ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ನನ್ನ ತಾಯಿಯಾದ ಪ್ರೇಮಿಳಾ
ಮಾನಸಗಲ್ ಇವರ ಆರೋಗ್ಯ ಸರಿ ಇಲ್ಲದ್ದರಿಂದ ಲಾತೂರ ಆಸ್ಪತ್ರೆಗೆ ತೋರಿಸಿಕೊಂಡು ಬರಲು ನನ್ನ
ತಮ್ಮನಾದ 1) ವೆಂಕಣಗೌಡ , ಆತನ ಹೆಂಡತಿ
2)ವಂದನಾ , ಆತನ ಮಗಳಾದ 3)ಕು,ಸಾಯಿಸೌಮ್ಯ, ನಮ್ಮ ಅಣ್ಣತಮ್ಮಕ್ಕೀಯ 4) ಸುಜಾತಾ
ಗಂಡ ರಂಗನಾಥ ಎಲ್ಲರು ಇಂದು ಬೆಳಿಗ್ಗೆ 7 ಎ.ಎಮ್.ಕ್ಕೆ
ಯಾದಗೀರಿಯಿಂದ ಲಾತೂರಕ್ಕೆ ಹೋಗಿಬರುತ್ತೇವೆ ಅಂತಾ ಹೇಳಿ ಕಾರ ನಂ ಕೆಎ-33
ಎಮ್-4533 ನೇದ್ದರಲ್ಲಿ ಚಾಲಕ ರಿಜಾಯ ನೊಂದಿಗೆ ಹೋಗಿದ್ದರು. ನಾನು ಮತ್ತು ನಮ್ಮ ಅಣ್ಣತಮ್ಮಕ್ಕೀಯ ರಂಗನಾಥ ಮನೆಯಲ್ಲಿದ್ದಾಗ
ಗೊತ್ತಾಗಿದ್ದೇನೆಂದರೆ ನಮ್ಮ ಮನೆಯವರೆಲ್ಲರು ಲಾತೂರ ಆಸ್ಪತ್ರೆಗೆ ಹೋಗಲುಕುಳಿತು
ಹೊರಟಿದ್ದು ಕಾರ ಮರತೂರ ಕ್ರಾಸ ಹತ್ತಿರ ರಸ್ತೆಗೆ ಅಪಘಾತ ವಾಗಿ 108 ಅಂಬುಲೆನ್ಸದಲ್ಲಿ ಉಪಚಾರಕ್ಕಾಗಿ ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ
ಸೇರಿಕೆಮಾಡಿರುತ್ತಾರೆ ಅಂತಾ ಸುದ್ದಿ ತಿಳಿದು
ನಾನು ಮತ್ತು ರಂಗನಾಥ ಮಾನಸಗಲ್ ಹಾಗೂ ನಾಗರಾಜ ಹೂವಿಲಗೋಲ್ ಕೂಡಿ ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ಹೋಗಿ ನೋಡಲಾಗಿ ನನ್ನ ತಾಯಿ 1)ಪ್ರಮಿಳಾ ಇವರು ಬೇಹೋಷ ಇದ್ದು
ತಲೆಯ ಹಿಂದೆ ರಕ್ತಗಾಯವಾಗಿ ಎಡಕೈ ಮುಂಗೈ & ಎಡ ಕಣ್ಣಿಗೆ
ಗುಪ್ತಪೆಟ್ಟಾಗಿದ್ದು ಬಾಯಿಂದ ರಕ್ತ
ಬಂದಿರುತ್ತದೆ. 2)ಸುಜಾತಾ ಇಳಿಗೆ ನೋಡಲಾಗಿ ತಲೆಯ
ಬಲಭಾಗಕ್ಕೆ ಭಾರಿ ರಕ್ತಗಾಯವಾಗಿ ಎರಡೂ ಮೊಳಕಾಲಿಗೆ
ತರಚಿದ ಗಾಯವಾಗಿ ಬೇಹೋಷ ಇದ್ದಳು, 3)ವಂದನಾ ಇವಳಿಗೆ
ತಲೆಗೆ ಮತ್ತು ಮೂಗಿಗೆ ಒಳಪೆಟ್ಟಾಗಿರುತ್ತದೆ. 4)ಮಗಳು ಸಾಯಿ ಸೌಮ್ಯ ಇವಳಿಗೆ
ಎಡಕೈ ಹಸ್ತದ ಮೇಲ್ಭಾಗ ಹರಿದಂತಾಗಿ ಭಾರಿ
ರಕ್ತಗಾಯವಾಗಿ ಬಾಯಿಂದ & ಕಿವಿಯಿಂದ ರಕ್ತ ಬಂದಿರುತ್ತದೆ. ಚಾಲಕ 5) ರಿಯಾಜನಿಗೆ ನೋಡಲಾಗಿ
ಮುಖದ ಮೇಲೆ ತರಚಿದಂತಾಗಿ ತಲೆಯ ಹಿಂಭಾಗಕ್ಕೆ & ಎಡಕೈ ಉಂಗುರು ಬೆರಳಿಗೆ
ರಕ್ತಗಾಯ ವಾಗಿರುತ್ತದೆ ಅವನೂ ಸಹ ಬೇಹೋಷ ಇದ್ದರು. ವಂದನಾ ಇವರಿಂದ
ತಿಳಿದುಬಂದಿದ್ದೇನೆಂದರೆ, ನಾವೆಲ್ಲರು
ಕುಳಿತುಕೊಂಡು ಲಾತೂರಕ್ಕೆ ಹೊರಟಿದ್ದ ಕಾರ ಚಾಲಕ
ರಿಯಾಜ ಇತನು ಚಲಾಯಿಸುವ ಕಾರ ಅತಿವೇಗ ಮತ್ತು
ನಿಷ್ಕಾಳಜಿತನದಿಂದ ನಡೆಸಿಕೊಂಡು ಹೋಗಿ
ಒಮ್ಮಲೆ ಕಟ್ ಹೊಡೆದಿದ್ದರಿಂದ ವಾಹನ
ನಿಯಂತ್ರಣ ತಪ್ಪಿ ರಸ್ತೆಯ ಬಲ ಬದಿಗೆ ಹೋಗಿ ಪಲ್ಟಿ ಹೊಡೆದು ರಸ್ತೆಯ
ಮೇಲೆ ಬಿದ್ದಾಗ ಒಳಗಡೆ ಇದ್ದ
ನಮಗೆಲ್ಲರಿಗೂ ಭಾರಿ ಮತ್ತು ಸಾದಾ ಗಾಯ ಪೆಟ್ಟುಳಾಗಿದ್ದು. ನಿಮ್ಮ ತಮ್ಮ ವೆಂಕಣಗೌಡರಿಗೆ
ಭಾರಿ ಗಾಯ ಪೆಟ್ಟು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ ಕೂಡಲೆ ನಾವು
ಶಹಾಬಾದ ಸರಕರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಮ್ಮ ರಸ್ತೆ ಅಪಘಾತದಲ್ಲಿ ಬೆನ್ನಿಗೆ
ತಲೆಗೆ ಮೈ ಕೈಗೆ ಭಾರಿ ಒಳಪೆಟ್ಟಾಗಿ ಮೂಗಿನಂದ ರಕ್ತಬಂದು
ಮೃಪಟ್ಟಿದ್ದನು. ರಿಯಾಜ ಇತನು ಚಲಾಯಿಸಿಕೊಂಡು
ಹೋಗುತ್ತಿದ್ದ ಕಾರ ನಂ ಕೆಎ-33 ಎಮ್-4533 ನೇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ರಸ್ತೆಯಲ್ಲಿ ಅಪಘಾತ
ಮಾಡಿದ್ದರಿಂದ ಘಟನೆಜರುಗಿದ್ದು ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಬಸಂತಗೌಡ ತಂದೆ
ನರಸಣ್ಣಗೌಡ ಮಾನಸಗಲ್ ಸಾಃಮೈಲಾಪೂರ ಬೇಸ್ ಯಾದಗೀರ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸುಗೂಸನ್ನು ಬಿಸಾಕಿ ಹೋದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಗೊಪಾಲ ತಂದೆ
ರಾಮಚಂದ್ರ ಮೂಡಬೂಳ ಸಾಃ ಇಜೇರಿ ತಾಃ ಜೇವರಗಿ ರವರು ದಿನಾಂಕ 06.05.2017 ರಂದು ಸಾಯಂಕಾಲ 6.00
ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ದಾವೂಲ್ ಸಾಬ ಮಕ್ಕಾಂದಾರ ಇಬ್ಬರು ಕೂಡಿಕೊಂಡು
ಇಜೇರಿ-ಚಿಗರಳ್ಳಿ ರೋಡ ನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೊಗುತ್ತಿದ್ದೆವು. ಅಲ್ಲಿಯೇ ರಸ್ತೆಯ
ಪಕ್ಕದಲ್ಲಿರುವ ಮಶಾಖ ಪಟೇಲ @ ಬಾಷಾ ಪೊಲೀಸ್ ಪಾಟೀಲ ಇವರ ಖುಲ್ಲಾ ಪ್ಲಾಟಿನ ಹತ್ತಿರ
ಹೋಗುತ್ತಿದ್ದಾಗ ಒಂದು ಮಗು ಅಳುವ ಶಬ್ದ ಕೇಳಿ
ಸಮೀಪ ಹೋಗಿ ನೋಡಲಾಗಿ ಅದು ಗಂಡು ಮಗುವಾಗಿತ್ತು, ಅಂದಾಜು ಒಂದು
ದಿವಸದ ಹಸುಗೂಸು ಇದ್ದಂತೆ ಕಂಡು ಬಂದಿರುತ್ತದೆ. ಅಂದಾಜು 1-2 ದಿವಸಗಳ ಹಿಂದೆ ಯಾರೋ ಒಬ್ಬ
ಹೆಣ್ಣು ಮಗಳು ಒಂದು ಗಂಡು ಮಗುವಿಗೆ ಜನ್ಮ ನೀಡಿ
ನಂತರ ತನ್ನ ಮಗುವಿನ ಜನನವನ್ನು ಬಚ್ಚಿಡುವ ಮತ್ತು ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವ
ಅಥವಾ ಅದಕ್ಕೆ ಅಪಾಯಕ್ಕೆ ಒಡ್ಡುವ ಅಥವಾ ಸಂಪೂರ್ಣವಾಗಿ ಮಗುವಿಗೆ ತೊರೆಯುವ ಉದ್ದೇಶದಿಂದ ಸದರಿ
ಹಸುಗೂಸನ್ನು ಇಜೇರಿ-ಚಿಗರಳ್ಳಿ ರೋಡ ಪಕ್ಕದ ಇಜೇರಿ ಮಸಾಖ ಪಟೇಲ @ ಬಾಷಾ ಇವರ ಖುಲ್ಲಾ
ಪ್ಲಾಟನಲ್ಲಿ ಬಿಸಾಕಿ ಹೋಗಿರುತ್ತಾಳೆ. ಅಲ್ಲಿ ನೇರೆದ ಜನರು ಸಹ ಹಾಗೇ ಅನ್ನುತ್ತಿದ್ದರು. ಆ ಮಗು
ಅಳುತ್ತಿದ್ದರಿಂದ ಆ ಮಗುವನ್ನು ಸಾರ್ವಜನಿಕರು ನಮ್ಮೂರ ಲಾಲಬೀ ಗಂಡ ಹುಸೇನಿ ಹಳಿಮನಿ ಇವಳ
ಸಹಾಯದಿಂದ ಇಜೇರಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ನಂತರ ಅಲ್ಲಿಂದ ಆ
ಮಗುವನ್ನು ನಮ್ಮೂರ ಮರೆಮ್ಮ ಮತ್ತು ಆಶಾ ಕಾರ್ಯಕರ್ತ ದೇವಮ್ಮ ಗಂಡ ಬಸವರಾಜ ಗುತ್ತೆದಾರ ಇವಳ ಸಂಗಡ
ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗದುಕೊಂಡು ಹೋಗಿದ್ದು ಆ ಗಂಡು ನವಜಾತ ಶಿಶು ಸದ್ಯೆ ಕಲಬುರಗಿ
ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment