ಅಪಘಾತ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ:ಶ್ರೀ ಶರಣಬಸಪ್ಪ ತಂದೆ ಚಂದ್ರಪ್ಪ ಕೆಂಪನೌರ ಸಾ|| ಚಿತ್ತಾಪೂರ ರವರು ದಿನಾಂಕ 15-11-12 ರಂದು ನಾನು
ನಮ್ಮೂರಿನಿಂದ ನನ್ನ ಹೆಂಡತಿ ಊರಾದ ಕಪನೂರಕ್ಕೆ
ರಾತ್ರಿ 10-00 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ
ಬಂದು ಕಪನೂರ ದರ್ಮ ಶಾಲೆ ಸಮುದಾಯ ಭವನ ಎದುರಿಗೆ
ಆಟೋರಿಕ್ಷಾದಿಂದ ಇಳಿದು ರೋಡ ಕ್ರಾಸ ಮಾಡುತ್ತಿರುವಾಗ ಕಪನೂರ ಕಡೆಯಿಂದ ಹೀರೋ ಹೊಂಡಾ ಸೈಕಲ ನಂ:ಕೆಎ 32:ಇಎ 8365 ನೇದ್ದರ ಸವಾರ ಅತೀವೇಗದಿಂದ
ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ನನ್ನ ಎಡಗಾಲಿಗೆ ಡಿಕ್ಕಿ ಹೊಡೆದು ಭಾರಿ ಗುಪ್ತಗಾಯ ಪಡಿಸಿ
ಹಾಗೇ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 371/2012
ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಅಪಘಾತ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಠಾಣೆ: ಶ್ರೀ.ಬದ್ದು ತಂದೆ ಹಣಮಂತ ಪವಾರ ಸಾ;ಪಾಣೇಗಾಂವ ತಾಂಡಾ ತಾ;ಜಿ;ಗುಲಬರ್ಗಾರವರು ದಿನಾಂಕ:15/11/2012 ರಂದು
ರಾತ್ರಿ 8:00 ಗಂಟೆಗೆ ನನ್ನ ಮಗನಾದ ಸತೀಶ ವಯ;15 ವರ್ಷ ಇತನು ನಮ್ಮ ಸಮ್ಮಂದಿಕ ಕುಮಾರ ರಾಠೋಡ ಇವರ ಮೋಟಾರ
ಸೈಕಲ ಮೇಲೆ ಅವನ ಹಿಂದೆ ಕುಳಿತುಕೊಂಡು ಮಡಕಿ ತಾಂಡಾದಿಂದ
ಹುಮನಾಬಾದ ರೋಡ ಮೂಲಕ ಗುಲಬರ್ಗಾಕ್ಕೆ ಬರುತ್ತಿರುವಾಗ ಅವರಾಧ (ಬಿ) ಸಂತಲೂಕ ಆಸ್ಪತ್ರೆಯ ಎದರುಗಡೆ ಕುಮಾರ
ರಾಠೋಡ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು
ಬಂದು ಒಮ್ಮೆಲೆ ಬ್ರೆಕ್ ಮಾಡಿದಾಗ ಮೋಟಾರ ಸೈಕಲ್
ಸ್ಕಿಡ್ ಆಗಿ ಕೆಳಗೆ ಬಿದ್ದಾಗ ಹಿಂದೆ ಕುಳಿತ ಸತೀಶ ಇತನಿಗೆ ತಲೆಗೆ ಭಾರಿರಕ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ
ನಂ: 372/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment