ಕೊಲೆ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ: ಶ್ರೀ ಮಸ್ತಾನಸಾಬ ತಂದೆ ಮೌಲಾನಾಸಾಬ ಶೇಖ ವ:45 ವರ್ಷ ಜಾ: ಮುಸ್ಲಿಂ ಉ: ಗುತ್ತಿಗೇದಾರ ಸಾ: ಡೆಕೇನ ಕಾಲೂನಿ ಶೇಖ ರೋಜಾ ಖಾದ್ರಿ ಚೌಕ ಗುಲಬರ್ಗಾ ರವರು ನಮ್ಮ ತಂದೆ 5 ಜನ ಗಂಡು ಮಕ್ಕಳು 4 ಜನ ಹೆಣ್ಣು ಮಕ್ಕಳಿದ್ದು ತಂದೆ ಯವರು 6 ವರ್ಷಗಳ ಹಿಂದೆ ಮೃತ್ತ ಪಟ್ಟಿರುತ್ತಾನೆ. ತಾಯಿಯಾದ ಮಹಿಬೂಬಿ ಇವಳು ನನ್ನ ಹತ್ತಿರ ಇದ್ದು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಗಂಡು ಮಕ್ಕಳಲ್ಲಿ ನಾನು ಮತ್ತು ಖಾಜಾಸಾಬ. ಅಬ್ಬಾಸ. ಅಯುಬ. ಹಾಗೂ ರಹೀಮ ಎಲ್ಲರೂ ಕಾರ ಪೇಂಟರ ಕೆಲಸ ಮಾಡಿಕೊಂಡು ಹೊಂಡತಿ ಮಕ್ಕಳ್ಳೊಂದಿಗೆ ಆಳಂದ ರಸ್ತೆಯ ಖಾದರಿ ಚೌಕದ ಡೆಕ್ಕನ ಕಾಲೂನಿಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತೆವೆ. ನನ್ನ ತಮ್ಮನಾದ ರಹೀಮ ಶೇಖ ಇತನು ತನ್ನ ಹೆಂಡತಿಯಾದ ಫಾತಿಮಾ ಹಾಗೂ ತನ್ನ 2 ಮಕ್ಕಳೊಂದಿಗೆ ಶೇಖ ರೋಜಾದ ನಬಿ ಕಾಲೂನಿಯಲ್ಲಿ ವಾಸವಾಗಿರುತ್ತಾರೆ. ಆತನು ಕೂಡಾ ಕಾರ ಪೇಂಟರ ಕೆಲಸ ಮಾಡಿಕೊಂಡು ಇರುತ್ತಾನೆ. ದಿನಾಂಕ 3/12/2011 ರಂದು ಬೆಳ್ಳಿಗೆ 10 ಗಂಟೆಯ ಸುಮಾರಿಗೆ ಖಣದಾಳದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಒಬ್ಬ ವ್ಯಕ್ತಿ ಕೊಲೆಯಾಗಿದ್ದು ಆ ವ್ಯಕ್ತಿಯ ಜೇಬಿನಲ್ಲಿದ ಡೈರಿಯಲ್ಲಿ ನನ್ನ ಫೋನ ನಂಬರ ನೋಡಿ ನನಗೆ ಫೋನ ಮಾಡಿದ್ದು ನಾನು ಗಾಬರಿಗೊಂಡು ನಾನು ಮತ್ತು ನನ್ನ ತಮ್ಮನಾದ ಖಾಜಾ ಹಾಗೂ ಇತರರೊಂದಿಗೆ ಸ್ಥಳಕ್ಕೆ ಹೋಗಿ ನೋಡಲು ತನ್ನ ತಮ್ಮನಾದ ರಹೀಮ ಇತನು ಮೃತ್ತ ಪಟ್ಟಿದ್ದು ನೋಡಲಾಗಿ ಆತನ ಕುತ್ತಿಗೆಗೆ ಹರಿತವಾದ ಚಾಕುವಿನಿಂದ ಚುಚ್ಚಿ ಭಾರಿ ರಕ್ತಗಾಯ ಪಡಿಸಿದ್ದರಿಂದ ಮೃತ್ತ ಪಟ್ಟಿರುತ್ತಾನೆ. ರಹೀಮ ಇತನು ನಿನ್ನೆ ದಿನಾಂಕ 2/12/2011 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ಇನ್ನೊಬ್ಬ ತಮ್ಮನಾದ ಖಾಜಾಸಾಬ ಇತನ ಮೊಬೈಲ ತಗೆದುಕೊಂಡು ನನಗೆ ಕೆಲಸ ಇದೆ ಹೊಗುತ್ತೆನೆ ಅಂತಾ ಹೇಳಿದರ ಬಗ್ಗೆ ನನ್ನ ತಮ್ಮನಾದ ಖಾಜಾಸಾಬ ಇತನಿಂದ ಗೊತ್ತಾಗಿದ್ದು ಇರುತ್ತದೆ. ಸದರಿ ನನ್ನ ತಮ್ಮನಾದ ರಹೀಮ ಇತನಿಗೆ ನಿನ್ನೆ ದಿನಾಂಕ 2/12/2011 ರಂದು ಯಾರೊ ರಾತ್ರಿ ವೇಳೆಯಲ್ಲಿ ಯಾವುದೊ ದುರುದ್ವೇಶದಿಂದ ಕರೆದುಕೊಂಡು ಹೋಗಿ ಖಣದಾಳ ಗ್ರಾಮಕ್ಕೆ ಹೊಗುವ ಸರಕಾರಿ ಪ್ರೌಡ ಶಾಲೆಯ ಆರವಣದಲ್ಲಿ ಕೊಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 212/2011 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment