POLICE BHAVAN KALABURAGI

POLICE BHAVAN KALABURAGI

09 May 2017

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 08/05/2017 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಆಗ ನನ್ನ ತಂದೆ ಕಲ್ಲಣ್ಣಾ ಇವರು ನಮ್ಮ ತೋಟದ ಹೋಲಾ ಸರ್ವೆ ನಂ 08 ನೇದ್ದಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದರು. ಸ್ವಲ್ಪ ಸಮಯದ ನಂತರ ನೈಸರ್ಗಿಕ ವಿಕೋಪದಲ್ಲಿ ಬದಲಾಣೆಯಾಗಿ ವಿಪರಿತ ಗಾಳಿ ಮತ್ತು ಸಿಡಿಲು ಮಿಂಚು ಆಗುತ್ತಿದ್ದರಿಂದ್ದ ನಾನು ಕೂಡಾ ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿದ್ದ ಎಮ್ಮೆಗಳಿಗೆ ಮೇವು ಹಾಕಿ ಕರೆಂಟ ಮೋಟಾರ ಬಂದ ಮಾಡಿ ಹಾಗೆಯೆ ಹೋಲದಲ್ಲಿ ನಡೆದುಕೊಂಡು ನಮ್ಮ ಹೋಲದಲ್ಲಿರುವ ಹುಣಸೆ ಗಿಡದ ಕಡೆಗೆ ಬಂದಾಗ ಆಗ ಸದರಿ ನನ್ನ ತಂದೆ ಕಲ್ಲಣ್ಣಾ ಇವರು ಹುಣಸೆ ಗಿಡದ ಕೆಳೆಗೆ ಬಿದ್ದಿದ್ದರು ಹತ್ತಿರ ಹೋಗಿ ನೋಡಲಾಗಿ ಅವರಿಗೆ ಸಿಡಿದು ಬಡಿದು ಎಡ ಮಗ್ಗಲಿಗೆ, ಬೆನ್ನಿಗೆ ಸುಟ್ಟಗಾಯ ಮತ್ತು ಎಡಕಾಲು ತೋಡೆಗೆ ಸುಟ್ಟು ಕಪ್ಪಾಗಿದ್ದು ನನ್ನ ತಂದೆಗೆ ಮಾತಾಡಿಸಲು ಮಾತಾಡದೇ ಬೆಹೋಸ ಆಗಿದ್ದರು ಗಾಬರಿಗೊಂಡು ನಾನು ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಮ್ಮ ಗ್ರಾಮದ ದೇವಾನಂದ ಬಬಲಾದ, ಅಹೆಮ್ಮದ ಅಲಿ, ಈರಣ್ಣಾ ಲೋಡ್ಡನ್, ಸೈಯ್ಯದ ಚಾವುಸ್ ಇವರುಗಳು ಬಂದಿದ್ದು ನಾವೆಲ್ಲರೂ ಕೂಡಿಕೊಂಡು ಯಾವುದೋ ಒಂದು ಆಟೋದಲ್ಲಿ ನನ್ನ ತಂದೆಯವರಿಗೆ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿರಾಯು ಆಸ್ಪತ್ರೆಗೆ ಒಯ್ಯುವಾಗ ಆಗ ಅಲ್ಲಿನ ವೈದ್ಯರು ನನ್ನ ತಂದೆಯವರಿಗೆ ನೋಡಿ ಸದರಿಯವನು ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಕಲ್ಲಣ್ಣಾ ಜಿಡಗಿ ಸಾ:ಸಿಂದಗಿ (ಬಿ) ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವರಾಜ ತಂದೆ ತಮ್ಮಣ್ಣ ಬಜಂತ್ರಿ ಸಾ: ಹೊನಗುಂಟಾ ಇವರು ಮತ್ತು ಆತನ ಗೆಳೆಯನಾದ ರವಿ ತಂದೆ ರಾಜು ಬಂಜತ್ರಿ ಇಬ್ಬರೂ ಕೂಡಿ ನಿನ್ನೆ ದಿನಾಂಕ: 07/05/2017 ರಂದು ಮುಂಜಾನೆ ಮೋಟಾರ ಸೈಕಲ ನಂಬರ ಕೆ.ಎ.01 ಇ ಎನ್ 6068 ನೇದ್ದರ ಮೇಲೆ ಚಾಮನೂರ ಗ್ರಾಮಕ್ಕೆ ಬ್ಯಾಂಡ ಬಾಜಿ ಬಾರಿಸಲು ಹೋಗಿ ಮರಳಿ ಇಬ್ಬರೂ ಕೂಡಿ ಶಹಾಬಾದ ಮಾರ್ಗವಾಗಿ ಹೊನಗುಂಟಾಕ್ಕೆ ಹೋಗುವಾಗ ನಮ್ಮೂರ ಅಶೋಕ ತಂದೆ ದುರ್ಗಪ್ಪ 2) ತಮ್ಮಣ್ಣ ತಂದೆ ಮರೇಪ್ಪ 3) ಕೃಷ್ಣ ತಂದೆ ಅಶೋಕ ಇವರು ಸೀಮೆ ಮರಗಮ್ಮ ಗುಡಿಯ ಹತ್ತಿರ ರಾತ್ರಿ 9-30 ಗಂಟೆಗೆ  ನಿಂತಾಗ  ನಾವು ಕೂಡ ಅಲ್ಲೆ ಮಾತನಾಡುತ್ತಾ ನಿಂತುಕೊಂಡಾಗ ಅದೇ ವೇಳೆಗೆ ಹೊನಗುಂಟಾ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮಾತನಾಡುತ್ತಾ ನಿಂತಾ ನಮ್ಮ ಎಲ್ಲಾರಿಗೆ ಡಿಕ್ಕಿ ಪಡಿಸಿದಾಗ ನಮಗೆ ಎಲ್ಲಾರಿಗೂ ಭಾರಿ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತವೆ. ಟ್ರಾಕ್ಟರ ಮುಂದೆ ಹೋಗಿ  ಪಲ್ಟಿಯಾಗಿ ಬಿದ್ದಾಗ ಚಾಲಕ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಆಗ ಗಾಯ ಪೆಟ್ಟು ಹೊಂದಿದ್ದ ನಮಗೆ ಉಪಚಾರ ಕುರಿತು ನಮಗೆ ಪರಿಚಿಯದ ಆಶಾಪ್ಪ ತಂದೆ ಮರೇಪ್ಪ 2) ಚಂದ್ರಾಮ ತಂದೆ ಶರಣಪ್ಪ ಇವರು ಕೂಡಿ 108 ಅಂಬುಲೇನ್ಸನಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ ಟ್ರಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ವರದಕ್ಷಣೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಕಲಾವತಿ ಗಂಡ ಮಾದಣ್ಣಾ ಭೂತೆ, ಸಾಃ ಕೋಹಿನೂರ ಗ್ರಾಮ, ತಾಃ ಬಸವ ಕಲ್ಯಾಣ, ಜಿಃ ಬೀದರ ಇವರು ನನ್ನ ಕಿರಿಯ ಮಗಳಾದ ಶರಣಮ್ಮ ಇವಳಿಗೆ ಈಗ ಸುಮಾರು 04 ವರ್ಷಗಳ ಹಿಂದೆ ಆಳಂದ ತಾಲೂಕಿನ ಕೇರಿ ಅಂಬಲಗಾ ಗ್ರಾಮದ ಭೀಮಶ್ಯಾ ಧರಿ ಎಂಬುವವರ ಮಗನಾದ ಪ್ರಕಾಶ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿ ಮದುವೆ ಕಾಲಕ್ಕೆ ನನ್ನ ಮಗಳಿಗೆ ವಧು ದಕ್ಷಿಣೆಯಾಗಿ 50 ಸಾವಿರ ನಗದು ಹಣ, ಎರಡುವರೆ ತೊಲೆ ಬಂಗಾರ ಹಾಗೂ ಮಂಚ, ಗಾದಿ, ತಿಜೋರಿ ಮತ್ತು ಗೃಹಬಳಕೆ ಸಾಮಾನುಗಳು ಕೊಡಬೇಕೆಂದು ಮಾತುಕತೆಯಾಗಿದ್ದು, ಅದರಂತೆ ಮೇಲ್ಕಂಡ ಹಣ, ಬಂಗಾರ ಮತ್ತು ವಸ್ತುಗಳನ್ನು ಕೊಟ್ಟು ಸಾಂಪ್ರದಾಯಿಕವಾಗಿ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ ಈಗ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಮಗಳ ಮದುವೆಯಾದ ಸುಮಾರು 02 ವರ್ಷಗಳವರೆಗೆ ಅವಳ ಗಂಡ, ಅತ್ತೆ-ಮಾವ, ನಾದಿನಿ ಹಾಗೂ ಮೈದುನರು ಅವಳನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಎಂದು ಅವಳಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ಅವರ ಕಿರುಕುಳ ಸಹಿಸದೆ ಈಗ ಒಂದು ವರ್ಷದ ಹಿಂದೆ ನನ್ನ ಮಗಳು ಶರಣಮ್ಮಳು ತವರು ಮನೆಗೆ ಬಂದು ವಾಸವಾಗಿದ್ದಾಗ ನಾನು, ನನ್ನ ಮಕ್ಕಳಾದ ಅಂಬಾರಾಯ, ಅಣ್ಣಾರಾಯ ಹಾಗೂ ಮೊಮ್ಮಗನಾದ ಶರಣಬಸವ ಮತ್ತು ನಮ್ಮೂರಿನ ದೇವಿದಾಸ ತಂದೆ ಲಾಡಪ್ಪ ಸಜ್ಜನ, ರಾಜೇಂದ್ರ ತಂದೆ ಭೀಮಶ್ಯಾ ಹೊಸಮನಿ ರವರುಗಳು ಕೂಡಿಕೊಂಡು ನನ್ನ ಮಗಳನ್ನು ಕರೆದುಕೊಂಡು ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ನನ್ನ ಮಗಳ ಗಂಡನ ಮನೆಯವರ ಇಚ್ಛೇಯಂತೆ ಹಾಗೂ ಮಗಳ ನೆಮ್ಮದಿಯ ಜೀವನಕ್ಕಾಗಿ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ ತಂದೆ ಲಕ್ಕಪ್ಪ ಧರಿ, ಅತ್ತೆ ರಂಗುಬಾಯಿ ಗಂಡ ಭೀಮಶ್ಯಾ ಧರಿ, ನಾದಿನಿ ಪ್ರತಿಭಾ ತಂದೆ ಭೀಮಶ್ಯಾ ಧರಿ, ಮೈದುನರಾದ ಪ್ರಶಾಂತ ತಂದೆ ಭೀಮಶ್ಯಾ ಧರಿ, ರಾಜು ತಂದೆ ಭೀಮಶ್ಯಾ ಧರಿ ರವರುಗಳಿಗೆ 25 ಸಾವಿರ ರೂಗಳು ಹಾಗೂ 01 ತೊಲೆ ಬಂಗಾರ ಕೊಟ್ಟು ನನ್ನ ಮಗಳಿಗೆ ತೊಂದರೆ ಕೊಡದ ಹಾಗೆ ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ ನನ್ನ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತೇವೆ. ಆದರೂ ಸಹ ನನ್ನ ಮಗಳ ಗಂಡ ಹಾಗೂ ಅವರ ಮನೆಯವರು ಕೂಡಿ ವರದಕ್ಷಿಣೆ ವಿಷಯವಾಗಿ ಅವಳಿಗೆ ದಿನಾಲೂ ಕೈಯಿಂದ ಹೊಡೆಯುವುದು ಮತ್ತು ಬೈಯುವುದು ಮಾಡುತ್ತಾ ನಾನಾ ರೀತಿಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು ಅಲ್ಲದೆ ನಿನಗೆ ಬರಿ ಹೆಣ್ಣು ಮಕ್ಕಳು ಮಾತ್ರ ಹುಟ್ಟುತ್ತವೆ ನಿನಗೆ ಗಂಡು ಮಕ್ಕಳು ಆಗುವುದಿಲ್ಲವೆಂದು ನಿಂದಿಸಿ ಕಿರುಕುಳ ಕೊಡುತ್ತಿದ್ದರು. ಹೀಗಿದ್ದು ಇಂದು ದಿನಾಂಕಃ 07/05/2017 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ನಾನು, ನನ್ನ ಮಗ ಆನಂದರಾಯ, ಸೋಸೆ ಪ್ರಭಾವತಿ ರವರುಗಳು ಮನೆಯಲ್ಲಿದ್ದಾಗ ಮಗ ಆನಂದರಾಯನಿಗೆ ಸಂಗೋಳಗಿ(ಸಿ) ಗ್ರಾಮದ ನಮ್ಮ ಸಂಬಂಧಿಕರಾದ ದೇವಿಂದ್ರ ತಂದೆ ರಾಜೇಂದ್ರ ಹೊಸಮನಿ ರವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗಳಾದ ಶರಣಮ್ಮ ಇವಳ ಮೈಗೆ ಬೆಂಕಿ ಹತ್ತಿ ಮೈಸುಟ್ಟು ಮೃತ ಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ತಕ್ಷಣವೆ ನನ್ನ ಮಗ ಆನಂದರಾಯನು ಗಾಬರಿಗೊಂಡು ನಮ್ಮ ಬೀಗನಾದ ಭೀಮಶ್ಯಾ ಧರಿ ಇವರಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವರು ನಾವು ಬೆಳಿಗ್ಗೆಯಿಂದ ಎಲ್ಲರೂ ಕೂಡಿ ನಿಮ್ಮ ಮಗಳು ಶರಣಮ್ಮಳಿಗೆ ಹೊಡೆ-ಬಡೆ ಮಾಡಿ ಕೊಲೆ ಮಾಡಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತೇವೆ ಅವಳ ಹೆಣವು ನಮ್ಮ ಮನೆಯಲ್ಲಿ ಸುಡುತ್ತಿದೆ. ಬೇಕಾದರೆ ನೀವೆ ಬಂದು ನೋಡಿಕೊಂಡು ಏನು ಮಾಡುತ್ತಿರಿ ಮಾಡಿಕೊಳ್ಳಿ ಅಂತ ಹೇಳಿ ಫೋನ್ ಕಟ್ ಮಾಡಿದರು. ನಂತರ ಈ ವಿಷಯವನ್ನು ನನ್ನ ಮಗನು ನನ್ನ ಎಲ್ಲಾ ಗಂಡು ಮಕ್ಕಳಿಗೆ ತಿಳಿಸಿದ್ದು, ಅಲ್ಲದೆ ಓಣಿಯವರಿಗೂ ಸಹ ತಿಳಿಸಿದ್ದು ನಾನು ನನ್ನ ಮಕ್ಕಳಾದ ಅಂಬಾರಾಯ, ಆನಂದರಾಯ, ಸೂರ್ಯಕಾಂತ, ಅಣ್ಣಾರಾಯ ಹಾಗೂ ಓಣಿಯವರಾದ ದೇವಿದಾಸ ತಂದೆ ಲಾಡಪ್ಪ ಸಜ್ಜನ, ಶಿವಶರಣಪ್ಪ ಬಿಲಗುಂದಿ, ಬಾಬುರಾವ ಗಡ್ಡದ, ನಾಮದೇವ ಅಪ್ಪೆ ರವರೆಲ್ಲರೂ ಕೂಡಿ ಕ್ರೂಸರ ಜೀಪನಲ್ಲಿ ಸಾಯಂಕಾಲ 04-30 ಗಂಟೆ ಸುಮಾರಿಗೆ ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ಅವರ ಮನೆಗೆ ಹೋಗಿ ನೋಡಲಾಗಿ ನನ್ನ ಮಗಳ ದೇಹವು ಅವಳ ಮಲಗುವ ಕೋಣೆಯಲ್ಲಿ ಸುಟ್ಟು ಕರಕಲಾಗಿರುವ ಸ್ಥೀತಿಯಲ್ಲಿತ್ತು. ದಿನಾಂಕಃ 07/05/2017 ರಂದು ಮಧ್ಯಾಹ್ನ 01-30 ಗಂಟೆಯಿಂದ 02-00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗಳಾದ ಶರಣಮ್ಮ ಇವಳಿಗೆ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ, ಅತ್ತೆ ರಂಗುಬಾಯಿ, ನಾದಿನಿ ಪ್ರತಿಭಾ, ಮೈದುನರಾದ ಪ್ರಶಾಂತ ಮತ್ತು ರಾಜೀವರವರುಗಳೆಲ್ಲರು ಸೇರಿ ವರದಕ್ಷಿಣೆ ವಿಷಯವಾಗಿ ನನ್ನ ಮಗಳನ್ನು ಹೊಡೆ-ಬಡೆ ಮಾಡಿ ಕೊಲೆ ಮಾಡಿ ಅವಳ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

08 May 2017

Kalaburagi District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ನನ್ನ ತಾಯಿಯಾದ ಪ್ರೇಮಿಳಾ ಮಾನಸಗಲ್ ಇವರ ಆರೋಗ್ಯ ಸರಿ ಇಲ್ಲದ್ದರಿಂದ ಲಾತೂರ ಆಸ್ಪತ್ರೆಗೆ ತೋರಿಸಿಕೊಂಡು ಬರಲು ನನ್ನ ತಮ್ಮನಾದ 1) ವೆಂಕಣಗೌಡ , ಆತನ ಹೆಂಡತಿ 2)ವಂದನಾ , ಆತನ  ಮಗಳಾದ 3)ಕು,ಸಾಯಿಸೌಮ್ಯ, ನಮ್ಮ ಅಣ್ಣತಮ್ಮಕ್ಕೀಯ 4) ಸುಜಾತಾ ಗಂಡ ರಂಗನಾಥ ಎಲ್ಲರು ಇಂದು ಬೆಳಿಗ್ಗೆ 7 ಎ.ಎಮ್.ಕ್ಕೆ  ಯಾದಗೀರಿಯಿಂದ  ಲಾತೂರಕ್ಕೆ  ಹೋಗಿಬರುತ್ತೇವೆ ಅಂತಾ ಹೇಳಿ ಕಾರ ನಂ ಕೆಎ-33 ಎಮ್-4533 ನೇದ್ದರಲ್ಲಿ ಚಾಲಕ ರಿಜಾಯ ನೊಂದಿಗೆ ಹೋಗಿದ್ದರು. ನಾನು ಮತ್ತು  ನಮ್ಮ ಅಣ್ಣತಮ್ಮಕ್ಕೀಯ ರಂಗನಾಥ ಮನೆಯಲ್ಲಿದ್ದಾಗ ಗೊತ್ತಾಗಿದ್ದೇನೆಂದರೆ ನಮ್ಮ ಮನೆಯವರೆಲ್ಲರು ಲಾತೂರ ಆಸ್ಪತ್ರೆಗೆ ಹೋಗಲುಕುಳಿತು ಹೊರಟಿದ್ದು  ಕಾರ ಮರತೂರ ಕ್ರಾಸ ಹತ್ತಿರ  ರಸ್ತೆಗೆ ಅಪಘಾತ ವಾಗಿ 108 ಅಂಬುಲೆನ್ಸದಲ್ಲಿ  ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಮಾಡಿರುತ್ತಾರೆ ಅಂತಾ  ಸುದ್ದಿ ತಿಳಿದು ನಾನು  ಮತ್ತು  ರಂಗನಾಥ ಮಾನಸಗಲ್  ಹಾಗೂ ನಾಗರಾಜ ಹೂವಿಲಗೋಲ್ ಕೂಡಿ  ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ಹೋಗಿ  ನೋಡಲಾಗಿ ನನ್ನ ತಾಯಿ 1)ಪ್ರಮಿಳಾ ಇವರು ಬೇಹೋಷ ಇದ್ದು ತಲೆಯ ಹಿಂದೆ ರಕ್ತಗಾಯವಾಗಿ ಎಡಕೈ ಮುಂಗೈ & ಎಡ ಕಣ್ಣಿಗೆ ಗುಪ್ತಪೆಟ್ಟಾಗಿದ್ದು ಬಾಯಿಂದ  ರಕ್ತ ಬಂದಿರುತ್ತದೆ.  2)ಸುಜಾತಾ ಇಳಿಗೆ ನೋಡಲಾಗಿ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಎರಡೂ ಮೊಳಕಾಲಿಗೆ  ತರಚಿದ ಗಾಯವಾಗಿ ಬೇಹೋಷ ಇದ್ದಳು,  3)ವಂದನಾ ಇವಳಿಗೆ ತಲೆಗೆ ಮತ್ತು ಮೂಗಿಗೆ ಒಳಪೆಟ್ಟಾಗಿರುತ್ತದೆ. 4)ಮಗಳು ಸಾಯಿ ಸೌಮ್ಯ  ಇವಳಿಗೆ  ಎಡಕೈ ಹಸ್ತದ ಮೇಲ್ಭಾಗ ಹರಿದಂತಾಗಿ  ಭಾರಿ ರಕ್ತಗಾಯವಾಗಿ ಬಾಯಿಂದ  & ಕಿವಿಯಿಂದ  ರಕ್ತ ಬಂದಿರುತ್ತದೆ. ಚಾಲಕ 5) ರಿಯಾಜನಿಗೆ ನೋಡಲಾಗಿ ಮುಖದ ಮೇಲೆ ತರಚಿದಂತಾಗಿ ತಲೆಯ ಹಿಂಭಾಗಕ್ಕೆ & ಎಡಕೈ ಉಂಗುರು  ಬೆರಳಿಗೆ  ರಕ್ತಗಾಯ ವಾಗಿರುತ್ತದೆ ಅವನೂ ಸಹ ಬೇಹೋಷ ಇದ್ದರು. ವಂದನಾ ಇವರಿಂದ ತಿಳಿದುಬಂದಿದ್ದೇನೆಂದರೆ, ನಾವೆಲ್ಲರು ಕುಳಿತುಕೊಂಡು  ಲಾತೂರಕ್ಕೆ ಹೊರಟಿದ್ದ ಕಾರ ಚಾಲಕ ರಿಯಾಜ ಇತನು ಚಲಾಯಿಸುವ ಕಾರ ಅತಿವೇಗ ಮತ್ತು  ನಿಷ್ಕಾಳಜಿತನದಿಂದ  ನಡೆಸಿಕೊಂಡು  ಹೋಗಿ  ಒಮ್ಮಲೆ ಕಟ್ ಹೊಡೆದಿದ್ದರಿಂದ  ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಗೆ ಹೋಗಿ ಪಲ್ಟಿ ಹೊಡೆದು  ರಸ್ತೆಯ  ಮೇಲೆ ಬಿದ್ದಾಗ ಒಳಗಡೆ ಇದ್ದ  ನಮಗೆಲ್ಲರಿಗೂ ಭಾರಿ ಮತ್ತು ಸಾದಾ ಗಾಯ ಪೆಟ್ಟುಳಾಗಿದ್ದು. ನಿಮ್ಮ ತಮ್ಮ ವೆಂಕಣಗೌಡರಿಗೆ ಭಾರಿ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ಕೂಡಲೆ ನಾವು ಶಹಾಬಾದ ಸರಕರಿ ಆಸ್ಪತ್ರೆಗೆ  ಬಂದು  ನೋಡಲಾಗಿ ನನ್ನ ತಮ್ಮ ರಸ್ತೆ ಅಪಘಾತದಲ್ಲಿ ಬೆನ್ನಿಗೆ ತಲೆಗೆ  ಮೈ ಕೈಗೆ  ಭಾರಿ ಒಳಪೆಟ್ಟಾಗಿ ಮೂಗಿನಂದ ರಕ್ತಬಂದು ಮೃಪಟ್ಟಿದ್ದನು. ರಿಯಾಜ ಇತನು ಚಲಾಯಿಸಿಕೊಂಡು  ಹೋಗುತ್ತಿದ್ದ ಕಾರ ನಂ ಕೆಎ-33 ಎಮ್-4533 ನೇದ್ದು ಅತಿ ವೇಗ ಮತ್ತು  ಅಲಕ್ಷತನದಿಂದ ನಡೆಸುತ್ತಾ ಬಂದು ರಸ್ತೆಯಲ್ಲಿ ಅಪಘಾತ ಮಾಡಿದ್ದರಿಂದ  ಘಟನೆಜರುಗಿದ್ದು ಆತನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಬಸಂತಗೌಡ ತಂದೆ ನರಸಣ್ಣಗೌಡ ಮಾನಸಗಲ್ ಸಾಃಮೈಲಾಪೂರ ಬೇಸ್ ಯಾದಗೀರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಸುಗೂಸನ್ನು ಬಿಸಾಕಿ ಹೋದ ಪ್ರಕರಣ  :
ಜೇವರಗಿ ಠಾಣೆ : ಶ್ರೀ ಗೊಪಾಲ ತಂದೆ ರಾಮಚಂದ್ರ ಮೂಡಬೂಳ ಸಾಃ ಇಜೇರಿ ತಾಃ ಜೇವರಗಿ ರವರು ದಿನಾಂಕ 06.05.2017 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ದಾವೂಲ್ ಸಾಬ ಮಕ್ಕಾಂದಾರ ಇಬ್ಬರು ಕೂಡಿಕೊಂಡು ಇಜೇರಿ-ಚಿಗರಳ್ಳಿ ರೋಡ ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೊಗುತ್ತಿದ್ದೆವು. ಅಲ್ಲಿಯೇ ರಸ್ತೆಯ ಪಕ್ಕದಲ್ಲಿರುವ ಮಶಾಖ ಪಟೇಲ @ ಬಾಷಾ ಪೊಲೀಸ್ ಪಾಟೀಲ ಇವರ ಖುಲ್ಲಾ ಪ್ಲಾಟಿನ ಹತ್ತಿರ ಹೋಗುತ್ತಿದ್ದಾಗ ಒಂದು ಮಗು ಅಳುವ ಶಬ್ದ  ಕೇಳಿ ಸಮೀಪ ಹೋಗಿ ನೋಡಲಾಗಿ ಅದು ಗಂಡು ಮಗುವಾಗಿತ್ತು, ಅಂದಾಜು ಒಂದು ದಿವಸದ ಹಸುಗೂಸು ಇದ್ದಂತೆ ಕಂಡು ಬಂದಿರುತ್ತದೆ. ಅಂದಾಜು 1-2 ದಿವಸಗಳ ಹಿಂದೆ ಯಾರೋ ಒಬ್ಬ ಹೆಣ್ಣು ಮಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿ  ನಂತರ ತನ್ನ ಮಗುವಿನ ಜನನವನ್ನು ಬಚ್ಚಿಡುವ ಮತ್ತು ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವ ಅಥವಾ ಅದಕ್ಕೆ ಅಪಾಯಕ್ಕೆ ಒಡ್ಡುವ ಅಥವಾ ಸಂಪೂರ್ಣವಾಗಿ ಮಗುವಿಗೆ ತೊರೆಯುವ ಉದ್ದೇಶದಿಂದ ಸದರಿ ಹಸುಗೂಸನ್ನು ಇಜೇರಿ-ಚಿಗರಳ್ಳಿ ರೋಡ ಪಕ್ಕದ ಇಜೇರಿ ಮಸಾಖ ಪಟೇಲ @ ಬಾಷಾ ಇವರ ಖುಲ್ಲಾ ಪ್ಲಾಟನಲ್ಲಿ ಬಿಸಾಕಿ ಹೋಗಿರುತ್ತಾಳೆ. ಅಲ್ಲಿ ನೇರೆದ ಜನರು ಸಹ ಹಾಗೇ ಅನ್ನುತ್ತಿದ್ದರು. ಆ ಮಗು ಅಳುತ್ತಿದ್ದರಿಂದ ಆ ಮಗುವನ್ನು ಸಾರ್ವಜನಿಕರು ನಮ್ಮೂರ ಲಾಲಬೀ ಗಂಡ ಹುಸೇನಿ ಹಳಿಮನಿ ಇವಳ ಸಹಾಯದಿಂದ ಇಜೇರಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ನಂತರ ಅಲ್ಲಿಂದ ಆ ಮಗುವನ್ನು ನಮ್ಮೂರ ಮರೆಮ್ಮ ಮತ್ತು ಆಶಾ ಕಾರ್ಯಕರ್ತ ದೇವಮ್ಮ ಗಂಡ ಬಸವರಾಜ ಗುತ್ತೆದಾರ ಇವಳ ಸಂಗಡ ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋಗಿದ್ದು ಆ ಗಂಡು ನವಜಾತ ಶಿಶು ಸದ್ಯೆ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

07 May 2017

Kalaburagi District Reported Crimes

ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಶರಣಮ್ಮ ಗಂಡ ನಾಗಣ್ಣಾ ಕಲಶೆಟ್ಟಿ, ಸಾ||ಲೇಂಗಟಿ ಹಾ:ಆದರ್ಶ ಕಾಲೋನಿ ಕಲಬುರಗಿ ಈಗ ಸುಮಾರು 9 ವರ್ಷಗಳ ಹಿಂದೆ ನನ್ನ ಗಂಡ ನಾಗಣ್ಣ ಇವರು ಮೃತಪಟ್ಟಿರುತ್ತಾರೆ. ಪಿತ್ರಾರ್ಜಿತವಾಗಿ ನನ್ನ ಗಂಡನ ಪಾಲಿಗೆ 2 ಎಕರೆ 20 ಗುಂಟೆ ಜಮೀನಿದ್ದು ಸರ್ವೇ ನಂ-83 ರಲ್ಲಿ ಇರುತ್ತದೆ. ಈ ಜಮೀನಿನ ಸಾಗುವಳಿಯನ್ನು ನನ್ನ ಗಂಡನೆ ಮಾಡಿಕೊಂಡು ಹೋಗುತ್ತಿದ್ದನು ನಾನು ನನ್ನ ಗಂಡನ ಮರಣದ ನಂತರ ನನ್ನ ಮಕ್ಕಳೊಂದಿಗೆ ಕಲಬುರಗಿಯಲ್ಲಿ ಮನೆಮಾಡಿಕೊಂಡು ವಾಸವಾಗಿರುತ್ತೇನೆ. ನನ್ನ ಗಂಡನ ಮರಣದ ನಂತರ ನಾನು ಹೊಲದ ಎಲ್ಲಾ ಒಕ್ಕಲುತನದ ಮೇಲೆ ವಿಚಾರಣೆಯನ್ನು ನನ್ನ ಎರಡನೆಯ ಮಗನಾದ ಆಕಾಶ ಇವರು ನೋಡಿಕೊಂಡು ಬರುತ್ತಿದ್ದರು. ನನ್ನ ಗಂಡನು ಜೀವಂತವಿದ್ದಾಗ ಪ್ರಗತಿ ಕೃಷ್ಣ ಗ್ರಾಮೀಣ್ ಬ್ಯಾಂಕಿನಲ್ಲಿ 20000/- ರೂಪಾಯಿಗಳನ್ನು ಬೆಳೆಸಾಲ ತೆಗೆದಿರುವ ಬಗ್ಗೆ ಗೊತ್ತಿರುತ್ತದೆ. ನನ್ನ ಗಂಡನು ತೀರಿಕೊಂಡ ನಂತರ ಹೊಲದ ಸಾಗವಳಿ ಖರ್ಚಿಗಾಗಿ ನಾನು ಹಾಗೂ ನನ್ನ ಚಿಕ್ಕಮ್ಮರಾದ ನಾಗಮ್ಮ ಗಂಡ ರೇವಣಸಿದ್ದ ಕಲಶೆಟ್ಟಿ ಸಾ||ಮುದ್ದಡಗಾ ಇವರು ಹತ್ತಿರ 2,50,000/- ಮತ್ತು ಸರಸ್ವತಿ ಇವರ ಹತ್ತಿರ  1,50,000 ಸಾವಿರ ರೂಪಾಯಿಗಳು ಕೈಗಡವಾಗಿ ಸಾಲ ತಗೆದು ಬೀಜಗೊಬ್ಬರ ಹಾಗೂ ಸಾಗುವಳಿಗಾಗಿ ಖರ್ಚು ಮಾಡಿರುತ್ತೇವೆ. 2015, 2016 ಸಾಲಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಬಾರದೆ ಇರುವುದರಿಂದ ಎರಡು ಬೆಳೆಗಳು ವಿಫಲವಾಗಿದ್ದು ಅಲ್ಲದೇ ಕಳೆದ ವರ್ಷ ಹೆಚ್ಚಿಗೆ ಮಳೆ ಬಿದ್ದಿದ್ದರಿಂದ ಹೊಲದಲ್ಲಿ ನೀರು ನಿಂತು ಬೆಳೆ ಪೂರ್ತಿ ಬೆಳೆನಾಶವಾಗಿರುತ್ತದೆ. ಹೀಗೆ ಸತತವಾಗಿ 2 ವರ್ಷ ಬೆಳೆ ಬೆಳೆಯದೇ ಇರುವುದರಿಂದ ಎಲ್ಲಾ ಸಾಲವನ್ನು ಹೇಗೆ ತೀರಸಬೇಕೆಂದು ನನ್ನ ಮಗ ಆಕಾಶ ಇತ್ತತಲಾಗಿ ಬಹಳಷ್ಟು ಚಿಂತೆಮಾಡುತ್ತಾ ದುಃಖ ಪಡುತ್ತಿದ್ದನು ನಾನು ನನ್ನ ಹಿರಿಯ ಮಗನಾದ ಬಸವರಾಜ ಕೂಡಿ ಧೈರ್ಯತುಂಬಿ ಸಮದಾನ ಮಾಡಿರುತ್ತೇವೆ.ದಿನಾಂಕ: 04/05/2017 ರಂದು ಗುರುವಾರ ದಿವಸ ಮುಂಜಾನೆ 09-00 ಗಂಟೆಯ ಸುಮಾರಿಗೆ ನನ್ನ ಹಿರಿಯಮಗ ಬಸವರಾಜ ಮತ್ತು ಆಕಾಶ ರವರುಗಳು ಕಲಬುರಗಿ ಮನೆಯಲ್ಲಿದ್ದಾಗ ನನ್ನ ಮಗ ಆಕಾಶನು ಊರಿಗೆ ಹೋಗಿ ಹೊಲಗಳ ನೇಗಿಲು ಹೊಡೆದು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾನೆ ಆ ದಿವಸ ಸಂಜೆ ಆದರು ಸಹ ನನ್ನ ಮಗನು ವಾಪಸ್ಸ ಮನೆಗೆ ಬರದಿದ್ದರಿಂದ ನನ್ನ ಭಾವನ ಮಗನಾದ ಹಣಮಂತನಿಗೆ ಫೋನಮಾಡಿ ವಿಚಾರಿಸಲಾಗಿ ಊರಿಗೆ ಬಂದಿರುವುದಿಲ್ಲವೆಂದು ತಿಳಿಸಿದನು. ಅಲ್ಲದೇ ನಾನು ನನ್ನ ಮಗನ ಮೊಬೈಲಗೆ ಫೋನಮಾಡಿದಾಗ ಬಂದ ಇರುತ್ತದೆ. ನಂತರ ನಾನು ನನ್ನ ಸಂಬಂಧಿಕರಿಗೆ ಫೋನಮಾಡಿ ವಿಚಾರಿಸಲು ನನ್ನ ಮಗ ಎಲ್ಲಿಗೆ ಹೋಗಿದ್ದಾನೆ ಗುರುತಾಗಲಿಲ್ಲ. ನಿನ್ನೆ ದಿನಾಂಕ:05/05/2017 ರಂದು ಸಂಜೆ 7-00 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿದ್ದಾಗ ಮನೆಗೆ ನನ್ನ ಭಾವನ ಮಗನಾದ ಹಣಮಂತ ಈತನು ಫೋನಮಾಡಿ ನಿಮ್ಮ ಮಗನಾದ ಆಕಾಶನು ಚಿಕ್ಕಪ್ಪನಾದ ಪಂಡಿತರಾವ ಇವರಹೊಲದ ಬಂದರಿಯಲ್ಲಿರುವ ಬೇವಿನಗಿಡದ ಕೊಂಬಿಗೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿದ್ದು ಅವನ ಶವ ಜೋತಾಡುತ್ತಿದೆ ಎಂದು ತಿಳಿಸಿದ್ದು ನಾನು ಈ ವಿಷಯವನ್ನು ನಮ್ಮ ತವರೂರಿಗೆ ಫೋನಮಾಡಿ ತಿಳಿಸಿದ್ದು ಅವರು ರಾತ್ರಿ ಕಲಬುರಗಿಗೆ ಬಂದಿದ್ದು ಕಲಬುರಗಿಯಿಂದ ನಾನು ನನ್ನ ತಾಯಿ ದೇವಕಿ ಇಬ್ಬರು ಕೂಡಿ ಇಂದು ಮುಂಜಾನೆ 06-00 ಗಂಟೆ ಸುಮಾರಿಗೆ ನಮ್ಮೂರಾದ ಲೇಂಗಟಿ ಗ್ರಾಮದ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೇ ನಂ-83ರ ಬಂದಿರಿಗೆ ಹೊಂದಿರುವ ನಮ್ಮ ಭಾವ ಪಂಡಿತರಾವ ಇವರ ಹೊಲದ ಬಂದಾರಿಯಲ್ಲಿರುವ ಬೇವಿನ ಮರದ ಟೊಂಗಿಗೆ ನನ್ನ ಮಗ  ಆಕಾಶ ವಯಸ್ಸು:22 ವರ್ಷ,  ಈತನು ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅರ್ಜುನ ತಂದೆ ವಾಲು ರಾಠೋಡ ಸಾ|| ಮಾಶಾಳ ಅಳ್ಳಗಿ ತಾಂಡಾ ತಾ||ಅಫಜಲಪೂರ ರವರ ತಾಂಡಾದ ಸೇವಾಲಾಲ ಗುಡಿ ಹತ್ತಿರ ಜನರು ಬಾಯಿ ಮಾಡಿ ಜಗಳ ಮಾಡುತಿದ್ದದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಗ ಮೂರು ಜನರು ಕೂಡಿ ಅಲ್ಲಿ ಹೋಗಿ ನೋಡಲಾಗಿ ನಮ್ಮ ತಾಂಡಾದ ಸೇವಾಲಾಲ ಗುಡಿಯ ಹತ್ತಿರ 1) ಮೋಹನ ತಂದೆ ಬಾಬು ಚವ್ಹಾಣ 2) ರಾಜು ತಂದೆ ಬಾಬು ಚವ್ಹಾಣ 3) ತಾನಾಜಿ ತಂದೆ ಬಾಬು ಚವ್ಹಾಣ 4) ರುಕಿಬಾಯಿ ಗಂಡ ಬಾಬು ಚವ್ಹಾಣ 5)ಭೀಮ ತಂದೆ ನರಸು ಚವ್ಹಾಣ 6)ತಾರಾಬಾಯಿ ಗಂಡ ರಾಜು ಚವ್ಹಾಣ 7) ಸೀಲಾಬಾಯಿ ಗಂಡ ಭೀಮ ಚವ್ಹಾಣ ಇವರೇಲ್ಲರೂ  ನಮ್ಮ ತಾಂಡಾದ ರಾಣಾಬಾಯಿ ಗಂಡ ನಾಮದೇವ ಚವ್ಹಾಣ ಇವರೊಂದಿಗೆ ರಾಣಾಬಾಯಿ ಮಗ ಮಿಥುನ್ ಇತನ ಮದುವೆ ಸಂಭಂದ ಜಗಳ ಮಾಡುತ್ತಿದ್ದರು ಆಗ ನಾನು ನನ್ನ ಹೆಂಡತಿ ನನ್ನ ಮಗ ಮತ್ತು ನಮ್ಮಂತೆ ಜಗಳದ ಶಬ್ದ ಕೇಳಿ ನಮ್ಮ ತಾಂಡಾದ ಮೇಘು ತಂದೆ ದೇಸು ಚವ್ಹಾಣ, ಲಕ್ಷ್ಮಣ ತಂದೆ ವಾಲು ರಾಠೋಡ, ದಾಸು ತಂದೆ ರಾಮು ಚವ್ಹಾಣ ಎಲ್ಲರು ಕೂಡಿ ಜಗಳ ಬಿಡುಸುತಿದ್ದಾಗ ತಾನಾಜಿ ಇತನು ನನಗೆ ಏ ರಂಡಿಮಗನಾ ಅರ್ಜುನ್ಯ ನೀ ಯಾಕ ಇಲ್ಲಿ ಬಂದಿದ್ದಿ ಬೋಸಡಿ ಮಗನಾ ಅಂತ ಅಂದಾಗ ನಾನು ಸದರಿಯವರಿಗೆ ಯಾಕೇ ಸುಮ್ಮನೆ ಜಗಳ ಮಾಡ್ತಿರಿ ಇದು ಸರಿ ಅಲ್ಲಾ ಅಂತ ಅಂದಾಗ ಮೋಹನ ಇತನು ಭೋಸಡಿ ಮಗನಾ ನಿಂದೆ ತಿಂಡಿ ಬಾಳ ಅದಾ ಅಂತ ಅಂದು ತನ್ನ ಕೈಯಲಿದ್ದ ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೇಳಗೆ ಬಿದ್ದಾಗ ರಾಜು, ರುಕಿಬಾಯಿ, ಭೀಮ, ತಾರಾಬಾಯಿ, ಸೀಲಾಬಾಯಿ ಇವರೇಲ್ಲರು ಅವಾಚ್ಯವಾಗಿ ಬೈಯುತ್ತಾ ತಮ್ಮ ಕೈಯಿಂದ ಹೊಡೆದು ಕಾಲಿನಿಂದ ಒದೆಯುತಿದ್ದಾಗ ಅಲ್ಲೆ ಇದ್ದ ನನ್ನ ಹೆಂಡತಿ, ನನ್ನ ಮಗ ಹಾಗು ಮೇಘು ಚವ್ಹಾಣ, ಲಕ್ಷ್ಮಣ ರಾಠೋಡ, ದಾಸು ಚವ್ಹಾಣ ಇವರೇಲ್ಲರು ಕೂಡಿ ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.