POLICE BHAVAN KALABURAGI

POLICE BHAVAN KALABURAGI

28 March 2012

Gulbarga Dist Reported Crimes

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಅಮರನಾಥ ತಂದೆ ಗೋಪಾಲರಾವ್ ಸಾ: ಅಂಬೇಡ್ಕರ್ ಚೌಕ ಹತ್ತಿರ ಚಿಂಚೊಳ್ಳಿ ಹಾವ ಆರ್. ಎಸ್. ಪಪ್ಪು ವಕೀಲರ ಮನೆಯಲ್ಲಿ ಬಾಡಿಗೆ ನಾವು ಯುಗಾದಿ ಹಬ್ಬದ ಪ್ರಯುಕ್ತ ದಿ: 22/03/2012 ರಂದು ರೂಮಿನ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು, ನನ್ನ ಹಾಗೇಯೇ ನನ್ನ ಪಕ್ಕದ ರೂಮಿನಲ್ಲಿ ವಾಸವಾಗಿರುವ ಅವಿನಾಶ ತಂದೆ ಅಶೋಕ ಹೊಸಮನಿ ಇವರು ಸಹ ತಮ್ಮ ರೂಮಿಗೆ ಕೀಲಿ ಹಾಕಿಕೊಂಡು ದಿ : 22/03/2012 ರಂದು ರೂಮಿಗೆ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು ದಿ: 27/03/2012 ರಂದು ಮರಳಿ ಬಂದು ನೋಡಲಾಗಿ, ರೂಮಿನಲ್ಲಿದ್ದ ತೂಷಿಬಾ ಕಂಪನಿಯ ಲ್ಯಾಪಟಾಪ್ ಮತ್ತು ಸ್ಯಾಮಸಂಗ್ ಕ್ಯಾಮರಾ ಅ.ಕಿ. 34,000=00 ರೂ ಹಾಗೂ ಪಕ್ಕದ ರೂಮಿನಲ್ಲಿ ಒಂದು ಮೊಬೈಲ್ ಹಾಗೂ ಪ್ರಮೋಶನಲ್ ಮಟಿರಿಯಲ್ಸ ನೇದ್ದವುಗಳನ್ನು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ರೂಮಿಗೆ ಹಾಕಿದ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಮತ್ತು ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಹರಿರಾಮ ತಂದೆ ಶಂಕರು ಚವ್ಹಾಣ ಉ: ದೂರದರ್ಶನ ಕೇಂದ್ರ ಗುಲಬರ್ಗಾದಲ್ಲಿ ಸರ್ಕಾರಿ ನೌಕರ ಸಾಉದನೂರ ತಾಂಡಾ ತಾ:ಜಿ: ಗುಲಬರ್ಗಾ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ನಮ್ಮ ದೂರದರ್ಶನ ಕೇಂದ್ರ ಕ್ವಾರ್ಟರ್ಸ ವಸತಿ ಗೃಹದಲ್ಲಿದ್ದ ನನ್ನ ಮಗಳು ಮೊಮ್ಮಕ್ಕಳು ಬಿಟ್ಟು ಮೈಯಲ್ಲಿ ಆರಾಮ ಇಲ್ಲದ ಕಾರಣ ಸೋಲಾಪುರಕ್ಕೆ ತೋರಿಸಿಕೊಂಡು ಬರಲು ಹೋಗಿದ್ದು, ರಾತ್ರಿ 9-30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಮಗಳು ವಿದ್ಯಾವತಿ ಗಂಡ ಪ್ರಕಾಶ ರಾಠೋಡ, ವ 28 ವರ್ಷ, ಗಣೇಶ ತಂದೆ ಪ್ರಕಾಶ ರಾಠೋಡ 6 ವರ್ಷ,ಕಾರ್ತಿಕ ತಂದೆ ಪ್ರಕಾಶ ರಾಠೋಡ 4 ವರ್ಷ ಸಾ: ಎಲ್ಲರೂ ಅರ್ಜುಣಗಿ ತಾ: ಆಫಜಲಪೂರ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ಇರಲ್ಲಿಲ್ಲ, ಅಕ್ಕ ಪಕ್ಕ ಮತ್ತು ಸಂಬಂಧಿಕರಲ್ಲಿ ಹುಡುಕಾಡಿ ವಿಚಾರಿಸಲು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 97/2012 ಕಲಂ ಹೆಣ್ಣುಮಗಳು ಮತ್ತು ಹುಡುಗ ಕಾಣೆ ಬಗ್ಗೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮುಫೀರ ಮಿರ್ಜಾ ತಂದೆ ಹಸೀರ ಮಿರ್ಜಾ ವಯಾ:22 ವರ್ಷ ಉ:ವಿಧ್ಯಾರ್ಥಿ ಸಾ: ಸಿಂದ್ವ ತಾ:ಸಿಂದ್ವ ಜಿಲ್ಲಾ: ಬರವಾನಿ ರಾಜ್ಯಮಧ್ಯ ಪ್ರದೇಶ ರವರು ದಿನಾಂಕ 27-03-12 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ಸೆಂಟರ ಕಾಮತ ದಿಂದ ಆನಂದ ಹೊಟೇಲ ಕ್ರಾಸ್ ರೋಡಿನಲ್ಲಿ ಮೇಲೆ ಮೋಟಾರ ಸೈಕಲ್ ನಂಬರ: ಕೆಎ 32 ಆರ್ 2832 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ:
ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ, ಮಹ್ಮದ ಯೂಸುಫ್ ತಂದೆ ಅಬ್ದುಲ್ ನಬಿ, ಮಹ್ಮದ ಜಿಲಾನಿ ತಂದೆ ಪೀರ ಅಹ್ಮದ, ಅಬ್ದುಲ್ ವಾಹಿದ್ ತಂದೆ ಅಬ್ದುಲ್ ಸತ್ತರ, ಮಹ್ಮದ ಅಬ್ದುಲ್ ತಂದೆ ಬಾಸುಮಿಯಾ ಮತ್ತು ನಾನು ಕೂಡಿಕೊಂಡು ದಿನಾಂಕ: 27-03-2012 ರಂದು ಸಾಯಂಕಾಲ 4-30 ಗಂಟೆಗೆ ಯಾನಾಗುಂದಿಯಿಂದ ಮೇದಕ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರ ನಂ. ಎಪಿ-09, ಬಿಟಿ-7691 ನೇದ್ದರ ಚಾಲಕನಾದ ರಾಮರೆಡ್ಡಿ ತಂದೆ ಯಾದರೆಡ್ಡಿ ಈತನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಪಡಿಸಿದ ಪರಿಣಾಂ ಮಹ್ಮದ ಇಬ್ರಾಹಿಂಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರ ಚಾಲಕನು ಕಾರನ್ನು ನಿಲ್ಲಿಸಿ ಓಡಿಹೋಗಿರುತ್ತಾನೆ ಅಂತಾ ಮಹ್ಮದ ಇಸ್ಮಾಯಿಲ್ ತಂದೆ ಅಬ್ದುಲ್ ನಬಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 31/2012 ಕಲಂ: 279, 304(ಎ) ಐಪಿಸಿ ಸಂ. 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: