ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀ ಕಿಶನ ತಂದೆ ಧಾದರ ಸಾಳುಂಕೆ ಸಾ: ಹೆಬ್ಬಾಳ ರೋಡ ಆಳಂದ ತಾ: ಆಳಂದ ರವರು ನಾನು ಮತ್ತು ಜೈಸಿಂಗ ದಿನಾಂಕ: 23/4/2012 ರಂದು ಮೋಟಾರ ಸೈಕಲ ನಂ ಕೆಎ 32 ಕೆ 7706 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದು ಮದುವೆ ಮುಗಿಸಿ ಕೊಂಡು ಮರಳಿ ಆಳಂದಕ್ಕೆ ಹೋಗುವಾಗ ಕೆರೆ ಬೋಸ್ಗಾ ಕ್ರಾಸ ಹತ್ತಿರ ತಿರುವಿನಲ್ಲಿ ಅತಿವೇಗ ಅಲಕ್ಷತನದಿಂದ ನಡೆಯಿಸಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಮೇಲಿಂದ ಬಿದ್ದು ರಕ್ತಗಾಯ ಗುಪ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2012 ಕಲಂ 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಶಿವಕುಮಾರ ತಂದೆ ವಸಂತರಾವ ಮಾಲಿ ಪಾಟೀಲ & ಬಿರಾದಾರ ಸಾ|| ನಾವದಗಿ (ಬಿ) ತಾ|| ಗುಲಬರ್ಗಾರವರು ನಾನು ದಿನಾಂಕ: 23/4/2012 ರಂದು ಗುಲಬರ್ಗಾ ಕ್ಕೆ ಮೋಟರ ಸೈಕಲ ನಂ ಕೆಎ 32 ಇ 2373 ನೇದ್ದರ ಮೇಲೆ ಬಂದು ಮದುವೆ ಕಾರ್ಡಗಳನ್ನು ಹಂಚಿ ಮರಳಿ 5:30 ಪಿಎಮ ಸುಮಾರಿಗೆ ಸ್ವಾಮಿ, ಸರ್ಮಥ ಗುಡ್ಡದ ಇಳಕಲಿನಲ್ಲಿ ಹೊರಟಾಗ ಇಂಡಿಕಾ ಕಾರ ನಂ ಎಪಿ 28 ಎಎಲ್ 3552 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತ ಬಿದ್ದು ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ರಟಕಲ್ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ತುಕಾರಾಮ ಚಿನ್ನಾ ರಾಠೋಡ ಸಾ||ರುಮ್ಮನಗೂಡ ತಾಂಡ ರವರು ನನ್ನ ತಂದೆ ಈಗ ಸುಮಾರು 8 ವರ್ಷದ ಹಿಂದೆ ತೀರಿಕೊಂಡಿದ್ದು, ಆವಾಗಿನಿಂದ ನನ್ನ ತಾಯಿ ಸೀತಾಬಾಯಿ ಇವಳು ನಮ್ಮ ತಾಂಡೆಯ ಉಮ್ಲಾ ತಂದೆ ಪೊಮು ರಾಠೋಡ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ನಮಗೆ ಸರಕಾರರಿಂದ ಒಂದು ಮನೆ ಮಂಜೂರಾಗಿದ್ದರಿಂದ ಮನೆ ಕಟ್ಟುತ್ತಿದ್ದು ಮೊನ್ನೆ ಮನೆಯ ಬಿಲ್ಲಿನ ಹಣ ಬಂದಿದ್ದರಿಂದ ನನ್ನ ತಾಯಿ ಚಿಂಚೋಳಿ ಬ್ಯಾಂಕಿಗೆ ಹೋಗಿ ಹಣ ತಂದಿದ್ದುದನ್ನು ನೋಡಿ, ಉಮ್ಲಾ ರಾಠೋಡನು ನಮ್ಮ ಮನೆಗೆ ಬಂದು ನನ್ನ ತಾಯಿಗೆ ಹಣ ಕೊಡು ಅಂತ ಜಗಳ ಮಾಡುತ್ತಿದ್ದಾಗ ನನ್ನ ಹೆಂಡತಿ ಯಮುನಾ, ನನ್ನ ತಂಗಿ ಸವಿತಾ ಕೂಡಿ ಸಮಜಾಯಿಸಿರುತ್ತೇವೆ. ದಿನಾಂಕ: 22.04.2012 ರಂದು ಉಮ್ಲಾ ನಾನು ಹೊಲಕ್ಕೆ ನಡೆದಿದ್ದೇನೆ ನೀನು ನಡಿ ಅಂತ ನನ್ನ ತಾಯಿಗೆ ಕರೆದುಕೊಂಡು ಹೋಗಿದ್ದು ರಾತ್ರಿ ಆದರೂ ಮನೆಗೆ ಬರಲಿಲ್ಲಾ ದಿನಾಂಕ:23.04.2012 ರಂದು ಮಧ್ಯಾಹ್ನ 3 ಗಂಟೆಯ ತನಕ ಹುಡುಕಾಡಿ ಉಮ್ಲಾ ರಾಠೋಡನಿಗೆ ಕೇಳಲು ಹೊಲದ ಕಡೆಗೆ ನೋಡೊಣ ಅಂತ ಕರೆದುಕೊಂಡು ಹೋಗಿ ಹುಡುಕಾಡಿದಂತೆ ಮಾಡುತ್ತಿರುವಾಗ ನಮ್ಮ ತಾಯಿ ಕಾಣಿಸಲಿಲ್ಲಾ ನನಗೆ ಸಂಶಯ ಬಂದು ನಿಜ ಹೇಳು ನನ್ನ ತಾಯಿ ನಿನ್ನ ಜೊತೆ ಬಂದವಳು ಮನೆಗೆ ಬಂದಿಲ್ಲಾ ಏನು ಮಾಡಿದ್ದಿ ಅಂದಾಗ, ನಿನ್ನ ತಾಯಿಗೆ ಹಣ ಕೇಳಿದೆ ಕೊಡುವದಿಲ್ಲಾ ಅಂದಿದ್ದಕ್ಕೆ ನನ್ನ ಹತ್ತಿರವಿದ್ದ ಬಂದೂಕಿನಿಂದ ಆಕೆಯ ತಲೆಗೆ ಹೊಡೆದಿದ್ದು ಹೊಲದ ಕೆಳಗೆ ಬಂಡಿಕೊಳ್ಳ ನಾಲಾದಲ್ಲಿ ಸತ್ತು ಬಿದ್ದಿರುತ್ತಾಳೆ, ಏನು ಮಾಡ್ತಿರಿ ಅಂತ ಅನ್ನುತ್ತಾ ಓಡಿಹೋದನು ನಾವು ಹುಡುಕಾಡಲು ಅಲ್ಲಿ ಬಂದಿಕೊಳ್ಳದ ನಾಲಾದ ಕಲ್ಲು ಬಂಡಿಯ ಹತ್ತಿರ ನಮ್ಮ ತಾಯಿಯ ಹೆಣ ಬಿದ್ದಿದ್ದು ಮೋಡಿ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 302, ಐಪಿಸಿ ಸಂ 27 ಆಯುಧ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment