POLICE BHAVAN KALABURAGI

30 April 2012
GULBARGA DIST REPORTED CRIMES
29 April 2012
GULBARGA DIST REPORTED CRIMES
GULBARGA DIST REPORTED CRIMES
28 April 2012
GULBARGA DIST REPORTED CRIMES
27 April 2012
GULBARGA DIST REPORTED CRIMES
26 April 2012
GULBARGA DIST REPORTED CRIME
GULBARGA DIST REPORTED CRIMES
25 April 2012
GULBARGA DIST REPORTED CRIMES
GULBARGA DIST
GULBARGA DIST REPORTED CRIMES
24 April 2012
GULBARGA DIST REPORTED CRIMES
GULBARGA DIST REPORTED CRIMES
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀ ಕಿಶನ ತಂದೆ ಧಾದರ ಸಾಳುಂಕೆ ಸಾ: ಹೆಬ್ಬಾಳ ರೋಡ ಆಳಂದ ತಾ: ಆಳಂದ ರವರು ನಾನು ಮತ್ತು ಜೈಸಿಂಗ ದಿನಾಂಕ: 23/4/2012 ರಂದು ಮೋಟಾರ ಸೈಕಲ ನಂ ಕೆಎ 32 ಕೆ 7706 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದು ಮದುವೆ ಮುಗಿಸಿ ಕೊಂಡು ಮರಳಿ ಆಳಂದಕ್ಕೆ ಹೋಗುವಾಗ ಕೆರೆ ಬೋಸ್ಗಾ ಕ್ರಾಸ ಹತ್ತಿರ ತಿರುವಿನಲ್ಲಿ ಅತಿವೇಗ ಅಲಕ್ಷತನದಿಂದ ನಡೆಯಿಸಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಮೇಲಿಂದ ಬಿದ್ದು ರಕ್ತಗಾಯ ಗುಪ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2012 ಕಲಂ 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಶಿವಕುಮಾರ ತಂದೆ ವಸಂತರಾವ ಮಾಲಿ ಪಾಟೀಲ & ಬಿರಾದಾರ ಸಾ|| ನಾವದಗಿ (ಬಿ) ತಾ|| ಗುಲಬರ್ಗಾರವರು ನಾನು ದಿನಾಂಕ: 23/4/2012 ರಂದು ಗುಲಬರ್ಗಾ ಕ್ಕೆ ಮೋಟರ ಸೈಕಲ ನಂ ಕೆಎ 32 ಇ 2373 ನೇದ್ದರ ಮೇಲೆ ಬಂದು ಮದುವೆ ಕಾರ್ಡಗಳನ್ನು ಹಂಚಿ ಮರಳಿ 5:30 ಪಿಎಮ ಸುಮಾರಿಗೆ ಸ್ವಾಮಿ, ಸರ್ಮಥ ಗುಡ್ಡದ ಇಳಕಲಿನಲ್ಲಿ ಹೊರಟಾಗ ಇಂಡಿಕಾ ಕಾರ ನಂ ಎಪಿ 28 ಎಎಲ್ 3552 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತ ಬಿದ್ದು ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ರಟಕಲ್ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ತುಕಾರಾಮ ಚಿನ್ನಾ ರಾಠೋಡ ಸಾ||ರುಮ್ಮನಗೂಡ ತಾಂಡ ರವರು ನನ್ನ ತಂದೆ ಈಗ ಸುಮಾರು 8 ವರ್ಷದ ಹಿಂದೆ ತೀರಿಕೊಂಡಿದ್ದು, ಆವಾಗಿನಿಂದ ನನ್ನ ತಾಯಿ ಸೀತಾಬಾಯಿ ಇವಳು ನಮ್ಮ ತಾಂಡೆಯ ಉಮ್ಲಾ ತಂದೆ ಪೊಮು ರಾಠೋಡ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ನಮಗೆ ಸರಕಾರರಿಂದ ಒಂದು ಮನೆ ಮಂಜೂರಾಗಿದ್ದರಿಂದ ಮನೆ ಕಟ್ಟುತ್ತಿದ್ದು ಮೊನ್ನೆ ಮನೆಯ ಬಿಲ್ಲಿನ ಹಣ ಬಂದಿದ್ದರಿಂದ ನನ್ನ ತಾಯಿ ಚಿಂಚೋಳಿ ಬ್ಯಾಂಕಿಗೆ ಹೋಗಿ ಹಣ ತಂದಿದ್ದುದನ್ನು ನೋಡಿ, ಉಮ್ಲಾ ರಾಠೋಡನು ನಮ್ಮ ಮನೆಗೆ ಬಂದು ನನ್ನ ತಾಯಿಗೆ ಹಣ ಕೊಡು ಅಂತ ಜಗಳ ಮಾಡುತ್ತಿದ್ದಾಗ ನನ್ನ ಹೆಂಡತಿ ಯಮುನಾ, ನನ್ನ ತಂಗಿ ಸವಿತಾ ಕೂಡಿ ಸಮಜಾಯಿಸಿರುತ್ತೇವೆ. ದಿನಾಂಕ: 22.04.2012 ರಂದು ಉಮ್ಲಾ ನಾನು ಹೊಲಕ್ಕೆ ನಡೆದಿದ್ದೇನೆ ನೀನು ನಡಿ ಅಂತ ನನ್ನ ತಾಯಿಗೆ ಕರೆದುಕೊಂಡು ಹೋಗಿದ್ದು ರಾತ್ರಿ ಆದರೂ ಮನೆಗೆ ಬರಲಿಲ್ಲಾ ದಿನಾಂಕ:23.04.2012 ರಂದು ಮಧ್ಯಾಹ್ನ 3 ಗಂಟೆಯ ತನಕ ಹುಡುಕಾಡಿ ಉಮ್ಲಾ ರಾಠೋಡನಿಗೆ ಕೇಳಲು ಹೊಲದ ಕಡೆಗೆ ನೋಡೊಣ ಅಂತ ಕರೆದುಕೊಂಡು ಹೋಗಿ ಹುಡುಕಾಡಿದಂತೆ ಮಾಡುತ್ತಿರುವಾಗ ನಮ್ಮ ತಾಯಿ ಕಾಣಿಸಲಿಲ್ಲಾ ನನಗೆ ಸಂಶಯ ಬಂದು ನಿಜ ಹೇಳು ನನ್ನ ತಾಯಿ ನಿನ್ನ ಜೊತೆ ಬಂದವಳು ಮನೆಗೆ ಬಂದಿಲ್ಲಾ ಏನು ಮಾಡಿದ್ದಿ ಅಂದಾಗ, ನಿನ್ನ ತಾಯಿಗೆ ಹಣ ಕೇಳಿದೆ ಕೊಡುವದಿಲ್ಲಾ ಅಂದಿದ್ದಕ್ಕೆ ನನ್ನ ಹತ್ತಿರವಿದ್ದ ಬಂದೂಕಿನಿಂದ ಆಕೆಯ ತಲೆಗೆ ಹೊಡೆದಿದ್ದು ಹೊಲದ ಕೆಳಗೆ ಬಂಡಿಕೊಳ್ಳ ನಾಲಾದಲ್ಲಿ ಸತ್ತು ಬಿದ್ದಿರುತ್ತಾಳೆ, ಏನು ಮಾಡ್ತಿರಿ ಅಂತ ಅನ್ನುತ್ತಾ ಓಡಿಹೋದನು ನಾವು ಹುಡುಕಾಡಲು ಅಲ್ಲಿ ಬಂದಿಕೊಳ್ಳದ ನಾಲಾದ ಕಲ್ಲು ಬಂಡಿಯ ಹತ್ತಿರ ನಮ್ಮ ತಾಯಿಯ ಹೆಣ ಬಿದ್ದಿದ್ದು ಮೋಡಿ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 302, ಐಪಿಸಿ ಸಂ 27 ಆಯುಧ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
23 April 2012
GULBARGA DIST
GULBARGA DIST
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ವ: 48 ವರ್ಷ ಸಾ: ಶರಣಸಿರಸಗಿ ತಾ: ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ದಿ: 21-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ಇಬ್ಬರೂ ಕೂಡಿಕೊಂಡು ಅಮವಾಸ್ಯೆ ಇರುವ ಪ್ರಯುಕ್ತ ರಾಣಜೀಪೇರ ದರ್ಗಾಕ್ಕೆ ಹೋಗುವ ಕುರಿತು ದರ್ಗಾದ ಕ್ರಾಸ ಹತ್ತಿರ ನಿಂತಾಗ ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ-4824 ನೇದ್ದರ ಸವಾರನು ತನ್ನ ಮೋಟಾರ ಸೈಕಲ ನೇದ್ದನ್ನು ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಮೊದಲು ದೂರು ಸಲ್ಲಿಸಿದ್ದರು, ನಂತರ ದಿನಾಂಕ 22/4/2012 ರಂದು ಮಧ್ಯಾಹ್ನ 3.15 ಪಿಎಮ ಸುಮಾರಿಗೆ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ಅಶ್ವೀನಿ ಆಸ್ಪತ್ರೆಯಲ್ಲಿ ಸುಗಲಭಾಯಿ ಯವರು ಮೃತಪಟ್ಟಿರುತ್ತಾಳೆ ಅಂತಾ ಮೃತಳ ಮಗ ಮಲ್ಲಿಕಾರ್ಜುನ ರವರ ಹೇಳಿಕೆ ಮೇಲಿಂದ ಕಲಂ 304 (ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
22 April 2012
GULBARGA DIST REPORTED CRIMES
ಮಹಿಳಾ ಪೊಲೀಸ ಠಾಣೆ: ರಾಜೇಶ್ರಿ ಗಂಡ ಸತೀಶ ಸಾ||ಮನೆ ನಂ 11-1872/27-ಎ ವಸಂತ ನಗರ ಗುಲಬರ್ಗಾರವರು ನನ್ನ ಮದುವೆಯು ಸತೀಶ ತಂದೆ ವಿನಾಯಕರಾವ ರವರೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು ನನಗೆ 2 ಜನ ಮಕ್ಕಳಿರುತ್ತಾರೆ. ನನ್ನ ಗಂಡನು ನನ್ನ ಜೊತೆ ಜಗಳ ತೆಗೆದು ಹೊಡೆ-ಬಡೆ ಮಾಡುವುದು ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ದಿನಾಂಕ; 20.04.2012 ರಂದು ರಾತ್ರಿ 10 ಗಂಟೆ ಸುಮಾರಿ ನನ್ನ ಗಂಡ ಇತನು ಕುಡಿದು ಬಂದು ಮನಬಂದಂತೆ ಹೋಡೆದು ಅವಾಚ್ಯವಾಗಿ ಬೈದು ಜಗಳ ಬಿಡಿಸಲು ಬಂದ ನನ್ನ ಅಕ್ಕನಿಗೆ ಕೂಡ ಹೊಡೆದಿದ್ದಾನೆ ಮತ್ತೆ ನನಗೆ ಇಂದು ಬೆಳಗ್ಗೆ 7.30 ಸುಮಾರಿಗೆ ಹೊಡೆಯಲು ಬಂದಾಗ ನನ್ನ ಮಗ ಸುಶಾಂತ, ಮಗಳು ಸ್ವೂರ್ತಿ ಅಕ್ಕ ಮಂದಾಕಿನಿ ಮತ್ತು ಅಕ್ಕನ ಮಗ ವಲ್ಲಬ್ ಅವರಿಗೂ ಸಹ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 34/12 ಕಲಂ 498(ಎ).504.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಮಲಾಪೂರ ಪೊಲೀಸ್ ಠಾಣೆ: ಶ್ರೀ. ಶರಣಬಸಪ್ಪ ತಂದೆ ಬಸವಂತರಾಯ ಘಟ್ಟಗೊಂಡ ಸಾ||ಜೀವಣಗಿ ತಾ:ಗುಲಬರ್ಗಾ ರವರು ನಾನು ದಿನಾಂಕ: 11/04/2012 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮನೆಯ ಮುಂದೆ ಮೋಟರ್ ಸೈಕಲ್ ನಂ:ಕೆಎ-32-ಡಬ್ಲೂ-4243 ನೇದ್ದನ್ನು ನಿಲ್ಲಿಸಿದ್ದು, ದಿನಾಂಕ: 12/04/2012 ರ ಬೆಳೆಗ್ಗೆ 6-00 ಎದ್ದು ನೋಡಲಾಗಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಂದುಗಡೆ ನಿಲ್ಲಿಸಿದ ನನ್ನ ಕಪ್ಪು ಬಣ್ಣದ ನೀಲಿ ಪಟ್ಟಿಗಳುಳ್ಳ ಹಿರೋಹೊಂಡಾ ಸ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: ಕೆಎ-32-ಡಬ್ಲೂ-4243 ನೇದ್ದು ಅಂದಾಜು ಕಿಮ್ಮತ್ತು 20,000/- ರೂಪಾಯಿ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಹಾಬಾದ ನಗರ ಪೊಲೀಸ್ ಠಾಣೆ:ಶ್ರೀ ಬಾಬು ತಂದೆ ಮಹಿಬೂಬಸಾಬ ಶೇಖ ಸಾ:ಮರತೂರ ರವರು ನನ್ನ ಅತ್ತಿಗೆಯಾದ ಶಬಾನಾ ಗಂಡ ಚಾಂದಶೇಖ ಇವಳು ದಿನಾಂಕ:21/04/2012 ರಂದು 7.00 ಪಿಎಂ ಸುಮಾರಿಗೆ ಮನೆಯ ಮುಂದೆ ಕುಳಿತಾಗ ತಾರಾ ಇವಳು ಬಂದು ವಿನಾಕಾರಣ ಜಗಳ ತೆಗೆದು ನಮ್ಮ ತಿಪ್ಪೆಯಲ್ಲಿ ಕಸ ಚಲ್ಲುತ್ತೇವೆ ನಿನ್ನ ದೇನು ಅಂತಾ ಜಗಳ ತೆಗೆದು ಕೈಯಿಂದ ಹೊಡೆದಳು ಅಪ್ಸನಾ ಇವಳು ಬಿಡಿಸಲು ಬಂದಾಗ ಮಹ್ಮದ ರಫೀಕ ಇತನು ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಜಗಳದ ಸಪ್ಪಳ ಕೇಳಿ ಸಂತೋಷ ತಂದೆ ಪರಮೇಶ್ವರ ಬರುತ್ತಿದ್ದಾಗ ಮೈನೋದ್ದಿನ ಇತನು ತಡೆದು ನಿಲ್ಲಿಸಿ ಚಾಕು ಹಿಡಿದು ನನಗೆ ಬಾಯಿಗೆ ಹೊಡೆದಾಗ ತರಚಿದ ಗಾಯ ಆಗಿರುತ್ತದೆ ರಫೀಕ, ಶಫೀಕ ಹಾಗೂ ತಾರಾ ಇವಳು ಕೈಯಿಂದ ಹೊಡೆದಿರುತ್ತಾರೆ. ಮತ್ತು ಸಂತೋಷ ಇತನಿಗೆ ಮೈನೋದ್ದಿನ ಇತನು ಕೈಯಿಂದ ಮುಷ್ಠಿಮಾಡಿ ಎಡಗಣ್ಣೆಗೆ & ಬಲಗಣ್ಣೆನ ಕೆಳಗೆ ಬಲವಾಗಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ 147 341 323 324 504 506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಮಹ್ಮದ ಶಫೀಕ ತಂದೆ ಗಫೂರ ಸಾಬ ಮೌಜಿನ ಸಾ:ಮರತೂರ ರವರು ಅಕ್ಕಳಾದ ತಾಹೇರ @ ತಾರಾ ಇವಳು ಬಾಬುರವರ ಮನೆಯ ಮುಂದೆ ಹೋಗಿ ತಿಪ್ಪೆ ಕಸ ಸಂಬಂಧವಾಗಿ ಕೇಳಲು ಹೋಗಿದ್ದು ಶಬಾನಾ, ಅಪ್ಸನಾ ಮಹೆಬೂಬಿ ಇವರು ನನ್ನ ಅಕ್ಕಳನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಅಪ್ಸನಾ,ಮಹೇಬೂಬಬಿ ಹೊಡೆದಿರುತ್ತಾರೆ. ನನ್ನ ತಮ್ಮ ರಫೀಕ ಬಿಡಿಸಲು ಬಂದಾಗ ನನಗೆ ಬಾಬು ಮತ್ತು ರಫೀಕ ಇವರು ಕೈಯಿಂದ ತಲೆಯ ಹಿಂದೆ ಹೊಡೆರು ತರಚಿದ ಗಾಯಗಳಾಗಿರುತ್ತವೆ. ನಮ್ಮೆಲರಿಗೆ ಸಂತೋಷ, ಉಲ್ಲಾಸ ಇವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:43/2012 ಕಲಂ 147 323 234 504 354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.