ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣ :
ನರೋಣಾ ಠಾಣೆ
: ಶ್ರೀಮತಿ ಶರಣಮ್ಮ
ಗಂಡ ನಾಗಣ್ಣಾ ಕಲಶೆಟ್ಟಿ, ಸಾ||ಲೇಂಗಟಿ ಹಾ:ಆದರ್ಶ ಕಾಲೋನಿ
ಕಲಬುರಗಿ ಈಗ ಸುಮಾರು 9 ವರ್ಷಗಳ ಹಿಂದೆ ನನ್ನ ಗಂಡ ನಾಗಣ್ಣ ಇವರು
ಮೃತಪಟ್ಟಿರುತ್ತಾರೆ. ಪಿತ್ರಾರ್ಜಿತವಾಗಿ ನನ್ನ ಗಂಡನ ಪಾಲಿಗೆ 2 ಎಕರೆ 20 ಗುಂಟೆ ಜಮೀನಿದ್ದು ಸರ್ವೇ ನಂ-83 ರಲ್ಲಿ ಇರುತ್ತದೆ. ಈ
ಜಮೀನಿನ ಸಾಗುವಳಿಯನ್ನು ನನ್ನ ಗಂಡನೆ ಮಾಡಿಕೊಂಡು ಹೋಗುತ್ತಿದ್ದನು ನಾನು ನನ್ನ ಗಂಡನ ಮರಣದ ನಂತರ
ನನ್ನ ಮಕ್ಕಳೊಂದಿಗೆ ಕಲಬುರಗಿಯಲ್ಲಿ ಮನೆಮಾಡಿಕೊಂಡು ವಾಸವಾಗಿರುತ್ತೇನೆ. ನನ್ನ ಗಂಡನ ಮರಣದ ನಂತರ
ನಾನು ಹೊಲದ ಎಲ್ಲಾ ಒಕ್ಕಲುತನದ ಮೇಲೆ ವಿಚಾರಣೆಯನ್ನು ನನ್ನ ಎರಡನೆಯ ಮಗನಾದ ಆಕಾಶ ಇವರು
ನೋಡಿಕೊಂಡು ಬರುತ್ತಿದ್ದರು. ನನ್ನ ಗಂಡನು ಜೀವಂತವಿದ್ದಾಗ ಪ್ರಗತಿ ಕೃಷ್ಣ ಗ್ರಾಮೀಣ್
ಬ್ಯಾಂಕಿನಲ್ಲಿ 20000/- ರೂಪಾಯಿಗಳನ್ನು ಬೆಳೆಸಾಲ ತೆಗೆದಿರುವ ಬಗ್ಗೆ
ಗೊತ್ತಿರುತ್ತದೆ. ನನ್ನ ಗಂಡನು ತೀರಿಕೊಂಡ ನಂತರ ಹೊಲದ ಸಾಗವಳಿ ಖರ್ಚಿಗಾಗಿ ನಾನು ಹಾಗೂ ನನ್ನ
ಚಿಕ್ಕಮ್ಮರಾದ ನಾಗಮ್ಮ ಗಂಡ ರೇವಣಸಿದ್ದ ಕಲಶೆಟ್ಟಿ ಸಾ||ಮುದ್ದಡಗಾ
ಇವರು ಹತ್ತಿರ 2,50,000/- ಮತ್ತು ಸರಸ್ವತಿ
ಇವರ ಹತ್ತಿರ 1,50,000 ಸಾವಿರ ರೂಪಾಯಿಗಳು ಕೈಗಡವಾಗಿ ಸಾಲ ತಗೆದು ಬೀಜಗೊಬ್ಬರ ಹಾಗೂ ಸಾಗುವಳಿಗಾಗಿ ಖರ್ಚು
ಮಾಡಿರುತ್ತೇವೆ. 2015, 2016 ಸಾಲಿನಲ್ಲಿ ಸಮಯಕ್ಕೆ ಸರಿಯಾಗಿ
ಮಳೆಬಾರದೆ ಇರುವುದರಿಂದ ಎರಡು ಬೆಳೆಗಳು ವಿಫಲವಾಗಿದ್ದು ಅಲ್ಲದೇ ಕಳೆದ ವರ್ಷ ಹೆಚ್ಚಿಗೆ ಮಳೆ
ಬಿದ್ದಿದ್ದರಿಂದ ಹೊಲದಲ್ಲಿ ನೀರು ನಿಂತು ಬೆಳೆ ಪೂರ್ತಿ ಬೆಳೆನಾಶವಾಗಿರುತ್ತದೆ. ಹೀಗೆ ಸತತವಾಗಿ 2 ವರ್ಷ ಬೆಳೆ ಬೆಳೆಯದೇ ಇರುವುದರಿಂದ ಎಲ್ಲಾ ಸಾಲವನ್ನು ಹೇಗೆ ತೀರಸಬೇಕೆಂದು ನನ್ನ ಮಗ
ಆಕಾಶ ಇತ್ತತಲಾಗಿ ಬಹಳಷ್ಟು ಚಿಂತೆಮಾಡುತ್ತಾ ದುಃಖ ಪಡುತ್ತಿದ್ದನು ನಾನು ನನ್ನ ಹಿರಿಯ ಮಗನಾದ
ಬಸವರಾಜ ಕೂಡಿ ಧೈರ್ಯತುಂಬಿ ಸಮದಾನ ಮಾಡಿರುತ್ತೇವೆ.ದಿನಾಂಕ: 04/05/2017 ರಂದು ಗುರುವಾರ ದಿವಸ ಮುಂಜಾನೆ 09-00 ಗಂಟೆಯ ಸುಮಾರಿಗೆ
ನನ್ನ ಹಿರಿಯಮಗ ಬಸವರಾಜ ಮತ್ತು ಆಕಾಶ ರವರುಗಳು ಕಲಬುರಗಿ ಮನೆಯಲ್ಲಿದ್ದಾಗ ನನ್ನ ಮಗ ಆಕಾಶನು ಊರಿಗೆ
ಹೋಗಿ ಹೊಲಗಳ ನೇಗಿಲು ಹೊಡೆದು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾನೆ ಆ ದಿವಸ ಸಂಜೆ
ಆದರು ಸಹ ನನ್ನ ಮಗನು ವಾಪಸ್ಸ ಮನೆಗೆ ಬರದಿದ್ದರಿಂದ ನನ್ನ ಭಾವನ ಮಗನಾದ ಹಣಮಂತನಿಗೆ ಫೋನಮಾಡಿ
ವಿಚಾರಿಸಲಾಗಿ ಊರಿಗೆ ಬಂದಿರುವುದಿಲ್ಲವೆಂದು ತಿಳಿಸಿದನು. ಅಲ್ಲದೇ ನಾನು ನನ್ನ ಮಗನ ಮೊಬೈಲಗೆ
ಫೋನಮಾಡಿದಾಗ ಬಂದ ಇರುತ್ತದೆ. ನಂತರ ನಾನು ನನ್ನ ಸಂಬಂಧಿಕರಿಗೆ ಫೋನಮಾಡಿ ವಿಚಾರಿಸಲು ನನ್ನ ಮಗ
ಎಲ್ಲಿಗೆ ಹೋಗಿದ್ದಾನೆ ಗುರುತಾಗಲಿಲ್ಲ. ನಿನ್ನೆ ದಿನಾಂಕ:05/05/2017
ರಂದು ಸಂಜೆ 7-00 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿದ್ದಾಗ ಮನೆಗೆ
ನನ್ನ ಭಾವನ ಮಗನಾದ ಹಣಮಂತ ಈತನು ಫೋನಮಾಡಿ ನಿಮ್ಮ ಮಗನಾದ ಆಕಾಶನು ಚಿಕ್ಕಪ್ಪನಾದ ಪಂಡಿತರಾವ
ಇವರಹೊಲದ ಬಂದರಿಯಲ್ಲಿರುವ ಬೇವಿನಗಿಡದ ಕೊಂಬಿಗೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು
ಮೃತಪಟ್ಟಿದ್ದು ಅವನ ಶವ ಜೋತಾಡುತ್ತಿದೆ ಎಂದು ತಿಳಿಸಿದ್ದು ನಾನು ಈ ವಿಷಯವನ್ನು ನಮ್ಮ ತವರೂರಿಗೆ
ಫೋನಮಾಡಿ ತಿಳಿಸಿದ್ದು ಅವರು ರಾತ್ರಿ ಕಲಬುರಗಿಗೆ ಬಂದಿದ್ದು ಕಲಬುರಗಿಯಿಂದ ನಾನು ನನ್ನ ತಾಯಿ
ದೇವಕಿ ಇಬ್ಬರು ಕೂಡಿ ಇಂದು ಮುಂಜಾನೆ 06-00 ಗಂಟೆ ಸುಮಾರಿಗೆ
ನಮ್ಮೂರಾದ ಲೇಂಗಟಿ ಗ್ರಾಮದ ಸೀಮಾಂತರದಲ್ಲಿರುವ ನಮ್ಮ ಹೊಲ ಸರ್ವೇ ನಂ-83ರ ಬಂದಿರಿಗೆ ಹೊಂದಿರುವ ನಮ್ಮ ಭಾವ ಪಂಡಿತರಾವ ಇವರ ಹೊಲದ ಬಂದಾರಿಯಲ್ಲಿರುವ ಬೇವಿನ ಮರದ
ಟೊಂಗಿಗೆ ನನ್ನ ಮಗ ಆಕಾಶ ವಯಸ್ಸು:22 ವರ್ಷ, ಈತನು
ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅರ್ಜುನ ತಂದೆ
ವಾಲು ರಾಠೋಡ ಸಾ|| ಮಾಶಾಳ ಅಳ್ಳಗಿ ತಾಂಡಾ ತಾ||ಅಫಜಲಪೂರ ರವರ ತಾಂಡಾದ ಸೇವಾಲಾಲ ಗುಡಿ
ಹತ್ತಿರ ಜನರು ಬಾಯಿ ಮಾಡಿ ಜಗಳ ಮಾಡುತಿದ್ದದನ್ನು ಕೇಳಿ ನಾನು ನನ್ನ ಹೆಂಡತಿ ನನ್ನ ಮಗ ಮೂರು ಜನರು
ಕೂಡಿ ಅಲ್ಲಿ ಹೋಗಿ ನೋಡಲಾಗಿ ನಮ್ಮ ತಾಂಡಾದ ಸೇವಾಲಾಲ ಗುಡಿಯ ಹತ್ತಿರ 1) ಮೋಹನ ತಂದೆ ಬಾಬು ಚವ್ಹಾಣ 2) ರಾಜು ತಂದೆ ಬಾಬು ಚವ್ಹಾಣ
3) ತಾನಾಜಿ ತಂದೆ ಬಾಬು ಚವ್ಹಾಣ 4) ರುಕಿಬಾಯಿ ಗಂಡ ಬಾಬು
ಚವ್ಹಾಣ 5)ಭೀಮ ತಂದೆ ನರಸು ಚವ್ಹಾಣ 6)ತಾರಾಬಾಯಿ
ಗಂಡ ರಾಜು ಚವ್ಹಾಣ 7) ಸೀಲಾಬಾಯಿ ಗಂಡ ಭೀಮ ಚವ್ಹಾಣ ಇವರೇಲ್ಲರೂ ನಮ್ಮ ತಾಂಡಾದ ರಾಣಾಬಾಯಿ ಗಂಡ ನಾಮದೇವ
ಚವ್ಹಾಣ ಇವರೊಂದಿಗೆ ರಾಣಾಬಾಯಿ ಮಗ ಮಿಥುನ್ ಇತನ ಮದುವೆ ಸಂಭಂದ ಜಗಳ ಮಾಡುತ್ತಿದ್ದರು ಆಗ ನಾನು ನನ್ನ
ಹೆಂಡತಿ ನನ್ನ ಮಗ ಮತ್ತು ನಮ್ಮಂತೆ ಜಗಳದ ಶಬ್ದ ಕೇಳಿ ನಮ್ಮ ತಾಂಡಾದ ಮೇಘು ತಂದೆ ದೇಸು ಚವ್ಹಾಣ,
ಲಕ್ಷ್ಮಣ ತಂದೆ ವಾಲು ರಾಠೋಡ, ದಾಸು ತಂದೆ ರಾಮು ಚವ್ಹಾಣ
ಎಲ್ಲರು ಕೂಡಿ ಜಗಳ ಬಿಡುಸುತಿದ್ದಾಗ ತಾನಾಜಿ ಇತನು ನನಗೆ ಏ ರಂಡಿಮಗನಾ ಅರ್ಜುನ್ಯ ನೀ ಯಾಕ ಇಲ್ಲಿ
ಬಂದಿದ್ದಿ ಬೋಸಡಿ ಮಗನಾ ಅಂತ ಅಂದಾಗ ನಾನು ಸದರಿಯವರಿಗೆ ಯಾಕೇ ಸುಮ್ಮನೆ ಜಗಳ ಮಾಡ್ತಿರಿ ಇದು ಸರಿ
ಅಲ್ಲಾ ಅಂತ ಅಂದಾಗ ಮೋಹನ ಇತನು ಭೋಸಡಿ ಮಗನಾ ನಿಂದೆ ತಿಂಡಿ ಬಾಳ ಅದಾ ಅಂತ ಅಂದು ತನ್ನ ಕೈಯಲಿದ್ದ
ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಪಡಿಸಿದ ಆಗ ನಾನು ಕೇಳಗೆ ಬಿದ್ದಾಗ ರಾಜು,
ರುಕಿಬಾಯಿ, ಭೀಮ, ತಾರಾಬಾಯಿ,
ಸೀಲಾಬಾಯಿ ಇವರೇಲ್ಲರು ಅವಾಚ್ಯವಾಗಿ ಬೈಯುತ್ತಾ ತಮ್ಮ ಕೈಯಿಂದ ಹೊಡೆದು ಕಾಲಿನಿಂದ
ಒದೆಯುತಿದ್ದಾಗ ಅಲ್ಲೆ ಇದ್ದ ನನ್ನ ಹೆಂಡತಿ, ನನ್ನ ಮಗ ಹಾಗು ಮೇಘು ಚವ್ಹಾಣ,
ಲಕ್ಷ್ಮಣ ರಾಠೋಡ, ದಾಸು ಚವ್ಹಾಣ ಇವರೇಲ್ಲರು ಕೂಡಿ ನನಗೆ
ಹೊಡೆಯುವದನ್ನು ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment