ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್
ಠಾಣೆ: ವಿರೇಶ
ತಂದೆ ಅಮೃತರಾವ ಪಂಗರಗಿ ಉದ್ಯೋಗ: ವ್ಯಾಪಾರ ಸಾ: ಮನೆ ನಂ-1/730 ಸಿದ್ದೇಶ್ವರ ಕಾಲೋನಿ ಸೇಡಂ ರೋಡ
ಗುಲಬರ್ಗಾರವರು ನನ್ನ ಟಿಪ್ಪರ ನಂ-ಕೆಎ 32 ಬಿ-2812 ವಾಹನವನ್ನು ದಿನಾಲು
ಸಿದ್ದೇಶ್ವರ ಕಾಲೋನಿಯಲ್ಲಿಯ ಮನೆ ಮುಂದೆ ನಿಲ್ಲಿಸುತ್ತಿದ್ದು, ಎಂದಿನಂತೆ ದಿನಾಂಕ 25-09-2012 ರಂದು ರಾತ್ರಿ 9-00
ಗಂಟೆಗೆ ವಾಹನದ ಚಾಲಕ ಬಸವರಾಜ ತಂದೆ ಸಾಯಬಣ್ಣ ಇತನು ನಮ್ಮ ಟಿಪ್ಪರನ್ನು ನಮ್ಮ ಮನೆಯ ಮುಂದೆ
ನಿಲ್ಲಿಸಿ ಮನಗೆ ಹೋಗಿರುತ್ತಾನೆ. ನಾವು ಊಟ ಮಾಡಿಕೊಂಡು ಮಲಗಿಕೊಂಡಿರುತ್ತೆವೆ, ದಿನಾಂಕ
26-09-2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನೋಡಲಾಗಿ ಮನೆಯ ಮುಂದೆ ನಿಲ್ಲಸಿದ ನಮ್ಮ
ಟಿಪ್ಪರ ನಂ-ಕೆಎ 32 ಬಿ 2812 ನೇದ್ದು ಕಾಣಲಿಲ್ಲ ಆಗ ನಾನು ಗಾಬರಿಗೊಂಡು ನಮ್ಮ ಚಾಲಕ ಬಸವರಾಜ
ಇತನಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವನು ನಾನು ತೆಗೆದುಕೊಂಡು ಹೋಗಿರುವದಿಲ್ಲ ಅಂತಾ
ತಿಳಿಸದನು. ಸದರಿ ಟಿಪ್ಪರ ನಂ-ಕೆಎ-32 ಬಿ-2812
ವಾಹನವನ್ನು ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ್ದನ್ನು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 220/2012 ಕಲಂ 379 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸ್ಟೇಶನ
ಬಜಾರ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಚಂದಾರಾವ ಪಾಟೀಲ ವಯ|| 60 ವರ್ಷ ಉ|| ನಿವೃತ್ತ ಸರಕಾರಿ ನೌಕರ
ಸಾ|| ಸೇಡಂ ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:18/03/2012
ರಂದು ಸ್ಟೇಷನ ಬಜಾರ ರಸ್ತೆಯಲ್ಲಿರುವ ಕಾಳಿಂಗ ಲಾಡ್ಜ ರೂಮ ನಂ: 107 ರಲ್ಲಿದ್ದಾಗ ಬೆಳಿಗ್ಗೆ 9-00 ಸುಮಾರಿಗೆ ಮಾದೇವಪ್ಪ ಬಿರಾದಾರ ಲಾರಾ
ಟೇಲರ್ ಗುಲಬರ್ಗಾ ಸಂಗಡ ಮೂರು ಜನರು ಕೂಡಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಪ್ಲಾಟ ನಂ:
49 ನೇಧ್ದನ್ನು ಬೇರೆಯವರಿಗೆ ಮಾರಿದಿಯ್ಯಾ ಅಂತಾ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ
ಕಾರಿನಲ್ಲಿ ಹಾಕಿಕೊಂಡು ಪಿಸ್ತೂಲ್ ದಿಂದ ಜೀವದ ಬೆದರಿಕೆ ಹಾಕಿ ಖಾಲಿ ಪೇಪರಗಳ ಮೇಲೆ ರುಜು ಪಡೆದು
ಮರಳಿ ಕಾಳಿಂಗ ಲಾಡ್ಜ ಹತ್ತಿರ ತಂದು ಬಿಟ್ಟು ಹೋಗಿದ್ದಾರೆ ಅಂತಾ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ 123/2012 ಕಲಂ
147,148,473,307,348,363,468,506,34,ಐ,ಪಿ.ಸಿ & 25(3) ಇಂಡಿಯನ್ ಆರ್ಮ್ಸ
ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ
ಪೊಲೀಸ್ ಠಾಣೆ :
ದಿನಾಂಕ:28/09/2012 ರಂದು ಮಧ್ಯರಾತ್ರಿ 2-30 ಗಂಟೆಯಿಂದ
ಬೆಳಗಿನ ಜಾವ 5-00 ಗಂಟೆಯ ಅವದಿಯಲ್ಲಿ ರಾಜಹಂಸ್ ಬಸ್ ನಂ ಕೆ.ಎ-25-ಎಫ-2595 ನೇದ್ದರ ಲಗೇಜ ಇಡುವ
ಸ್ಥಳದಲ್ಲಿ ವಿ.ಐ.ಪಿ ಸೂಟಕೇಸದಲ್ಲಿ 30 ಗ್ರಾಂ ಬಂಗಾರದ ಚೈನ್ ಅ.ಕಿ-75,000/- ರೂ, 5 ಸೀರೆಗಳು 8,000/- ರೂ, ಪ್ಯಾಂಟ ಶರ್ಟ ಅ.ಕಿ 2000/- ರೂ ಹೀಗೆ ಒಟ್ಟು 85 ಸಾವಿರ
ಬೇಲೆ ಬಾಳುವ ಮೌಲ್ಯದ್ದು ವಸ್ತುಗಳು ಸೂಟಕೇಸದಲ್ಲಿಟ್ಟಿದ್ದು ಜೇವರ್ಗಿ ಬಸ್ಸ ನಿಲ್ದಾಣದಲ್ಲಿ ನಿಂತಾಗ ಯಾರೋ ಕಳ್ಳರು ಸೂಟಕೇಸ ಸಮೇತ
ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 146/12
ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
No comments:
Post a Comment