ಕಾಣೆಯಾದ
ಪ್ರಕರಣ:
ನೆಲೋಗಿ
ಪೊಲೀಸ್ ಠಾಣೆ:ಶ್ರೀ ರಾಮಚಂದ್ರ ತಂದೆ ಮಂಗು ರಾಠೋಡ ವ: 51 ವರ್ಷ ಸಾ: ನಾಗಾವಿ ತಾಂಡ ತಾ: ಸಿಂದಗಿ ರವರು
ನನಗೆ ಸುರೇಶ, ಸುರೇಂದ್ರ, ಮತ್ತು ಸುನಿಲ ಮೂರು 3 ಜನ ಗಂಡು ಮಕ್ಕಳಿದ್ದು, ಸುನಿಲ ಇತನು ಜೇವರ್ಗಿ
ಬಸ್ಸ ನಿಲ್ದಾಣದ ಹತ್ತಿರ ಒಂದು ಕಂಪ್ಯೂಟರ ಕೇಂದ್ರ ಪ್ರಾರಂಬಿಸಿ ಕಂಪ್ಯೂಟರ ತರಬೇತಿ
ಕೊಡುತ್ತಿದ್ದನು. ನಾನು ದಿನಾಂಕ: 22/03/2012 ರಂದು ಸಾಯಂಕಾಲ ನಾನು ನಮ್ಮ ತಾಂಡಾದಿಂದ ಮಗನ
ಹತ್ತಿರ ಜೇರಟಗಿ ಬಂದು ವಿಚಾರ ಮಾಡಲಾಗಿ ಸುನಿಲ್ ಇತನು ಮುಂಜಾನೆ 10 ಗಂಟೆಯ ಸುಮಾರಿಗೆ ಜೇವರ್ಗಿ
ಕಡೆ ಹೋಗಿ ಬರುತ್ತೆನೆ ಅಂತಾ ಹೋಗಿದ್ದಾನೆ ಅಂತಾ ತಿಳಿಯಿತು ನಾನು ಸಾಯಂಕಾಲದ ವರೆಗೆ ನೋಡಿದೆ
ನನ್ನ ಮಗ ಮರಳಿ ಬರಲಿಲ್ಲ ದಿನಾಂಕ: 23/03/2012 ರಂದು ಕೂಡಾ ಪುನ: ಜೇರಟಗಿ ಬಂದು ನನ್ನ ಮಗನ
ಕಂಪ್ಯೂಟರ ಕೇಂದ್ರ ನೋಡಲಾಗಿ ಲಾಕ ಮಾಡಿದ್ದು ಇತ್ತು ಅವನ ಮೋಬೈಲಗೆ ಪೂನ ಮಾಡಲು ಸ್ವಿಚ್ಚ ಆಪ್ ಬರ ಹತ್ತಿತ್ತು ಅಂದಿನಿಂದ
ಇಲ್ಲಿಯವರೆಗೆ ಹುಡಕಾಡಿದರು ಸಿಕ್ಕಿರುವದಿಲ್ಲ ನನ್ನ
ಮಗನ ಚಹರೆ ಪಟ್ಟಿ ಈ ಕೇಳಗಿನಂತೆ ಇರುತ್ತದೆ. ಎತ್ತರ ಅಂದಾಜು 5”6 “ ತೆಳ್ಳನೆಯ ಮೈಕಟ್ಟು ಗೋದಿ ಮೈಬಣ್ಣ ತಲೆಯಲ್ಲಿ ಅಂದಾಜು 3 ಇಂಚಿನ
ಕೋದಲು ಕಪ್ಪು ಇರುತ್ತವೆ. ಲಮಾಣಿ ಕನ್ನಡ ಇಂಗ್ಲಿಷ, ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾನೆ. ವಯಸ್ಸು
21 ವರ್ಷ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/12 ಕಲಂ
ಮನುಷ್ಯ ಕಾಣೆಯಾಗಿದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ
ಬಗ್ಗೆ ಸುಳಿವು ಸಿಕ್ಕಲ್ಲಿ ಸಿಪಿಐ ಜೇವರ್ಗಿ ರವರ ಮೋಬಾಯಿಲ್ ನಂ:9480803533 /ನೆಲೋಗಿ ಪೊಲೀಸ್ ಠಾಣೆ
ದೂರವಾಣಿ ಸಂಖ್ಯೆ 08442225033 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಕಾಣೆಯಾದ
ಪ್ರಕರಣ:
ಮಹಿಳಾ
ಪೊಲೀಸ್ ಠಾಣೆ: ದಿನಾಂಕ
19-4-2012 ರಂದು ರಾತ್ರಿ
8-30 ಗಂಟೆಯ ಸುಮಾರಿಗೆ ಬುದ್ದಿ ಮಾಂದ್ಯ ಬಾಲ ಮಂದಿರದಲ್ಲಿರುವ
ಆಸ್ಮಾ
ವಯ|| 18 ವರ್ಷ, ಶಕೀಲಾ ವ|| 15 ವರ್ಷದ ಹುಡುಗಿಯರು ಕರೆಂಟ ಹೋದ ಸಮಯದಲ್ಲಿ ಬಾಲಮಂದಿರದಿಂದ
ಓಡಿ ಹೋಗಿರುತ್ತಾರೆ ಅಂತಾ ರಕ್ಷಿಕಿಯರಾದ ಗಂಗೂಬಾಯಿ ಮತ್ತು ದೇವಕಿ ಇವರು ತಿಳಿಸಿದ್ದರಿಂದ ಈ
ಇಬ್ಬರ ಹುಡುಗಿಯರ ಪತ್ತೆಗಾಗಿ ರೈಲ್ವೇ ಸ್ಟೇಷನ, ಬಸ ಸ್ಟಾಂಡ. ದೇವಸ್ಥಾನಗಳಲ್ಲಿ
ಮುಂತಾದ ಕಡೆಗಳಲ್ಲಿ ಹುಡುಕಾಡಿದರು ಇವರು ಪತ್ತೆಯಾಗಿರುವುದಿಲ್ಲಾ ಅಂತಾ ಸುವರ್ಣಲತಾ ತಂದೆ
ಯಲ್ಲಪ್ಪ ಚಂದ್ರಗಿರಿ
ಬುದ್ದಿಮಾಂದ್ಯ ಬಾಲಕಿಯರ
ಬಾಲ ಮಂದಿರದ ಮುಖ್ಯಸ್ಥರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 37/2012 ಕಲಂ
366 (ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇವರ ಬಗ್ಗೆ
ಸುಳಿವು ಸಿಕ್ಕಲ್ಲಿ ಗುಲಬರ್ಗಾ ಕಂಟ್ರೀಲ್ ರೂಮ ನಂ: 08472-263604/ ಮಹಿಳಾ ಪೊಲೀಸ್ ಠಾಣೆ ದೂ:
ನಂ: 08472263620 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ.
No comments:
Post a Comment