POLICE BHAVAN KALABURAGI

POLICE BHAVAN KALABURAGI

29 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 28-01-2014 ರಂದು ರಾತ್ರಿ 9:45 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನಮ್ಮೂರಿನ ಕರೆಯಂಗಳದ ಪೆಟ್ರೊಲ್‌ ಪಂಪ ಸಮೀಪ ಬರುತ್ತಿರುವಾಗ ರೋಡಿನ ಮೇಲೆ ಒಂದು ಮೃತ ದೆಹವು ಬಿದ್ದಿದ್ದನ್ನು  ನೋಡಿ ನಾನು ಕೂಡಲೆ ವಾಹನ ನಿಲ್ಲಿಸಿ ಇಳಿದು ಅಲ್ಲಿಗೆ ಹೋಗಿ ನೋಡುತ್ತಿದ್ದಂತೆ ಸದರಿ ಸ್ಥಳಕ್ಕೆ  ಸುದ್ದಿ ಗೊತ್ತಾಗಿ ಪೊಲೀಸ್‌ನವರು ಬಂದಿರುತ್ತಾರೆ. ನಾನು ಮತ್ತು ಪೊಲೀಸ್‌ರು ಕೂಡಿಕೊಂಡು ಸದರಿ ಮೃತ ಹೊಂದಿದ್ದ ವ್ಯಕ್ತಿಯನ್ನು ಪರಿಶಿಲಿಸಿ ನೋಡಲಾಗಿ ಮೃತಪಟ್ಟ ವ್ಯಕ್ತಿಯ ಮೈಮೇಲೆ ಯಾವುದೊ ಒಂದು ಟಾಟಾ ಇಂಡಿಕಾ ಕಾರನ ಟೈಯರಯುಳ್ಳಂತ ವಾಹನವು ಮೈಮೇಲೆ ಹಾಯ್ದು ಮೃತ ಪಟ್ಟಿದ್ದು ಇರುತ್ತದೆ. ಸದರಿ ಸ್ಥಳದಲ್ಲಿ ಟಾಟಾ ಇಂಡಿಕಾದ ಟೈಯರಯುಳ್ಳಂತ ವಾಹನವು ಬ್ರೇಕ್‌ ಮಾಡಿದ ಸುಮಾರು 20 ಫಿಟ್‌ ಉದ್ದ ಗುರುತು ಬಿದ್ದಿರುತ್ತಿದೆ. ಸದರಿ ಮೃತ ಹೊಂದಿದ ವ್ಯಕ್ತಿಯ ಸುತ್ತಲು ನೋಡಲಾಗಿ ಪಕ್ಕದಲ್ಲಿ ಒಂದು ಮೋಬೈಲ್‌ ಬ್ಯಾಟರಿ ಮತ್ತು ಸಿಮ್‌ಕಾರ್ಡ ಇಲ್ಲದ ಮೋಬೈಲ್‌ ಫೊನ್‌ ಬಿದ್ದಿರುತ್ತದೆ. ಸದರಿ ವ್ಯಕ್ತಿಯ ಅಂದಾಜು ವಯಸ್ಸು 25 ರಿಂದ 30 ಇರುತ್ತದೆ. ಸದರಿ ಘಟನೆಯು ಯಾವುದೊ ಒಂದು ಟಾಟಾ ಇಂಡಿಕಾ ಕಾರನಂತ ಟೈಯರಯುಳ್ಳ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆತನ ಮೈಮೇಲೆ ಹಾಯಿಸಿದ್ದರಿಂದ ತಲೆಯ ಬಾಗ ಪುರ್ತಿಯಾಗಿ ಒಡೆದಿರುತ್ತದೆ ಮತ್ತು ಮುಖ ನುಜ್ಜು ಗುಜ್ಜಾಗಿದ್ದಲ್ಲದೆ ಕೈಕಾಲುಗಳು ಮುರಿದಿರುತ್ತವೆ. ಹಾಗೂ ಮೈಮೇಲೆ ಹಸಿರು ಬಣ್ಣದ ಬಿಳಿ ಗೆರೆಯುಳ್ಳ ಒಂದು ಅಂಗಿ, ಒಂದು ಬಿಳಿ ಬಣ್ಣದ ಬನಿಯನ್‌ ಮತ್ತು ಒಂದು ಕಪ್ಪು ಬಣ್ಣ ಪ್ಯಾಂಟ ದರಿಸಿದ್ದು ಹರಿದು ಚಿಂದಿಯಾಗಿರುತ್ತವೆ, ಹಾಗು ಒಂದು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ ದಾರ ಇದ್ದಿರುತ್ತವೆ. ಮೃತ ವ್ಯಕ್ತಿಯ ಮುಖವು ನುಜ್ಜು ಗುಜ್ಜಾಗಿ ಗುರುತು ಸಿಗದ ಸ್ಥಿಯಲ್ಲಿ ಇರುತ್ತದೆ. ಅಂತಾ ಶ್ರೀ  ಶಂಕರ ತಂದೆ ನಾಗಪ್ಪಾ ಬಾಳಿ   ಸಾಫರಹತಾಬಾದ ತಾ:ಜಿ; ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸಣ್ಣ ತಂದೆ ಹಳ್ಳೆಪ್ಪಾ ಸಾ:ಸಿಂಧನಮಡು ರವರು ದಿನಾಂಕ:28-01-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಕೂಲಿ ಕೆಲಸ ಮಾಡಿ ಮನೆಗೆ ಬರುತ್ತಿರುವಾಗ ಹುಸೇನಪ್ಪ ತಂದೆ ರಾಮಣ್ಣ ವಡ್ಡರ ಇವರ ಮನೆಯ ಮುಂದೆ ಸಿ.ಸಿ. ರೋಡಿನ ಮೇಲೆ ಹೊರಟಾಗ ನಮ್ಮೂರಿನ ಅಬ್ದುಲ ತಂದೆ ಅಲ್ಲಾವೊದ್ದಿನ್ ಶಾಹ ಇತನು ನನಗೆ ತಡೆದು ನಿಲ್ಲಿಸಿ ಏ ವೊಡ್ಡ ಸೂಳೆಮಗನೇ ಬಸ್ಸ್ಯಾ ನಮ್ಮ ಮನೆಯ ಮುಂದೆ ದಿನಾಲು ಕುಡಿದು ಬಂದು ಬೈಯುತ್ತಿಯಾ ರಂಡಿ ಮಗನೇ ಅಂತ ಬೈದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲಗಾಲಿನ ಕಪಗಂಡಕ್ಕೆ ಬಲವಾಗಿ ಹೊಡೆದಿದ್ದರಿಂದ ಕಾಲು ಮುರಿದಿರುತ್ತದೆ. ಆಗ ನಾನು ಚೀರಾಡುತ್ತಿರುವಾಗ ಮತ್ತೆ ಎಡಗಾಲಿನ ಪಾದದ ಬೆರಳಿಗೆ ಬಲವಾಗಿ ಬಡಿಗೆಯಿಂದ ಹೊಡೆದು ಝಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 28-01-2014 ರಂದು ಸಾಯಂಕಾಲ  06-00 ಗಂಟೆಗೆ  ಕೋರ್ಟ ಪಿಸಿ - 518  ಮಂಜುನಾಥ  ಇವರು ಮಾನ್ಯ ನ್ಯಾಯಾಲಯದ ಆದೇಶ ಪತ್ರ ಅದಕ್ಕೆ ಫಿರ್ಯಾದಿಯ ಅರ್ಜಿ ಲಗತ್ತು ಇದ್ದು  ತಂದು ಹಾಜರಪಡಿಸಿದ್ದು  ಸಾರಾಂಶ ಏನೆಂದರೆ ಸಂದೀಪ ತಂದೆ ಚಂದ್ರಕಾಂತ ಪಾಟೀಲ  ಸಾ|| ಲಾಡಚಿಂಚೋಳಿ ಗ್ರಾಮ ತಾ|| ಆಳಂದ,  ಜಿ|| ಗುಲಬರ್ಗಾ ಇವನು 50,000/-ರೂ. ನಕಲಿ ಬ್ಯಾಂಕ ಚೆಕ್ ಕೊಟ್ಟು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :
ಮಹಿಳಾ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಬಂಡಪ್ಪ ಸಾ : ಆಶ್ರಯ ಕಾಲೋನಿ  ಗುಲಬರ್ಗಾ ಇವರು ದಿನಾಂಕ  23.01.2014 ರಂದು ತಮ್ಮ ಮಗಳಾದ ಕುಮಾರಿ ಲಕ್ಷ್ಮೀ ಇವಳು ಎಮ್.ಪಿ.ಎಚ್.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 23.01.14 ರಂದು ಬೆಳಿಗ್ಗೆ 9-30 ಗಂಟೆಗೆ ಎಮ್.ಪಿ.ಎಚ್.ಎಸ್ ಕಾಲೇಜಿಗೆ ರಂಗೋಲಿ ಸ್ಪರ್ಧೆಯಲ್ಲಿ  ಭಾಗವಹಿಸಲು ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಅದೇ ದಿನ ಸಾಯಂಕಾಲದಿಂದ ನಾನು ನನ್ನ ಮಗಳನ್ನು ಹುಡುಕಾಡುತ್ತಿದ್ದೇನೆ ನನ್ನ ಸಂಬಂಧಿಕರ ಹತ್ತಿರ ಕೂಡಾ ವಿಚಾರಣೆ ಮಾಡಿರುತ್ತೇನೆ. ಆದರೆ ಇಂದಿನವರೆಗೆ ನನ್ನ ಮಗಳ ಪತ್ತೆಯಾಗಿರುವುದಿಲ್ಲ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: