POLICE BHAVAN KALABURAGI

POLICE BHAVAN KALABURAGI

29 March 2012

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಕಳ್ಳರ ಬಂದನ

ಗುಲಬರ್ಗಾ ನಗರದ ಎಮ್.ಆರ್.ಎಮ್.ಸಿ ಎದುರುಗಡೆ ಸುಂದರ ನಗರ ಬಡಾವಣೆಯ ಮನೆ ನಂ:8-611/1, ಸುಂದರ ನಗರ ಬಢಾವಣೆಯ ಮನೆ ನಂ:2-811/6ಎ ಸುಂದರ ನಗರ ಢೋರ ಗಲ್ಲಿ ಗುಲಬರ್ಗಾ, ನಗರ ಆರೋಗ್ಯ ಕೇಂದ್ರ ಮಕ್ತಂಪೂರ ಗುಲಬರ್ಗಾದಲ್ಲಿ ಕಳ್ಳತನವಾಗಿದ್ದರಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: ಗುನ್ನೆ ನಂ: 294/10 ಕಲಂ: 454, 457, 380 ಐ.ಪಿ.ಸಿ, ಗುನ್ನೆ ನಂ: 224/11 ಕಲಂ: 457, 380 ಐ.ಪಿ.ಸಿ, 208/11 ಕಲಂ: 457, 380 ಐ.ಪಿ.ಸಿ ಮತ್ತು ಗುನ್ನೆ ನಂ: 184/11 ಕಲಂ: 457 380 ಐ.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತವೆ. ತನಿಖೆಯ ಕಾಲಕ್ಕೆ ಮಾನ್ಯ ಪ್ರವೀಣ ಮಧುಕರ ಪವಾರ ಐ.ಪಿ.ಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾ ಹಾಗೂ ಮಾನ್ಯ ಭೂಷಣ ಜಿ ಬೊರಸೆ ಐ.ಪಿ.ಎಸ್ ಸಹಾಯಕ ಪೊಲೀಸ ಅಧೀಕ್ಷಕರು () ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶರಣಬಸವೇಶ್ವರ ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ರವರು, ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಬಸವರಾಜ ಹೆಚ್.ಸಿ, ಗಜೇಂದ್ರ, ಮಹಾಂತೇಶ, ರಾಜಕುಮಾರ, ಸುಧಾಕರ ಸಿಪಿಸಿ ರವರು ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 224/11 ರಲ್ಲಿ ಕಳೆದು ಹೋದ ಒಂದು ನೋಕಿಯಾ ಮೊಬೈಲನ ಕಾಲ ಡಿಟೇಲ್ಸ ಸಹಾಯದಿಂದ ಆರೋಪಿತರಾದ ಶ್ರೀನಿವಾಸ ತಂದೆ ಸಿದ್ರಾಮ ಉಪಾದ್ಯ, ವಯ|| 19 ವರ್ಷ, || ಮಹಾನಗರ ಪಾಲಿಕೆಯಲ್ಲಿ ಕೆಲಸ, ಸಾ|| ಬಾಪೂನಗರ ಗುಲಬರ್ಗಾ, ಅರ್ಜುನ ತಂದೆ ವಿಜಯ ಕಾಂಬಳೆ, ವಯ|| 18 ವರ್ಷ, || ಪಾರಿವಾಳ ಸಾಕಣೆ ಕೆಲಸ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ಬಂದಿಸಿರುತ್ತಾರೆ. ಆರೋಪಿತರಿಂದ ಮೇಲೆ ದಾಖಲಾದ ಗುನ್ನೆಗಳಲ್ಲಿ ಕಳೆದು ಹೋದ 14 ಗ್ರಾಂ ಬಂಗಾರದ ಚೈನ ಅ||ಕಿ|| 20,000/-, 5 ಗ್ರಾಂ ಬಂಗಾರದ ಹರಳಿನ ಉಂಗುರ ಅ||ಕಿ|| 10,000/-, 4.5 ಗ್ರಾಂ ಬಂಗಾರದ ಉಂಗುರ ಅ||ಕಿ|| 10,000/-, ಒಂದು ನೊಕಿಯಾ ಮೊಬೈಲ ಅ||ಕಿ|| 3000/-, ಅರ್ದ ಗ್ರಾಂ ಬಂಗಾರದ 6 ಉಂಗುರ ಮತ್ತು 1 ಮಾಸಿಯ ಎರಡು ಉಂಗುರ ಅ||ಕಿ|| 10,000/-, 6) ಬೆಳ್ಳಿಯ ಬಳೆ, ಚೈನ್, ಮತ್ತು ಲಿಂಗದ ಕಾಯಿ ಅಂದಾಜು 3 ತೊಲೆ ಅ||ಕಿ|| 1000/- ಹಾಗೂ ಒಂದು ಕುಕ್ಕರ ಅ||ಕಿ|| 150/- ಬೆಳೆವುಳ್ಳ ವಸ್ತುಗಳನ್ನು ಜಪ್ತ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶಿವಕುಮಾರ ತಂದೆ ಅಣವೀರಪ್ಪಾ ಕುಸನೂರ ಸಾ: ದೇವನ ತೇಗನೂರ ರವರು ನಾನು ಮತ್ತು ನಮ್ಮೂರ ಶಿವರಾಜ ತಂದೆ ಮಹಾಂತಪ್ಪಾ ಚಿತ್ತಾಫೂರ ಇಬ್ಬರು ಕೂಡಿಕೊಂಡು ದಿನಾಂಕ: 28/03/2012 ರಂದು ಹೀರೊ ಹೊಂಡಾ ಸ್ಪ್ಲೇಂಡರ ಆರ್.ಟಿ. ಓ ಆಫೀಸ ಗುಲ್ಬರ್ಗಾ ದಲ್ಲಿ ಪಾಸಿಂಗ ಮಾಡಿಸಲು ಹೋಗಿ ಮರಳಿ ಊರಿಗೆ ಬರುತ್ತಿರುವಾಗ ಭಂಕೂರ ಎ.ಬಿ.ಎಲ್. ಬಸ ನಿಲ್ದಾಣ ಹತ್ತಿರ ಶಿವರಾಜ ಇತನು ದ್ವಿ-ಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಮೋಟಾರ ಸೈಕಲ ಸ್ಕೀಡ್ ಆಗಿ ಬಿದ್ದಿದ್ದರಿಂದ ನನಗೆ ರಕ್ತಗಾಯವಾಗಿದ್ದು ಮತ್ತು ಶಿವರಾಜ ಎಡ ಕಪಾಳಕ್ಕೆ ಮತ್ತು ಎಡಗಣ್ಣಿಗೆ , ಎಡಗೈಗೆ , ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದ್ವಿ-ಚಕ್ರ ವಾಹನದ ಟೆಂಪರರಿ ನಂಬರ ಕೆ.ಎ-32/ಟಿಆರ್-5998 ನೀಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ 279,337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ ಸತ್ಯಮ್ಮ ಗಂಡ ಬಕ್ಕಣ್ಣ ರೆಡ್ಡಿ ಸಾ|| ಇಂದಿರಾ ನಗರ ಗುಲಬರ್ಗಾ ರವರು ನಾನು ದಿನಾಂಕ:15.03.2012 ರಂದು ರಾತ್ರಿ ನಮ್ಮ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆಯವರೆಲ್ಲರೂ ಅಂಗಡಯಲ್ಲಿಯೆ ಇದ್ದೆವು ಬೆಳಿಗ್ಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರೂ ಮನೆಗೆ ಹಾಕಿದ ಕಿಲಿ ಮುರಿದು ಮನ್ನೆಯಲ್ಲಿಟ್ಟದ್ದ ಬಂಗಾರ, ಬೆಳ್ಳಿ ಆಣರಣಗಳು, ದೇವಿ ನಗರದ ಪ್ಲಾಟಿನ ದಾಖಲಾತಿಗಳು (ಕಿವಾಲ) ನಗದು ಹಣ 500/- ರೂಪಾಯಿಗಳು, ಮತ್ತು ಹಳೆ ಮೋಬಾಯಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ಗುನ್ನೆ ನಂ: 37/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: