POLICE BHAVAN KALABURAGI

POLICE BHAVAN KALABURAGI

09 May 2017

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 08/05/2017 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಆಗ ನನ್ನ ತಂದೆ ಕಲ್ಲಣ್ಣಾ ಇವರು ನಮ್ಮ ತೋಟದ ಹೋಲಾ ಸರ್ವೆ ನಂ 08 ನೇದ್ದಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದರು. ಸ್ವಲ್ಪ ಸಮಯದ ನಂತರ ನೈಸರ್ಗಿಕ ವಿಕೋಪದಲ್ಲಿ ಬದಲಾಣೆಯಾಗಿ ವಿಪರಿತ ಗಾಳಿ ಮತ್ತು ಸಿಡಿಲು ಮಿಂಚು ಆಗುತ್ತಿದ್ದರಿಂದ್ದ ನಾನು ಕೂಡಾ ನಮ್ಮ ಹೋಲಕ್ಕೆ ಹೋಗಿ ಹೋಲದಲ್ಲಿದ್ದ ಎಮ್ಮೆಗಳಿಗೆ ಮೇವು ಹಾಕಿ ಕರೆಂಟ ಮೋಟಾರ ಬಂದ ಮಾಡಿ ಹಾಗೆಯೆ ಹೋಲದಲ್ಲಿ ನಡೆದುಕೊಂಡು ನಮ್ಮ ಹೋಲದಲ್ಲಿರುವ ಹುಣಸೆ ಗಿಡದ ಕಡೆಗೆ ಬಂದಾಗ ಆಗ ಸದರಿ ನನ್ನ ತಂದೆ ಕಲ್ಲಣ್ಣಾ ಇವರು ಹುಣಸೆ ಗಿಡದ ಕೆಳೆಗೆ ಬಿದ್ದಿದ್ದರು ಹತ್ತಿರ ಹೋಗಿ ನೋಡಲಾಗಿ ಅವರಿಗೆ ಸಿಡಿದು ಬಡಿದು ಎಡ ಮಗ್ಗಲಿಗೆ, ಬೆನ್ನಿಗೆ ಸುಟ್ಟಗಾಯ ಮತ್ತು ಎಡಕಾಲು ತೋಡೆಗೆ ಸುಟ್ಟು ಕಪ್ಪಾಗಿದ್ದು ನನ್ನ ತಂದೆಗೆ ಮಾತಾಡಿಸಲು ಮಾತಾಡದೇ ಬೆಹೋಸ ಆಗಿದ್ದರು ಗಾಬರಿಗೊಂಡು ನಾನು ಒಂದೇ ಸವನೇ ಚೀರಾಡುತ್ತಿದ್ದಾಗ ಆಗ ನಮ್ಮ ಗ್ರಾಮದ ದೇವಾನಂದ ಬಬಲಾದ, ಅಹೆಮ್ಮದ ಅಲಿ, ಈರಣ್ಣಾ ಲೋಡ್ಡನ್, ಸೈಯ್ಯದ ಚಾವುಸ್ ಇವರುಗಳು ಬಂದಿದ್ದು ನಾವೆಲ್ಲರೂ ಕೂಡಿಕೊಂಡು ಯಾವುದೋ ಒಂದು ಆಟೋದಲ್ಲಿ ನನ್ನ ತಂದೆಯವರಿಗೆ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿಯ ಜಿರಾಯು ಆಸ್ಪತ್ರೆಗೆ ಒಯ್ಯುವಾಗ ಆಗ ಅಲ್ಲಿನ ವೈದ್ಯರು ನನ್ನ ತಂದೆಯವರಿಗೆ ನೋಡಿ ಸದರಿಯವನು ಈಗಾಗಲೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಕಲ್ಲಣ್ಣಾ ಜಿಡಗಿ ಸಾ:ಸಿಂದಗಿ (ಬಿ) ತಾ:ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವರಾಜ ತಂದೆ ತಮ್ಮಣ್ಣ ಬಜಂತ್ರಿ ಸಾ: ಹೊನಗುಂಟಾ ಇವರು ಮತ್ತು ಆತನ ಗೆಳೆಯನಾದ ರವಿ ತಂದೆ ರಾಜು ಬಂಜತ್ರಿ ಇಬ್ಬರೂ ಕೂಡಿ ನಿನ್ನೆ ದಿನಾಂಕ: 07/05/2017 ರಂದು ಮುಂಜಾನೆ ಮೋಟಾರ ಸೈಕಲ ನಂಬರ ಕೆ.ಎ.01 ಇ ಎನ್ 6068 ನೇದ್ದರ ಮೇಲೆ ಚಾಮನೂರ ಗ್ರಾಮಕ್ಕೆ ಬ್ಯಾಂಡ ಬಾಜಿ ಬಾರಿಸಲು ಹೋಗಿ ಮರಳಿ ಇಬ್ಬರೂ ಕೂಡಿ ಶಹಾಬಾದ ಮಾರ್ಗವಾಗಿ ಹೊನಗುಂಟಾಕ್ಕೆ ಹೋಗುವಾಗ ನಮ್ಮೂರ ಅಶೋಕ ತಂದೆ ದುರ್ಗಪ್ಪ 2) ತಮ್ಮಣ್ಣ ತಂದೆ ಮರೇಪ್ಪ 3) ಕೃಷ್ಣ ತಂದೆ ಅಶೋಕ ಇವರು ಸೀಮೆ ಮರಗಮ್ಮ ಗುಡಿಯ ಹತ್ತಿರ ರಾತ್ರಿ 9-30 ಗಂಟೆಗೆ  ನಿಂತಾಗ  ನಾವು ಕೂಡ ಅಲ್ಲೆ ಮಾತನಾಡುತ್ತಾ ನಿಂತುಕೊಂಡಾಗ ಅದೇ ವೇಳೆಗೆ ಹೊನಗುಂಟಾ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮಾತನಾಡುತ್ತಾ ನಿಂತಾ ನಮ್ಮ ಎಲ್ಲಾರಿಗೆ ಡಿಕ್ಕಿ ಪಡಿಸಿದಾಗ ನಮಗೆ ಎಲ್ಲಾರಿಗೂ ಭಾರಿ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತವೆ. ಟ್ರಾಕ್ಟರ ಮುಂದೆ ಹೋಗಿ  ಪಲ್ಟಿಯಾಗಿ ಬಿದ್ದಾಗ ಚಾಲಕ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಆಗ ಗಾಯ ಪೆಟ್ಟು ಹೊಂದಿದ್ದ ನಮಗೆ ಉಪಚಾರ ಕುರಿತು ನಮಗೆ ಪರಿಚಿಯದ ಆಶಾಪ್ಪ ತಂದೆ ಮರೇಪ್ಪ 2) ಚಂದ್ರಾಮ ತಂದೆ ಶರಣಪ್ಪ ಇವರು ಕೂಡಿ 108 ಅಂಬುಲೇನ್ಸನಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ ಟ್ರಾಕ್ಟರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ವರದಕ್ಷಣೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಕಲಾವತಿ ಗಂಡ ಮಾದಣ್ಣಾ ಭೂತೆ, ಸಾಃ ಕೋಹಿನೂರ ಗ್ರಾಮ, ತಾಃ ಬಸವ ಕಲ್ಯಾಣ, ಜಿಃ ಬೀದರ ಇವರು ನನ್ನ ಕಿರಿಯ ಮಗಳಾದ ಶರಣಮ್ಮ ಇವಳಿಗೆ ಈಗ ಸುಮಾರು 04 ವರ್ಷಗಳ ಹಿಂದೆ ಆಳಂದ ತಾಲೂಕಿನ ಕೇರಿ ಅಂಬಲಗಾ ಗ್ರಾಮದ ಭೀಮಶ್ಯಾ ಧರಿ ಎಂಬುವವರ ಮಗನಾದ ಪ್ರಕಾಶ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿ ಮದುವೆ ಕಾಲಕ್ಕೆ ನನ್ನ ಮಗಳಿಗೆ ವಧು ದಕ್ಷಿಣೆಯಾಗಿ 50 ಸಾವಿರ ನಗದು ಹಣ, ಎರಡುವರೆ ತೊಲೆ ಬಂಗಾರ ಹಾಗೂ ಮಂಚ, ಗಾದಿ, ತಿಜೋರಿ ಮತ್ತು ಗೃಹಬಳಕೆ ಸಾಮಾನುಗಳು ಕೊಡಬೇಕೆಂದು ಮಾತುಕತೆಯಾಗಿದ್ದು, ಅದರಂತೆ ಮೇಲ್ಕಂಡ ಹಣ, ಬಂಗಾರ ಮತ್ತು ವಸ್ತುಗಳನ್ನು ಕೊಟ್ಟು ಸಾಂಪ್ರದಾಯಿಕವಾಗಿ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿದ್ದು ಅವಳಿಗೆ ಈಗ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ ಮಗಳ ಮದುವೆಯಾದ ಸುಮಾರು 02 ವರ್ಷಗಳವರೆಗೆ ಅವಳ ಗಂಡ, ಅತ್ತೆ-ಮಾವ, ನಾದಿನಿ ಹಾಗೂ ಮೈದುನರು ಅವಳನ್ನು ಚೆನ್ನಾಗಿ ನೋಡಿಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಎಂದು ಅವಳಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ಅವರ ಕಿರುಕುಳ ಸಹಿಸದೆ ಈಗ ಒಂದು ವರ್ಷದ ಹಿಂದೆ ನನ್ನ ಮಗಳು ಶರಣಮ್ಮಳು ತವರು ಮನೆಗೆ ಬಂದು ವಾಸವಾಗಿದ್ದಾಗ ನಾನು, ನನ್ನ ಮಕ್ಕಳಾದ ಅಂಬಾರಾಯ, ಅಣ್ಣಾರಾಯ ಹಾಗೂ ಮೊಮ್ಮಗನಾದ ಶರಣಬಸವ ಮತ್ತು ನಮ್ಮೂರಿನ ದೇವಿದಾಸ ತಂದೆ ಲಾಡಪ್ಪ ಸಜ್ಜನ, ರಾಜೇಂದ್ರ ತಂದೆ ಭೀಮಶ್ಯಾ ಹೊಸಮನಿ ರವರುಗಳು ಕೂಡಿಕೊಂಡು ನನ್ನ ಮಗಳನ್ನು ಕರೆದುಕೊಂಡು ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ನನ್ನ ಮಗಳ ಗಂಡನ ಮನೆಯವರ ಇಚ್ಛೇಯಂತೆ ಹಾಗೂ ಮಗಳ ನೆಮ್ಮದಿಯ ಜೀವನಕ್ಕಾಗಿ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ ತಂದೆ ಲಕ್ಕಪ್ಪ ಧರಿ, ಅತ್ತೆ ರಂಗುಬಾಯಿ ಗಂಡ ಭೀಮಶ್ಯಾ ಧರಿ, ನಾದಿನಿ ಪ್ರತಿಭಾ ತಂದೆ ಭೀಮಶ್ಯಾ ಧರಿ, ಮೈದುನರಾದ ಪ್ರಶಾಂತ ತಂದೆ ಭೀಮಶ್ಯಾ ಧರಿ, ರಾಜು ತಂದೆ ಭೀಮಶ್ಯಾ ಧರಿ ರವರುಗಳಿಗೆ 25 ಸಾವಿರ ರೂಗಳು ಹಾಗೂ 01 ತೊಲೆ ಬಂಗಾರ ಕೊಟ್ಟು ನನ್ನ ಮಗಳಿಗೆ ತೊಂದರೆ ಕೊಡದ ಹಾಗೆ ಸರಿಯಾಗಿ ನೋಡಿಕೊಳ್ಳುವಂತೆ ಹೇಳಿ ನನ್ನ ಮಗಳನ್ನು ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತೇವೆ. ಆದರೂ ಸಹ ನನ್ನ ಮಗಳ ಗಂಡ ಹಾಗೂ ಅವರ ಮನೆಯವರು ಕೂಡಿ ವರದಕ್ಷಿಣೆ ವಿಷಯವಾಗಿ ಅವಳಿಗೆ ದಿನಾಲೂ ಕೈಯಿಂದ ಹೊಡೆಯುವುದು ಮತ್ತು ಬೈಯುವುದು ಮಾಡುತ್ತಾ ನಾನಾ ರೀತಿಯಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು ಅಲ್ಲದೆ ನಿನಗೆ ಬರಿ ಹೆಣ್ಣು ಮಕ್ಕಳು ಮಾತ್ರ ಹುಟ್ಟುತ್ತವೆ ನಿನಗೆ ಗಂಡು ಮಕ್ಕಳು ಆಗುವುದಿಲ್ಲವೆಂದು ನಿಂದಿಸಿ ಕಿರುಕುಳ ಕೊಡುತ್ತಿದ್ದರು. ಹೀಗಿದ್ದು ಇಂದು ದಿನಾಂಕಃ 07/05/2017 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ನಾನು, ನನ್ನ ಮಗ ಆನಂದರಾಯ, ಸೋಸೆ ಪ್ರಭಾವತಿ ರವರುಗಳು ಮನೆಯಲ್ಲಿದ್ದಾಗ ಮಗ ಆನಂದರಾಯನಿಗೆ ಸಂಗೋಳಗಿ(ಸಿ) ಗ್ರಾಮದ ನಮ್ಮ ಸಂಬಂಧಿಕರಾದ ದೇವಿಂದ್ರ ತಂದೆ ರಾಜೇಂದ್ರ ಹೊಸಮನಿ ರವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮಗಳಾದ ಶರಣಮ್ಮ ಇವಳ ಮೈಗೆ ಬೆಂಕಿ ಹತ್ತಿ ಮೈಸುಟ್ಟು ಮೃತ ಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ತಕ್ಷಣವೆ ನನ್ನ ಮಗ ಆನಂದರಾಯನು ಗಾಬರಿಗೊಂಡು ನಮ್ಮ ಬೀಗನಾದ ಭೀಮಶ್ಯಾ ಧರಿ ಇವರಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವರು ನಾವು ಬೆಳಿಗ್ಗೆಯಿಂದ ಎಲ್ಲರೂ ಕೂಡಿ ನಿಮ್ಮ ಮಗಳು ಶರಣಮ್ಮಳಿಗೆ ಹೊಡೆ-ಬಡೆ ಮಾಡಿ ಕೊಲೆ ಮಾಡಿ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತೇವೆ ಅವಳ ಹೆಣವು ನಮ್ಮ ಮನೆಯಲ್ಲಿ ಸುಡುತ್ತಿದೆ. ಬೇಕಾದರೆ ನೀವೆ ಬಂದು ನೋಡಿಕೊಂಡು ಏನು ಮಾಡುತ್ತಿರಿ ಮಾಡಿಕೊಳ್ಳಿ ಅಂತ ಹೇಳಿ ಫೋನ್ ಕಟ್ ಮಾಡಿದರು. ನಂತರ ಈ ವಿಷಯವನ್ನು ನನ್ನ ಮಗನು ನನ್ನ ಎಲ್ಲಾ ಗಂಡು ಮಕ್ಕಳಿಗೆ ತಿಳಿಸಿದ್ದು, ಅಲ್ಲದೆ ಓಣಿಯವರಿಗೂ ಸಹ ತಿಳಿಸಿದ್ದು ನಾನು ನನ್ನ ಮಕ್ಕಳಾದ ಅಂಬಾರಾಯ, ಆನಂದರಾಯ, ಸೂರ್ಯಕಾಂತ, ಅಣ್ಣಾರಾಯ ಹಾಗೂ ಓಣಿಯವರಾದ ದೇವಿದಾಸ ತಂದೆ ಲಾಡಪ್ಪ ಸಜ್ಜನ, ಶಿವಶರಣಪ್ಪ ಬಿಲಗುಂದಿ, ಬಾಬುರಾವ ಗಡ್ಡದ, ನಾಮದೇವ ಅಪ್ಪೆ ರವರೆಲ್ಲರೂ ಕೂಡಿ ಕ್ರೂಸರ ಜೀಪನಲ್ಲಿ ಸಾಯಂಕಾಲ 04-30 ಗಂಟೆ ಸುಮಾರಿಗೆ ಕೇರಿ ಅಂಬಲಗಾ ಗ್ರಾಮಕ್ಕೆ ಬಂದು ಅವರ ಮನೆಗೆ ಹೋಗಿ ನೋಡಲಾಗಿ ನನ್ನ ಮಗಳ ದೇಹವು ಅವಳ ಮಲಗುವ ಕೋಣೆಯಲ್ಲಿ ಸುಟ್ಟು ಕರಕಲಾಗಿರುವ ಸ್ಥೀತಿಯಲ್ಲಿತ್ತು. ದಿನಾಂಕಃ 07/05/2017 ರಂದು ಮಧ್ಯಾಹ್ನ 01-30 ಗಂಟೆಯಿಂದ 02-00 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಮಗಳಾದ ಶರಣಮ್ಮ ಇವಳಿಗೆ ಅವಳ ಗಂಡ ಪ್ರಕಾಶ, ಮಾವ ಭೀಮಶ್ಯಾ, ಅತ್ತೆ ರಂಗುಬಾಯಿ, ನಾದಿನಿ ಪ್ರತಿಭಾ, ಮೈದುನರಾದ ಪ್ರಶಾಂತ ಮತ್ತು ರಾಜೀವರವರುಗಳೆಲ್ಲರು ಸೇರಿ ವರದಕ್ಷಿಣೆ ವಿಷಯವಾಗಿ ನನ್ನ ಮಗಳನ್ನು ಹೊಡೆ-ಬಡೆ ಮಾಡಿ ಕೊಲೆ ಮಾಡಿ ಅವಳ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: