ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಸಂಜೋಗ ಕೆ ರಾಠಿ, ಸಾ|| ಪ್ಲಾಟ ನಂ:6 ಗಜಾನನ ಕುಂಜ, ಆನಂದ ನಗರ, ಎಸ್.ಬಿ ಕಾಲೇಜ
ರೋಡ ಗುಲಬರ್ಗಾ ರವರು ನಾನು ದಿನಾಂಕ 27-09-2012 ರಂದು ನಗರದ ಸುಪರ ಮಾರ್ಕೆಟ ಬಡಾವಣೆ ಕಾಮತ ಹೊಟೇಲ ಆಟೋ ಸ್ಟ್ಯಾಂಡ
ಹತ್ತಿರ ನನ್ನ ಜೇಬಿನಲ್ಲಿದ್ದ ಒಂದು ಬಿ-9300 ಬ್ಲಾಕಬೇರಿ ಸ್ಮಾರ್ಟ ಪೋನ್ ಅ||ಕಿ|| 15,046/- ಬೆಲೆಬಾಳುವ ಮೊಬೈಲ
ಪೋನನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ
ಠಾಣೆ ಗುನ್ನೆ ನಂ: 109/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಚನ್ನವೀರಪ್ಪ ತಂದೆ ಕಲ್ಲಪ್ಪ ಗುಮ್ಮಾ ಉ: ವಕೀಲ ವೃತ್ತಿ ಸಾ: ಕಲ್ಯಾಣ ನಗರ ಗುಲಬರ್ಗಾರವರು ನನ್ನ ತಾಯಿಯಾದ ರೇವಮ್ಮ ರವರು ದಿನಾಂಕ:27-09-2012 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ
ಸಿದ್ದಿ ಪಾಷಾ ದರ್ಗಾಕ್ಕೆ ಬಂದು ದರ್ಶನ ಮಾಡಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಮೊಟಾರ ಸೈಕಲ್ ನಂ:
ಕೆಎ 32 ಡಬ್ಲೂ 2848 ನೇದ್ದರ ಚಾಲಕ ರಿಜ್ವಾನ ಈತನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ
ಹಳೆ ಎಸ್.ಪಿ.ಆಫೀಸ್ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ತಾಯಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾನೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2012 ಕಲಂ 279, 337 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶೇಕ ಫಯಾಜ ತಮದೆ ಶೇಕ ಮಹೆಬೂಬ ವಕ್ಯಾನಿಕ ಕೆಲಸ ಸಾ: ತಾಜ ನಗರ ಮುಸ್ಲಿಂ ಸಂಘ ಎಕಖಾನ ಮಜೀದ ಹಿಮದೆ ಗುಲಬರ್ಗಾ ರವರು ನಾನು
ಮತ್ತು ನನ್ನ ಗೆಳೆಯರಾದ ಮೋಸಿನ, ವಸೀಮ ರವರು ಕೂಡಿಕೊಂಡು ದಿನಾಂಕ 27-09-2012 ರಂದು ರಾತ್ರಿ 8-15 ಗಂಟೆ
ಸುಮಾರಿಗೆ
ಮೆಕ್ಯಾನಿಕ
ಕೆಲಸ
ಮುಗಿಸಿಕೊಂಡು
ಮನೆಯ
ಕಡೆಗೆ ಮಾತಾಡುತ್ತಾ ಬರುತ್ತಿರುವಾಗ ಎಡಕ್ಕೆ ಮೋಸಿನ ಮತ್ತು ವಸೀಮ ಇದ್ದರು.
ರೋಡ
ಎಡ ಬದಿಯಿಂದ ನಾನು ನನ್ನ ಸೈಕಲ ಹಿಡಿದುಕೊಂಡು ಹೊರಟಾಗ ಹಿಂದಿನಿಂದ ಅಂದರೆ
ಹುಮನಾಬಾದ
ರಿಂಗ
ರೋಡ
ಕಡೆಯಿಂದ
ಒಬ್ಬ
ಮೋಟಾರ
ಸೈಕಲ
ಸವಾರನು
ಅತಿವೇಗ
ಮತ್ತು
ಅಲಕ್ಷತನ
ನಡೆಸುತ್ತಾಬಂದು
ನನಗೆ
ಮತ್ತು
ನನ್ನ ಸೈಕಲಿಗೆ ಡಿಕ್ಕಿ
ಹೊಡೆದು ಸ್ಥಳದಲ್ಲಿ ಮೋಟಾರ
ಸೈಕಲ
ಬಿಟ್ಟು
ಓಡಿ
ಹೋಗಿರುತ್ತಾನೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 310/12 ಕಲಂ 279 337 ಐಪಿಸಿ
ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment