAGI

POLICE BHAVAN KALABURAGI

27 September 2012

GULBARGA DISTRICT REPORTED CRIME


ನಕಲಿ ದಾಖಲೆ ಸಲ್ಲಿಸಿ ಪಾಸಪೋರ್ಟ ಪಡೆಯುತ್ತಿದ್ದ ಆರೋಪಿತರ ಬಗ್ಗೆ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಶ್ಮಾ ಗಂಡ ಮಹ್ಮದ ರಫೀಕ ವ|| 32 ವರ್ಷ, ಸಾ|| ನಬಿ ಮೊಹಲ್ಲಾ ಎಮ್.ಎಸ್.ಕೆ ಮಿಲ್ ಗುಲಬರ್ಗಾ ಇವರು ವಿದೇಶಕ್ಕೆ ಹೋಗುವ ಕುರಿತು ಪಾಸಪೋರ್ಟ ಸಲುವಾಗಿ ಅರ್ಜಿ ಸಂಖ್ಯೆ 4272/12 ದಿನಾಂಕ 30-04-2012 ರಂದು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿದಾರಳು ತಮ್ಮ ದಾಖಲಾತಿಗಳೊಂದಿಗೆ ಠಾಣೆಗೆ ದಿನಾಂಕ 01-06-2012 ರಂದು ಇಬ್ಬರು ಸಾಕ್ಷಿದಾರರೊಂದಿಗೆ ಠಾಣೆಗೆ ದಾಖಲಾತಿಗಳನ್ನು ಸಲ್ಲಿಸಿದ್ದು, ಹಾಗು ಇಬ್ಬರ ಸಾಕ್ಷಿ ಜನರ ಹೇಳಿಕೆ ಆಧಾರದ ಮೇಲೆ ಸದರಿಯವರ ಗುಣ ನಡತೆ ಹಾಗು ದಾಖಲಾತಿಗಳು ಸರಿಯಿದ್ದ ಬಗ್ಗೆ ವರದಿ ಸಲ್ಲಿಸಿದ್ದು ಇರುತ್ತದೆ. ನಂತರ ಅವರ ಬಗ್ಗೆ ಕೂಲಂಕೂಶವಾಗಿ ವಿಚಾರಣೆ ಮಾಡಿದ ನಂತರ ರೇಷ್ಮಾ ಇವಳು ನಕಲಿ ದಾಖಲಾತಿಗಳು ಸೃಷ್ಟಿಸಿ ಪಾಸಪೋರ್ಟ ಕುರಿತು ಅರ್ಜಿ ಸಲ್ಲಿಸಿದ್ದು, ಮತ್ತೆ ಮೂಲ ದಾಖಲಾತಿಗಳೊಂದಿಗೆ ಠಾಣೆಗೆ ಹಾಜರಾಗಲು ತಿಳಿಸಿದ ಮೇರೆಗೆ, ರೇಷ್ಮಾ ಇವಳನ್ನು ವಿಚಾರಿಸಲು ಸದರಿ ಪಾಸಪೋರ್ಟನ್ನು ಫರ್ಜಾನ ಬೇಗಂ ಹಾಗು ಅವಳ ಗಂಡ ಮತ್ತು ಗಫೂರ ಪಟೇಲ್ ಎಂಬುವವರು ತನ್ನ ಕಡೆಯಿಂದ ಹಣ ತೆಗೆದುಕೊಂಡು ನಕಲಿ ದಾಖಲಾತಿ ಸೃಷ್ಟಿಸಿ ಪಾಸಪೋರ್ಟ ಕೊಡಿಸಿದ್ದು ಇರುತ್ತದೆ ಅಂತ ತಿಳಿಸಿರುತ್ತಾಳೆ.ಸದರಿಯವಳು ಈ ಮುಂಚೆ ಹಾಜರುಪಡಿಸಿದ್ದ ರೇಷನ ಕಾರ್ಡ ನಂ 415669 ನೇದ್ದನ್ನು ಪರಿಶೀಲಿಸಲು ಸದರಿ ರೇಷನ ಕಾರ್ಡ ತಿದ್ದುಪಡಿ ಮಾಡಿದ್ದರ ಬಗ್ಗೆ ವಿಚಾರಿಸಲು ಆತನ ಹೆಸರು ಸಮೀರ ಅಂತ ಇದ್ದು, ಅವನು ಪೇಂಟರ್ ಕೆಲಸ ಮಾಡಿಕೊಂಡಿರುತ್ತಾನೆ ಅವನಿಗೂ  ಮತ್ತು ನನಗೆ ಯಾವ ಸಂಬಂಧ ಇರುವದಿಲ್ಲಾ ಅಂತ ತಿಳಿಸಿರುತ್ತಾಳೆ. ಕಾರಣ ರೇಷನ ಕಾರ್ಡ ಪರಿಶೀಲನೆ ಕುರಿತು ಮಾನ್ಯ ಸಹಾಯಕ ನಿರ್ದೇಶಕರು ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುಲಬರ್ಗಾ ರವರಿಗೆ ರೇಷನ ಕಾರ್ಡ ಸಂಖ್ಯೆ 415669 ನೇದ್ದನ್ನು ಪರಿಶೀಲಿಸಿ ಸದರಿ ಕಾರ್ಡ ಮೂಲದ್ದಾಗಿರುತ್ತದೆ ಅಥವಾ ಖೊಟ್ಟಿಯಾಗಿರುತ್ತದೆ ಎಂಬ ಬಗ್ಗೆ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯ ವರದಿಗಾಗಿ ಕೋರಿಕೊಂಡಿದ್ದರಿಂದ ಸದರಿಯವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ರೇಷ್ಮಾ ಇವಳಿಗೆ ಪಾಸಪೋರ್ಟ ಸಂಖ್ಯೆ ಕೆ 3238346 ನೇದ್ದನ್ನು ಕೊಡಿಸಿದ ಫರ್ಜಾನ ಬೇಗಂ ಹಾಗು ಅವಳ ಗಂಡ ಮಹ್ಮದ ಯುನೂಸ್ ಮತ್ತು ಗಫೂರ ಪಟೇಲ್ ಇವರುಗಳು ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಮೋಸ ಮಾಡಿದ್ದು ಕಂಡು ಬಂದಿರುವದರಿಂದ ಸದರಿಯವರ ವಿರುದ್ಧ ಪಿ.ಎಸ.ಐ ರಾಘವೇಂದ್ರ ನಗರ ಠಾಣೆ ರವರು ಠಾಣೆ  ಗುನ್ನೆ ನಂ: 70/2012 ಕಲಂ 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.


No comments: