ಮಟಕಾ
ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ
ಠಾಣೆ : ದಿನಾಂಕ 28/01/2014 ರಂದು 2000 ಗಂಟೆಗೆ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ
ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶ ನದಲ್ಲಿ
ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐ, ಮತ್ತು ಡಿಸಿಐಬಿ ಸಿಬ್ಬಂದಿಯವರೊಂದಿಗೆ ದುತ್ತರಗಾಂವ ಗ್ರಾಮದಲ್ಲಿ ಸಿದ್ದಲಿಂಗಯ್ಯ
ತಂದೆ ಗುರುಮುರ್ತಯ್ಯ ವಿಶ್ವನಾಥ ಮಠ ಇತನು ಗ್ರಾಮದ ಗ್ರಾಮ
ಪಂಚಾಯತ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ
ಹಿಡಿದಿದ್ದು ಅವನು ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ
5015/-, 3 ಮಟಕಾ ಚೀಟಿಗಳು, ಒಂದು ಬಾಲ
ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣಗಳು :
ಫರತಾಬಾದ
ಠಾಣೆ : ದಿನಾಂಕ: 28-01-2014 ರಂದು
ಬೆಳಗ್ಗೆ 07-00 ಗಂಟೆಯ ಸುಮಾರಿಗೆ ದೇವಿಂದ್ರ ತಂದೆ ಬಾಬುರಾಯ ಬಾಬನೂರ ಸಾ: ರಾಮನಗರ ಸುಲ್ತಾನಪೂರ ರೋಡ ಗುಲಬರ್ಗಾ ಮತ್ತು
ನನ್ನ ಚಿಕ್ಕಮನ ಗಂಡನಾದ ಭೀಮರಾಯ ಕೂಡಿಕೊಂಡು ನಮ್ಮ ಸಂಬಂಧಿಕನಾದ ರೇವಣಸಿದ್ದಪ್ಪ ಇತನ ಮೋಟರ
ಸೈಕಲ ನಂ ಕೆ.ಎ-32 ಎಲ್-7216 ನೆದ್ದನ್ನು ತಗೆದುಕೊಂಡು ಜೇವರ್ಗಿ ತಾಲೂಕಿನ ಬೇಲೂರ ಗ್ರಾಮಕ್ಕೆ ಹೋಗಿ
ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಗಳು ಹಂಚಿ ಅಲ್ಲಿಂದ ಜೇವರ್ಗಿಗೆ ಬಂದು ಅಲ್ಲಿಯೂ ಕೂಡ ಲಗ್ನ
ಪತ್ರಗಳನ್ನು ಹಂಚಿ ಮರಳಿ ಶಹಬಾದಕ್ಕೆ ಹೋಗುವ ಸಲುವಾಗಿ ಜೇವರ್ಗಿಯಿಂದ ಮದ್ಯಾಹ್ನ 2-15 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೂಲಕ ಶಹಬಾದ ಕ್ರಾಸ ಹತ್ತಿರ 2-45 ಗಂಟೆಯ ಸುಮಾರಿಗೆ ಶಹಬಾದ ರೋಡಿನ ಕಡೆ
ತಿರಗಲು ನಾನು ಮೋಟರ ಸೈಕಲ್ ಇಂಡಿಕೇಟರ್ ಹಾಕಿದ್ದು ಮತ್ತು ನನ್ನ ಹಿಂದೆ ಕುಳಿತ ಭೀಮರಾಯ ಇತನು
ಬಲಗೈ ಕೈ ಸನ್ನೆ ಮಾಡಿ ತಿರುಗುತ್ತಿದ್ದಾಗ ನಮ್ಮ ಎದುರುಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಕಾರು
ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್
ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಕೇಳಗಡೆ ಬಿದಿದ್ದರಿಂದ ನನಗೆ ಎಡ ಭುಜಕ್ಕೆ ಸ್ವಲ್ಪ
ರಕ್ತ ಗಾಯವಾಗಿದಲ್ಲದೆ ಎಡ ಮೊಳಕಾಲಗೆ ಒಳ ಪೆಟ್ಟಾಗಿದ್ದು. ನನ್ನ ಹಿಂದೆ ಕುಳಿತ ನನ್ನ ಕಾಕ ಭೀಮರಾಯ
ಇವರಿಗೆ ನೋಡಲು ಅವರ ಎಡ ಮತ್ತು ಬಲ ಭಾಗದ ಪಕ್ಕೆಲಬುಗಳಿಗೆ, ಎದೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಬೇವುಷ ಆಗಿದ್ದು ನಮಗೆ
ಅಪಘಾತ ಪಡಿಸಿದ್ದ ಕಾರ ನಂ ನೋಡಲಾಗಿ ಕೆ.ಎ-35 ಎನ್-1742 ನೆದ್ದರ ಚಾಲಕ ಮತ್ತು ಕಾರಿನಲ್ಲಿದವನು ಕೂಡಿ ಅದೇ ಕಾರಿನಲ್ಲಿ ನನಗೆ
ಮತ್ತು ನನ್ನ ಕಾಕನಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು
ಆಸ್ಪತ್ರೆ ವೈದ್ಯರು ನಮ್ಮ ಕಾಕ ಭಿಮರಾಯ ಇವರಿಗೆ ನೋಡಿ ಪರಿಕ್ಷಿಸಿ ಸದರಿಯವರು ಮಾರ್ಗ ಮದ್ಯದಲ್ಲಿ
ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ
ಠಾಣೆ : ದಿನಾಂಕ: 28-01-2014 ರಂದು
ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಶ್ರೀ ಮಲ್ಲಣ್ಣಾ ತಂದೆ ಸಾಯಬಣ್ಣಾ ಗುಜಲೇರ ( ಇನಾಮದಾರ) ಸಾ: ಹುಲಕಲ್ಲ(ಕೆ) ತಾ:ಶಹಾಪೂರ ಜಿ: ಯಾದಗಿರಿ ರವರ ಮಗ ಭೀಮಾಶಂಕರ ಈತನು ಗುಲಬರ್ಗಾಕ್ಕೆ ನಮ್ಮೂರಿನ ಮರಿಗೌಡ ಮಾಲಿ ಪಾಟೀಲ
ಇವರ ಬುಲೋರೋ ಜೀಪ ರೀಪೇರಿ ಮಾಡಿಸುವುದ್ದಕ್ಕಾಗಿ ತಾನು ನಡೆಸುತ್ತಿದ್ದ ಟಾಟಾ ಎಸಿ ನಂ: ಕೆಎ-33 ಎ-0872 ನೇದ್ದಕ್ಕೆ ಟೋಚನ ಮಾಡಿಕೊಂಡು ಹೋಗುವುದ್ದಿದೆ ಅಂತಾ ಹೇಳಿ ಮನೆಯಿಂದ
ಹೋದನು. ನಂತರ ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮೂರಿನ ಹಣಮಂತರಾಯ ಇನಾಮದಾರ ಇವರು ಫೊನ
ಮಾಡಿ ತಿಳಿಸಿದ್ದೇನೆಂದೆರೆ, ನಾನು ನಿಮ್ಮ ಮಗ ನಡೆಸುತ್ತಿದ್ದ ಟಾಟಾ ಎಸಿ ವಾಹನಕ್ಕೆ
ಮರಿಗೌಡರ ಬುಲೊರೋ ಜೀಪನ್ನು ಟೋಚನ ಮಾಡಿಕೊಂಡು ನಾನು ಬೊಲೊರೋ ಜೀಪಿನಲ್ಲಿ ಕುಳಿತುಕೊಂಡು ರಾಷ್ಟ್ರೀಯ
ಹೆದ್ದಾರಿ ನಂ: 218 ರಸ್ತೆಯ ಮೂಲಕ ಹೋಗುತ್ತಿದ್ದಾಗ ಈಗ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಫಿರೋಜಾಬಾದ ದರ್ಗಾ
ದಾಟಿ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ
ನಡೆಯಿಸಿಕೊಂಡು ಬಂದು ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗ ಭೀಮಾಶಂಕರ ಈತನು
ವಾಹನದಿಂದ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಮತ್ತು ಲಾರಿ ಚಾಲಕನು ಅಪಘಾತ ಪಡಿಸಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ
ಲಾರಿ ನಂ: ಕೆಎ-32 ಎ-8888 ಅಂತಾ ಇದ್ದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ
: ಶ್ರೀ ಮಹಾದೇವಪ್ಪಾ ತಂದೆ
ಗುರಪ್ಪಾ ಚಿಂಚೋಳಿ ಮು|| ಸುಂಟನೂರ ತಾ|| ಆಳಂದ ರವರ ಹೆಂಡತಿಯಾದ ಕುಸಮಾ ರವರು ದಿನಾಂಕ 27-01-2014
ರಂದು ಸಾಯಂಕಾಲ 4.50 ಗಂಟೆಯ ಸುಮಾರಿಗೆ ಶಾಲೆ ಬಿಟ್ಟ ನಂತರ ನನ್ನ ಹೆಂಡತಿಯಾದ ಕುಸುಮಾ ಶಿಕ್ಷಕಿ ಇವರು ಅದೇ ನಮ್ಮ ಶಾಲೆಯ ಶಿಕ್ಷಕ
ದಿಲೀಪ ಕುಲ್ಕರ್ಣಿ ಸಾ|| ಪಡಸಾವಳಗಿ ಇವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7016 ನೇದರ ಮೇಲೆ ಆಳಂದ
ಕಡೆಗೆ ಹೋಗುವಾಗ ಹೊನ್ನಳ್ಳಿ ಕ್ರಾಸ್ ಹಾಗೂ ಹೊನ್ನಳ್ಳಿ ಊರಿನ ಮಧ್ಯದಲ್ಲಿ ಹೋಗುವಾಗ ರೋಡ ಸರಿ
ಇರದಿದ್ದರಿಂದ ತಗ್ಗು ದಿನ್ನೆಗಳು ಇರುವುದರಿಂದ ದಿಲೀಪ ಕುಲ್ಕರ್ಣಿ ಶಿಕ್ಷಕರು ತಮ್ಮ ವಾಹನ
ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಚಲಾಯಿಸಿದ್ದಕ್ಕೆ ಕುಸುಮಾ ಶಿಕ್ಷಕಿಯವರು ರೋಡಿನ ಜಂಪಿನಲ್ಲಿ
ಮೋಟಾರ ಸೈಕಲನಿಂದ ಬಿದ್ದು ತಲೆಯ ಹಿಂಭಾಗಕ್ಕೆ ಭಾರಿ ಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು 108
ಅಂಬ್ಯೂಲೆನ್ಸದಲ್ಲಿ ಬಸವೇಶ್ವರ ಆಸ್ಪತ್ರಗೆ ಬಂದು ನನ್ನ ಹೆಂಡತಿಗೆ ಆಸ್ಪತ್ರೆಯ ವೈದ್ಯರು ಉಪಚಾರ
ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕೂಡಲೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ
ನಾವೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹೈದ್ರಾಬಾದದ ಯಶೋಧರಾ ಆಸ್ಪತ್ರಗೆ ತೆಗೆದುಕೊಂಡು
ಹೋಗುವಾಗ ಮಾರ್ಗ ಮಧ್ಯೆ ಅಪಘಾತದಿಂದ ಉಂಟಾದ ಭಾರಿ ಗಾಯದಿಂದ 28-01-2014 ರಂದು ಬೆಳಿಗ್ಗೆ 1.30
ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ದೌಲತಬೇಗಮ ಗಂಡ ಖಾದರ ಬೇಗ ಸಾ: ಮನೆ ನಂ
4601/24/16 ಹೊಸ ಬಡಾವಣೆ ಎಮ್.ಬಿ ನಗರ ಗುಲಬರ್ಗಾ ರವರು ದಿನಾಂಕ 28-01-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಖಾದಿ
ಗ್ರಾಮೋದ್ಯೋಗ ಹತ್ತಿರ ದಾಖಲೆಗಳನ್ನು ಝರಾಕ್ಸ ಮಾಡಿಕೊಂಡು ಬ್ರಹ್ಮಪೂರ ಪೊಲೀಸ ಠಾಣೆಯ ಹಿಂದುಗಡೆ
ಇರುವ ಮಾರ್ಡನ ಗ್ಯಾಸ ಏಜೇನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ
ಎದುರು ರೋಡ ಮೇಲೆ ಮೋ/ಸೈಕಲ ನಂ ಕೆಎ-32 ಇಡಿ-2986 ರ ಸವಾರ ಮೋ/ಸೈಕಲನ್ನು ಅತೀವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ
ಪಡಿಸಿ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಕಾಳಗಿ
ಠಾಣೆ : ಶ್ರೀ ಬಸವರಾಜ ತಂದೆ ಜಗಪ್ಪ ಹೋಸಮನಿ ಸಾ:ಹೆಬ್ಬಾಳ ರವರು ದಿನಾಂಕ
28-01-2014 ರಂದು ಮುಂಜಾನೆ ನಾನು ನನ್ನ ಖಾಸಗಿ
ಕೆಲಸಕ್ಕಾಗಿ ಕಾಳಗಿಗೆ ಬಂದಿದ್ದು ಕಾಳಗಿಯಲ್ಲಿ ನನ್ನ ಗೆಳೆಯನಾದ ಸಿದ್ದು ಸಾಗರ ಇತನು ಭೇಟಿಯಾಗಿ
ನನಗೆ ನಮ್ಮ ಅತ್ತೆಯಾದ ಶೋಭಾ ಇವಳಿಗೆ ಭೇಟಿಯಾಗಿ ಬರುವುದಿದ್ದೆ ಕಾರಣ ಮಂಗಲಗಿ ಗ್ರಾಮಕ್ಕೆ ಹೋಗಿ
ಬರೋಣ ಅಂತಾ ನನ್ನನ್ನು ಕರೆದುಕೊಡು ಮಂಗಲಗಿ ಗ್ರಾಮಕ್ಕೆ ಬಂದಿದ್ದು ಶೋಭಾ ಇವರ ಮನೆಗೆ ಹೋಗಿ
ನೋಡಲಾಗಿ ಶೋಭಾಳು ಮನೆಗೆ ಕೀಲಿ ಹಾಕಿ ಕಾಳಗಿಗೆ ಹೋದ ಬಗ್ಗೆ ಗೋತ್ತಾಯಿತು ಆಗ ನಾವಿಬ್ಬರು ಅಲ್ಲೆ
ಇದ್ದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು 4-00 ಪಿ.ಎಂ ಸುಮಾರಿಗೆ ಮಾದರ
ಓಣಿಯ 10-11 ಜನರು ಕೂಡಿ ಕೈಯಲ್ಲಿ ಕೋಯ್ತಾ, ಚಾಕು
ಹಿಡಿದುಕೊಂಡು ನಮ್ಮ ಹತ್ತಿರ ಬಂದವರೇ ನಮಗೆ ಏ ಬೋಸಡಿ ಮಕ್ಕಳೇ ನೀವು ಯಾರು ಇಲ್ಲಿಗ್ಯಾಕೆ ಬಂದಿರಿ
ಅಂತಾ ನಮಗೆ ತಿಳಿದು ಬಂದಿದ್ದೆ ಅಂತಾ ಬೈಯುತ್ತಾ ಕೇಲವರು ನಮಗೆ ಒತ್ತಿ ಹಿಡಿದುಕೊಂಡರು ಬಾಬು
ಕಟ್ಟಿಮನಿ ಇವನು ನನ್ನ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಯ್ತಾದಿಂದ ನನ್ನ
ಕುತ್ತಿಗೆಗೆ ಹೊಡೆಯಲು ಬಂದನು ನಾನು ನನ್ನ ಎಡ ಗೈ ಮುಂದೆ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ನನ್ನ
ಎಡ ಗೈ ಹಸ್ತಕ್ಕೆ ಜೋರಾಗಿ ಪೆಟ್ಟು ಬಿದ್ದು ಭಾರಿ ರಕ್ತ ಗಾಯವಾಗಿ ಅರ್ಧದಷ್ಟು ಹಸ್ತ ಕತ್ತರಿಸಿ
ಹೋಗಿರುತ್ತದೆ ಬಿಡಿಸಿ ಕೊಳ್ಳಲು ಬಂದಾ ಸಿದ್ದು ಇತನಿಗೆ ಸೂರ್ಯಕಾಂತ ಕಟ್ಟಿಮನಿ ಇತನು ಅದೇ
ಕೋಯ್ತಾ ಕಸಿದುಕೊಂಡು ಸಿದ್ದುನ ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆಯ ಮೇಲೆ
ಹೊಡೆಯುವಷ್ಟರಲ್ಲಿ ಸಿದ್ದು ತನ್ನ ಬಲ ಗೈ ಅಡ್ಡ ತಂದಾಗ ಆ ಪೆಟ್ಟು ಆತನ ಬಲ ಗೈ ರಟ್ಟೆಗೆ ಭಾರಿ ಜೋರಾಗಿ
ಬಿದ್ದು ಭಾರಿ ರಕ್ತ ಗಾಯಗಳಾಗಿರುತ್ತವೆ ಉಳಿದ 9
ಜನರು ನಮ್ಮಿಬ್ಬರನ್ನು ಕೈಯಿಂದ ಬೆನ್ನಿಗೆ ಹೊಡೆಯುತ್ತಾ ಖಲಾಸ ಮಾಡುವ ತನಕ ಬಿಡಬಾರದು ಅಂತಾ
ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment