ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ದೇವಮ್ಮ ಗಂಡ ಅಮೃತಪ್ಪಾ ಸಾವಳಗಿ ಸಾ ಕಪನೂರ ರವರು ನಾನು ದಿನಾಂಕ: 28-03-2012 ರಂದು 4=00 ಗಂಟೆಗೆ ಸುಮಾರಿಗೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಪಟೇಲ ಸರ್ಕಲ್ ಮೇನ್ ರೋಡಿನಲ್ಲಿ ಬರುವ ಲಾಹೋಟಿ ಪೆಟ್ರೋಲ್ ಪಂಪ ಹತ್ತಿರ ರೋಡಿನ ಮೇಲೆ ಅಟೋರೀಕ್ಷಾ ನಂ: ಕೆಎ-32 ಬಿ-2239 ನೇದ್ದರ ಚಾಲಕ ಸಲೀಮಮಿಯಾ ಇತನು ತನ್ನ ಅಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಅಟೋರೀಕ್ಷಾ ಪಲ್ಟಿಮಾಡಿ ಅಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನನಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಸ್ಟೇಶನ ಬಜಾರ ಠಾಣೆ: ಶ್ರೀಮತಿ ವಿನೋದಾ ಗಂಡ ಬಕ್ಕಾರೆಡ್ಡಿ ಸಾ: ಆನಂದ ನಗರ ಗುಲಬರ್ಗಾ ರವರು ನಾನು ದಿನಾಂಕ 28-03-12 ರಂದು 2000 ಗಂಟೆಗೆ ಮನೆಯಿಂದ ಕಸ ಚೆಲ್ಲಲು ಹೊರಗಡೆ ಬಂದಾಗ ಒಬ್ಬ ಮನುಷ್ಯನು ಮೊಟರ ಸೈಕಲ ಮೇಲೆ ಬಂದವನೆ ಕೊರಳಿಗೆ ಕೈ ಹಾಕಿ ಮಂಗಳ ಸೂತ್ರ ಕಿತ್ತುಕೊಂಡಿದ್ದು ಅದರಲ್ಲಿಯ ತಾಳಿಗಳು ಮಾತ್ರ ಕೆಳಗೆ ಬಿದ್ದಿದ್ದು ಉಳಿದ ಮೂರು ತೊಲಿ ಬಂಗಾರದ ಚೈನು ದೋಚಿಕೊಂಡು ಹೋಗಿರುತ್ತಾನೆ, ಅದರ ಅ.ಕಿ 84,000=00 ರೂಪಾಯಿ ಆಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ 36/12 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀಮತಿ, ಗೋದಾವರಿ ಗಂಡ ನರಸಪ್ಪ ಜೋಗಿ ಸಾ ರಂಜೋಳ ಇವರು ನಾನು ಮನೆಯಲ್ಲಿದ್ದಾಗ ನನ್ನ ಮೂರನೆಯ ಮಗಳಾದ ನರಸಮ್ಮ ವ 15 ವರ್ಷ ಇವಳು ತನ್ನ (ಅಜ್ಜಿ) ಆಯಿ ಬಾಲಮ್ಮ ನ ಮನೆಗೆ ಹೋಗಿ ವಾಪಸ ಓಡುತ್ತಾ ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ, “ ನಾನು ನಮ್ಮ ಆಯಿ ಬಾಲಮ್ಮ ಇವರ ಮನೆಗೆ ಈಗ ಮಧ್ಯಾನ ಮೂರು ಗಂಟೆಯ ಸುಮಾರಿಗೆ ಹೋದಾಗ (ಅಜ್ಜಿ) ಆಯಿ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತಾಗ ಮಾವನಾದ ಬಾಬು ತಂದೆ ಕಾಶಪ್ಪ ಜೋಗಿ ಸಾ ಕಸ್ತೂರಿಪಲ್ಲಿ ಇವನು ನನ್ನ ಹೆಸರಿಗೆ ಮನೆ ಮಾಡು ಅಂತಾ ಜಗಳ ತೆಗೆದು ನಾನು ಅಜ್ಜಿಯ ಮನೆಯ ಹತ್ತಿರ ಇದ್ದಾಗ ನನಗೆ ನೋಡಿ ಅಜ್ಜಿಗೆ ಮನೆಯೊಳಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿರುತ್ತಾನೆ ನಾನು ಎಷ್ಟು ಒದರಿದರೂ ಬಾಗಿಲು ತೆರೆದಿರುವುದಿಲ್ಲ ಆದ್ದರಿಂದ ನೀನು ಬಾ ಅಂತಾ ನನಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗಳಾದ ನರಸಮ್ಮ ಹೋಗಿ ನೋಡಲಾಗಿ ನಮ್ಮ ಅಳಿಯ ಬಾಬು ಇತನು ಬಾಗಿಲು ತೆರೆದು ಹೊರಗೆ ಬಂದು ಅಲ್ಲಿಂದ ಓಡಿ ಹೋದನು, ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಅತ್ತೆ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಕಾಣಲಿಲ್ಲ. ಆಗ ನಾನು ಪಡಸಾಲೆಯಲ್ಲಿದ್ದ ಕಟ್ಟಿಗೆಯ ಮಂಚದ ಕೆಳಗೆ ನೋಡಲಾಗಿ ನಮ್ಮ ಅತ್ತೆ ಬಾಲಮ್ಮ ಇವಳ ಶವ ಇತ್ತು, ಅವಳ ಬಲಗೈ ಮುಂಗೈಗೆ ರಕ್ತಗಾಯ,ಎಡಗಾಲಿನ ಮೊಳಕಾಲಿಗೆ,ಎಡ ಕುತ್ತಿಗೆಯ ಹತ್ತಿರ ತರಚಿದ ಗಾಯ ಹಾಗು ಕುತ್ತಿಗೆಗೆ ಸುತ್ತಲು ಕಂದು ಗಟ್ಟಿದ ಗಾಯ ಕಂಡು ಬಂತು, ನಮ್ಮ ಅಳಿಯನಾದ ಬಾಬು ಇತನು ತನಗೆ ಊರಲ್ಲಿದ್ದ ಮನೆ ಹೆಸರಿಗೆ ಮಾಡಿಕೊಡಬೇಕು ಅಂತಾ ಆಗಾಗ ಬಂದು ಜಗಳ ಮಾಡುತ್ತಿದ್ದನು.ಅದಕ್ಕೆ ನಮ್ಮ ಅತ್ತೆ ಒಪ್ಪದ ಕಾರಣ ಅವಳಿಗೆ ಜಗಳ ತೆಗೆದು ಮನೆಯೊಳಗೆ ಒಯ್ದು ಕೈಯಿಂದ ಕುತ್ತಿಗೆ ಹಿಚುಕಿ,ಉಸಿರು ಗಟ್ಟಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂಧ ಮಂಚದ ಕೆಳಗೆ ಹಾಕಿ ಕೌದಿ ಮುಚ್ಚಿ ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ, 302,201 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments:
Post a Comment