POLICE BHAVAN KALABURAGI

POLICE BHAVAN KALABURAGI

16 November 2012

Gulbarga District Reported Crime


                                  ದರೋಡೆಕೊರರ ಬಂಧನ :

ಶಾಹಾಬಾದ ನಗರ ಠಾಣೆ :ದಿನಾಂಕ: 09/11/2012 ರಂದು 00.30 ಗಂಟೆಗೆ ಪಿರ್ಯಾದಿ ಶ್ರೀ ಸುಭಾಷ ತಂದೆ ಗೀರೆಪ್ಪಾ ಬಾಲಖೆಡ ವ: 47 ಜಾ: ಲಿಂಗಾಯತ ಉ: ಆನಂದ ಚೊಂಚೊಳಿ ರವರ ಹತ್ತಿರ ಮುನೀಮ್ ಕೆಲಸ ಸಾ:ರೇವಣಸಿದ್ದೇಶ್ವರ ಕಾಲೋನಿ ಮನೆ ನಂ: 3-1305/96 ಗುಲ್ಬರ್ಗಾ ರವರು  ಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ:08/11/2012 ರಂದು ಮುಂಜಾನೆ 10.00 ಗಂಟೆಗೆ ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್‌.ಹೆಚ್‌-11, ಎಮ್‌‌-3991 ನೇದ್ದರಲ್ಲಿ ಕೇರೊಸಿನನ್ನು ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಿಗೆ ಹೋಗಿ ಕೇರೊಸಿನ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ  ರಾವೂರ ಮುಖಾಂತರ ಹೋಗುವಾಗ ಶಾಹಾಬಾದ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ  ದಿನಾಂಕ: 8/11/2012 ರಾತ್ರಿ 10.30 ಗಂಟೆ ಸುಮಾರಿಗೆ ಹೋಗುವಾಗ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ, 3 ಮೊಬೈಲ ಸೆಟಗಳು ಅ.ಕಿ.3700/- , ಒಂದು  ಕ್ಯಾಲಕುಲೇಟರ ಅ.ಕಿ. 80/-  ಒಂದು ಚಸಮಾ ಅ.ಕಿ. 400/- ರೂ ನೇದ್ದವುಗಳನ್ನು  ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೂಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ: 395 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                   ಸದರಿ ಕೇಸಿನ ತನಿಖೆಯನ್ನು ಮುಂದುರೆಸಿದಂತೆ, ಇಂದು ದಿನಾಂಕ: 15/11/2012 ರಂದು  ಆರೋಪಿತರಾದ 1. ಕೃಷ್ಟಾ ತಂದೆ ಗೊವಿಂದ ದಾಸರಪ್ಪಾ ವ:22 ವರ್ಷ ಜಾ: ಗೊಲ್ಲೂರ ಸಾ: ಗೊಲ್ಲುರ ಓಣಿ ಗುಲ್ಬರ್ಗಾ 2. ರಾಜು ತಂದೆ ಬಾಪುರಾವ ಧನೇಕರ್ ವ:28 ಜಾ: ಹರಿಜನ ಉ: ಲಾರಿ ಕ್ಲೀನರ್ ಕೆಲಸ ಸಾ: ಪ್ರಗತಿ ಕಾಲೋನಿ ಗುಲ್ಬರ್ಗಾ 3. ರಾಹುಲ ತಂದೆ ಶೆಂಕ್ರಪ್ಪಾ ಗದ್ದಿ ವ:23 ಜಾ: ಹರಿಜನ ಸಾ; ಗುಬ್ಬಿ ಕಾಲೋನಿ ಗುಲ್ಬರ್ಗಾ. 4. ವಿಶ್ವನಾಥ ತಂದೆ ಹುಲಗೇಪ್ಪಾ ದಿವಳಗುಡ್ಡ ವ: 22 ಜಾ: ಮಾದರ ಉ: ಗೌಂಡಿ ಕೆಲಸ ಸಾ: ಜೊಪಡಪಟ್ಟಿ ಗುಬ್ಬಿ ಕಾಲೋನಿ ಗುಲ್ಬರ್ಗಾ 5.ಕಪೀಲ ತಂದೆ ರಾಯಪ್ಪಾ ಶಿರಮನೂರ ವ: 22 ಜಾ: ಹರಿಜನ ಉ: ವೈನ್ಸಶಾಪನಲ್ಲಿ ಕೆಲಸ  ಸಾ: ಗುಬ್ಬಿ ಕಾಲೋನಿ ಗುಲ್ಬರ್ಗಾ ಇವರನ್ನು ಇಂದು ದಿನಾಂಕ: 15/11/2012 ರಂದು ಬೆಳ್ಳಿಗ್ಗೆ 5 ಗಂಟೆಗೆ ದೇವನ ತೇಗನೂರ ದಾಟಿ 1 ಕಿ.ಮಿ. ಮೇಲೆ ರೋಡಿನ ಮೇಲೆ ಹೀರೊ ಹುಂಡಾ ಪ್ಯಾಶನ ಪ್ಲಸ್ ನಂಬರ: ಕೆಎ-02/ಇಎಫ್- 1047 ಮತ್ತು ಬಜಾಜ ಪ್ಲಾಟಿನಾ ನಂಬರ: ಕೆ.ಎ-36/ಕ್ಯೂ-7355 ನೇದ್ದರ ಮೇಲೆ  ಶಹಾಬಾದ ಕಡೆಗೆ ಬರುವಾಗ ನಮ್ಮನ್ನು ನೋಡಿ ವಾಪಸ್ಸು ಗುಲ್ಬರ್ಗಾ ಕಡೆಗೆ  ಹೋಗುವಾಗ ಹಿಡಿದು ವಿಚಾರಣೆ ಮಾಡಿದ್ದು ತಮ್ಮ ತಮ್ಮ ಹೆಸರು ಮೇಲಿನಂತೆ ಹೇಳಿದ್ದು ಅಲ್ಲದೇ ದಿನಾಂಕ: 8/11/2012 ರಂದು ರಾತ್ರಿ 10.30 ಗಂಟೆಗೆ ಟ್ಯಾಂಕರ್ ನಂ: ಎಮ್.ಎಚ್. 11/ಎಮ್-3991 ನೇದ್ದನ್ನು ಗೊವಿಂದ ಶಿವರಾಲ್ ಮತ್ತು ಸಂಗಡ 4 ಜನರು ಕೂಡಿ ಕ್ಲೀನರ್ ರಾಜು ಸಲಹೆಯಂತೆ ತಡೆದು ನಿಲ್ಲಿಸಿ ಹಣ ಮತ್ತು ಮೊಬೈಲ ಕ್ಯಾಲೂಲೇಟರ್ ಒಂದು ಚಸ್ಮಾ ಹೀಗೆ ಒಟ್ಟು 1,89,680/- ರೂಪಾಯಿ ದರೊಡೆ ಮಾಡಿದ್ದು ಒಪ್ಪಿಕೊಂಡಿರುತ್ತಾರೆ. ಸದರಿಯವರಿಂದ ಎರಡು ಮೊ/ಸೈ ಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮತ್ತು ಅವರಿಂದ 35,000/- ರೂಪಾಯಿ ನಗದು ಹಣ ಮತ್ತು ಒಂದು ಮಚ್ಚು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.  

No comments: