POLICE BHAVAN KALABURAGI

POLICE BHAVAN KALABURAGI

13 December 2011

Gulbarga Dist Reported Crimes

ದರೋಡೆ ಪ್ರಕರಣ:
ಚಿತ್ತಾಪೂರ ಠಾಣೆ :
ಶ್ರೀ ಹುಸೇನಿ ತಂದೆ ಮಹಿಬೂಬ ಮುಲ್ಲಾ ಸಾ ಇಂಗಳಗಿ ತಾ ಸಿಂದಗಿ ಜಿ ವಿಜಾಪುರ ರವರು ನಾನು ಮತ್ತು ನಮ್ಮ ಕ್ಲೀನರ ಶ್ರೀಶೈಲ ಇಬ್ಬರು ಕೂಡಿಕೊಂಡು ಸಿಮೆಂಟ ಲೋಡ ತರುವ ಕುರಿತು ಲಾರಿ ನಂ ಕೆಎ-01/ಎಎ6294 ನೇದ್ದನ್ನು ತೆಗೆದುಕೊಂಡು ವಿಜಾಪುರದಿಂದ ಮಳಖೇಡದ ರಾಜಶ್ರೀ ಸಿಮೆಂಟ ಕಂಪನಿಗೆ ಹೋಗುತ್ತಿದ್ದೆವು. ದಿನಾಂಕ 12/12/2011 ರಂದು ಮಧ್ಯರಾತ್ರಿ 1-30 ರ ಸುಮಾರಿಗೆ ದಂಡೋತಿ ಕ್ರಾಸದ ಹತ್ತಿರ ಹಾದು ಹೋಗುತ್ತಿರುವಾಗ ನಮ್ಮ ಲಾರಿಯ ಹಿಂದಿನಿಂದ ಒಬ್ಬ ಮೋಟರ ಸೈಕಲ ಸವಾರನು ಗಾಡಿಯ ಮೇಲೆ ಜೋರಾಗಿ ನಡೆಸುತ್ತಾ ಬಂದು ನಮ್ಮ ಲಾರಿಯ ಮುಂದುಗಡೆ ಬಂದು ನಿಂತು ತನ್ನ ಮೋಟರ ಸೈಕಲ ಬಂದ ಮಾಡಿ ಏ ಭೋಸಡಿ ಮಗನೆ ನಮಗೆ ಕಟ್ ಹೊಡೆದು ಮುಂದೆ ಬಂದಿಯಾ ಮಗನೆ ಅಂತ ಬೈಯುತ್ತಾ ಒಂದು ಕಲ್ಲಿನಿಂದ ನಮ್ಮ ಲಾರಿಯ ಲೈಟಿಗೆ ಹೊಡೆದನು. ಅದರಿಂದ ಬಲಗಡೆಯ ಒಂದು ಹೆಡ್ಲೈಟ ಒಡೆದು ಹೋಯಿತು. ಮತ್ತೆ ಅವನು ಏ ಮಕ್ಕಳೆ ಲಾರಿಯಿಂದ ಕೆಳಗೆ ಇಳಿಯುತ್ತೀರೋ ಇಲ್ಲವೋ ಇಲ್ಲದಿದ್ದರೆ ನಿಮ್ಮ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲಾ ಅಂತ ಹೆದರಿಸಿದನು. ಆಗ ನಾನು ಮತ್ತು ನಮ್ಮ ಕ್ಲೀನರ ಹೆದರಿ ಲಾರಿಯಿಂದ ಕೆಳಗೆ ಇಳಿದು ನಿಂತೆವು. ಅವನು ತನ್ನ ಮೋಟರ ಸೈಕಲನ್ನು ಸೈಡಿಗೆ ಹಚ್ಚಿ ನಮ್ಮ ಲಾರಿಯ ಮೇಲೆ ಹತ್ತಿ ಲಾರಿ ಚಾಲು ಮಾಡಿಕೊಂಡು ದಂಡೋತಿ ಕಡೆಗೆ ಹೋದನು. ನಾವಿಬ್ಬರೂ ನಮ್ಮ ಲಾರಿಯ ಲೈಟಿನ ಬೆಳಿಕಿನಲ್ಲಿ ಅವನಿಗೆ ನೋಡಿರುತ್ತೇವೆ. ಅವನು ಲಾರಿ ತೆಗೆದುಕೊಂಡು ಹೋದ ನಂತರ ಅಲ್ಲಿ ಇದ್ದ ಮೋಟರ ಸೈಕಲ ನೋಡಲಾಗಿ ಅದು ಹಿರೊಹೊಂಡಾ ಫ್ಯಾಶನ ಪ್ಲಸ್ ಹಳೆ ಗಾಡಿ ಇದ್ದು ಅದಕ್ಕೆ ಹಿಂದೆ ಮುಂದೆ ನಂಬರ ಪ್ಲೇಟ ಇದ್ದಿರಲಿಲ್ಲಾ. ನಾನು ಅವನಿಗೆ ಅಂಜಿಕೊಂಡು ರಾತ್ರಿ ವೇಳೆಯಲ್ಲಿ ಮಳಖೇಡಕ್ಕೆ ನಡೆದುಕೊಂಡು ಹೋದೆನು. ನಮ್ಮ ಲಾರಿ ಕ್ಲೀನರ ಎಲ್ಲಿ ಹೋಧನು ಗೊತ್ತಿಲ್ಲಾ ನಾನು ಮಳಖೇಡದಿಂದ ಸೇಡಂ ಮತ್ತು ಗುಲಬರ್ಗಾ, ಬಸವ ಕಲ್ಯಾಣದ ಕಡೆಗೆ ಹೋಗಿ ಲಾರಿ ನೋಡಲಾಗಿ ಎಲ್ಲಿಯೂ ಇದ್ದಿರಲಿಲ್ಲಾ. ಈ ಬಗ್ಗೆ ನಾನು ನಮ್ಮ ಮಾಲಿಕರಿಗೆ ಫೋನ ಮುಖಾಂತರ ವಿಜಾಪುರಕ್ಕೆ ಫೋನ ಮಾಡಿ ವಿಷಯ ತಿಳಿಸಿದ್ದು ಲಾರಿಯ ಕ್ಲೀನರ ಕೂಡಾ ಚಿತ್ತಾಪೂರಕ್ಕೆ ಬಂದಿರುತ್ತೆವೆ ನಮ್ಮ ಲಾರಿಯು 18 ಟೈರಿನದಿದ್ದು ಅದರ ಅಂದಾಜು ಕಿಮ್ಮತ್ತು 30,00000/-ರೂ ಆಗಬಹುದು ಅದನ್ನು ಪತ್ತೆ ಹಚ್ಚಿ ಅವನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 120/2011 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಸಂಜೀವ ತಂದೆ ಸಿದ್ರಾಮ ಐರೆಡ್ಡಿ ಸಾ:ಮ.ನಂ.61 ಉಮಾ ಕಾಟೇಜ್ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ:12.12.2011 ರಂದು ರಾತ್ರಿ 10.30 ಗಂಟೆಗೆ ತಿಮ್ಮಾಪೂರ ಸರ್ಕಲಗೆ ಕೆಲಸದ ನಿಮಿತ್ತ ಬಂದು ಸರ್ಕಲ್ ಹತ್ತಿರ ಕೆಎ-28 ಆರ್-0080 ಹಿರೋ ಹೋಂಡಾ ಮೋಟಾರ ಸೈಕಲ ನಿಲ್ಲಿಸಿ ಮರಳಿ ರಾತ್ರಿ 10.45 ಗಂಟೆಗೆ ನೋಡಲು ನಿಲ್ಲಿಸಿದ ಸ್ಥಲದಲ್ಲಿ ಮೋಟಾರ್ ಸೈಕಲ್ ಇರಲಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ.211/2011 ಕಲಂ. 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: