ಕೊಲೆ
ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಶಿವರಾಮ ತಂದೆ
ಚಂದಪ್ಪ ಸೂರ್ಯವಂಶಿ ಸಾ: 14 ನೇ ಕ್ರಾಸ ತಾರಫೈಲ ಗುಲಬರ್ಗಾರವರು ನನಗೆ 3 ಜನ ಗಂಡು ಮಕ್ಕಳಿದ್ದು, ಒಬ್ಬಳು ಹೆಣ್ಣು ಮಗಳು ಇದ್ದು ರಮೇಶ ಈತನು ಹಿರಿಯವನಾಗಿರುತ್ತಾನೆ.
ದಿನಾಂಕ 23-04-12 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಜೇವರ್ಗಿಯಿಂದ ನನ್ನ ಬಾಳೆ ಹಣ್ಣಿನ ಬಂಡೆಯ
ಹತ್ತಿರ ಬಂದು ತನ್ನಲ್ಲಿದ್ದ 1000/- ರೂ ಗಳನ್ನು ನನಗೆ ಇಟ್ಟುಕೊಳ್ಳು ಅಂತಾ ಹೇಳಿದಾಗ ನಾನು ‘ಮನೆಗೆ ಹೋಗಿ ನಿನ್ನ ತಾಯಿಗೆ ಕೊಡು’ ಅಂತಾ ಹೇಳಿದೇನು. ಆಗ ರಮೇಶ ಈತನು
ನನ್ನಲ್ಲಿಂದ ಮನೆಗೆ ಹೋಗುವಾಗ ರಾತ್ರಿ 9-00 ಗಂಟೆ ಆಗಿತ್ತು. ದಿನಾಂಕ 24-4-12 ರಂದು ಬೆಳಿಗ್ಗೆ
8-00 ಗಂಟೆ ಸುಮಾರಿಗೆ ನನ್ನ ಮೂರನೇ ಮಗನಾದ ಚಂದ್ರಕಾಂತ ಈತನು ಬಂದು ರಮೇಶ ಅಣ್ಣನಿಗೆ ರೈಲ್ವೆ ಕ್ವಾಟರ್ಸ
ಹತ್ತಿರ ಯಾರೋ ಹೊಡೆದು ಕೊಲೆ ಮಾಡಿ ರಸ್ತೆಯ ಪಕ್ಕದ ಗಟಾರದಲ್ಲಿ ಬಿಸಾಕಿ ಹೋಗಿರುತ್ತಾರೆ.’ ಅಂತಾ ಹೇಳಿದ ತಕ್ಷಣ ನಾನು, ನಮ್ಮ
ಮನೆಯವರೆಲ್ಲರೂ ಹೋಗಿ ನೋಡಲು ನನ್ನ ಮಗ ರಮೇಶನ ಶವವು ಗಟಾರದಲ್ಲಿ ಬಿದ್ದಿದ್ದು, ಯಾರೋ ಕಲ್ಲಿನಿಂದ
ಜಜ್ಜಿ ಕೊಲೆ ಮಾಡಿ ಎಳೆದು ಹಾಕಿದ ರಕ್ತದ ಕಲೆಗಳು ಬಿದ್ದಿದ್ದು ಮತ್ತು ಅಲ್ಲೆ ಪಕ್ಕದಲ್ಲಿ ಒಂದು ರಕ್ತ
ಹತ್ತಿದ ಪರಸಿ ಕಲ್ಲು ಬಿದ್ದಿರುವದನ್ನು ನೋಡಿರುತ್ತೇನೆ. ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ನನ್ನ
ಮಗನಿಗೆ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 55/12
ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಕ್ರಿಶ್ನಾಥ ಪವಾರ ವ್ಯವಸ್ಥಾಪಕರು ಲಕ್ಷ್ಮಿ
ಭವಾನಿ ವಾಚ್ ಕಂಪನಿ, ಹೆಚ್.ಎಮ್.ಟಿ ಶೋ
ರೂಮ್, 12 ಸುಪರ ಮಾರ್ಕೆಟ
ಗುಲಬರ್ಗಾ ರವರು ನಮ್ಮ ಅಂಗಡಿಗೆ ದೀಪಕ ಜೈನ ಶ್ರೀನಾಥ ಟ್ರೇಡಿಂಗ, 363/64, ಆಶಾ ಕಾಂಪ್ಲೇಕ್ಸ
ರವಿವಾರ ಪೇಠ ಪಿ.ಎಮ್.ಸಿ ಬ್ಯಾಂಕ ಕರಾಡಾ ಜಿ|| ಸತಾರಾ, ಮಹಾರಾಷ್ಟ್ರ ರಾಜ್ಯ ಫೋನ್ ನಂ: 08551024757
ನೇದ್ದವನು ಸುಪರ ಮಾರ್ಕೆಟನಲ್ಲಿರುವ ನಮ್ಮ ಅಂಗಡಿಗೆ ದಿನಾಂಕ: 18/04/2012 ರಂದು ಬಂದು ಟೈಟಾನ
ಕೈ ಗಡಿಯಾರಗಳನ್ನು ಪರಿಶೀಲಿಸಿ ಸುಮಾರು 20 ಬೆಲೆಬಾಳುವ ಗಡಿಯಾರಗಳನ್ನು ಅ||ಕಿ|| 1,09,960/- ನೇದ್ದವುಗಳನ್ನು ಸರಿಯಾಗಿವೇ ಅಂಯಾ ಹೇಳಿ ಹೋಗಿ ದಿನಾಂಕ:
21/04/2012 ರಂದು ಸಾಯಂಕಾಲ 6-30 ಗಂಟೆಗೆ ಆ ವ್ಯಕ್ತಿ ನಮ್ಮ ಅಂಗಡಿಗೆ ಬಂದು ತಾನು ಈ ಮೊದಲು ನೋಡಿದ
20 ಗಡಿಯಾರಗಳು ತೆಗೆದುಕೊಂಡು 1,09,960/- ರೂಪಾಯಿಯ ಡಿಡಿ ಕೊಟ್ಟು ಹೋಗಿದ್ದು, ನಾನು ಸದರಿ ಡಿ.ಡಿ
ಯನ್ನು ಕ್ಲೀಯರಿಂಗ ಗೋಸ್ಕರ ದಿನಾಂಕ: 23/04/2012 ರಂದು ಸುಪರ ಮಾರ್ಕೆಟನಲ್ಲಿರುವ ಯೂಕೋ
ಬ್ಯಾಂಕಿಗೆ ಹಾಕಿದಾಗ ಸದರಿ ಡಿ.ಡಿಯು ನಕಲಿ (ಫೇಕ) ಡಿ.ಡಿ ಅಂತಾ ಪರಿಗಣಿಸಿ ಯೂಕೋ ಬ್ಯಾಂಕಿನವರು
ವಾಪಸ್ಸ ನಮ್ಮ ಅಂಗಡಿಗೆ ಕಳುಹಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ
ಗುನ್ನೆ ನಂ: 50/2012 ಕಲಂ: 406, 420 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ಕಳ್ಳತನ
ಪ್ರಕರಣ:
ಸ್ಟೇಷನ
ಬಜಾರ ಪೊಲೀಸ ಠಾಣೆ: ಲೀನಾ ಮುನ್ನಾಡೆ ಭೊರಶಿಯನ್ ಸಾ|| ಮುನಿರ ಪಾಷಾ ಕಟ್ಟಡ ಐವಾನ- ಎ-ಶಾಹಿ ಕಾಲೋನಿ ಗುಲಬರ್ಗಾರವರು ದಿನಾಂಕ:08.02.2012
ರಿಂದ ಇಲ್ಲಿಯವರೆಗೆ ಸುವರ್ಣಾ
ಗಂಡ ನಾಮದೇವ ಸಾ|| ಶಹಬಾಜ ಕಾಲೋನಿ ಗುಲಬರ್ಗಾ ಇವಳು ಆಗಾಗ ನಮ್ಮ ಮನೆಗೆ ಬಂದು
ನಮ್ಮೊಂದಿಗೆ ಸಲುಗೆಯಿಂದ ಇದ್ದು ನಮ್ಮ ಮನೆಯಲ್ಲಿಯ 8000/-ರೂ ಕಳ್ಳತನ ಮಾಡಿಕೊಂಡು ಹೋಗಿದ್ದು, ಆಕೆಯನ್ನು ವಿಚಾರಿಸಿದಾಗ ಆಕೆಯ ಗಂಡ ಹಾಗೂ ಇನ್ನೂ 4 ಜನರು ಬಂದು ಬೆದರಿಸಿ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 56/12 ಕಲಂ 380, ,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment